
ಮುಂಬೈ: ಭಾರತದ ಸಿನೆಮಾ ರಂಗದ ಸ್ಟಾರ್‌ಗಳ ಮಕ್ಕಳ ಪೈಕಿ ಯಾರು ಅತ್ಯಂತ ಶ್ರೀಮಂತರು ಎಂಬ ವರದಿಯೊಂದು ಬಿಡುಗಡೆಯಾಗಿದ್ದು, ಖ್ಯಾತ ನಟ ಹೃತಿಕ್ ರೋಷನ್ ಭರ್ಜರಿ 3100 ಕೋಟಿ ರು. ಅಸ್ತಿಯೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ.
ತಮ್ಮದೇ ನಿರ್ಮಾಣ ಸಂಸ್ಥೆ, ಎಚ್‌ಆರ್‌ಎಕ್ಸ್ ಎಂಬ ಕ್ರೀಡಾ ಉತ್ಪನ್ನಗಳ ಕಂಪನಿ, ಜಾಹೀರಾತು, ಸ್ಟಾರ್ಟಪ್‌ಗಳ ಹೂಡಿಕೆ ಮೂಲಕ ಹೃತಿಕ್ ರೋಷನ್ ಇಷ್ಟು ಸಂಪತ್ತು ಸಂಪಾದಿಸಿದ್ದಾರೆ. ಹೃತಿಕ್‌ರ ತಂದೆ ರಾಕೇಶ್ ರೋಶನ್, ಬಾಲಿವುಡ್‌ನ ಖ್ಯಾತ ನಟ ಮತ್ತು ನಿರ್ಮಾಪಕರಾಗಿದ್ದಾರೆ.
ಕ್ರಿಶ್ ಸಿನಿಮಾದಲ್ಲಿ ಜ್ಯೂನಿಯರ್ ಹೃತಿಕ್ ರೋಷನ್ ಆಗಿ ನಟಿಸಿದ್ದ ಹುಡುಗ ಈಗ ಹೇಗಿದ್ದಾರೆ ನೋಡಿ?
ಹೃತಿಕ್ ನಂತರ ಯಾರ್‍ಯಾರು?:
3100 ಕೋಟಿ ರು. ಆಸ್ತಿ ಹೊಂದಿರುವ ಹೃತಿಕ್ ನಂತರದ ಸ್ಥಾನದಲ್ಲಿ ಖ್ಯಾತನಾಮ ಸ್ಟಾರ್‌ಕಿಡ್‌ಗಳಲ್ಲಿ ಒಬ್ಬರಾದ ಸಲ್ಮಾನ್ ಖಾನ್ ಇದ್ದು ಅವರ ಆಸ್ತಿ 2900 ಕೋಟಿ ರು. ಮೂರನೇ ಸ್ಥಾನದಲ್ಲಿ ಅಮೀರ್ ಖಾನ್ ಅವರ ಆಸ್ತಿ ಮೌಲ್ಯ 1800 ಕೋಟಿ ರು. ನಂತರದ ಸ್ಥಾನ ಟಾಲಿವುಡ್ ಸ್ಟಾರ್ ಚಿರಂಜೀವಿ ಪುತ್ರ ರಾಮ್‌ಚರಣ್ ತೇಜ ರಾಮ್‌ಚರಣ್ ಆಸ್ತಿ 1340 ಕೋಟಿ ರು. ಪಟೌಡಿ ಕುಟುಂಬದ ಕುಡಿ, ಸೈಫ್ ಅಲಿ ಖಾನ್ ನಂತರದ ಸ್ಥಾನದಲ್ಲಿದ್ದು ಅವರ ಆಸ್ತಿ ಮೌಲ್ಯ 1200 ಕೋಟಿ ರು. ಹಾಗೆಯೇ ನಿರ್ದೇಶಕ ಮಹೇಶ್ ಭಟ್ ಪುತ್ರಿ ಆಲಿಯಾ ಭಟ್ ಆಸ್ತಿ 550 ಕೋಟಿ ರು. ಹಾಗೆಯೇ ಜೂ. ಎಂಟಿಆರ್ ಆಸ್ತಿ 500 ಕೋಟಿ ರು., ರಣಬೀರ್ ಕಪೂರ್ ಆಸ್ತಿ 400 ಕೋಟಿ ರು. ಹಾಗೆಯೇ ಸೌತ್‌ನ ಮತ್ತೊಬ್ಬ ಸೂಪರ್ ಸ್ಟಾರ್ ಪ್ರಭಾಸ್ 300 ಕೋಟಿ ರು. ಹೊಂದಿದ್ದಾರೆ.
ಬಾಲಿವುಡ್‌ನ ಸೆಲೆಬ್ರಿಟಿಗಳ 10 ದುಬಾರಿ ವಿಚ್ಛೇದನಗಳು, ಪರಿಹಾರ ಎಷ್ಟು ಕೋಟಿ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.