ನಟಿ ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಅವರನ್ನು ವಿವಾಹವಾಗುವ ಮೊದಲು ಹಲವು ನಟರ ಜೊತೆ ಡೇಟಿಂಗ್ ಮಾಡಿದ್ದರು. ಅದರ ಕುರಿತು ಅವರು ಈಗ ಮಾತನಾಡಿದ್ದಾರೆ.
ಜಾಗತಿಕ ಐಕಾನ್, ಪ್ರಿಯಾಂಕಾ ಚೋಪ್ರಾ (Priyanka Chopra) ಒಂದಿಲ್ಲೊಂದು ವಿಷಯಗಳಿಂದ ಸದಾ ಮುಖ್ಯಾಂಶಗಳಲ್ಲಿ ಇರುತ್ತಾರೆ. ಇತ್ತೀಚೆಗೆ ಮೆಟ್ ಗಾಲಾ 2023 ರಲ್ಲಿ ಫ್ಯಾಷನ್ ಷೋನಲ್ಲಿ ಎಲ್ಲರ ಗಮನ ಸೆಳೆದಿದ್ದರು. ಇಡೀ ವೇದಿಕೆಗೆ ಕಿಚ್ಚು ಹಚ್ಚಿದ್ದರು. ಈ ಕಾರ್ಯಕ್ರಮದಲ್ಲಿ ಪ್ರಿಯಾಂಕಾ ನೆಕ್ಲೆಸ್ನಿಂದಾಗಿ ಭಾರಿ ಸುದ್ದಿಯಲ್ಲಿದ್ದರು. ಇದಕ್ಕೆ ಕಾರಣ, ಇವರು ಧರಿಸಿದ್ದ ಈ ನೆಕ್ಲೆಸ್, 11.6 ಕ್ಯಾರೆಟ್‌ನ ವಜ್ರದ ನೆಕ್ಲೆಸ್ ಆಗಿತ್ತು. ಇದರ ಬೆಲೆ ಸುಮಾರು 204 ಕೋಟಿ ರೂಪಾಯಿ! ನಟಿ ತಮ್ಮ ಬಣ್ಣ, ಮೂಗಿನಿಂದಾಗಿ ಇದಾಗಲೇ ಹಲವಾರು ಬಾರಿ ಬಾಡಿ ಷೇಮಿಂಗ್ಗೆ ಒಳಗಾಗಿದ್ದರೂ ತಾವು ಹಲವರ ಜೊತೆ ಡೇಟಿಂಗ್ ಮಾಡಿರುವುದಾಗಿ ಪ್ರಿಯಾಂಕಾ ಒಪ್ಪಿಕೊಂಡಿದ್ದಾರೆ. ನಿಕ್ ಜೋನಸ್ ಅವರನ್ನು ಮದುವೆಯಾಗಿ, ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಎಂಬ ಮಗಳನ್ನು ಪಡೆದಿರುವ ನಟಿ ಪ್ರಿಯಾಂಕಾ, ಇದೀಗ ತಮ್ಮ ಡೇಟಿಂಗ್ ಕುರಿತು ಮಾತನಾಡಿದ್ದಾರೆ. ಅಲೆಕ್ಸ್ ಕೂಪರ್ ಅವರ ಪಾಡ್‌ಕ್ಯಾಸ್ಟ್ ಕಾಲ್ ಹರ್ ಡ್ಯಾಡಿಯಲ್ಲಿ ತನ್ನ ಮಾಜಿ ಗೆಳೆಯರ ಬಗ್ಗೆ ಮಾತನಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದ್ದಾರೆ ಪ್ರಿಯಾಂಕಾ. ನಿಕ್ ಜೋನಾಸ್ ಅವರೊಂದಿಗೆ ಮದುವೆಯಾಗಿರುವ ಮೊದಲು ತಾವು ಡೇಟಿಂಗ್ ಮಾಡಿದ ನಟರ ಬಗ್ಗೆ ಮಾತನಾಡಿದ್ದಾರೆ.
