ದಿ ಕೇರಳ ಸ್ಟೋರಿ ಚಿತ್ರವನ್ನು ಕಾಂಗ್ರೆಸ್ ವಿರೋಧಿಸುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿಡಿ ಕಾರಿದ್ದರು. ಈ ಕುರಿತು ಚಿತ್ರ ನಿರ್ಮಾಪಕ ಹೇಳಿದ್ದೇನು?
ಸುಮಾರು 32 ಸಾವಿರ ಹುಡುಗಿಯರ ನಾಪತ್ತೆ ಪ್ರಕರಣದ ಭಯಾನಕ ಕಥಾಹಂದರವನ್ನು ಹೊಂದಿರುವ ದಿ ಕೇರಳ ಸ್ಟೋರಿ ಕೆಲವರಲ್ಲಿ ಉರಿ ಹೊತ್ತಿಸಿದೆ. 'ದಿ ಕೇರಳ ಸ್ಟೋರಿ ಕಥೆ'ಯ (The Kerala Story) ವಿರುದ್ಧ ಕೇರಳದ ಸಿಪಿಐ(ಎಂ), ಕಾಂಗ್ರೆಸ್ಸಿಗರು ಸೇರಿದಂತೆ ಒಂದಷ್ಟು ವರ್ಗ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ. ಚಿತ್ರ ಬಿಡುಗಡೆಗೆ ತಡೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಮೇಲೆ ಇದೇ 5ರಂದು ಚಿತ್ರ ರಿಲೀಸ್ ಆಗಿದೆ. ಇದು ಸತ್ಯ ಘಟನೆ, ಯಾವ ಧರ್ಮದವರ ಮೇಲೂ ಅಪಪ್ರಚಾರ ಮಾಡಲಾಗಿಲ್ಲ ಎಂದು ಸಾರಿ ಸಾರಿ ಹೇಳುತ್ತಿದ್ದರೂ ವಿರೋಧಿಸುವವರು ಇಂದಿಗೂ ಅದನ್ನು ವಿರೋಧಿಸುತ್ತಲೇ ಇದ್ದಾರೆ. ಈ ಸಿನಿಮಾದಲ್ಲಿ ಹುಡುಗಿಯರನ್ನು ವಿದೇಶದ ಆಮಿಷವೊಡ್ಡಿ, ಮತಾಂತರಿಸಿ, ಬಲವಂತವಾಗಿ ಐಸಿಸ್ (ISIS) ಉಗ್ರಗಾಮಿಗಳಾಗಿಸುವ ಕಥೆ ಇದೆ. 32 ಸಾವಿರಕ್ಕೂ ಅಧಿಕ ಹುಡುಗಿಯರು ಯಾವ ರೀತಿ ನರಕ ಕೂಪಕ್ಕೆ ತಳ್ಳಲ್ಪಟ್ಟಿದ್ದಾರೆ ಎನ್ನುವ ನೈಜ ಘಟನೆಯನ್ನು ಇದು ಒಳಗೊಂಡಿರುವುದಾಗಿ ನಿರ್ಮಾಪಕ ವಿಪುಲ್ ಅಮೃತಲಾಲ್ ಶಾ (Vipul Amruthlal Shah) ಹೇಳಿದ್ದಾರೆ. ಈ ಚಿತ್ರವನ್ನು ಸುದೀಪ್ತೋ ಸೇನ್ ನಿರ್ದೇಶಿಸಿದ್ದಾರೆ. ಇದರಲ್ಲಿ ಬಾಲಿವುಡ್‌ನ ಪ್ರತಿಭಾವಂತ ನಟಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಜನರಿಂದ ಮತ್ತು ವಿಮರ್ಶಕರಿಂದ ಒಳ್ಳೆ ರೆಸ್ಪಾನ್ಸ್ ಕೂಡ ಪಡೆದುಕೊಂಡು ಎಲ್ಲರ ಮನದಲ್ಲಿ ಜಾಗೃತಿ ಮೂಡಿಸಿದೆ.
