SANA KHAN: ನಟನೆ ಬಿಟ್ಟು ಹಿಜಾಬ್​ ಧರಿಸಿದ ಕನ್ನಡದ 'ಕೂಲ್​' ನಟಿಯೀಗ ಗರ್ಭಿಣಿ

By Suvarna News  |  First Published Mar 16, 2023, 4:23 PM IST

ಕನ್ನಡದ ಕೂಲ್​ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ನಟಿ ಸನಾ ಖಾನ್​ ಈಗ ಗರ್ಭಿಣಿಯಾಗಿದ್ದಾರೆ. ಅವರ ಪತಿ ಹೇಳಿದ್ದೇನು?
 


ಕಿರುತೆರೆ ನಟಿ, ಬಿಗ್ ಬಾಸ್ ಖ್ಯಾತಿಯ ಹಾಗೂ ಕನ್ನಡದ ಕೂಲ್​ ಸಿನಿಮಾದಲ್ಲಿ ನಟಿಸಿರುವ ನಟಿ ಸನಾ ಖಾನ್ ಬಣ್ಣದ ಲೋಕ ತ್ಯಜಿಸಿ ಮೂರು ವರ್ಷಗಳಾಗಿವೆ. ಸಿನಿಮಾರಂಗ ತೊರೆಯುವ ನಿರ್ಧಾರದ ಬಗ್ಗೆ ಮಾತನಾಡಿ ಭಾವುಕರಾಗಿದ್ದರು. ಸನಾ ಖಾನ್ (Sana Khan) ಈ ಹಿಂದೆ ಹಿಜಾಬ್ ಧರಿಸಲು ನಿರ್ಧರಿಸಿದ್ದ ಬಗ್ಗೆ ಬಹಿರಂಗ ಪಡಿಸಿ ಕಣ್ಣೀರಿಟ್ಟಿದ್ದರು. ಸಮಾಜ ಸೇವೆ ಮಾಡಲು ಮತ್ತು  ಸೃಷ್ಟಿಕರ್ತನ ಆದೇಶವನ್ನು ಅನುಸರಿಸುವ ಕಾರಣಕ್ಕೆ ಬಣ್ಣದ ಲೋಕ ತೆರೆಯಬೇಕಾಯಿತು ಎಂದು ಹೇಳಿದ್ದರು. ಈ ಬಗ್ಗೆ ವಿಡಿಯೋ ಸಂದರ್ಶನ ನೀಡಿದ್ದ ಸನಾ ಖಾನ್ ಆಧ್ಯಾತ್ಮಿಕ ದಾರಿ ಹಿಡಿಯಲು ಹಿಂದಿನ ಕಾರಣವೇನು ಎಂದು ವಿವರಿಸಿದ್ದರು. ಹೆಸರು, ಖ್ಯಾತಿ, ಹಣ ಬಿಟ್ಟು ಹಿಜಾಬ್ ಧರಿಸಲು ಪ್ರಾರಂಭಿಸಿದ್ದೇಕೆ ಎಂದು ಬಹಿರಂಗ ಪಡಿಸಿದ್ದರು. 'ನನ್ನ ಹಳೆಯ ಜೀವನದಲ್ಲಿ ಸಹಜವಾಗಿ ಎಲ್ಲವೂ ಇತ್ತು. ಹಣ, ಹೆಸರು, ಖ್ಯಾತಿ ಎಲ್ಲಾ ಇತ್ತು. ನಾನು ಏನು ಬೇಕಾದರೂ ಮತ್ತು ಎಲ್ಲವನ್ನೂ ಮಾಡಬಹುದಿತ್ತು. ಆದರೆ ಒಂದು ವಿಷಯ ಮಾತ್ರ ಕಳೆದು ಹೋಗಿತ್ತು ನನ್ನ ಹೃದಯದ ಶಾಂತಿ. ನಾನು ಎಲ್ಲವನ್ನೂ ಹೊಂದಿದ್ದೆ ಆದರೆ ಸಂತೋಷ ಇರಲಿಲ್ಲ,  ಅದು ತುಂಬಾ ಕಠಿಣವಾಗಿತ್ತು ಮತ್ತು ಖಿನ್ನತೆಯ ದಿನಗಳು ಇತ್ತು. ನಾನು ದೇವರ ಸಂದೇಶವನ್ನು ದಿನಗಳು ಇದ್ದವು' ಎಂದು ನಟನೆ ಬಿಟ್ಟು ಹಿಜಾಬ್​ ಧರಿಸುವ ಕುರಿತು ಹೇಳಿಕೊಂಡಿದ್ದರು.