ಅಂದಹಾಗೆ, ಪ್ರಿಯಾಂಕಾ ಅವರು ಶಾರುಖ್ ಖಾನ್ (Shah rukh Khan), ಶಾಹಿದ್ ಕಪೂರ್, ಹರ್ಮನ್ ಬವೇಜಾ ಅವರಂತಹ ಅನೇಕ ಬಾಲಿವುಡ್ ನಟರೊಂದಿಗೆ ಡೇಟಿಂಗ್ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ದೇಸಿಗರ್ಲ್ ಬಾಲಿವುಡ್ನಲ್ಲಿ ಅನೇಕ ಸೂಪರ್ ಸ್ಟಾರ್ಗಳ ಜೊತೆ ನಟಿಸಿದ್ದಾರೆ. ಪ್ರಿಯಾಂಕಾ ಅವರ ಹೆಸರು ನಟರಾದ ಶಾಹಿದ್ ಕಪೂರ್ ಮತ್ತು ಹರ್ಮಾನ್ ಬಾವ್ಜೆ ಅವರೊಂದಿಗೆ ತಳುಕಿ ಹಾಕಿಕೊಂಡಿತ್ತು. ಹರ್ಮಾನ್ ಬಾವ್ಜಾ ಮತ್ತು ಪ್ರಿಯಾಂಕಾ ಮದುವೆಯಾಗಲು ಕೂಡ ಮುಂದಾಗಿದ್ದರು ಎನ್ನುವ ಸುದ್ದಿ ಕೂಡ ಹರಡಿತ್ತು. ಅಂದಹಾಗೆ, ಶಾಹಿದ್ ಕಪೂರ್ ಜೊತೆ ಕೂಡ ಮದುವೆಯ ಸುದ್ದಿ ಕೇಳಿಬಂದಿತ್ತು. ಆದರೆ ನಟನ ಜೊತೆ ಬ್ರೇಕಪ್ ಬಳಿಕ ಪ್ರಿಯಾಂಕಾ ನಿಕ್ ಜೋನಸ್ ಜೊತೆ ಡೇಟ್ ಮಾಡಲು ಶುರು ಮಾಡಿದ್ದರು.
ಮೂಗನ್ನು ಅಂದಗೊಳಿಸಲು ಹೋಗಿ ಖಿನ್ನತೆಗೆ ಜಾರಿದ್ದ ಪ್ರಿಯಾಂಕಾ ಚೋಪ್ರಾ!
ಇದೀಗ ಮಾಜಿಗಳ ಕುರಿತು ಅವರು ಮಾತನಾಡಿದ್ದಾರೆ. ತಮ್ಮ ಬಾಯ್ಫ್ರೆಂಡ್ಸ್ (Boyfriends) ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟಿ ಹೇಳಿದ್ದಾರೆ. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ. ನಾನು ಯಾವಾಗಲೂ ನನ್ನ ಸೆಟ್‌ನಲ್ಲಿ ಭೇಟಿಯಾದ ಸಹ ನಟರೊಂದಿಗೆ ಡೇಟಿಂಗ್ ಮಾಡಿದ್ದೇನೆ. ಸಂಬಂಧಕ್ಕೆ ಬೆಲೆ ಕೊಡುತ್ತೇನೆ. ಪ್ರತಿಯೊಂದು ಸಂಬಂಧವು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ನನ್ನ ಜೀವನದಲ್ಲಿ ಬಂದ ಜನರ ಬಗ್ಗೆ ಹೇಗೆ ಸಂಬಂಧ ಹೊಂದಬೇಕು, ಡೇಟಿಂಗ್ ಯಾವ ವ್ಯಕ್ತಿಯ ಜೊತೆ ಮಾಡಬೇಕು ಎಂಬ ತಿಳಿವಳಿಕೆ ನನಗಿತ್ತು. ಆದ್ದರಿಂದ ಉತ್ತಮ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ.
ನಾನು ಡೇಟಿಂಗ್ (Dating) ಮಾಡಿದವರು ನಿಜವಾಗಿಯೂ ಅದ್ಭುತವಾಗಿದ್ದಾರೆ. ಕೆಲವು ಸಂಬಂಧಗಳು ನಿಜವಾಗಿಯೂ ಕೆಟ್ಟದಾಗಿ ಕೊನೆಗೊಂಡಿರಬಹುದು, ಆದರೆ ನಾನು ಡೇಟಿಂಗ್ ಮಾಡಿರುವ ವ್ಯಕ್ತಿಗಳೆಲ್ಲರೂ ಉತ್ತರಮರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ ಪಿಸಿ. ಸಂಬಂಧಗಳು (Relationships) ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ. ಹಾಗೆ ನನ್ನ ಜೀವನದಲ್ಲಿ ಬಂದ ಕೆಟ್ಟವರನೆಲ್ಲಾ ನಾನು ತಡೆಯಲು ಪ್ರಯತ್ನಿಸಿದೆ. ನನ್ನ ಎಲ್ಲಾ ಡೇಟಿಂಗ್ ಕೂಡ ಅದ್ಭುತವಾಗಿವೆ. ಆದರೆ ಅವರೊಂದಿಗಿನ ಸಂಬಂಧವು ಕೆಟ್ಟದಾಗಿ ಕೊನೆಗೊಂಡಿತು. ನಾನು ಈಗಲೂ ಕೂಡ ಮಾಜಿ ಗೆಳೆಯರನ್ನು ಇಷ್ಟಪಡುತ್ತೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ. ನನ್ನ ರೊಮ್ಯಾಂಟಿಕ್ ಟೈಮ್ (Romantic time) ಸುಂದರವಾಗಿತ್ತು ಎಂದು ಅವರು ಹೇಳಿದ್ದಾರೆ.
Met Gala 2023: ಪ್ರಿಯಾಂಕಾ ಧರಿಸಿರುವ ನೆಕ್ಲೆಸ್ ರೇಟ್ಗೆ ಹತ್ತಾರು ಬಂಗ್ಲೆ ಖರೀಸ್ಬೋದು!