ನಟಿ ಇಶಾ ಡಿಯೋಲ್ ವಿಚ್ಛೇದನ ಘೋಷಿಸಿರುವ ಹಿಂದಿನ ಕಾರಣ ಬಹಿರಂಗಗೊಂಡಿದೆ. ಇದೀಗ ಅಮ್ಮ ಹೇಮಾ ಮಾಲಿನಿಯವರ ಮದುವೆ ವಿಷಯ ಮುನ್ನೆಲೆಗೆ ಬಂದಿದೆ.
ಬಾಲಿವುಡ್‌ನ ಕನಸಿನ ಕನ್ಯೆ ಹೇಮಾ ಮಾಲಿನಿಯೊಂದಿಗಿನ ಧರ್ಮೇಂದ್ರ ಅವರ ಪ್ರೇಮಕಥೆ ಎಲ್ಲರಿಗೂ ತಿಳಿದಿದೆ. ಆದರೆ ಧರ್ಮೇಂದ್ರ ಅವರು ತಮ್ಮ 19ನೇ ವಯಸ್ಸಿನಲ್ಲಿಯೇ ಪ್ರಕಾಶ್ ಕೌರ್ ಎನ್ನುವವರನ್ನು ಮದುವೆಯಾದ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಆದಾಗ್ಯೂ, 70 ರ ದಶಕದಲ್ಲಿ, ಧರ್ಮೇಂದ್ರ, ಹೇಮಾ ಮಾಲಿನಿಯನ್ನು ಮದುವೆಯಾಗಲು ನಿರ್ಧರಿಸಿದಾಗ, ಅನೇಕ ಜನರು ಅವರ ನಡವಳಿಕೆಯನ್ನು ಒಪ್ಪಲಿಲ್ಲ ಮತ್ತು ಅವರ ಬಗ್ಗೆ ತೀವ್ರವಾಗಿ ವಾಗ್ದಾಳಿ ನಡೆಸಿದ್ದರು. ಇದರ ಹೊರತಾಗಿಯೂ ಧರ್ಮೇಂದ್ರ, ಪ್ರಕಾಶ್ ಕೌರ್ ಅವರನ್ನು ಬಿಟ್ಟು ಹೇಮಾ ಮಾಲಿನಿಯನ್ನು ಮದುವೆಯಾಗಿದ್ದರು. ಧರ್ಮೇಂದ್ರ ಮತ್ತು ಪ್ರಕಾಶ್ ಕೌರ್ ಅವರಿಗೆ ಸನ್ನಿ ಡಿಯೋಲ್ ಮತ್ತು ಬಾಬಿ ಡಿಯೋಲ್ ಎಂಬ ಪುತ್ರರು ಮತ್ತು ವಿಜಿತಾ ಡಿಯೋಲ್ ಮತ್ತು ಅಜಿತಾ ಡಿಯೋಲ್ (Ajitha Deol) ಎಂಬ ಇಬ್ಬರು ಪುತ್ರಿಯರು ಇದ್ದಾರೆ. ಆದರೆ ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಧಮೇಂದ್ರ ಅವರು ಹೇಮಾ ಮಾಲಿನಿಯನ್ನು ಮದುವೆಯಾಗಿದ್ದರು. ಹೇಮಾ ಮಾಲಿನಿ ಅವರ ಮದುವೆ ನಟ ಜೀತೇಂದ್ರ ಜೊತೆ ಫಿಕ್ಸ್ ಆಗಿತ್ತು. ಅದನ್ನು ತಪ್ಪಿಸಿ ಧರ್ಮೇಂದ್ರ ಹೇಮಾ ಅವರನ್ನು ಮದುವೆಯಾಗಿದ್ದರು.
ಆದರೆ ಇದೀಗ ಧರ್ಮೇಂದ್ರ ಮತ್ತು ಹೇಮಾ ಮಾಲಿನಿ ಪುತ್ರಿ, ಬಾಲಿವುಡ್ ನಟಿ ಇಶಾ ಡಿಯೋಲ್ ಬಾಳಲ್ಲಿ ಬಿರುಗಾಳಿ ಎದ್ದಿದೆ. ಇಶಾ ಡಿಯೋಲ್ ಇದಾಗಲೇ ತಮ್ಮ ಮತ್ತು ಪತಿ ಭರತ್ ಬೇರೆಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಮದುವೆಯಾಗಿ 12 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. ವಿಚ್ಛೇದನ ಪಡೆಯಲು ಸ್ಪಷ್ಟ ಕಾರಣ ದಂಪತಿ ನೀಡಲಿಲ್ಲ. ಆದರೆ ಇಬ್ಬರೂ ಪರಸ್ಪರ ಒಪ್ಪಿಗೆಯೊಂದಿಗೆ ಬೇರೆಯಾಗಲು ನಿರ್ಧರಿಸಿದ್ದೇವೆ, ಆದರೆ ಈ ಸ್ನೇಹ ಸಂಬಂಧ ಮುರಿದುಹೋಗುವುದರಿಂದ ಇಬ್ಬರು ಮಕ್ಕಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮಕ್ಕಳನ್ನು ಒಟ್ಟಿಗೇ ಬೆಳೆಸುತ್ತೇವೆ ಎಂದಿದ್ದಾರೆ.
ಹೇಮಾ ಮಾಲಿನಿ ದಾಂಪತ್ಯದ ಕಣ್ಣೀರ ಕಥೆ: ಅಗಲಿಕೆಯ ಈ ನೋವು ಯಾರಿಗೂ ಬೇಡ ಎಂದ ನಟಿ!
