Bollywood: ಈ ಸೆಲೆಬ್ರಿಟಿ ಜೋಡಿಗಳ ವಯಸ್ಸಿನಲ್ಲಿ ಎಷ್ಟೊಂದು ಅಂತರವಿದೆ ನೋಡಿ!

Suvarna News   | Asianet News
Published : Nov 07, 2021, 03:53 PM IST
Bollywood: ಈ ಸೆಲೆಬ್ರಿಟಿ ಜೋಡಿಗಳ ವಯಸ್ಸಿನಲ್ಲಿ ಎಷ್ಟೊಂದು ಅಂತರವಿದೆ ನೋಡಿ!

ಸಾರಾಂಶ

ಬಾಲಿವುಡ್‌ನ ಕೆಲವು ಜನಪ್ರಿಯ ತಾರಾಜೋಡಿಗಳಲ್ಲಿ ಗಂಡನಿಗೂ ಹೆಂಡತಿಗೂ ಹತ್ತು ವರ್ಷಗಳಿಗೂ ಹೆಚ್ಚಿನ ಅಂತರವಿದೆ. ಈ ವಯಸ್ಸಿನ ಅಂತರವಿದ್ದೂ ಇವರು ತಮ್ಮ ದಾಂಪತ್ಯವನ್ನು ಅಂದಗೆಡದಂತೆ ಕಾಪಾಡಿಕೊಂಡಿರುವುದು ವಿಶೇಷ.

ವಯಸ್ಸು, ಲಿಂಗ, ಜಾತಿ, ಧರ್ಮದ ನಡುವೆ ಯಾವುದೇ ಪಕ್ಷಪಾತವನ್ನು ಮಾಡದಿರುವುದು ಪ್ರೀತಿಯ ನಿಜವಾದ ರೂಪ. ಪ್ರೀತಿಯ (Love) ವಿಚಾರಕ್ಕೆ ವಯಸ್ಸು ಎಂಬುದು ಕೇವಲ ಒಂದು ಸಂಖ್ಯೆ. ಅನೇಕ ಬಾಲಿವುಡ್ (Bollywood) ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳಿಗಿಂತ 10 ಅಥವಾ ಅದಕ್ಕಿಂತ ಹೆಚ್ಚಿನ ವರ್ಷಗಳ ವಯಸ್ಸಿನ ಅಂತರವನ್ನು ಹೊಂದಿದ್ದಾರೆ. ಅಂಥವರ್ಯಾರು ಎಂಬುದನ್ನು ಇಲ್ಲಿ ನೋಡಿ.

ಸೈಫ್ ಅಲಿ ಖಾನ್(Saif ali khan)  ಕರೀನಾ ಕಪೂರ್ (Kareena kapoor)

ಸೈಫ್ ಅವರು ನಟಿ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. ಅಲ್ಲಿ ಅಮೃತಾ ಅವರು ಸೈಫ್‌ಗಿಂತ 12 ವರ್ಷ ಹಿರಿಯರಾಗಿದ್ದರು. ಇವರಿಬ್ಬರು 2004ರಲ್ಲಿ ತಮ್ಮ ಮದುವೆಯನ್ನು ಕೊನೆಗೊಳಿಸಿದರು. 2012ರಲ್ಲಿ, ಸೈಫ್ ಪಟೌಡಿ ಪ್ರಿನ್ಸ್‌ ತಮಗಿಂತ ವಯಸ್ಸಿನಲ್ಲಿ 11 ವರ್ಷ ಚಿಕ್ಕವಳಾದ ಕರೀನಾ ಕಪೂರ್ ಅವರನ್ನು ವಿವಾಹವಾದರು. ಈ ಜೋಡಿಗೆ ಈಗ ಇಬ್ಬರು ಮಕ್ಕಳಿದ್ದಾರೆ. ಆನಂದದಾಯಕ ದಾಂಪತ್ಯ ಅವರದಾಗಿದೆ.

