ಬಿಗ್ ಬಾಸ್ ಕನ್ನಡ 11: ಕಿಚ್ಚನ ಕ್ಲಾಸ್, ಯಾರಿಗೆಲ್ಲಾ ಬಿಸಿ ಮುಟ್ಟಿಸಿದ್ರು?

Published : Oct 21, 2024, 12:18 AM IST
ಬಿಗ್ ಬಾಸ್ ಕನ್ನಡ 11: ಕಿಚ್ಚನ ಕ್ಲಾಸ್, ಯಾರಿಗೆಲ್ಲಾ ಬಿಸಿ ಮುಟ್ಟಿಸಿದ್ರು?

ಸಾರಾಂಶ

ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಜಗದೀಶ್ ಮತ್ತು ರಂಜಿತ್ ಅವರನ್ನು ಹೊರಹಾಕಿದ ಬಳಿಕ, ಸುದೀಪ್ ಮನೆಯ ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡರು. ಮಾನಸ, ಚೈತ್ರಾ ಕುಂದಾಪುರ ಮತ್ತು ಉಗ್ರಂ ಮಂಜು ಸೇರಿದಂತೆ ಹಲವರ ನಡವಳಿಕೆಯನ್ನು ಪ್ರಶ್ನಿಸಿದರು.

 ಬಿಗ್ ಬಾಸ್​ ಕನ್ನಡ ಸೀಸನ್​ 11 ಶೋ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ ಅಕ್ಟೋಬರ್‌ 20 ರಂದು ಮುಂದುವರೆಯಿತು. ಮಹಿಳೆಯರ ವಿರುದ್ಧ ಕೆಟ್ಟ ಪದ ಬಳಸಿದರೆಂಬ ಕಾರಣಕ್ಕೆ ಜಗದೀಶ್ ಮತ್ತು ಜಗದೀಶ್ ಅವರನ್ನು ತಳ್ಳಿದರು ಎಂಬ ಕಾರಣಕ್ಕೆ ರಂಜಿತ್ ಅವರನ್ನು ಕೂಡ ಬಿಗ್ ಬಾಸ್ ಮನೆಯಿಂದ ಹೊರ ಹಾಕಲಾಯ್ತು. ಇದೇ ವಿಚಾರದಲ್ಲಿ ಇಂದಿನ ಎಪಿಸೋಡ್‌ ನಲ್ಲಿ ಮನೆಯಲ್ಲಿರುವ ಎಲ್ಲಾ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್‌ ತೆಗೆದುಕೊಂಡರು.

ನೀವೆಲ್ಲ ತಪ್ಪು ಎಂದು ಹೇಳಲು ನಾನಿಲ್ಲಿ ಬಂದಿಲ್ಲ. ನೀವು ತಪ್ಪು ಮಾಡಿದ್ದೀರಿ ಎಂದು ನಾನು ಹೇಳಲಿಲ್ಲ. ಕೆಲವು ಸತ್ಯಗಳು ಹೊರಗಡೆ ಬರಬೇಕು. ವೀಕ್ಷಕರಿಗೆ ಇಲ್ಲಿರುವ ಕೆಲವರ ಮೇಲೆ ಕೆಲವು ತಪ್ಪು ಅಭಿಪ್ರಾಯವಿದೆ. ಸದು ಸರಿಪಡಿಸಬೇಕಲ್ವಾ ನಾನು? ಎಲ್ಲರು ಅರ್ಥ ಮಾಡಿಕೊಳ್ಳಿ. ಅದರ ಬಗ್ಗೆ ನಾವು ಮಾತನಾಡಲೇಬೇಕು ಎಂದು ಕಿಚ್ಚ ಹೇಳಿದರು.

