OTTಗೆ ವಿವಾದಾತ್ಮಕ 'ದಿ ಕೇರಳ ಸ್ಟೋರಿ': ಯಾವಾಗ, ಎಲ್ಲಿ? ಇಲ್ಲಿದೆ ಸಂಪೂರ್ಣ ವಿವರ

By Shruthi KrishnaFirst Published May 11, 2023, 3:08 PM IST
Highlights

OTTಗೆ ಬರ್ತಿದೆ ವಿವಾದಾತ್ಮಕ 'ದಿ ಕೇರಳ ಸ್ಟೋರಿ'. ಯಾವಾಗ, ಎಲ್ಲಿ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.  

ಭಾರಿ ವಿವಾದದ ಮೂಲಕ ತೆರೆಗೆ ಬಂದ ದಿ ಕೇರಳ ಸ್ಟೋರಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಬಾಕ್ಸ್ ಆಫೀಸ್‌ನಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಾ ಮುನ್ನುತ್ತಿದೆ. ಕೆಲವು ರಾಜ್ಯಗಳಲ್ಲಿ ದಿ ಕೇರಳ ಸ್ಟೋರಿ ಸಿನಿಮಾವನ್ನು ಬ್ಯಾನ್ ಮಾಡಿದ್ರೆ ಇನ್ನು ಕೆಲವು ರಾಜ್ಯಗಳು ಟ್ಯಾಕ್ಸ್ ಫ್ರೀ ಮಾಡಿವೆ. ಕರ್ನಾಟಕದಲ್ಲೂ ಅನೇಕ ಚಿತ್ರಮಂದಿರಗಳಲ್ಲಿ ಕೇರಳ ಸ್ಟೋರಿ ಪ್ರದರ್ಶನ ಕಾಣುತ್ತಿದೆ. ವಿರೋಧ, ಟೀಕೆಯ ನಡುವೆಯೂ ಅನೇಕರು ಕೇರಳ ಸ್ಟೋರಿ ನೋಡಿ ಮೆಚ್ಚಿಕೊಂಡಿದ್ದಾರೆ. ಇದೀಗ ಈ ಸಿನಿಮಾದ ಬಗ್ಗೆ ಮತ್ತೊಂದು ಸುದ್ದಿ  ಹೊರ ಬಿದ್ದಿದೆ. ಕೇರಳ ಸ್ಟೋರಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಅಂದುಕೊಂಡಿದ್ದಕ್ಕಿಂತ ಮೊದಲೇ ಒಟಿಟಿಗೆ ಲಗ್ಗೆ ಇಡುತ್ತಿದೆ ಸಿನಿಮಾ. 

ದಿ ಕೇರಳ ಸ್ಟೋರಿ ಸಿನಿಮಾ ಮೇ 5ರಂದು ರಿಲೀಸ್ ಆಗಿದೆ. ಆಗಲೇ ಒಟಿಟಿ ರಿಲೀಸ್ ಸುದ್ದಿ ವೈರಲ್ ಆಗಿದೆ. ಈಗಾಗಲೇ ಈ ಸಿನಿಮಾದ ಒಟಿಟಿ ಹಕ್ಕು ಭರ್ಜರಿ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ. ಅಂದಹಾಗೆ ಕೇರಳ ಸ್ಟೋರಿ ಸಿನಿಮಾವನ್ನು ಪ್ರಸಿದ್ಧ ಒಟಿಟಗಳಲ್ಲಿ ಒಂದಾಗಿರುವ ಜೀ 5 ಸಂಸ್ಥೆ ಖರೀದಿ ಮಾಡಿದೆ ಎನ್ನಲಾಗಿದೆ. ದೊಡ್ಡ ಮೊತ್ತಕ್ಕೆ ದಿ ಕೇರಳ ಸ್ಟೋರಿ ಸಿನಿಮಾವನ್ನು ಖರೀದಿಸಿದೆ ಎನ್ನುವ ಸುದ್ದಿ ಇದೆ. ಅಂದಹಾಗೆ ಈ ಸಿನಿಮಾ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿ 4-6 ವಾರದಲ್ಲಿ ಒಟಿಟಿಗೆ ಎಂಟ್ರಿ ಕೊಡಲಿದೆಯಂತೆ. ಅಂದರೆ ಜೂನ್ 3ನೇ ವಾರದಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿದೆ. 