ಪ್ರಿಯಾಂಕಾ ಚೋಪ್ರಾ- ನಿಕ್ ಜೋನಾಸ್ (Priyanka chopra- Nick jonas)

ಪ್ರಿಯಾಂಕಾ ಮತ್ತು ನಿಕ್ ಎಲ್ಲಾ ವಯಸ್ಸಿನ ಅಂತರದ ಸ್ಟೀರಿಯೊಟೈಪ್‌ಗಳನ್ನು ಮುರಿದಿದ್ದಾರೆ. ನಟಿ ಪ್ರಿಯಾಂಕ, ತಮ್ಮ ಗೆಳೆಯ ನಿಕ್‌ಗಿಂತ 10 ವರ್ಷ ದೊಡ್ಡವರು. ಮತ್ತು ಅವರು ಒಟ್ಟಿಗಿರುವಾಗ ತುಂಬಾ ಅದ್ಭುತವಾದ ಜೋಡಿಯಾಗಿ ಕಾಣುತ್ತಾರೆ. ಕೆಲವರು ಪ್ರಿಯಾಂಕ, ನಿಕ್‌ನನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ತಮಾಷೆ ಮಾಡಿರುವುದೂ ಉಂಟು!

ಶಾಹಿದ್ ಕಪೂರ್- ಮೀರಾ ರಜಪೂತ್ (shahid kapoor)

21 ವರ್ಷದ ದೆಹಲಿ ಮೂಲದ ಮೀರಾ ಅವರನ್ನು ವಿವಾಹವಾದಾಗ ಬಾಲಿವುಡ್‌ನ ಶಾಹಿದ್ ಕಪೂರ್‌ಗೆ ಅವರಿಗೆ 34 ವರ್ಷ. ಅಂದರೆ ಇಬ್ಬರ ನಡುವೆ ಹದಿಮೂರು ವರ್ಷಗಳ ಅಂತರ. ಶಾಹಿದ್ ಮತ್ತು ಮೀರಾ ಅವರನ್ನು ಅಭಿಮಾನಿಗಳು ಪ್ರೀತಿಸುತ್ತಾರೆ ಮತ್ತು ಅವರು ಪ್ರತಿ ಬಾರಿ ಫೋಟೋವನ್ನು ಪೋಸ್ಟ್ ಮಾಡಿದಾಗ, ಅದು ತಕ್ಷಣವೇ ನೆಟ್‌ನಲ್ಲಿ ವೈರಲ್ ಆಗುತ್ತದೆ.

Sharukh Khan ಕೂಡ ಮಗನಂತೆ ಜೈಲಿಗೆ ಹೋಗಿ ಬಂದಿದ್ದ, ನಿಮಗೆ ಗೊತ್ತೆ?

ಮಿಲಿಂದ್ ಸೋಮನ್- ಅಂಕಿತಾ ಕೋನ್ವರ್ (Milind soman)

ಮಿಲಿಂದ್ ಮತ್ತು ಅಂಕಿತಾ ಮೊದಲಿನಿಂದಲೂ ತಮ್ಮ ಪರಸ್ಪರ ಪ್ರೀತಿಯ ಬಗ್ಗೆ ತುಂಬಾ ಮಾತನಾಡಿದ್ದಾರೆ ಮತ್ತು ವಯಸ್ಸಿನ ಅಂತರದ ಸಮಸ್ಯೆಯನ್ನು ತಾವೇ ಪರಿಹರಿಸಿಕೊಂಡಿದ್ದಾರೆ. ಏಪ್ರಿಲ್ 2018ರಲ್ಲಿ 26 ವರ್ಷ ವಯಸ್ಸಿನ ಅಂಕಿತಾ ಅವರನ್ನು ವಿವಾಹವಾದಾಗ ಮಿಲಿಂದ್ ಅವರಿಗೆ 52 ವರ್ಷ ವಯಸ್ಸಾಗಿತ್ತು. ಆದರೆ ದೈಹಿಕವಾಗಿ, ಮಾನಸಿಕವಾಗಿ ಮಿಲಿಂದ್ ಈಗಲೂ ಸಾಕಷ್ಟು ಫಿಟ್ ಆಗಿದ್ದಾರೆ. ಅವರ ಎಕ್ಸರ್‌ಸೈಸ್ ವಿಡಿಯೋಗಳನ್ನು ನೋಡಿದರೆ ನಿಮಗದು ತಿಳಿಯುತ್ತದೆ.