ಸಿನಿಮಾದಲ್ಲಿ ಸಾವಿರಾರು ಹೆಣ್ಣುಮಕ್ಕಳ ನಾಶವಾದ ಜೀವನದ ಅನಾವರಣವನ್ನು ಮೂವರು ಹೆಣ್ಣುಮಕ್ಕಳ ಕಥೆಯ ಜೊತೆ ಎಳೆಎಳೆಯಾಗಿ ಬಿಡಿಸಲಾಗಿದೆ. ಶಾಲಿನಿ ಉನ್ನಿಕೃಷ್ಣನ್ (Shalini Unnikrishnan), ಗೀತಾಂಜಲಿ, ನಿಮ್ಹಾ ಮ್ಯಾಥ್ಯುಸ್ ಎಂಬ ಮೂವರು ಹುಡುಗೀರು ನರ್ಸಿಂಗ್ ಕಲಿಯೋಕೆಂದು ಒಂದು ಪ್ರತಿಷ್ಠಿತ ಕಾಲೇಜಿಗೆ ಸೇರಿಕೊಳ್ತಾರೆ. ಈ ಮೂವರು ಹುಡುಗಿಯರ ರೂಮ್ ಮೇಟ್ ಆದ ಆಸೀಫಾ ಹೇಗೆ ಅವರ ಬ್ರೇನ್ ವಾಷ್ ಮಾಡ್ತಾಳೆ. ಕೊನೆಗೆ ಅವಳದ್ದೇ ಧರ್ಮಕ್ಕೆ ಸೇರಿಸ್ತಾಳೆ. ಅವರ ಬದುಕನ್ನು ಹೇಗೆ ವ್ಯವಸ್ಥಿತವಾಗಿ ಪ್ಲ್ಯಾನ್ ಮಾಡಿ ನಾಶ ಮಾಡ್ತಾಳೆ ಅನ್ನೋದೇ ಈ ಸಿನಿಮಾದ ವನ್ ಲೈನ್ ಸ್ಟೋರಿ. ಕೇರಳದ ಒಂದು ಊರಲ್ಲಿ ಶುರುವಾಗುವ ಲವ್ ಸ್ಟೋರಿ ಸಿರಿಯಾದಲ್ಲೋ, ಆಫ್ಘಾನಿಸ್ತಾನಸದಲ್ಲೋ ಕೊನೆಯಾಗುತ್ತೆ ಅನ್ನೋದು ಊಹಿಸಿಕೊಳ್ಳೋಕೂ ಸಾಧ್ಯವಿಲ್ಲ. ಅನ್ಯ ಧರ್ಮದ ಹೆಣ್ಣು ಮಕ್ಕಳನ್ನು ಉಗ್ರರ ಸೆಕ್ಸ್ ಸ್ಲೇವ್ (Sex Slave) ಅಥವಾ ಸೂಸೈಡ್ ಬಾಂಬರ್ಸ್ ಮಾಡೋ ಉದ್ದೇಶ ಇಟ್ಕೊಂಡು ಅವರನ್ನು ಮರುಳು ಮಾಡಿ, ಹಂತಹಂತವಾಗಿ ಅವರು ತಮ್ಮ ಧರ್ಮಕ್ಕೆ ವಾಲುವಂತೆ ಮಾಡಿ, ಅವರ ಬದುಕಿಗೇ ಕೊಳ್ಳಿ ಇಡುವುದನ್ನು ನೋಡಿದಾಗ ನಮ್ಮ ಹೊಟ್ಟೆಗೇ ಬೆಂಕಿ ಬಿದ್ದ ಹಾಗಾಗುತ್ತೆ. ಬಣ್ಣದ ಮಾತುಗಳಿಗ ಮರುಳಾಗಿ ತಮ್ಮ ಜೀವನ ಶೈಲಿಯನ್ನೇ (Lifestyle) ಬದಲಾಯಿಸಿಕೊಂಡು, ಅನ್ಯ ಕೋಮಿನ ಯುವಕರ ತೋಳ್ತೆಕ್ಕೆಯಲ್ಲಿ ಕಳೆದ ಖುಷಿಯ ಕ್ಷಣಗಳನ್ನು ಹೇಗೆ ಹೆಣ್ಣುಮಕ್ಕಳ ಜೀವನವನ್ನು ಸರ್ವನಾಶ ಮಾಡಿ ಬಿಡುತ್ತೆ ಅನ್ನೋದು ನೋಡಿದಾಗ ರಕ್ತ ಕುದಿಯಿತ್ತೆ ಎನ್ನುತ್ತಾರೆ ವಿಮರ್ಶಕರು.
The Kerala Story Review: ಬರಿ ಸಿನಿಮಾವಲ್ಲ, ಹೆಣ್ಣು ಮಕ್ಕಳ ಬದುಕು ಬದಲಿಸೋ ನೈಜಕಥೆ!
