ಅವರಿಬ್ಬರೂ ದೈಹಿಕ ಸಂಪರ್ಕ ಹೊಂದಿದ್ದಾರೆ, ನನ್ನ ಬಳಿ ಅವರ ಹೋಟೆಲ್ ಬಿಲ್‌ಗಳಿವೆ ಎಂದು ಪತಿ ಆದಿಲ್ ವಿರುದ್ಧ ರಾಖಿ ಸಾವಂತ್ ಗಂಭೀರ ಆರೋಪ ಮಾಡಿದ್ದಾರೆ.
ವಿವಾದ ನಟಿ, ಬಿಗ್ ಬಾಸ್ ಖ್ಯಾತಿಯ ರಾಖಿ ಸಾವಂತ್ ಮತ್ತು ಪತಿ ಆದಿಲ್ ಖಾನ್ ಮದುವೆ ರಂಪಾಟ ಇನ್ನೂ ಮುಗಿದಿಲ್ಲ. ರಾಖಿ ಸಾವಂತ್ ಪತಿ ಆದಿಲ್ ವಿರುದ್ಧ ದಿನಕ್ಕೊಂದು ಆರೋಪ ಮಾಡುತ್ತಿದ್ದಾರೆ. ಆದಿಲ್‌ಗೆ ಅನೈಕತಿಕ ಸಂಬಂಧವಿದೆ, ಮೋಸ ಮಾಡಿದ ಎಂದು ಕಿಡಿಕಾರುತ್ತಿದ್ದ ರಾಖಿ ಇದೀಗ ದೂರು ನೀಡುವುದಾಗಿ ಹೇಳಿದ್ದಾರೆ. ಪತಿ ಆದಿಲ್ ಬೇರ ಹುಡುಗಿಯನ್ನು ಪ್ರೀತಿಸುತ್ತಿದ್ದಾನೆ, ಯಾರೆಂದು ಸದ್ಯಕ್ಕೆ ಹೇಳಲ್ಲ ಎಂದಿದ್ದ ರಾಖಿ ಸಾವಂತ್ ಇದೀಗ ಆ ಹುಡುಗಿಯ ಹೆಸರನ್ನು ರಿವೀಲ್ ಮಾಡಿದ್ದಾರೆ. ತನು ಎನ್ನುವ ಯುವತಿ ಜೊತೆ ಸಂಬಂಧದಲ್ಲಿದ್ದಾರೆ ಎಂದು ಬಹಿರಂಗ ಪಡಿಸಿದ್ದಾರೆ.
'ಮಾಧ್ಯಮದ ಮುಂದೆ ಕ್ಷಮೆ ಕೇಳಿದರೆ ಮಾತ್ರ ನನ್ನ ಜೊತೆ ಬರುವುದಾಗಿ ಆದಿಲ್ ಹೇಳಿದ್ದ. ಎಲ್ಲವನ್ನೂ ಬಿಟ್ಟು ಬರುವುದಾಗಿ ಆದಿಲ್ ಹೇಳಿದ್ದ ಆದರೆ ಬಂದಿಲ್ಲ. ಅವನು ಆ ಹುಡುಗಿ ಜೊತೆ ಇದ್ದಾನೆ. ಆ ಹುಡುಗಿಗೆ ನಾಚಿಕೆ ಆಗಬೇಕು. ಕೊನೆಗೂ ಆದಿಲ್ ನನ್ನನ್ನು ಬಿಟ್ಟು ಹೋದ. ಈಗ ನಾನು ಎಲ್ಲವನ್ನೂ ಮಾಧ್ಯಮಕ್ಕೆ ಹೇಳುತ್ತೇನೆ' ಎಂದು ಪಾಪರಾಜಿಗಳ ಮುಂದೆ ಕಣ್ಣೀರಾಕಿದರು.
ಆದಿಲ್ ತನ್ನನ್ನು ಮಾನಸಿಕವಾಗಿ, ದೈಹಿಕವಾಗಿ ಬಳಸಿಕೊಂಡ ಎಂದು 44 ವರ್ಷದ ನಟಿ ರಾಖಿ ಸಾವಂತ್ ಆರೋಪಿಸಿದ್ದಾರೆ. 'ಆದಿಲ್ ನನ್ನನ್ನು ಮಾನಸಿಕವಾಗಿ, ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಬಳಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ. ಆದಿಲ್ ತನ್ನ ಎಲ್ಲಾ ಹಣವನ್ನು ಬಳಸಿಕೊಂಡಿದ್ದಾನೆ, ಮೈಸೂರಿನಲ್ಲಿ ಆತನ ವಿರುದ್ಧ ಅನೇಕ ಪ್ರಕರಣಗಳು ದಾಖಲಾಗಿವೆ ಮದುವೆ ಬಳಿಕ ಗೊತ್ತಾಯಿತು' ಎಂದು ರಾಖಿ ಸಾವಂತ್ ಕಿಡಿ ಕಾರಿದ್ದಾರೆ. 'ಅವನು ಬಾಲಿವುಡ್‌ಗೆ ಬರಲು ನನ್ನನ್ನು ಬಳಸಿಕೊಂಡ, ಬಾಲಿವುಡ್‌ನಲ್ಲಿ ಸ್ಟಾರ್ ಆಗಲು ನನ್ನನ್ನು ಏಣಿಯಾಗಿ ಮಾಡಿಕೊಂಡ. ನನ್ನಲ್ಲಿದ್ದ ಹಣವನ್ನೆಲ್ಲ ತೆಗೆದುಕೊಂಡು ಹೋದ. ನನ್ನ ಬಳಿ ಎಲ್ಲ ಪುರಾವೆಗಳಿವೆ. ಅವನು ನನ್ನನ್ನು ಭಾವನಾತ್ಮಕವಾಗಿ, ದೈಹಿಕವಾಗಿ, ಮಾನಸಿಕವಾಗಿ ಬಳಸಿಕೊಂಡ. ನಾನು ಮದುವೆ ನಂತರ ಚಿತ್ರಹಿಂಸೆ ಎದುರಿಸಿದ್ದೇನೆ' ಎಂದು ಹೇಳಿದ್ದಾರೆ.
