
ತಂತ್ರಜ್ಞಾನ ಮುಂದುವರೆದಂತೆಲ್ಲಾ ಅದರ ಶೋಧನೆ ಮಾಡಿರುವ ಉದ್ದೇಶವನ್ನು ಬಿಟ್ಟು ದುರ್ಬಳಕೆಯೇ ಹೆಚ್ಚಾಗುತ್ತಿದೆ. ಉದ್ಯೋಗ ಮಾರುಕಟ್ಟೆಯ ಮೇಲೆ ಎಐ ಮತ್ತು ಚಾಟ್ ಜಿಪಿಟಿಯಂಥ ತಂತ್ರಜ್ಞಾನ ಮಾರಕ ಪರಿಣಾಮ ಬೀರುತ್ತದೆ ಎಂಬ ಆತಂಕವೂ ಇದ್ದರೂ, ವಿವಿಧ ಕ್ಷೇತ್ರಗಳಲ್ಲಿ ಇದರ ಬಳಕೆ ಅತಿವೇಗವಾಗಿ ಏರುತ್ತಲೇ ಸಾಗಿದೆ. ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ (ಬಿಸಿಜಿ) ಇತ್ತೀಚಿಗೆ ತಿಳಿಸಿರುವ ಮಾಹಿತಿಯ ಪ್ರಕಾರ, ಮಾನವ ಸಂಪನ್ಮೂಲ ತುಂಬಿ ತುಳುಕುತ್ತಿರುವ ಭಾರತವೇ ಕೃತಕ ಬುದ್ಧಿಮತ್ತೆ ಅಳವಡಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿದೆ. ಭಾರತದಲ್ಲಿ ಎಐ ಅಳವಡಿಕೆ ಪ್ರಮಾಣ ಜಾಗತಿಕ ಸರಾಸರಿಗಿಂತಲೂ ಹೆಚ್ಚು ವೇಗದಲ್ಲಿ ಸಾಗುತ್ತಿದೆ. ಜಾಗತಿಕ ಪ್ರಮಾಣ ಶೇಕಡಾ 26ರಷ್ಟಿದ್ದರೆ, ಭಾರತದಲ್ಲಿ ಶೇಕಡಾ 30ರಷ್ಟಿದೆ ಎಂದಿದೆ ವರದಿ. ಈ ಮೂಲಕ ಭಾರತೀಯ ಕಂಪೆನಿಗಳು ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಸದಾ ಮುಂದಿರುತ್ತವೆ ಎನ್ನುವುದು ಒಂದೆಡೆ ಸಾಬೀತಾಗುತ್ತಿದ್ದರೆ, ಮೊದಲೇ ಹೇಳಿದಂತೆ ಈ ತಂತ್ರಜ್ಞಾನವನ್ನು ಏನೆಲ್ಲಾ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ.
ಭವಿಷ್ಯದಲ್ಲಿ ನಮ್ಮ ರೂಪ ಹೇಗಿರುತ್ತದೆ? ಹುಡುಗ ಹುಡುಗಿಯಾದರೆ ಹೇಗೆ ಕಾಣಿಸುತ್ತಾನೆ, ಹುಡುಗಿ ಹುಡುಗ ಆದರೆ ಹೇಗೆ ಕಾಣಿಸುತ್ತಾಳೆ? ಬಾಲ್ಯದಲ್ಲಿ ರೂಪ ಹೇಗಿತ್ತು? ಮುದುಕ ಆದ್ಮೇಲೆ ಹೇಗಿರುತ್ತೆ ಇಂಥ ಪ್ರಶ್ನೆಗಳಿಂದಲೇ ಎಐ ತುಂಬಿ ಹೋಗಿದೆ. ಇಂಥ ಪ್ರಯೋಗಗಳು ಬಂದರೆ ಮೊದಲು ಮಾಡುವುದು ಸಿನಿ ತಾರೆಯರ ಮೇಲೆಯೇ ಅಲ್ಲವೆ? ಅದೇ ರೀತಿ, ಬಾಲಿವುಡ್, ಟಾಲಿವುಡ್, ಕಾಲಿವುಡ್ ಸೇರಿದಂತೆ ಕೆಲವು ಸಿನಿಮಾ ನಟರು ಹುಡುಗಿಯರಾಗಿದ್ದರೆ ಹೇಗೆ ಕಾಣಿಸುತ್ತಾರೆ ಎನ್ನುವ ಎಐ ವಿಡಿಯೋ ವೈರಲ್ ಆಗಿದೆ. ಇದನ್ನು ನೋಡಿದರೆ ಈ ಸಿನಿಮಾ ನಟರ ಸಹೋದರಿಯರು ಕಂಡಹಾಗೆ ಕಾಣಿಸುತ್ತಿದ್ದಾರೆ. ನಿಗೂಢ ಸಹೋದರಿಯರು ಎನ್ನುವ ಹೆಸರಿನಲ್ಲಿ ಈ ವಿಡಿಯೋ ವೈರಲ್ ಆಗಿದೆ.
