ಈ ವರ್ಷ ದೀಪಾವಳಿ ಆಚರಿಸಿ ಟ್ರೋಲ್ ಆದ ಬಾಲಿವುಡ್ ನಟ Farhan Akhtar!

By Suvarna News  |  First Published Nov 6, 2021, 1:17 PM IST

ಗರ್ಲ್‌ಫ್ರೆಂಡ್ ಜೊತೆ ದೀಪಾವಳಿ ಆಚರಿಸಿದ ಹಿಂದಿ ನಟ ಫರ್ಹಾನ್ ಅಕ್ತರ್. ದೀಪಾವಳಿ ಆಚರಣೆಯಲ್ಲಿ ಹಾಗಿಲ್ಲ ಎಂದು ಟ್ರೋಲ್ ಮಾಡಿದ ನೆಟ್ಟಿಗರು.
 


ಬಾಲಿವುಡ್ (Bollywood) ಸಿನಿಮಾ ತಾರೆಯರು ದೀಪಾವಳಿ (Deepavali) ಅಥವಾ ಹಿಂದು ಹಬ್ಬಗಳನ್ನು ಆಚರಿಸಿ ಟ್ರೋಲ್ (troll) ಆಗುತ್ತಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಶಾರುಖ್ ಖಾನ್ (Shah Rukh Khan) ಮತ್ತು ಜಹೀರ್ ಖಾನ್ (Zaheer Khan) ಟ್ರೋಲ್ ಆಗಿದ್ದರು, ಈ ವರ್ಷ ಲೈಮ್ ಲೈಟ್‌ ಬಂದು ಫರ್ಹಾನ್‌ (Farhan Akhtar) ಕಡೆ ಮುಖ ಮಾಡಿದೆ. 

ಫರ್ಹಾನ್ ಇನ್‌ಸ್ಟಾಗ್ರಾಂನಲ್ಲಿ (Instagram) ಅಪ್ಲೋಡ್ ಮಾಡಿರುವ ಫೋಟೋನಲ್ಲಿ ಗರ್ಲ್‌ಫ್ರೆಂಡ್ (Girlfriend) ಶಿಬಾನಿ ಜೊತೆ ದೀಪಾವಳಿ ಆಚರಿಸಿದ್ದಾರೆ.  ಜೊತೆಗೆ ಬ್ಯುಸಿನೆಸ್ ಪಾರ್ಟ್ನರ್ ರಿತೇಷ್‌ (Ritesh) ಕೂಡ ಇದ್ದಾರೆ. 'ಹ್ಯಾಪಿ ದಿವಾಲಿ' ಎಂದು ಕ್ಯಾಪ್ಶನ್ ಹಾಕಿದ್ದಾರೆ. ತಿಲಕ ಧರಿಸಿರುವ ಫರ್ಹಾನ್ ತಮ್ಮ ಗರ್ಲ್‌ಫ್ರೆಂಡ್‌ಗೂ ತಿಲಕ (Tilaka) ಇಡುತ್ತಿದ್ದಾರೆ ಹಾಗೇ ರಿತೇಷ್‌ ಕೂಡ ಇಟ್ಟುಕೊಂಡಿದ್ದಾರೆ. ಹೀಗಾಗಿ ಟ್ರೋಲ್‌ಗೆ ಒಳಗಾಗಿದ್ದಾರೆ.

Tap to resize

Latest Videos

ನೀವು ನನ್ನ ನೆಚ್ಚಿನ ನಟ ಆದರೆ ಇಸ್ಲಾಂ (Islam) ಧರ್ಮದಲ್ಲಿ ಈ ಪದ್ಧತಿಗೆ ಒಪ್ಪಿಗೆ ಇಲ್ಲ, ನೀವು ಮತ್ತು ನಿಮ್ಮ ಕುಟುಂಬದವರು (Family) ಹಿಂದೂ ಪೂಜೆ ಮಾಡುತ್ತಿರುವುದನ್ನು ನೋಡಲು ತುಂಬಾ ಬೇಸರವಾಗುತ್ತಿದೆ. ನಾನು ಸದಾ ಅಂದುಕೊಳ್ಳುತ್ತಿದ್ದೆ ಬಾಲಿವುಡ್‌ನಲ್ಲಿ ಜಾವೆದ್ ಅಕ್ತರ್ (Javad Aktar) ಕುಟುಂಬ ಒಂದೇ ಸರಿಯಾದ ಇಸ್ಲಾಂ ಧರ್ಮ ಪಾಲಿಸುವುದು ಎಂದು. ಬಿಡಿ ಸರ್ ನೀವು ಬದಲಾಗಿದ್ದೀರಿ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಚಿಗುರುವ ಮುನ್ನವೇ ಚಿವುಟಬೇಡಿ: ಅರ್ಜುನ್‌ ತೆಂಡುಲ್ಕರ್ ಬೆಂಬಲಕ್ಕೆ ನಿಂತ ಫರ್ಹಾನ್ ಅಖ್ತರ್

undefined

ಫರ್ಹಾನ್ ನಟನೆಯ ತೂಫಾನ್‌ ಸಿನಿಮಾ ಕೆಲವು ದಿನಗಳ ಹಿಂದೆ ಅಮೇಜಾನ್ ಪ್ರೈಮ್‌ನಲ್ಲಿ (Amazon Prime) ಬಿಡುಗಡೆ ಕಂಡಿತ್ತು ಇದಾದ ನಂತರ ಹಾಲಿವುಡ್‌ನ ಮಿಸ್ಟರ್ ಮಾರ್ವೆಲ್‌ (Mister Marvel) ಸಿನಿಮಾದಲ್ಲಿ ನಟಿಸಿದ್ದಾರೆ.  ಸದ್ಯ ಫರ್ಹಾನ್ ಕೈಯಲ್ಲಿ ಯುದ್ರ, ಫೈರ್ ಹಾಗೂ ಶರ್ಮಾಜಿ ಕಿ ನಮ್ಮೀನ್ ಸಿನಿಮಾಗಳಿವೆ. ಜೀ ಲೇ ಜರಾ ಸಿನಿಮಾ ಕೂಡ ನಿರ್ದೇಶನ ಮಾಡುತ್ತಿದ್ದಾರೆ.

ಫರ್ಹಾನ್ ಅಖ್ತರ್ ಗರ್ಲ್‌ಫ್ರೆಂಡ್‌ ಶಿಬಾನಿ ದಾಂಡೇಕರ್ ಬಗ್ಗೆ ಒಂದಿಷ್ಟು..

ಕೆಲವು ದಿನಗಳ ಹಿಂದೆ ಬೋನಿ ಕಪೂರ್ (Boony Kapoor) ಮಗಳು ಜಾಹ್ನವಿ (Janhavi Kapoor) ಮತ್ತು ಸೈಫ್ ಅಲಿ ಖಾನ್ (Saif ali Khan) ಪುತ್ರಿ ಸಾರಾ (Sara) ಕೇದರನಾಥ್ ದೇಗುಲಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಸಾರಾನ ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಧರ್ಮ ಮುರಿಯುವ ಕೆಲಸ ಮಾಡಬೇಡಿ ನಿಮ್ಮನ್ನು ನೋಡಿ ನಮ್ಮ ಮಕ್ಕಳು ಕೂಡ ಹಾಗೆ ಮಾಡುತ್ತಾರೆ ಎಂದಿದ್ದಾರೆ ನೆಟ್ಟಿಗರು.

 

click me!