
ಪ್ರತಿವರ್ಷದಂತೆ ನಟಿ ಶಿಲ್ಪಾ ಶೆಟ್ಟಿ ಕುಂದ್ರಾ ಈ ಬಾರಿಯೂ ಗಣೇಶನನನ್ನು ಮನೆಗೆ ಸ್ವಾಗತಿಸಿದ್ದಾರೆ. ಆದರೆ ಈ ಬಾರಿ ಕೊರೋನಾದಿಂದಾಗಿ ಸ್ನೇಹಿತರನ್ನು ಆಹ್ವಾನಿಸಿಲ್ಲ.
ಈ ಬಾರಿ ಶಿಲ್ಪಾ ಶೆಟ್ಟಿ ಮಗಳು ಸಮಿಶಾಳಿಗೆ ಇದು ಮೊದಲ ಗಣೇಶ ಹಬ್ಬ.
ಈ ಬಾರಿ 11ನೇ ವರ್ಷ ನಾನು ಗಣೇಶನನ್ನು ಸ್ವಾಗತಿಸುತ್ತಿದ್ದೇನೆ. ಈ ಬಾರಿ ಸಮಿಶಾ ಇರೋದ್ರಿಂದ ತುಂಬಾ ಸ್ಪೆಷಲ್. ಆದರೆ ಈ ಬಾರಿ ಯಾರನ್ನೂ ಆಹ್ವಾನಿಸಿಲ್ಲ. ಹಾಗಾಗಿ ಮನೆಯವರ ಜೊತೆ ಮಾತ್ರ ಹಬ್ಬ ಆಚರಿಸುತ್ತಿದ್ದೇನೆ. ನನ್ನ ಸಹೋದರಿ ಶಮಿತಾ ಕೂಡಾ ಈ ಬಾರಿ ಶೂಟಿಂಗ್‌ನಿಂದಾಗಿ ಹಬ್ಬದಲ್ಲಿ ಭಾಗವಹಿಸುತ್ತಿಲ್ಲ ಎಂದಿದ್ದಾರೆ.
ಶಿಲ್ಪಾ ಶೆಟ್ಟಿ ಕೈಯಲ್ಲಿ ಎರಡು ವಾಚು ಯಾಕೆ?
ಕೊರೋನಾ ಮಾರ್ಗಸೂಚಿಗಳನ್ನು ಪರಿಗಣಿಸಿ ಈ ಬಾರಿ ಶಿಲ್ಪಾ ಸಿಂಪಲ್ ಆಗಿ ಹಬ್ಬ ಆಚರಿಸುತ್ತಿದ್ದಾರೆ. ಈ ಕೊರೋನಾ ಬಹಳಷ್ಟು ಕಲಿಸಿದೆ. ಮುಖ್ಯವಾಗಿ ಅಗತ್ಯ ಮತ್ತು ಆಡಂಬರದ ವತ್ಯಾಸ ಕಲಿಸಿದೆ ಎಂದಿದ್ದಾರೆ.
ಈ ಬಾರಿ ನಾನೇ ಡೆಕೊರೇಷನ್ ಮಾಡಿದ್ದೇನೆ. ಈ ಬಾರಿ ಕ್ಯಾಟರಿಂಗ್‌ನವರ್ಯಾರೂ ಇಲ್ಲ, ಯಾಕೆಂದರೆ ಅತಿಥಿಗಳೂ ಇಲ್ಲ. ಈ ಬಾರಿ ಸತ್ಯನಾರಾಯಣ ಪೂಜೆ ಮಾಡಲಿದ್ದೇವೆ. ಸಮಿಶಾಗೆ ಅನ್ನ ಪ್ರಾಶನವಿದೆ. ಹಾಗಾಗಿ ಈ ಬಾರಿ ತುಂಬಾ ಸ್ಪೆಷಲ್ ಎಂದಿದ್ದಾರೆ. ಕೊರೋನಾವನ್ನು ನಿರ್ಲಕ್ಷಿಸಬಾರದು. ಮಾರ್ಗಸೂಚಿ ಪಾಲಿಸಬೇಕು. ವಿಘ್ನವಿನಾಶಕ ಎಲ್ಲ ವಿಘ್ನ ನಿವಾರಿಸಲಿ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.