ಅಲ್ಹಾನ ದಯೆಯಿಂದ 4ನೇ ಮದ್ವೆನೂ ಆಗಬಲ್ಲೆ ಎಂದು ಪತ್ನಿ ಎದುರೇ ಹೇಳಿ ಪೇಚಿಗೆ ಸಿಲುಕಿದ ಖ್ಯಾತ ನಟ ಡ್ಯಾನಿಷ್!
ಇದರಲ್ಲಿ, ಶಾರುಖ್ ಖಾನ್, ಆಮೀರ್ ಖಾನ್, ಕಮಲ ಹಾಸನ್, ಹೃತಿಕ್ ರೋಷನ್, ಅಲ್ಲು ಅರ್ಜುನ್, ಉನ್ನಿ ಮುಕುಂದನ್, ವಿಜಯ್, ಮೋಹನ್ಲಾಲ್, ಸೂರ್ಯ, ಮಹೇಶ್ ಬಾಬು, ರಜನೀಕಾಂತ್, ಅಮರೀಶ್ಪುರಿ ಸೇರಿದಂತೆ ವಿವಿಧ ನಟರನ್ನು ನೋಡಬಹುದಾಗಿದೆ. ಇದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಕೆಲವು ಫೋಟೋಗಳಂತೂ ವ್ಹಾರೆವ್ಹಾ ಎನ್ನುವಂತಿದೆ. ನೋಡಲು ಥೇಟ್ ಈ ನಟರ ಸಹೋದರಿಯರಂತೆ ಕಾಣಿಸುತ್ತಿದ್ದಾರೆ ಎಂದು ಕಮೆಂಟ್ ಮೂಲಕ ಹೇಳಲಾಗುತ್ತಿದೆ.
ಒಟ್ಟಿನಲ್ಲಿ ಎಐ ಒಂದೆಡೆ ಭಾರಿ ಭಯ ಉಂಟುಮಾಡುತ್ತಿದ್ದರೆ, ಇನ್ನೊಂದೆಡೆ ಮೋಜಿಗೆ ಕಾರಣವಾಗಿದೆ. ಇಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕು. ಇತ್ತೀಚೆಗೆ ಬ್ಲೂಮ್‌ಬರ್ಗ್ ಇಂಟೆಲಿಜೆನ್ಸ್ ನೀಡಿರುವ ವರದಿ ಪ್ರಕಾರ ಇನ್ನು 3-5 ವರ್ಷಗಳಲ್ಲಿ ಜಾಗತಿಕವಾಗಿ 2 ಲಕ್ಷ ಬ್ಯಾಂಕ್ ಉದ್ಯೋಗಗಳು ಕೃತಕ ಬುದ್ಧಿಮತ್ತೆಯ ಪಾಲಾಗಲಿವೆ ಎನ್ನಲಾಗಿದೆ. ಜಾಗತಿಕ ಬ್ಯಾಂಕುಗಳ ಸಿಬ್ಬಂದಿ ಸಂಖ್ಯೆಯಲ್ಲಿ ಶೇಕಡಾ 3ರಷ್ಟು ಇಳಿಕೆ ಆಗಲು ಎಐ ಕಾರಣವಾಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ. ಕೆಲ ಬ್ಯಾಂಕುಗಳು ಶೇಕಡಾ 5ರಿಂದ 10ರಷ್ಟು ಸಿಬ್ಬಂದಿವರ್ಗ ಸಂಖ್ಯೆ ಮೊಟಕುಗೊಳ್ಳುವ ಸಾಧ್ಯತೆ ಇದೆ. ಬ್ಯಾಂಕುಗಳಲ್ಲಿ ಬ್ಯಾಕ್ ಆಫೀಸ್, ಮಿಡಲ್ ಆಫೀಸ್ ಮತ್ತು ಆಪರೇಶನ್ಸ್ ಉದ್ಯೋಗಗಳು ಎಐ ಪಾಲಾಗುವ ಸಾಧ್ಯತೆ ಹೆಚ್ಚಿರುವ ಕಾರಣ, ಉದ್ಯೋಗಗಳ ಮೇಲೆ ಹೊಡೆತ ಬೀಳುವ ನಿರೀಕ್ಷೆ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.