ಇದರ ಹೊರತಾಗಿಯೂ ವಿರೋಧ ಮಾಡಲೆಂದೇ ವಿರೋಧಿಸುವವರ ಗುಂಪು ಹುಟ್ಟಿಕೊಂಡಿದೆ. ಅದರಲ್ಲಿಯೂ ಹೆಚ್ಚಾಗಿ ಈಗ ನರೇಂದ್ರ ನರೇಂದ್ರ ಮೋದಿ ಅವರು ಈ ಚಿತ್ರದ ಬಗ್ಗೆ ಒಳ್ಳೆ ಮಾತುಗಳನ್ನ ಆಡಿದ್ದಾರೆ. ಬಳ್ಳಾರಿಯಲ್ಲಿ ನಡೆದ ರೋಡ್ ಷೋ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ, ವಿಶ್ವ ಆತಂಕ ಭಯದಿಂದ ಚಿಂತಿತವಾಗಿದೆ. ಭಾರತ ಹಲವು ಆಕ್ರಮಣ ಎದುರಿಸಿದೆ.ಹಲವು ಭಾರತೀಯರು ಪ್ರಾಣ ಕಳದುಕೊಂಡಿದೆ. ಆತಂಕವಾದ ವಿಕಾಸದ ವಿರೋಧಿ, ಆತಂಕವಾದ ಮಾನವತಾವಾದಗಳ ವಿರೋಧಿ. ತಮ್ಮ ವೋಟ್ ಬ್ಯಾಂಕ್ ರಾಜಾಕರಣಕ್ಕಾಗಿ ಮಂಡಿಯೂರಿ ಕುಳಿತಿದೆ. ಆತಂಕದ ವಾತಾವರಣದಲ್ಲಿ ಉದ್ಯೋಗ ಐಟಿಬಿಟಿ, ಕೃಷಿ, ನಮ್ಮ ಸಂಸ್ಕೃತಿ ನಷ್ಟವಾಗುತ್ತದೆ. ವೋಟ್ ಬ್ಯಾಂಕ್ ದೃಷ್ಟಿಯಿಂದ ಕಾಂಗ್ರೆಸ್ ಆತಂಕವಾದ ವಿರುದ್ಧ ಒಂದು ಶಬ್ದ ಮಾತನಾಡುತ್ತಿಲ್ಲ. ಬದಲಾಗುತ್ತಿರುವ ಈ ಸಮಯದಲ್ಲಿ ಆತಂಕವಾದದ ಸ್ವರೂಪ ಬದಲಾಗುತ್ತಿದೆ. ಸ್ಮಗ್ಲಿಂಗ್, ಡ್ರಗ್ಸ್ ಸೇರಿದಂತೆ ಆತಂಕವಾದ ಹಲವು ಸ್ವರೂಪ ಪಡೆದುಕೊಂಡಿದೆ ಎಂದಿದ್ದರು.
ಕೆಲ ವರ್ಷಗಳಿಂದ ಆತಂಕದ ಹೊಸ ಸ್ವರೂಪ ಜನ್ಮತಾಳಿದೆ. ಬಂದೂಕು,ಪಿಸ್ತೂಲ್ ಸದ್ದು ಮಾಡುತ್ತದೆ.ಆದರೆ ಹೊಸ ರೂಪದ ಆತಂಕವಾದ ಸಮಾಜದ ನಡುವೆ ಇದ್ದು ಸೈಲೆಂಟ್ ಆಗಿ ಕೆಲಸ ಮಾಡುತ್ತಾರೆ. ಇತಂದ್ದೆ ಆತಂಕದ ಷಡ್ಯಂತ್ರದ ಸಿನಿಮಾ ಕೇರಳ ಸ್ಟೋರಿ ಚರ್ಚೆಯಲ್ಲಿದೆ. ಕೇರಳ ಸ್ಟೋರಿ ಒಂದು ರಾಜ್ಯದ ಆತಂಕದ, ಷಡ್ಯಂತ್ರದ ಮೇಲೆ ಆಧಾರಿತವಾಗಿದೆ. ಆತಂಕದ,ಷಡ್ಯಂತ್ರದ ಬೆಳಕು ಚೆಲ್ಲುವ ಕೇರಳ ಸ್ಟೋರಿ ಚಿತ್ರದ ವಿರುದ್ಧ ಕಾಂಗ್ರೆಸ್ ನಿಂತಿದೆ. ಕಾಂಗ್ರೆಸ್ ಆತಂಕವಾದಿ ಜೊತೆ ನಿಂತಿದೆ ಎಂದು ಮೋದಿ (Narendra Modi) ಹೇಳಿದ್ದರು.
The Kerala story ಚಿತ್ರದ ಅಸಲಿಯತ್ತು ಬಿಚ್ಚಿಟ್ಟ ನಟಿ ಅದಾ ಶರ್ಮಾ
ಖುದ್ದು ಪ್ರಧಾನಿಯವರೇ ತಮ್ಮ ಚಿತ್ರವನ್ನು ಬೆಂಬಲಿಸಿದ ಕಾರಣದಿಂದ ದಿ ಕೇರಳ ಸ್ಟೋರಿ ಚಿತ್ರದ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ಸಿಕ್ಕಾಪಟ್ಟೆ ಸಂತಸ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ತಿಳಿಸಿದ್ದಾರೆ. ಪ್ರಧಾನಿ ಮೋದಿ ಅವರು ತಮ್ಮ ಚಿತ್ರದ ಕುರಿತು ಒಳ್ಳೆ ಮಾತುಗಳನ್ನೆ ಆಡಿದ್ದಾರೆ. ಅವರಿಗೆ ಮನದುಂಬಿ ನನ್ನ ಧನ್ಯವಾದಗಳು ಎಂದಿದ್ದಾರೆ. ನಮ್ಮ ಸಿನಿಮಾ ಮಹಿಳೆಯರ ಉಳಿಸುವ ಉದ್ದೇಶದ ಸಿನಿಮಾ ಆಗಿದೆ. ಹೆಣ್ಣುಮಕ್ಕಳ ರಕ್ಷಣೆಯ ವಿಚಾರವನ್ನ ಇದು ಹೇಳುತ್ತಿದೆ ಅಂತ ತಮ್ಮ ವಿಶೇಷ ವಿಡಿಯೋದಲ್ಲಿ ನಿರ್ಮಾಪಕ ವಿಪುಲ್ ಅಮೃತಲಾಲ್ ಷಾ ತಿಳಿಸಿದ್ದಾರೆ.