ಬಂಗಲೆ, ಕಾರು ಮಾರಿ ಸಿಂಪಲ್ ಜೀವನಕ್ಕೆ ಹೊರಳಿದ ಇಮ್ರಾನ್‌; 'ದೆಲ್ಲಿ ಬೆಲ್ಲಿ' ನಟನಿಗೆ 9 ವರ್ಷದ ಹಿಂದೇನಾಯ್ತು?

By Suvarna News  |  First Published Feb 7, 2024, 3:27 PM IST

9 ವರ್ಷಗಳ ಹಿಂದೆ ಚಿತ್ರರಂಗದಿಂದ ದೂರಾದ ನಟ ಇಮ್ರಾನ್ ಖಾನ್, ಈ ಸಮಯದಲ್ಲಿ ತಮ್ಮ ಬಂಗಲೆ, ಫೆರಾರಿ ಕಾರು ಮಾರಿ ಸರಳ ಜೀವನಕ್ಕೆ ಹೊರಳಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ತಮ್ಮ ಕಸಿನ್- ಆಮೀರ್ ಖಾನ್ ಪುತ್ರಿ ಇರಾ ಖಾನ್ ಮದುವೆಗೆ ಕೂಡಾ 10 ವರ್ಷದ ಹಿಂದಿನ ಸೂಟ್‌ನ್ನೇ ಧರಿಸಿದ್ದಾರೆ. 


ಜಾನೇ ತು ಯಾ ಜಾನೇ ನಾ, ಲಕ್ಕಿ, ದೆಲ್ಲಿ ಬೆಲ್ಲಿಯಂಥ ಹಿಟ್ ಚಿತ್ರಗಳ ನಾಯಕ ನಟ ಇಮ್ರಾನ್ ಖಾನ್ ತಮ್ಮ ಕಟ್ಟಿ ಬಟ್ಟಿ ಚಿತ್ರದ ಸೋಲಿನ ನಂತರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಆಮೀರ್ ಖಾನ್ ಅಳಿಯ ಇಮ್ರಾನ್ ಬದುಕು ಕಳೆದ 9 ವರ್ಷಗಳಲ್ಲಿ ಸಾಕಷ್ಟು ಬದಲಾವಣೆ ಕಂಡಿದೆ.

ನಟ ತಮ್ಮ ಅದ್ದೂರಿ ಪಾಲಿ ಹಿಲ್ ಬಂಗಲೆಯಿಂದ ಹೊರ ಬಂದು ಬಾಂದ್ರಾದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಸರಳ ಜೀವನಕ್ಕಾಗಿ ತನ್ನ ಫೆರಾರಿ ಕಾರನ್ನು ಮಾರಿದ್ದಾರೆ. ಧರಿಸಿದ ಬಟ್ಟೆಗಳನ್ನೇ ಮತ್ತೆ ಮತ್ತೆ ಧರಿಸುತ್ತಾರೆ. ಮೊನ್ನೆ ನಡೆದ ಕಸಿನ್ ಇರಾ ಖಾನ್ ವಿವಾಹಕ್ಕೆ ಕೂಡಾ 10 ವರ್ಷದ ಹಿಂದಿನ ಸೂಟನ್ನೇ ಧರಿಸಿದ್ದಾರೆ.

Tap to resize

Latest Videos

ಅರೆ, ಇಮ್ರಾನ್‌ಖಾನ್‌ಗೆ ಏನಾಯಿತು? ಅವರು ಬದುಕು ಈ ಮಟ್ಟಿಗಿನ ಸರಳತೆಗೆ ಹೊರಳಲು ಕಾರಣವೇನು? 

ಒಟಿಟಿ ಬಿಡುಗಡೆಗೆ ರೆಡಿಯಾದ 2023ರ ಬ್ಲಾಕ್‌ಬಸ್ಟರ್ ಚಿತ್ರ 'ದಿ ಕೇರಳ ಸ್ಟೋರಿ'; ಯಾವತ್ತು, ಎಲ್ಲಿ ರಿಲೀಸ್?