ಶಿಗ್ಗಾಂವಿ ಟಿಕೆಟ್ ಸಿಕ್ಕ ಖುಷಿಯಲ್ಲೇ ತಂದೆ, ಅಜ್ಜನಿಂದ ಕಲಿತಿದ್ದೇನೆ ಎಂದ ಭರತ್ ಬೊಮ್ಮಾಯಿ

ಮೊದಲು ಮಾನಸ ಅವರನ್ನು ಮಾತನಾಡಿಸಿದ ಸುದೀಪ್, ಬಿಗ್‌ಬಾಸ್ ನ ತಪ್ಪುಗಳು ಯಾವುದು ಎಂದು ಕೇಳಿದರು. ನನಗೆ ಅನ್ನಿಸಿದನ್ನು ಹೇಳಿದೆ ಎಂಬುದು ಮಾನಸ ಉತ್ತರವಾಗಿತ್ತು. ಇದಕ್ಕೆ ಸುದೀಪ್ ಎಲ್ಲರಿಗೂ ಅದೇ ಅನ್ನಿಸೋದು ಮನೆಯವರು ಎಲ್ಲರು ಹೇಳಿ ಒಂದೋ ಕರೆಕ್ಟ್ ಉತ್ತರ ಕೊಡಿ ಇಲ್ಲವಾದರೆ ಎಪಿಸೋಡ್‌ ಎಂಡ್‌ ಮಾಡಿ ಮನೆಗೆ ಹೋಗೋಣ ಎಂದರು.

ಮಾನಸ ಅವರೇ ಹಿರಿಯರಿಗೆ , ಹೆಣ್ಣು ಮಕ್ಕಳಿಗೆ ಗೌರವ ಕೊಡಬೇಕೆಂದು ಅಲ್ಲ ಮೊದಲು ಮನುಷ್ಯನಿಗೆ ಗೌರವ ಕೊಡೋಣ. ಗಂಡಸು ಮನುಷ್ಯನೇ, ಹೆಣ್ಣು ಮನುಷ್ಯನೇ, ಮಗು ಕೂಡ ಮನುಷ್ಯನೇ. ಆದರೆ ತಂದೆ ಸ್ಥಾನದಲ್ಲಿರೋರು ಹೋಗೋ ಬಾರೋ ಅಂತ ಮಾತನಾಡಿಸ್ತೀರಿ. ಅವರ ವಯಸ್ಸಿಗೆ ಗೌರವ ಇಲ್ವಾ? 

ಜಗದೀಶ್ ಅವರು ಶೋ ನಲ್ಲಿ ಮಾತನಾಡಿದ ಮಾತುಗಳಿಂದ ಹೊರ ಹೋಗಿದ್ರೆ, ನೀವು ಕೂಡ ಕೆಲವು ತಪ್ಪು ಮಾತನಾಡಿ ನಿಮ್ಮನ್ಯಾಕೆ ಒಳಗೆ ಇಟ್ಟುಕೊಂಡಿರಬೇಕು. ನ್ಯಾಯ ಮಾತಡೋಣ.  ಅವರು ಗೌರವ ಕೊಡ್ತಾರೋ ಬಿಡ್ತಾರೋ ನಾವು ಕೊಡೋಣ ಅದು ನಮ್ಮ ವ್ಯಕ್ತಿತ್ವವನ್ನು ಹೇಳುತ್ತವೆ. ನಿಮ್ಮ ಬಾಯಿ ಇಂದನೂ ಎಷ್ಟೋ ಮಾತುಗಳು ಬಂದಿದೆ. ಮಾತಿನಿಂದ ಒಬ್ಬ ವ್ಯಕ್ತಿ ಹೊರಗಡೆ ಹೋದ ಅಂದ್ರೆ ನೀವ್ಯಾಕೆ ಇನ್ನೂ ಒಳಗೆ ಕುಳಿತಿದ್ದೀರಿ ಎಂದು ಮಾನಸಾಗೆ ಅರ್ಥ ಮಾಡಿಸಿದರು ಕಿಚ್ಚ.