ಸುಶ್ಮಿತಾ ಸೇನ್- ರೋಹ್ಮನ್ ಶಾಲ್ (Sushmita sen)

ಸುಶ್ಮಿತಾ ಮತ್ತು ರೋಹ್ಮನ್ ಜೊತೆಗೆ ಜೀವಿಸುತ್ತಿದ್ದಾರೆ. ಸುಶ್ಮಿತಾಗೆ 44 ವರ್ಷ, ರೋಹ್ಮನ್‌ಗೆ 29 ವರ್ಷ. ಇವರಿನ್ನೂ ಮದುವೆಯಾಗಿಲ್ಲ. ಆದರೆ ನಾವು ಒಂದು ಕುಟುಂಬ ಎಂದು ರೋಹ್ಮನ್ ಹೇಳಿಕೊಂಡಿದ್ದಾರೆ.

ಈ ಬಾಲಿವುಡ್ ಜೋಡಿಗಳಲ್ಲಿ ಹೆಂಡತಿ ಗಂಡನಿಗಿಂತ ಎಷ್ಟು ದೊಡ್ಡವಳು ನೋಡಿ!

ಸಂಜಯ್ ದತ್- ಮಾನ್ಯತಾ (Sanjay datt)

2008ರಲ್ಲಿ ಇವರಿಬ್ಬರೂ ಮದುವೆಯಾದರು. ಈಗ ಸಂಜಯ್ ದತ್‌ಗೆ 62 ವರ್ಷ ಹಾಗೂ ಮಾನ್ಯತಾಗೆ 43 ವರ್ಷ. ಹತ್ತೊಂಬತ್ತು ವರ್ಷ ಅಂತರವಿದೆ. ಸಂಜಯ್ ಜೈಲುಪಾಲಾದಾಗ ಆತನನ್ನು ಬಿಡಿಸಲು ತುಂಬಾ ಓಡಾಡಿದ್ದಳು ಈಕೆ. ಇದಕ್ಕೂ ಮೊದಲು ನಾಲ್ಕಾರು ವರ್ಷಗಳ ಅಂತರದ ರಿಚಾ ಶರ್ಮಾ ಹಾಗೂ ರಿಯಾ ಪಿಳ್ಳೈ ಅವರನ್ನು ಸಂಜಯ್ ಮದುವೆಯಾಗಿದ್ದರು.

ಪ್ರಕಾಶ್‌ ರಾಜ್- ಪೋನಿ ವರ್ಮಾ (Praksh Raj)

ಪೋನಿ ವರ್ಮಾ, ಪ್ರಕಾಶ್ ರಾಜ್ ಅವರ ಎರಡನೇ ಪತ್ನಿ. ಮೊದಲ ಹೆಂಡತಿ ಲಲಿತಾ ಕುಮಾರಿಯಲ್ಲಿ ಜನಿಸಿದ ಒಬ್ಬ ಮಗನನ್ನು ಕಳೆದುಕೊಂಡ ನಂತರ, ಇವರಿಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು. ನಂತರ ಪೋನಿ ವರ್ಮಾರನ್ನು ಮದುವೆಯಾಗಿದ್ದರು. ಇವರಿಬ್ಬರ ನಡುವಿನ ವಯಸ್ಸಿನ ಅಂತರ ಹನ್ನೆರಡು ವರ್ಷ. ಇತ್ತೀಚೆಗೆ ಈ ಜೋಡಿ ಎರಡನೇ ಸಲ ಮದುವೆ ಮಾಡಿಕೊಂಡಿದೆ.

Ajay Devgan: ನಟನ ಕಾರಣದಿಂದ 50 ವರ್ಷವಾದರೂ ಇನ್ನೂ ಸಿಂಗಲ್‌ ಆಗಿದ್ದಾರೆ ಈ ನಟಿ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!