Mystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು

Published : Mar 08, 2025, 01:57 PM ISTUpdated : Mar 08, 2025, 01:59 PM IST
Mystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು

ಸಾರಾಂಶ

ಮಲಯಾಳಂನ 2 ಗಂಟೆ 23 ನಿಮಿಷದ ಸಿನಿಮಾವು ಓಟಿಟಿಯಲ್ಲಿ ಸದ್ದು ಮಾಡುತ್ತಿದೆ. ನಜ್ರಿಯಾ ನಜೀಮ್ ಮತ್ತು ಬಸಿಲ್ ಜೋಸೆಫ್ ನಟನೆಯ ಈ ಥ್ರಿಲ್ಲರ್ ಕಥೆಯ ಕೊನೆಯ 10 ನಿಮಿಷ ಕ್ಲೈಮ್ಯಾಕ್ಸ್ ಅದ್ಭುತವಾಗಿದೆ.

Malayalam Cinema: ಓಟಿಟಿ ಪ್ಲಾಟ್‌ಫಾರಂ ಬಂದಾಗಿನಿಂದ ಜನರು ತಮಗೆ ಇಷ್ಟದ ಆಕ್ಷನ್, ಕಾಮಿಡಿ, ರೊಮ್ಯಾನ್ಸ್, ಸಸ್ಪೆನ್ಸ್, ಹಾರರ್ ಸಿನಿಮಾಗಳನ್ನು ನೋಡಬಹುದು. ಇಂದು ಹಲವು ಓಟಿಟಿ ಪ್ಲಾಟ್‌ಫಾರಂಗಳಿದ್ದು, ವೀಕ್ಷಕರು ಹಣ ಪಾವತಿಸಿ ಚಂದಾದಾರಿಕೆಯನ್ನು ಪಡೆಯಬಹುದು. 2024ರಲ್ಲಿ ಬಿಡುಗಡೆಯಾದ ನಿಗೂಢ ಮತ್ತು ಥ್ರಿಲ್ಲರ್ ಕಥೆಯನ್ನು ಹೊಂದಿರುವ ಮಲಯಾಳಂ ಸಿನಿಮಾವನ್ನು ಕೊನೆಯ 10 ನಿಮಿಷ ಕ್ಲೈಮ್ಯಾಕ್ಸ್‌ಗಾಗಿಯೇ ವೀಕ್ಷಿಸಬೇಕು. ಈ ಸಿನಿಮಾ ಮಿಸ್ ಮಾಡಿಕೊಳ್ಳಬೇಡಿ. 

ಈ ಮಲಯಾಳಂ ಸಿನಿಮಾ 22ನೇ ನವೆಂಬರ್ 2024ರಂದು ಬಿಡುಗಡೆಯಾಗಿತ್ತು. ಬೆಳ್ಳಿತೆರೆ ಮೇಲೆ ಅಮೋಘ ಪ್ರದರ್ಶನ ಕಂಡ ಸಿನಿಮಾ ಬಾಕ್ಸ್‌ ಆಫಿಸ್‌ನಲ್ಲಿಯೂ ಒಳ್ಳೆಯ ಕಲೆಕ್ಷನ್ ಮಾಡುವಲ್ಲಿ ಸಕ್ಸಸ್ ಆಯ್ತು. ಇದಾದ ಬಳಿಕ 11ನೇ ಜನವರಿ 2025ರಂದು ಓಟಿಟಿಯಲ್ಲಿ ಸಿನಿಮಾ ಸ್ಟ್ರೀಮ್ ಮಾಡಲಾಯ್ತು. ಇದೀಗ ಓಟಿಟಿಯಲ್ಲಿಯೂ ವೀಕ್ಷಕರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. 

ಯಾವುದು ಈ ಸಿನಿಮಾ?
ನಜ್ರಿಯಾ ನಜೀಮ್ ಮತ್ತು ಬಸಿಲ್ ಜೊಸೆಫ್ ನಟನೆಯ "ಸೂಕ್ಷ್ಮದರ್ಶಿನಿ" ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿತ್ತು. ಎಂ.ಸಿ.ಜತಿನ್ ನಿರ್ದೇಶನದ ಸಿನಿಮಾಗೆ ಅನೂಪ್, ಶೈಜು ಖಾಲಿದ್ ಮತ್ತು ಸಮೀರ್ ತಾಹಿರ್ ಜೊತೆಯಾಗಿ ಬಂಡವಾಳ ಹಾಕಿದ್ದರು. 10 ರಿಂದ 14 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾದ ಸೂಕ್ಷ್ಮದರ್ಶಿನಿ ಬರೋಬ್ಬರಿ 55 ರಿಂದ 56 ಕೋಟಿ ಹಣ ಸಂಪದಾನೆ ಮಾಡಿದೆ. 