ನೀನು ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಎಂಬ ಪದ ಬಳಕೆ ಮಾಡಿದ್ದಕ್ಕೆ ಚೈತ್ರಾ ಕುಂದಾಪುರ ಅವರ ಬಳಿ ಮಾತನಾಡಿದ ಕಿಚ್ಚ, ಜಗದೀಶ್ ಆಡಿದ ಮಾತು ತಪ್ಪು. ಆದ್ರೆ ನೀವು  ಏನು ಹೇಳಿದ್ರಿ ಎಂದು  ಕೇಳಿದರು. ನಿಮಗೆ ನೆನಪಿದೆಯಾ? ಒಬ್ಬ ಅಪ್ಪನಿಗೆ ಹುಟ್ಟಿದ್ರೆ ಅಂತ ನೀವು ಪದ ಬಳಸಿದ್ರೆ ನೀವು ಅವರ ತಾಯಿಗೆ ತಾನೇ ಬೈದ್ರಿ. ಹೇಗೆ?  ಒಬ್ಬ ಅಪ್ಪನಿಗೆ ಹುಟ್ಟಿದ್ರೆ  ಅಂದ್ರೆ ಯಾವ ನನ್ ಮಗನ್  ಅಪ್ಪನಿಗೆ ಬೈತಿಲ್ಲ ತಾಯಿನ ಬೈತಿರೋದು. ನೀವು ಹೆಣ್ಣು ಮಕ್ಕಳಿಗೆ ಗೌರವ ಕೊಡಿ ಅಂತ ನಿಮ್ಮ ಬಾಯಲ್ಲಿ ಹೇಳುತ್ತಿದ್ದೀರಿ ಹ್ಹೇ... ಎಂದು ಕಿಚ್ಚ ಜರಿದರು.

ಯಡಿಯೂರಪ್ಪ ಹೆಂಡ್ತಿ ಸಾವಿನಲ್ಲಿ ಶೋಭಾ ಕರಂದ್ಲಾಜೆ ಪಾತ್ರವಿದೆ: ಸಚಿವ ಬೈರತಿ ಸುರೇಶ್

ಚೈತ್ರಾ ಹೇಳಿದ ಮಾತು ನಿಮಗೆ ಸರಿ ಎನಿಸುತ್ತಾ ಗೌತಮಿ ಅವರೇ? ತಲೆ ಎತ್ತಿ ಮಾತನಾಡಿ ಭವ್ಯಾ? ವಾಯ್ಸ್ ಬರಲಿ. ಅದೇ ಗಂಡ್ಮಕ್ಕಳಲ್ಲಿ ಯಾರಾದರೂ ಒಬ್ಬರು ಬಂದು ಚೈತ್ರಾ ಹೇಳಿದ ಮಾತು ಹೇಳಿದ್ರೆ ನೀವು ಸುಮ್ಮನೆ ಇರುತ್ತಿದ್ರಾ?’ ಮೇಡಂ ಚೈತ್ರಾ ಅವರೇ ಅವರ ತಾಯಿ ಕೂಡ ಈರ್ವ ಹೆಣ್ಣೆ ಎಂದು ಕಿಚ್ಚ ಹೇಳಿದರು. 

ಎಕ್ಕಡ ಅಂದು ಜಪ್ಪಲ್‌ ಬಿಸಾಡಿದವರಯ ಇನ್ನೂ ಕೂಡ ಮನೆಯಲ್ಲೇ ಇದ್ದಾರೆ. ಈಗ ಕನ್ನಡ ಜನ ನೋಡ್ತಿಲ್ವಾ ಎಂದು ಉಗ್ರಂ ಮಂಜುಗೆ ಕೂಡ ಕ್ಲಾಸ್ ತೆಗೆದುಕೊಂಡರು. ಇದಕ್ಕೆ ಮಂಜು ತಪ್ಪು ಎಂದರು.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?