ಹೀಗೆ ಮಿನಿ ಸ್ಕರ್ಟ್​, ಬಿಕಿನಿ ಎಲ್ಲವನ್ನೂ ಬಿಟ್ಟು ಹಿಜಾಬ್​ ಧರಿಸಿದ್ದ 34 ವರ್ಷದ ನಟಿ ಸನಾ ಈಗ ಗರ್ಭಿಣಿಯಾಗಿದ್ದಾರೆ. ಅವರ ಪತಿ ಮುಫ್ತಿ ಅನಾಸ್ ಸೈಯದ್ 'ಇಕ್ರಾ ಟಿವಿ'ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾಹಿತಿ ನೀಡಿದ್ದಾರೆ.  ಅಂದಹಾಗೆ, ಸನಾ ಖಾನ್ ನವೆಂಬರ್ 20, 2020 ರಂದು ಗುಜರಾತ್‌ನ ಅಂಕಲೇಶ್ವರದ ಮುಫ್ತಿ ಅನಾಸ್ ಸೈಯದ್ (Mufti Anas Sayed)ಅವರನ್ನು ವಿವಾಹವಾದರು. ಇವರಿಬ್ಬರ ಮೊದಲ ಭೇಟಿ 2017ರಲ್ಲಿ ಮೆಕ್ಕಾದಲ್ಲಿ ನಡೆದಿತ್ತು. ಸಂದರ್ಶನದಲ್ಲಿ ತಮ್ಮ  ಮಗುವಿನ ಬಗ್ಗೆ ಪತಿ ಮಾತನಾಡಿದ್ದಾರೆ.  ತಾಯ್ತನಕ್ಕಾಗಿ ತುಂಬಾ ಉತ್ಸುಕರಾಗಿರುವುದಾಗಿ ಸನಾ ಹೇಳಿದ್ದಾರೆ.  ಜೂನ್​ನಲ್ಲಿ ಮಗು ಪಡೆಯುವ ಬಗ್ಗೆ ತಿಳಿಸಿದ್ದಾರೆ. ಅನಾಸ್ ಸೈಯದ್ ಸೌಂದರ್ಯವರ್ಧಕ, ಪರ್ಸನಲ್ ಕೇರ್ ಲೈನ್ ನ ಸಂಸ್ಥಾಪರಾಗಿದ್ದಾರೆ.  

