ಮೊದಲ ಮಗುವಿನ ನಿರೀಕ್ಷೆಯಲ್ಲಿ ಕತ್ರಿನಾ-ವಿಕ್ಕಿ ಜೋಡಿ? ಮೌನ ಮುರಿದ ಸ್ಟಾರ್ ನಟಿ

By Shruthi Krishna  |  First Published May 7, 2023, 1:05 PM IST

ಕತ್ರಿನಾ ಕೈಫ್ ಮತ್ತು  ವಿಕ್ಕಿ ಕೌಶಲ್ ಜೋಡಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ವದಂತಿಗೆ ಸ್ಟಾರ್ ನಟಿ ಪ್ರತಿಕ್ರಿಯೆ ನೀಡಿದ್ದಾರೆ. 


ಸೆಲೆಬ್ರಿಟಿಗಳಿಗೆ ಮದುವೆ ಯಾವಾಗ, ಮದುವೆ ಆಯ್ತು ಅಂದರೆ ಮಕ್ಕಳು ಯಾವಾಗ? ಎನ್ನುವ ಪ್ರಶ್ನೆ ಎದುರಾಗುತ್ತಲೇ ಇರುತ್ತೆ. ಅದರಲ್ಲೂ ಸಿನಿಮಾ ಸ್ಟಾರ್‌ಗಳು ಈ ಪ್ರಶ್ನೆಗಳನ್ನು ಎದುರಿಸುತ್ತಿರುತ್ತಾರೆ.    ಇದೀಗ ನಟಿ ಕತ್ರಿನಾ ಕೈಫ್ ಸರದಿ. ನಟಿ ಕತ್ರಿನಾ ಕೈಫ್ ಗರ್ಭಿಣಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಪ್ರಶ್ನೆ ಎದುರಾಗುತ್ತಲೆ ಇದೆ. ಕತ್ರಿನಾ ಬಗ್ಗೆ ಆಗಾಗ ಇಂಥ ಸುದ್ದಿ ವೈರಲ್ ಆಗುತ್ತಲೇ ಇರುತ್ತೆ. ಈ ಬಗ್ಗೆ ನಟಿ ಕತ್ರಿನಾ ಕೈಫ್ ಪ್ರತಿಕ್ರಿಯೆ ನೀಡಿದ್ದಾರೆ. ಮಗು ಮಾಡಿಕೊಳ್ಳುವ ಬಗ್ಗೆ ಕತ್ರಿನಾ ಪ್ರತಿಕ್ರಿಯೆ ನೀಡಿದ್ದಾರೆ. ಈ ಮೂಲಕ ಹಾರಿದಾಡುತ್ತಿರುವ ಊಹಾಪೋಹಗಳಿಗೆ ಬ್ರೇಕ್ ಹಾಕಿದ್ದಾರೆ. 

ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ವರ್ಷದ ಮೇಲಾಗಿದೆ. ಮದುವೆ ಬಳಿಕ ಕತ್ರಿನಾ ಪ್ರೆಗ್ನೆಟ್ ಎನ್ನುವ ಸುದ್ದಿ ಅನೇಕ ಬಾರಿ ವೈರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಕತ್ರಿನಾ ಎಲ್ಲೂ ಹೆಚ್ಚಾಗಿ ಕೇಣಿಸಿಕೊಳ್ಳುತ್ತಿಲ್ಲ. ಅನೇಕ ಕಾರ್ಯಕ್ರಮಗಳಿಗೂ ಗೈರಾಗಿದ್ದಾರೆ. ಹಾಗಾಗಿ ಅಭಿಮಾನಿಗಳು ಕತ್ರಿನಾ ಪ್ರೆಗ್ನೆಂಟ್ ಎನ್ನುವ ಸುದ್ದಿ ವೈರಲ್ ಆಗಿದೆ. ಕತ್ರಿನಾ ಮತ್ತು ವಿಕ್ಕ ಕೌಶಲ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎನ್ನುವ ಸುದ್ದಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. 

