ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್! ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

Published : Oct 21, 2024, 12:29 PM IST
ವಿಚಿತ್ರ ಬಟ್ಟೆ ಧರಿಸಿ ವೇದಿಕೆಯಲ್ಲಿ ಒಂದೊಂದೇ ಕಳಚಿದ ಉರ್ಫಿ ಜಾವೇದ್!  ವಿಡಿಯೋ ನೋಡಿ ಸುಸ್ತಾದ ನೆಟ್ಟಿಗರು

ಸಾರಾಂಶ

ವಿಚಿತ್ರ ಬಟ್ಟೆಗಳಿಂದಲೇ ಫೇಮಸ್​ ಆಗಿರೋ ಉರ್ಫಿ ಜಾವೇದ್​ ಈಗ ಬಟ್ಟೆ ಧರಿಸಿ ವೇದಿಕೆ ಮೇಲೆ ಬಂದು ಅದನ್ನು ಬಿಚ್ಚುವ ಮೂಲಕ ಸದ್ದು ಮಾಡುತ್ತಿದ್ದಾರೆ. ವಿಡಿಯೋ ವೈರಲ್​ ಆಗಿದೆ.   

ಉರ್ಫಿ ಜಾವೇದ್‌ ಎಂದಾಕ್ಷಣ ಕಣ್ಣಿಗೆ ಬರುವುದು ಚಿತ್ರ-ವಿಚಿತ್ರ ಅವತಾರದ ನಟಿಯೇ. ಒಮ್ಮೊಮ್ಮೆ ಬಟ್ಟೆಯೂ ಇಲ್ಲದೆ, ಕೈಗೆ ಸಿಕ್ಕ ವಸ್ತುಗಳಿಂದ ಖಾಸಗಿ ಅಂಗಗಳನ್ನು ಮುಚ್ಚಿಕೊಂಡು ಪೋಸ್​ ನೀಡುವ ನಟಿ ಈಕೆ.  ದಿನವೂ ಬಟ್ಟೆಗಳಿಂದಲೇ ಟ್ರೋಲ್​ (Troll) ಆಗುವುದು ಎಂದರೆ ತುಂಬಾ ಖುಷಿ ಈಕೆಗೆ.  ಇದೇ  ಕಾರಣಕ್ಕೆ  ಮುಂಬೈನ ರೆಸ್ಟೋರೆಂಟ್‌ಗೆ ತಮಗೆ ಎಂಟ್ರಿ ಸಿಗಲಿಲ್ಲ, ಯಾರೂ ಮನೆ ಬಾಡಿಗೆ ಕೊಡುತ್ತಿಲ್ಲ ಎಂದೆಲ್ಲಾ ಗೋಳೋ ಅನ್ನುತ್ತಿದ್ದರೂ ನಟಿಯ ವಿಚಿತ್ರ ವೇಷ ಮಾತ್ರ ಮುಂದುವರೆದೇ ಇದೆ. ಕೆಲ ದಿನಗಳ ಹಿಂದಷ್ಟೇ ನನ್ನದು ಫ್ಲ್ಯಾಟ್​ ಚೆಸ್ಟ್​ ಎಂದು ಹೇಳುವ ಡಿಜಿಟಲ್​ ಬೋರ್ಡ್​ ಹಾಕಿಕೊಂಡು ಸುತ್ತಾಡಿದ್ದ ಉರ್ಫಿ ಕೊನೆಗೆ ಎದೆ ಮೇಲೆ ಉಡ ಬಿಟ್ಕೊಂಡು ಸದ್ದು ಮಾಡಿದ್ದರು.  ಉಡ ಅವರ ಮೈಮೇಲೆ ಹರಿದಾಡುವಂತೆ ಕಾಣುವ ವಿಡಿಯೋ ಶೇರ್‌ ಮಾಡಿದ್ದರು. 

ಇದೀಗ ಅಣಬೆ ರೀತಿಯ ವಿಚಿತ್ರ ಡ್ರೆಸ್​ ಧರಿಸಿ ಬಂದಿರೋ ಉರ್ಫಿಯನ್ನು ವೇದಿಕೆ ಮೇಲೆ ಕರೆ ತರಲು ಐದಾರು ಮಂದಿ ಸಹಾಯಕರು ಬಂದಿದ್ದಾರೆ. ಇದು ಯಾವ ಸ್ಟೈಲ್​ ಎಂದು ಕೇಳಿದಾಗ, ಉರ್ಫಿ ಇದು ಉರ್ಫಿ ಸ್ಟೈಲ್​ ಎಂದಿದ್ದಾರೆ. ಈ ಬಟ್ಟೆ ಥೀಮ್​ ಕೇಳಿದಾಗಲೂ, ಉರ್ಫಿ ಎಂದೇ ಹೇಳಿದ್ದಾರೆ. ನಂತರ ಈ ವಿಚಿತ್ರ ಬಟ್ಟೆಯನ್ನು ಒಂದೊಂದಾಗಿ ವೇದಿಕೆ ಮೇಲೆ ಕಳಚಿದ್ದಾರೆ. ಒಳಗಡೆ ಇರುವ ಉಡುಪಿನಲ್ಲಿ ಪೋಸ್​ ಕೊಟ್ಟು ಅಲ್ಲಿಂದ ತೆರಳಿದ್ದಾರೆ. ಇದಕ್ಕೆ ಥಹರೇವಾರಿ ಕಮೆಂಟ್ಸ್​ ಸುರಿಮಳೆಯಾಗುತ್ತಿದೆ. ಉರ್ಫಿಯ ಈ ಉಡುಗೆಗೆ ಹಲವರು ಭೇಷ್​ ಭೇಷ್​ ಎನ್ನುತ್ತಿದ್ದಾರೆ. ಉರ್ಫಿಗೆ ಅವಳೇ ಸರಿಸಾಟಿ ಎನ್ನುತ್ತಿದ್ದಾರೆ.

