ಮದುವೆ ಮನೆಯಲ್ಲಿ ಹೃತಿಕ್ ರೋಷನ್ ಮಸ್ತ್ ಡಾನ್ಸ್; ಪಡೆದಿರುವ ಹಣ ಕೇಳಿದ್ರೆ ಅಚ್ಚರಿ ಪಡ್ತೀರಿ

By Shruthi KrishnaFirst Published May 7, 2023, 3:05 PM IST
Highlights

ಮದುವೆ ಮನೆಯಲ್ಲಿ ಡಾನ್ಸ್ ಮಾಡಿದ ಹೃತಿಕ್ ರೋಷನ್ ವಿಡಿಯೋ ವೈರಲ್ ಆಗಿದೆ. ಡಾನ್ಸ್ ಮಾಡಲು ಗ್ರೀಕ್ ಗಾಡ್ ಪಡೆದಿರುವ ಹಣ ಕೇಳಿ ಎಲ್ಲರೂ ಅಚ್ಚರಿ ಪಡುತ್ತಿದ್ದಾರೆ. 

ಸೆಲೆಬ್ರಿಟಿಗಳು ಪ್ರತಿ ನಿಮಿಷವನ್ನು ಹಣದಲ್ಲೇ ಲೆಕ್ಕಹಾಕುತ್ತಿರುತ್ತಾರೆ. ಎಲ್ಲಿಗೆ ಭೇಟಿ ಮಾಡಿದರೂ, ಏನೇ ಮಾಡಿದರೂ ಅದರ ಹಿಂದೆ ಹಣದ ಲೆಕ್ಕಾಚಾರ ಇದ್ದೇ ಇರುತ್ತದೆ. ಸಿನಿಮಾ ಸ್ಟಾರ್‌ಗಳು ಯಾವುದೇ ಕಾರ್ಯಕ್ರಮ, ಸಂಭ್ರಮಗಳಿಗೆ ಭೇಟಿ ಮಾಡಬೇಕು ಎಂದರೂ ಸಹ ಚಾರ್ಜ್ ಮಾಡುತ್ತಾರೆ. ಅದರಲ್ಲೂ ಬಾಲಿವುಡ್ ಸ್ಟಾರ್ಸ ಅಂದರೆ ಕ್ರೇಜ್ ಜಾಸ್ತಿನೇ ಇರುತ್ತೆ. ಶಾರುಖ್ ಖಾನ್, ರಣ್ವೀರ್ ಸಿಂಗ್, ಹೃತಿಕ್ ರೋಷನ್ ಸೇರಿದಂತೆ ಅವೇಕ ಸ್ಟಾರ್ ಗಳ ಬೇಡಿಕೆ ಕೇಳಿದ್ರೆ ನಿಜಕ್ಕೂ ಅಚ್ಚರಿ ಪಡುತ್ತೀರಿ. 
ಸ್ಟಾರ್ ಸೆಲೆಬ್ರಿಟಿಗಳು ಮದುವೆಗಳಿಗೆ ಎಂಟ್ರಿ ಕೊಡಬೇಕು ಎಂದರೂ ಭಾರಿ ಶುಲ್ಕ ಕೇಳುತ್ತಾರೆ. ತುಂಬಾ ದುಬಾರಿಯಾಗಿದ್ದರು ಸಹ ಅನೇಕರು ಸ್ಟಾರ್ಸ್‌ಗಳನ್ನು ಕರೆಸಿ ಡಾನ್ಸ್, ಹಾಡಿನ ಕಾರ್ಯಕ್ರಮ ಏರ್ಪಡಿಸುತ್ತಾರೆ. 

ಇತ್ತೀಚಿಗಷ್ಟೆ ಹೃತಿಕ್ ರೋಷನ್ ಮದುವೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದರು.  ವಾರ್ -2 ಮತ್ತು ಬ್ಯಾಂಗ್ ಬ್ಯಾಂಗ್ ಹಾಡಿಗೆ ಹೃತಿಕ್ ಹೆಜ್ಜೆ ಹಾಕಿದ್ದರು. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಅಚ್ಚರಿ ಪಟ್ಟರು. ಮದುವೆಯಲ್ಲಿ ಹೃತಿಕ್ ಡಾನ್ಸ್ ಮಾಡಿದ್ರಾ ಎಂದು ಅನೇಕರು ಅಚ್ಚರಿಯ ಕಾಮೆಂಟ್ ಮಾಡುತ್ತಿದ್ದಾರೆ. 