ನಾವಿಬ್ಬರೂ ಮಾತು ನಿಲ್ಲಿಸಬೇಕು ಎಂದು ಸಂಬಂಧಿಕರು ಕಾಯುತ್ತಾರೆ; ಅತ್ತಿಗೆ ಕತ್ರಿನಾ ಕೈಫ್‌ ಬಗ್ಗೆ ಸನ್ನಿ ಮಾತು

Tap to resize

Latest Videos

ಕತ್ರಿನಾ ಕೈಫ್ ಸದ್ಯ ಜೀ ಲೇ ಜರಾ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಳಿಕ ಕತ್ರಿನಾ ಕೈಫ್ ಮಗುವಿನ ಬಗ್ಗೆ ಪ್ಲಾನ್ ಮಾಡಲಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕತ್ರಿನಾ ಕೈಫ್ ತನ್ನ ಫ್ರೆಂಡ್ ಬಳಿ ಹೇಳಿದ್ದಾರೆ ಎನ್ನಲಾಗಿದೆ. ಸಿನಿಮಾದ ಶೂಟಿಂಗ್ ಮುಗಿಸಿ  ನಂತರ ಪ್ಲಾನ್ ಮಾಡುತ್ತೇನೆ. ಸದ್ಯ ವಿಜಯ್ ಸೇತುಪತಿ ಮತ್ತು ಫರ್ಹಾನ್ ಅಖ್ತರ್ ಜೊತೆ ಸಿನಿಮಾ ಮಾಡುತ್ತಿದ್ದೇನೆ' ಎಂದು ಹೇಳಿದ್ದಾರೆ. 

ಕತ್ರಿನಾ ಸದ್ಯ ಫರ್ಹಾನ್ ಅಖ್ತಾರ್ ಜೊತೆ ಜೀ ಲೇ ಜರಾ ಸಿನಿಮಾ ಮಾಡುತ್ತಿದ್ದಾರೆ.ಈ ಸಿನಿಮಾದಲ್ಲಿ ಪ್ರಿಯಾಂಕಾ ಚೋಪ್ರಾ, ಅಲಿಯಾ ಭಟ್ ಕೂಡ ನಟಿಸುತ್ತಿದ್ದಾರೆ. ಅನೇಕ ವರ್ಷಗಳ ಬಳಿಕ ಪ್ರಿಯಾಂಕಾ ಚೋಪ್ರಾ ಬಾಲಿವುಡ್ ಸಿನಿಮಾ ಮಾಡುತ್ತಿದ್ದಾರೆ. ಮೂವರು ಸ್ಟಾರ್ ನಾಯಕಿಯರು ಇರುವ ಕಾರಣ ಈ ಸಿನಿಮಾದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಈ ಸಿನಿಮಾ ಬಳಿಕ ಕತ್ರಿನಾ ಕೈಫ್ ಮೊದಲ ಮಗುವಿನ ಬಗ್ಗೆ ಪ್ಲಾನ್ ನಾಡುವ ಸಾಧ್ಯತೆ ಇದೆ. 

ಬಾಲಿವುಡ್ ಸ್ಟಾರ್ಸ್ ಮಂಗಳಸೂತ್ರದ ಬೆಲೆ ಗೊತ್ತಾ?

ಕತ್ರಿನಾ ಸದ್ಯ ಟೈಗರ್-3 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಸಲ್ಮಾನ್ ಖಾನ್ ಜೊತೆ ಕತ್ರಿನಾ ನಟಿಸಿದ್ದು ಇಬ್ಬರನ್ನೂ ಮತ್ತೆ ತೆರೆಮೇಲೆ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಟೈಗರ್-3 ಸಿನಿಮಾಈ ವರ್ಷ ನವೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಮತ್ತು ಕತ್ರಿನಾ ಜೊತೆಗೆ ಇಮ್ರಾನ್ ಹಶ್ಮಿ ಕೂಡ ನಟಿಸಿದ್ದಾರೆ. ವಿಜಯ್ ಸೇತುಪತಿ ಜೊತೆ ನಟಿಸಿದ್ದ ಮೇರೆ ಕ್ರಿಸ್ಮಸ್ ಸಿನಿಮಾ ಕೂಡ ರಿಲೀಸ್‌ಗೆ ಸಿದ್ಧವಾಗುತ್ತಿದೆ.  

click me!