ಈ ಬಗ್ಗೆ ಸಿನಿಮಾತಂಡ ಅಥವಾ ಜೀ 5 ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಸದ್ಯದಲ್ಲೇ ಮಾಹಿತಿ ಬಹಿರಂಗಪಡಿಸುವ ಸಾಧ್ಯತೆ ಇದೆ. ಸದ್ಯ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿರುವ ದಿ ಕೇರಳ ಸ್ಟೋರಿ ಸಿನಿಮಾವನ್ನು ಸದ್ಯದಲ್ಲೇ ಮೊಬೈಲ್‌ನಲ್ಲೇ ನೋಡಿ ಸಂಭ್ರಮಿಸಬಹುದು.

ಇನ್ಮುಂದೆ ಅನೇಕ ಹುಡುಗಿಯರ ಜೀವ ಉಳಿಯಲಿದೆ; 'ದಿ ಕೇರಳ ಸ್ಟೋರಿ' ಸಕ್ಸಸ್ ಬಳಿಕ ನಾಯಕಿ ಅದಾ ಶರ್ಮಾ ರಿಯಾಕ್ಷನ್

3 ರಾಜ್ಯಗಳಲ್ಲಿ ಟ್ಯಾಕ್ಸ್ ಫ್ರೀ, 2 ರಾಜ್ಯಗಳಲ್ಲಿ ಬ್ಯಾನ್ 

'ದಿ ಕೇರಳ ಸ್ಟೋರಿ' ಸಿನಿಮಾಗೆ ಮಧ್ಯಪ್ರದೇಶದಲ್ಲಿ ತೆರಿಗೆ ವಿನಾಯಿತಿ ನೀಡಲಾಗಿದೆ. ನಂತರ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಕೂಡ ತಮ್ಮ ರಾಜ್ಯದಲ್ಲಿ ಟ್ಯಾಕ್ಸ್ ಫ್ರೀ ಎಂದು ಘೋಷಿಸಿದರು. ಇದೀಗ ಹರಿಯಾಣ ರಾಜ್ಯದಲ್ಲೂ ತೆರೆಗೆ ವಿನಾಯಿತಿ ಘೋಷಿಸಿರುವ ಸುದ್ದಿ ಬಂದಿದೆ. ಈ ನಡುವೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಿನಿಮಾತಂಡವನ್ನು ಭೇಟಿ ಮಾಡಿದ್ದಾರೆ.  ಚಿತ್ರತಂಡದ ಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಭೇಟಿ ಮಾಡಿದ The Kerala Story ಚಿತ್ರತಂಡ!

ಇನ್ನೂ ಪಶ್ಚಿಮ ಬಂಗಾಳದಲ್ಲಿ 'ದಿ ಕೇರಳ ಸ್ಟೋರಿ' ಚಿತ್ರವನ್ನು ನಿಷೇಧಿಸಿದೆ. ರಾಜ್ಯದಲ್ಲಿ ದ್ವೇಷ ಹಾಗೂ ಹಿಂಸಾಚಾರದ ಘಟನೆಗಳನ್ನು ತಪ್ಪಿಸಿ ಶಾಂತಿಯನ್ನು ಕಾಪಾಡುವ ಸಲುವಾಗಿ ಸರ್ಕಾರವು ಕೇರಳ ಸ್ಟೋರಿ ಚಿತ್ರವನ್ನು ನಿಷೇಧಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. ತಮಿಳುನಾಡು ಥಿಯೇಟರ್‌ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ಪ್ರೇಕ್ಷಕರು ಬರುತ್ತಿಲ್ಲ ಎನ್ನುವ ಕಾರಣ ನೀಡಿ ಸಿನಿಮಾ ಪ್ರದರ್ಶನ ನಿಲ್ಲಿಸಲಾಗಿದೆ.

click me!