ಹೃತಿಕ್​ ರೋಷನ್​, ಸಭಾ ಸಂಬಂಧದ ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ಜಗನ್ನಾಥ್ ಗುರೂಜಿ

Latest Videos

ಅಂದಹಾಗೆ ಮೂಲಗಳ ಪ್ರಕಾರ ಹೃತಿಕ್ ರೋಷನ್ ಮದುವೆಯಲ್ಲಿ ಡಾನ್ಸ್ ಮಾಡಲು ಬರೋಬ್ಬರಿ 2.5 ಕೋಟಿ ರೂಪಾಯಿ ಶುಲ್ಕ ವಿಧಿಸಿದ್ದಾರೆ ಎನ್ನಲಾಗಿದೆ. ಹೃತಿಕ್ ಯಾವುದೇ ಮದುವೆ, ಬರ್ತಡೇ ಪಾರ್ಟಿ ಹಾಗೂ ಈವೆಂಟ್ ಗಳಲ್ಲಿ ಡಾನ್ಸ್ ಮಾಡಲು 2.5 ಕೋಟಿ ರೂಪಾಯಿ ಪಡೆಯುತ್ತಾರೆ ಎನ್ನಲಾಗಿದೆ. ಇನ್ನು ಕೆಲವರು ಈ ಮದುವೆಗೆ ಹೃತಿಕ್ ಯಾವುದೇ ಹಣ ಪಡೆದಿಲ್ಲ ಎಂದು ಹೇಳುತ್ತಿದ್ದಾರೆ. ಕುಟುಂಬಕ್ಕೆ ಆಪ್ತರಾಗಿರುವ ಕಾರಣ ಮದುವೆಗೆ ಹೋಗಿ ಡಾನ್ಸ್ ಮಾಡುದ್ದಾರೆ ಎಂದು ಹೇಳುತ್ತಿದ್ದಾರೆ. 

ಹೃತಿಕ್ ರೋಷನ್ ಜೊತೆ ಗಲಾಟೆಗೂ ಮುನ್ನ ಆಮೀರ್ ಖಾನ್ ನನ್ನ ಬೆಸ್ಸ್‌ ಫ್ರೆಂಡ್‌ ಆಗಿದ್ದರು: ಕಂಗನಾ

ಹೃತಿಕ್ ರೋಷನ್ ಒಂದು ಸಿನಿಮಾಗೆ 85 ಕೋಟಿ ರೂಪಾಯಿ ಪಡೆಯುತ್ತಾರೆ. ಸದ್ಯ ಹೃತಿಕ್ ರೋಷನ್ ಫೈಟರ್ ಸಿನಿಮಾಗಾಗಿ ಎದುರು ನೋಡುತ್ತಿದ್ದಾರೆ. ಈ ಸಿನಿಮಾದಲ್ಲಿ ಹೃತಿಕ್ ಬಾಲಿವುಡ್ ಸ್ಟಾರ್ ದೀಪಿಕಾ ಪಡುಕೋಣೆ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಹೃತಿಕ್ ಕೊನೆಯದಾಗಿ ವಿಕ್ರಂ ವೇದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ವಿಕ್ರಂ ವೇದ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್‌ನಲ್ಲಿ ಸೋಲು ಕಂಡಿತು. ತಮಿಳು ಸಿನಿಮಾದ ರಿಮೇಕ್ ಆಗಿತ್ತು. ಹೃತಿಕ್ ಮತ್ತು ಸೈಫ್ ಅಲಿ ಖಾನ್ ಮಿಂಚಿದ್ದರು. ಸದ್ಯ ಫೈಟರ್ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ.
 

click me!