ಚಿತ್ರದ ಕಥೆ ಏನು?
ಸೂಕ್ಷ್ಮದರ್ಶಿನಿ ಸಿನಿಮಾ ಮಧ್ಯಮ ವರ್ಗದ ಮ್ಯಾನುಯೆಲ್ ಎಂಬ ವ್ಯಕ್ತಿ ಮನೆ ಶಿಫ್ಟ್ ಮಾಡುತ್ತಿರುವ ದೃಶ್ಯದಿಂದ ಆರಂಭವಾಗುತ್ತದೆ. ಮ್ಯಾನುಯೆಲ್ ತನ್ನ ತಾಯಿಯೊಂದಿಗೆ ಮನೆಗೆ ಬಂದಿರೋದಾಗಿ ಹೇಳಿಕೊಂಡಿರುತ್ತಾನೆ. ನಾಯಕನ ತಾಯಿ ಮರೆವಿನ ಕಾಯಿಲೆಯಿಂದ ಬಳಲುತ್ತಿರುತ್ತಾರೆ. ಆದ್ರೆ ಮ್ಯಾನುಯೆಲ್ ಪಕ್ಕದ ಮನೆಯಲ್ಲಿರುವ ಪ್ರಿಯಾಗೆ ಹೊಸದಾಗಿ ಬಂದಿರೋ ವ್ಯಕ್ತಿ ಮೇಲೆ ಅನುಮಾನ ಬರುತ್ತದೆ. ಆತನ ನಡವಳಿಕೆಯೆಲ್ಲವೂ ಪ್ರಿಯಾಗೆ ಅನುಮಾನ ಮೂಡಿಸುತ್ತದೆ. ಈ ಎಲ್ಲದರ ನಡುವೆ ಇದ್ದಕ್ಕಿದ್ದಂತೆ ಮ್ಯಾನುಯೆಲ್ ತಾಯಿ ನಾಪತ್ತೆಯಾಗುತ್ತಾಳೆ. ಪ್ರಿಯಾ ತನ್ನ ಇಬ್ಬರು ಗೆಳತಿಯರೊಂದಿಗೆ ಸೇರಿಕೊಂಡು ಪ್ರಕರಣ ಪರಿಹರಿಸಲು ಮುಂದಾಗುತ್ತಾಳೆ.

ಇದನ್ನೂ ಓದಿ: Kishkindha Kaandam: ಕಾಡಿನ ಒಂಟಿ ಮನೆಯಲ್ಲಿನ ರಹಸ್ಯಗಳ ರೋಚಕ ತಿರುವಿನ ಕಣ್ಣೀರು ತರಿಸೋ ಭಾವನಾತ್ಮಕ ಕಥೆ

ಸೂಕ್ಷ್ಮದರ್ಶಿನಿ ಸಿನಿಮಾದ ಕ್ಲೈಮ್ಯಾಕ್ಸ್ ಶಾಕಿಂಗ್ ಆಗಿದೆ. ಆರಂಭದಲ್ಲಿ  ಎಲ್ಲರಿಗೂ ಮ್ಯಾನುಯೆಲ್ ಮೇಲೆಯೇ ಅನುಮಾನ ಬಂದಿರುತ್ತದೆ. ಆದ್ರೆ ಕೊನೆ ಕೊನೆಗೆ ಊಹೆಗೂ ಮೀರಿದ ರೀತಿಯಲ್ಲಿ ಸೂಕ್ಷ್ಮದರ್ಶಿನಿ ಕೊನೆಯಾಗುತ್ತದೆ. 2 ಗಂಟೆ 23 ನಿಮಿಷದ ಸಿನಿಮಾದ ಪ್ರತಿಯೊಂದು ಕ್ಷಣ ನಿಮಗೆ ಸಸ್ಪೆನ್ಸ್ ಅನುಭವವನ್ನು ನೀಡುತ್ತದೆ. ನಿರ್ದೇಶಕರು ಚಿತ್ರದ ಕೊನೆಯ 10 ನಿಮಿಷವನ್ನು ಅದ್ಭುತವಾಗಿ ತೋರಿಸುವಲ್ಲಿ ಯಶಸ್ವಿಯಾಗಿದ್ದಾರೆ. 

55 ರಿಂದ 56 ಕೋಟಿ ಗಳಿಕೆ ಮಾಡಿರುವ ಸೂಕ್ಷ್ಮದರ್ಶನಿಗೆ IMDB 7.8 ರೇಟಿಂಗ್ ನೀಡಿದೆ. ಈ ಸಿನಿಮಾ ಜಿಯೋ ಹಾಟ್‌ಸ್ಟಾರ್‌ನಲ್ಲಿ ಸ್ರೀಮ್ ಆಗಿದ್ದು, ಮೂಲಭಾಷೆ ಮಲಯಾಳಂ ಆಗಿದೆ. ಸೂಕ್ಷ್ಮದರ್ಶಿನಿ ಸಿನಿಮಾವನ್ನು ಹಿಂದಿ, ಕನ್ನಡ, ತೆಲಗು ಮತ್ತು ತಮಿಳು ಭಾಷೆಗೆ ಡಬ್ ಮಾಡಲಾಗಿದೆ. ನಿಮ್ಮಿಷ್ಟದ ಭಾಷೆಯಲ್ಲಿ ಸೂಕ್ಷ್ಮದರ್ಶಿನಿ ನೋಡಬಹುದು. 

ಇದನ್ನೂ ಓದಿ: ₹37 ಕೋಟಿಯ ಭಾರತ-ಪಾಕಿಸ್ತಾನ ಕಥೆಯ ಸಿನಿಮಾ ಗಳಿಸಿದ್ದು 200 ಕೋಟಿಗೂ ಅಧಿಕ; ನಟಿಯ ನಟನೆಗೆ ಕಣ್ಣೀರಿಟ್ಟ ಜನತೆ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?