ಅಂದಹಾಗೆ, ಇವರಿಬ್ಬರ ನಡುವೆ ಬೆಂಗಳೂರಿನ ಬೆಡಗಿಯ ಎಂಟ್ರಿ ಆಯಿತಾ ಎನ್ನುವ ಸಂದೇಹವಿದೆ. ಅಷ್ಟಕ್ಕೂ ಇಶಾ ಅವರು ಹೇಳಿರುವಂತೆ, ಎರಡನೆಯ ಮಗು ಹುಟ್ಟಿದ ಮೇಲೆ ತಮ್ಮ ಸಂಬಂಧ ಹದಗೆಟ್ಟಿತ್ತು ಎಂದಿದ್ದಾರೆ. ಇದಕ್ಕೆ ಕಾರಣ, ಅದೇ ವೇಳೆಗೆ ತಮ್ಮ ಪತಿ ಭರತ್ ಬೆಂಗಳೂರಿನ ಹುಡುಗಿಯೊಬ್ಬಳ ಜೊತೆ ಸಂಬಂಧ ಹೊಂದಿರುವುದು ಎಮದು ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಭರತ್ ಗರ್ಲ್ ಫ್ರೆಂಡ್ ಜೊತೆ ನ್ಯೂ ಇಯರ್ ಪಾರ್ಟಿ ಮಾಡಿದ್ದನ್ನು ತಾವು ನೋಡಿರುವುದಾಗಿ ಹೇಳಿದ್ದಾರೆ. ಇದೇ ಕಾರಣದಿಂದ ಭರತ್ ತಮ್ಮ ಜೊತೆ ಚೆನ್ನಾಗಿ ನಡೆದುಕೊಳ್ಳುತ್ತಿರಲಿಲ್ಲ. ಇನ್ನು ತಾವಿಬ್ಬರೂ ಒಟ್ಟಿಗೇ ಇರುವುದು ಕಷ್ಟೆ ಎಂದಿದ್ದಾರೆ.
ಅಂದಹಾಗೆ ಈ ಜೋಡಿ ಕಾಲೇಜು ಸ್ಪರ್ಧೆಯೊಂದರಲ್ಲಿ ಭೇಟಿಯಾಗಿತ್ತು. ನಂತರ ಇಬ್ಬರೂ 10 ವರ್ಷಗಳ ನಂತರ ಅಮೆರಿಕದಲ್ಲಿ ಭೇಟಿಯಾಗಿ ಪ್ರೀತಿ ಚಿಗುರಿತ್ತು. 2012ರಲ್ಲಿ, ಮದುವೆಯಾಗಿತ್ತು. 2017 ರಲ್ಲಿ ಮೊದಲ ಮಗಳು ರಾಧ್ಯಾಗೆ ಜನ್ಮ ನೀಡಿದ್ದ ಸಂದರ್ಭದಲ್ಲಿ ಮತ್ತೊಮ್ಮೆ ಇಬ್ಬರೂ ಮದುವೆಯಾಗಿ ಸುದ್ದಿಯಾಗಿದ್ದರು. ಆದರೆ ಎರಡನೆಯ ಮಗುವಿನ ಜನನರ ಬಳಿಕ ಇಬ್ಬರ ನಡುವೆ ಬಿರುಕು ಉಂಟಾಗಿರುವ ಕುರಿತು ಇಶಾ ಅವರು ಅಮಾ ಮಿಯಾನ್ನ ಎಂಬ ಪುಸ್ತಕದಲ್ಲಿ ಬರೆದಿದ್ದಾರೆ. ಮಗಳು ಮಿರಾಯಾ ಹುಟ್ಟಿದ ನಂತರ ಭರತ್ ಮತ್ತು ಅವನ ನಡುವಿನ ಸಂಬಂಧದಲ್ಲಿ ಬಿರುಕು ಉಂಟಾಗಿತ್ತು ಎಂದು ಹೇಳಿದರು. ಆಗಿಂದಲೇ ಇಬ್ಬರು ಪ್ರತ್ಯೇಕವಾಗಿ ವಾಸಿಸತೊಡಗಿದರು. ಈಗ ಬೇರೆ ಆಗುತ್ತಿದ್ದಾರೆ. ಅಂದಹಾಗೆ, ಭರತ್ ಉದ್ಯಮಿ ಕುಟುಂಬಕ್ಕೆ ಸೇರಿದವರು. ಅವರು ಝಾರ್ ಜ್ಯುವೆಲ್ಸ್ ಪ್ರೈವೇಟ್ ಲಿಮಿಟೆಡ್, ಝಾರ್ ರಿಯಾಲ್ಟಿ ಪ್ರೈವೇಟ್ ಲಿಮಿಟೆಡ್ ಮಾಲೀಕರು. ಮಾಧ್ಯಮ ವರದಿಗಳ ಪ್ರಕಾರ ಭರತ್ ಅವರ ಒಟ್ಟು ಸಂಪತ್ತು ಸುಮಾರು 165 ಕೋಟಿ ರೂ. ಎನ್ನಲಾಗಿದೆ.
ಇಂಥ ಪತ್ನಿಯರೂ ಇರ್ತಾರಾ? ಸವತಿ ಹೇಮಾ ಮಾಲಿನಿಯನ್ನೇ ಹಾಡಿ ಹೊಗಳಿದ್ದ ಧರ್ಮೇಂದ್ರ ಮೊದಲ ಪತ್ನಿ!