ಗಂಡಸರು ಕಾಮತೃಷೆ ತೀರಿಸಿಕೊಳ್ಳಲು ಬಲತ್ಕಾರ ಮಾಡಲ್ಲ, ಬದಲಿಗೆ... ಉರ್ಫಿ ಜಾವೇದ್​ ಹೇಳಿದ್ದೇನು?

ಕೆಲವು ದಿನಗಳ ಹಿಂದೆ ನಟಿ ಭಾರಿ ಸದ್ದು ಮಾಡಿದ್ದು,  ಕಳೆದ ಮೂರು ವರ್ಷಗಳಿಂದ ಯಾರ ಜೊತೆಯೂ ಸೆಕ್ಸ್ ಮಾಡಿಲ್ಲ ಎಂದು ಸುದ್ದಿಯಾಗಿದ್ದರು. ಯಾವುದೇ ಪುರುಷನಿಗೆ ಕಿಸ್ ಕೂಡ ನೀಡಿಲ್ಲ.   ಯಾರ ಜೊತೆಯೂ ಆಕೆ ರೋಮ್ಯಾಂಟಿಕ್ ಆಗಿ ಮಾತನಾಡಿಲ್ಲ ಎಂದೂ ಸಾರ್ವಜನಿಕವಾಗಿಯೇ ಯಾವುದೇ ಹಿಂಜರಿಕೆ ಇಲ್ಲದೇ ಬಹಿರಂಗಪಡಿಸಿದ್ದ ನಟಿಗೆ ಈಗ ನೇರವಾಗಿ ಇದೇ ಪ್ರಶ್ನೆಯನ್ನು ಮಾಡಿದ್ದಾನೆ 15 ವರ್ಷದ ಬಾಲಕ! ಈ ಕುರಿತು ನಟಿ ಖುದ್ದು ಹೇಳಿಕೊಂಡಿದ್ದು, ಬಾಲಕನೊಬ್ಬನಿಗೆ ಇಂಥ ಪ್ರಶ್ನೆಯನ್ನು ಕೇಳಿರುವುದಕ್ಕೆ ನನಗೆ ಶಾಕ್‌ ಆಯಿತು ಎಂದದ್ದರು. ನನ್ನ ತಾಯಿ ಮತ್ತು ಸಹೋದರಿಯರ ಎದುರೇ ಸಾರ್ವಜನಿಕವಾಗಿಯೇ ಬಾಲಕ ಇಂಥದ್ದೊಂದು ಪ್ರಶ್ನೆ ಕೇಳಿರುವ ಬಗ್ಗೆ ನಟಿ ಶಾಕ್‌ ಆಗಿದ್ದಾರೆ. ಇದರ ಬಗ್ಗೆ ನಟಿ ಬರೆದುಕೊಳ್ಳುತ್ತಲೇ ಪರ-ವಿರೋಧಗಳ ಚರ್ಚೆ ಶುರುವಾಗಿದೆ.

  
ನನ್ನ ಕುಟುಂಬದ ಜೊತೆಗೆ ಹೋಗುತ್ತಿರುವಾಗ ಎಲ್ಲರ ಎದುರೇ ಬಾಲಕ ಇಂಥ ಪ್ರಶ್ನೆ ಕೇಳಿದ ಎಂದು ನಟಿ ಶಾಕಿಂಗ್‌ ಹೇಳಿಕೆ ನೀಡಿದ್ದರು. ಇಂಥ ಹೇಳಿಕೆಗಳನ್ನು ಕೇಳಿದ ಮೇಲೆ ಆದರೂ ವಿಚಿತ್ರ ವೇಷ ಬಿಡುವೆಯಾ ಎಂದು ಹಲವರು ಪ್ರಶ್ನಿಸಿದ್ದರು. ಇದರಲ್ಲಿ ಬಾಲಕನ ತಪ್ಪು ಇಲ್ಲ ಎನ್ನುವುದು ಅವರ ವಾದ. ಇದಕ್ಕೆಲ್ಲಾ ಕಾರಣವನ್ನು ಖುದ್ದು ನಟಿಯರೇ ಯೋಚಿಸಬೇಕಿದೆ. ಅಸಭ್ಯ, ಅಶ್ಲೀಲ ಎನ್ನುವ ವಿಡಿಯೋ, ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡುವ ಮುನ್ನ ಇನ್ನಾದರೂ ಯೋಚನೆ ಮಾಡಿ, ಸಾರ್ವಜನಿಕವಾಗಿ ಮರ್ಯಾದೆ ಹೋದರೆ ನಿಮಗೇನೂ ಆಗುವುದಿಲ್ಲ ಎನ್ನುವುದು ನಿಜವಾದರೂ, ಸಭ್ಯ ಮಹಿಳೆಯರು ಕೂಡ ಇಂಥ ಮುಜುಗರವನ್ನು ಅನುಭವಿಸಬೇಕಾಗುವುದು ದುರದೃಷ್ಟಕರ ಎನ್ನುತ್ತಿದ್ದಾರೆ ಹಲವರು.  

ಸೀರೆ ತೊಡುವ ಭರದಲ್ಲಿ ಒಳಗಿಂದೆಲ್ಲಾ ಮರೆತುಬಿಟ್ರಾ ಉರ್ಫಿ? ವಿಡಿಯೋ ನೋಡಿ ಕಣ್ಮುಚ್ಚಿದ ನೆಟ್ಟಿಗರು!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?
ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?