ಅನೈತಿಕ ಸಂಬಂಧ ಆರೋಪ; ಪತಿ ವಿರುದ್ಧ ದೂರು ಕೊಟ್ಟ ರಾಖಿ ರಸ್ತೆಯಲ್ಲಿ ಪರೋಟ ತಿನ್ನಿಸುತ್ತಿರುವ ವಿಡಿಯೋ ವೈರಲ್
'ನನ್ನ ತಾಯಿಯನ್ನು ಕೊಂದಿದ್ದೀಯಾ, ನನ್ನ ತಾಯಿಗೆ ಸರಿಯಾಗಿ ಸಮಯಕ್ಕೆ ಚಿಕಿತ್ಸೆ ಕೊಡಿಸಿದ್ರೆ ಬಹುಶಃ ಅವರು ಸಾಯುತ್ತಿರಲಿಲ್ಲ. ನನಗೆ ಯಾವುದೇ ಆಯ್ಕೆಗಳಿಲ್ಲದೆ ಬಿಟ್ಟಿದ್ದೀಯಾ, ನೀನು ನನ್ನನ್ನು ಬೀದಿಗೆ ತಂದೆ, ನನ್ನನ್ನು ದೋಚಿದೆ' ಎಂದು ಕಣ್ಣೀರಾಕಿದ್ದಾರೆ.
ನಾನು ಮತ್ತೊಬ್ಬ ಸುಶಾಂತ್ ಸಿಂಗ್ ಆಗಲ್ಲ; ಪತ್ನಿ ರಾಖಿ ಸಾವಂತ್ ಆರೋಪಗಳಿಗೆ ಸಿಡಿದೆದ್ದ ಆದಿಲ್ ಖಾನ್
ಆದಿಲ್ ಪ್ರೀತಿಸುತ್ತಿರುವ ಹುಡುಗಿಯ ಬಗ್ಗೆ ಮಾತನಾಡಿದ ರಾಖಿ, 'ಆಕೆಗೆ ಐ ಲವ್ ಯೂ ಅಂತ ಹೇಳಿದ್ದು, ದೈಆಕೆಯ ಜೊತೆ ದೈಹಿಕ ಸಂಬಂಧ ಇಟ್ಟುಕೊಂಡಿರುವ ಬಗ್ಗೆ ಗೊತ್ತಿದೆ, ನನ್ನ ಬಳಿ ಅವರ ಹೋಟೆಲ್ ಮತ್ತು ಏರ್‌ವೇಸ್ ಬಿಲ್‌ಗಳಿವೆ' ಎಂದು ಹೇಳಿದರು. ಬಳಿಕ ಆ ಯುವತಿಗೆ ರಾಖಿ ಪ್ರಶ್ನೆ ಮಾಡಿದ ಬಗ್ಗೆಯೂ ಬಹಿರಂಗ ಪಡಿಸಿದರು. 'ಮದುವೆಯಾದ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದಿಯಾಲ್ಲ, ನಾಚಿಕೆಯಾಗಲ್ವಾ' ಎಂದು ಕೇಳಿದೆ ಅದಕ್ಕೆ ಅವಳು ನಾನು ಆದಿಲ್ ಪ್ರೀತಿಗೆ ಬಿದ್ದೆ ಎಂದು ಹೇಳಿದಳು. ಆದಿಲ್ ಕೂಡ ತನಗೆ ಸಂಬಂಧವಿದೆ, ನನಗೆ ಸ್ವಲ್ಪ ಸಮಯ ಕೊಡು ಎಂದು ಹೇಳಿದ್ದಾನೆ. ನನ್ನ ತಾಯಿಯ ಚಿನ್ನ, ಹಣ ಎಲ್ಲವನ್ನು ಕಿತ್ತುಕೊಂಡು ಹೋಗಿದ್ದಾನೆ' ಎಂದು ರಾಖಿ ಆರೋಪ ಮಾಡಿದ್ದಾರೆ.