Tap to resize

Latest Videos

ಮಾಲ್ಡೀವ್ಸ್‌ನಲ್ಲಿ ಸನಾ ಖಾನ್: ಮಾಜಿ ನಟಿಯ ಬೀಚ್ ವೈಬ್ಸ್ ಹೀಗಿದೆ

ಬಾಲಿವುಡ್ (Bollywood) ಸಿನಿಮಾಗಳ ಜೊತೆಗೆ ಸನಾ ಖಾನ್ ತಮಿಳು ಮತ್ತು ತೆಲುಗು ಸಿನಿಮಾಗಳಲ್ಲೂ ನಟಿಸಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿಯೂ ಅಭಿನಯಿಸಿದ್ದಾರೆ. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೂಲ್ (Cool) ಸಿನಿಮಾದಲ್ಲಿ ಸನಾ ನಟಿಸಿದ್ದಾರೆ. ಇಷ್ಟೆಲ್ಲಾ ಉತ್ತುಂಗದಲ್ಲಿ ಇರುವಾಗಲೇ ಸಿನಿಮಾ ಬಿಡುವ ನಿರ್ಧಾರ ಮಾಡಿದ್ದು, ಅವರ ಅಭಿಮಾನಿಗಳಿಗೆ ಶಾಕ್​ ಆಗಿತ್ತು. ಆದರೆ ದೃಢ ಸಂಕಲ್ಪದೊಂದಿಗೆ ನಟಿ ಬಣ್ಣದ ಬದುಕಿಗೆ ವಿದಾಯ ಹೇಳಿದ್ದರು. ಆಗ ಅವರು, ತಾವು ನಟನೆ ಬಿಡುವ ಬಗ್ಗೆ ಮಾತನಾಡಿದ್ದರು. ಅದರಲ್ಲಿ ಅವರು, 'ನನಗಿನ್ನು ನೆನಪಿದೆ 2019 ರಂಜಾನ್ ನಲ್ಲಿ  ನಾನು ನನ್ನ ಕನಸಿನಲ್ಲಿ ಸಮಾಧಿಯನ್ನು ನೋಡುತ್ತಿದ್ದೆ. ನಾನು ಸುಡುವ, ಉರಿಯುತ್ತಿರುವ ಸಮಾಧಿಯನ್ನು ನೋಡುತ್ತಿದ್ದೆ, ನಾನು ಸಮಾಧಿಯಲ್ಲಿ ನನ್ನನ್ನೇ ನೋಡುತ್ತಿದ್ದೆ. ನಾನು ಖಾಲಿ ಸಮಾಧಿಯನ್ನು ನೋಡಿದೆ, ನಾನು ಅಲ್ಲಿ ನನ್ನನ್ನು ನೋಡಿದೆ. ನಾನು ಬದಲಾಗದಿದ್ದರೆ, ನನ್ನ ಅಂತ್ಯ ಇದೇ ಆಗಲಿದೆ ಎಂಬುದಕ್ಕೆ ದೇವರು ನನಗೆ ನೀಡುತ್ತಿರುವ ಸಂಕೇತವಾಗಿದೆ ಎಂದು ನಾನು ಭಾವಿಸಿದೆ. ಅದು ನನಗೆ ಸ್ವಲ್ಪ ಆತಂಕವನ್ನುಂಟುಮಾಡಿತು' ಎಂದು ಹೇಳಿದ್ದರು.  

ಒಂದು ಪುಸ್ತಕದಲ್ಲಿ ಮೆಸೇಜ್ ಇತ್ತು... you don’t want your last day to be your first day of wearing hijab ಎಂದು. ಈ ಸಲುಗಳು ನನ್ನ ಮನಸ್ಸಿ ಮುಟ್ಟಿತ್ತು. ಮರು ದಿನ ನಾನು ಎದ್ದು ನನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡೆ. ನಾನು ಮನೆಯಲ್ಲಿ ಬಹಳಷ್ಟು ಸ್ಕಾರ್ಫ್‌ಗಳನ್ನು ಹೊಂದಿದ್ದೆ. ಮೊದಲೇ ತಂದು ಇಟ್ಟಿದ್ದೆ. ಕ್ಯಾಪ್ ಒಳಗೆ ಧರಿಸಿ ಸ್ಕಾರ್ಫ್‌ ಧರಿಸಿ ಇನ್ನು ಮುಂದೆ ಇದನ್ನು ನಾನು ತೆಗೆಯುವುದಿಲ್ಲ ಎಂದು ತೀರ್ಮಾನ ಮಾಡಿದೆ' ಎಂದು ಸನಾ ಹೇಳಿದ್ದರು. 

ಇಸ್ಲಾಮ್​ ಸ್ವೀಕರಿಸುವೆ... ವಿದಾಯದ ನುಡಿ ಬರೆದು ಕಣ್ಣೀರಿಟ್ಟ ಮತ್ತೋರ್ವ ಖ್ಯಾತ ನಟಿ
 

click me!