ಈ ಪ್ರಶ್ನೆಗಳಿಗೆ ಇಮ್ರಾನ್, ವೋಗ್‌ಗೆ ನೀಡಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. 
ಅವರೇ ಹೇಳುವಂತೆ, 'ನಾನು 2016ರಲ್ಲಿ ಸಂಪೂರ್ಣ ಕುಸಿದೆ. ಒಳಗೇ ಮುದುಡಿ ಹೋದೆ. ಅದೃಷ್ಟವಶಾತ್, ನಾನು ಆರ್ಥಿಕವಾಗಿ ನನಗೆ ಪ್ರತಿಫಲ ನೀಡಿದ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದೆ. ಹಾಗಾಗಿ ನಾನು 30 ವರ್ಷದವನಾಗಿದ್ದಾಗ, ನಾನು ಹಣದ ಬಗ್ಗೆ ಚಿಂತಿಸಬೇಕಾಗಿರಲಿಲ್ಲ. ಆಗ ನನಗೆ ನನ್ನ ಕೆರಿಯರ್ ಖುಷಿ ಕೊಡುತ್ತಿರಲಿಲ್ಲ. ಅದೇ ಸಮಯದಲ್ಲಿ ಮಗಳು ಇಮಾರಾ ಜನಿಸಿದಳು. ತಂದೆಯಾಗಿರುವುದೇ ಮೌಲ್ಯಯುತ ವಿಷಯ ಎನಿಸಿತು. ಮಗಳಿಗಾಗಿ, ನನ್ನ ಅತ್ಯುತ್ತಮ ಆವೃತ್ತಿಯಾಗಬೇಕೆಂದು ನಿರ್ಧರಿಸಿದೆ. ಇನ್ನು ಮುಂದೆ ನಟನಾಗಿರುವುದು ನನ್ನ ವೃತ್ತಿಯಲ್ಲ, ಮಗಳಿಗಾಗಿ ನನ್ನನ್ನು ನಾನು ಸರಿಪಡಿಸಿಕೊಳ್ಳುವುದು ಮುಖ್ಯ ಎಂದು ಭಾವಿಸಿದೆ' ಎಂದಿದ್ದಾರೆ. 

ಆದರೆ, ಇದೀಗ ಸುಮಾರು ಒಂಬತ್ತು ವರ್ಷಗಳ ನಂತರ ಶೀಘ್ರದಲ್ಲೇ ಬಾಲಿವುಡ್‌ಗೆ ಮರಳಲು ಇಮ್ರಾನ್ ಸಜ್ಜಾಗಿದ್ದಾರೆ. 

'ಸೂರ್ಯವಂಶ'ದ ಸತ್ಯಮೂರ್ತಿ ಮೊಮ್ಮಗನಾಗಿ ಕಿರುತೆರೆಗೆ ಮರಳಿದ ಅನಿರುದ್ಧ್; ಜೊತೆಜೊತೆಯಲಿ ಬಳಿಕ ಹೊಸ ಧಾರಾವಾಹಿ
 

2015ರಲ್ಲಿ ಅವರ ಕೊನೆಯ ಚಿತ್ರ 'ಕಟ್ಟಿ ಬಟ್ಟಿ'ಯ ಸೋಲು ತಮ್ಮಲ್ಲಿ ತಂದ ಬದಲಾವಣೆಗಳನ್ನೂ ನಟ ಹಂಚಿಕೊಂಡಿದ್ದಾರೆ.
'ಕಟ್ಟಿ ಬಟ್ಟಿ ವಿಫಲವಾದಾಗ, ನಾನು ಕೆಲವು ವಿಷಯಗಳನ್ನು ಅರ್ಥಮಾಡಿಕೊಳ್ಳಲು ಬಯಸಿದ್ದೆ, ಹಾಗಾಗಿ ನಾನು ಹಿಂದಕ್ಕೆ ಕೆಲಸ ಮಾಡಲು ಪ್ರಾರಂಭಿಸಿದೆ. ಕಳೆದ ಎರಡು ಅಥವಾ ಮೂರು ವರ್ಷಗಳಲ್ಲಿ ದೊಡ್ಡ ಹಿಟ್‌ಗಳು ಯಾವುವು? ನನ್ನ ಸಮಕಾಲೀನರಿಗೆ ಯಶಸ್ಸನ್ನು ತಂದುಕೊಟ್ಟ ಚಲನಚಿತ್ರಗಳು ಯಾವುವು? ಆ ಚಿತ್ರಗಳನ್ನು ನಾನು ಇಷ್ಟಪಡುತ್ತೇನೆಯೇ? ಎಂದೆಲ್ಲ ಯೋಚಿಸಿದೆ. ಅವುಗಳನ್ನು ನನಗೆ ನೀಡಿದ್ದರೆ ನಾನು ಹೌದು ಎಂದು ಹೇಳಬಹುದೇ ಎಂದು ಯೋಚಿಸಿದೆ. ಉತ್ತರ ಯಾವಾಗಲೂ ಇಲ್ಲವೇ ಆಗಿತ್ತು. ಮತ್ತು ಅದು ನನಗೆ ಏನನ್ನೋ ಸ್ಪಷ್ಟಪಡಿಸಿತು. ನಾನು ನಟಿಸಿದ ಚಿತ್ರಗಳು ಯಶಸ್ವಿಯಾಗಬೇಕೆಂದು ನಾನು ನಿಜವಾಗಿಯೂ ಬಯಸಿದ್ದೆ' ಎಂದಿದ್ದಾರೆ ಇಮ್ರಾನ್.

ಇಮ್ರಾನ್ ತಮ್ಮ ಪತ್ನಿ ಆವಂತಿಕಾ ಮಲಿಕ್‌ನಿಂದ ಬೇರ್ಪಟ್ಟಿದ್ದಾರೆ. ದಂಪತಿಯು ಮಗಳು ಇಮಾರಾಳನ್ನು ಹಂಚಿಕೊಳ್ಳುತ್ತಾರೆ. ಇಮ್ರಾನ್ ಸಧ್ಯ ನಟಿ ಲೇಖಾ ವಾಷಿಂಗ್ಟನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ.

click me!