'The Kerala Story' ನಿರ್ದೇಶಕ ಸುದೀಪ್ತೋ ಸೇನ್​ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು! ನಡೆದಿದ್ದೇನು?

Published : May 27, 2023, 03:24 PM ISTUpdated : May 27, 2023, 03:25 PM IST
'The Kerala Story' ನಿರ್ದೇಶಕ ಸುದೀಪ್ತೋ ಸೇನ್​ ಮತ್ತೊಮ್ಮೆ ಆಸ್ಪತ್ರೆಗೆ ದಾಖಲು! ನಡೆದಿದ್ದೇನು?

ಸಾರಾಂಶ

ದಿ ಕೇರಳ ಸ್ಟೋರಿ ಖ್ಯಾತಿಯ ನಿರ್ದೇಶಕ ಸುದೀಪ್ತೋ ಸೇನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದಕ್ಕೆ  ಕಾರಣವೇನು?   

ಬಾಲಿವುಡ್ ಚಲನಚಿತ್ರ ನಿರ್ದೇಶಕ ಸುದೀಪ್ತೋ ಸೇನ್ (Sudipto Sen) ಇತ್ತೀಚಿನ ದಿನಗಳಲ್ಲಿ ತಮ್ಮ 'ದಿ ಕೇರಳ ಸ್ಟೋರಿ' ಚಿತ್ರದ ಬಗ್ಗೆ ನಿರಂತರ ಚರ್ಚೆಯಲ್ಲಿದ್ದಾರೆ. ಈ ಚಿತ್ರದ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ನಿಷೇಧ, ವಿವಾದಗಳು ಮತ್ತು ಪ್ರತಿಭಟನೆಗಳ ಹೊರತಾಗಿಯೂ, ಸುದೀಪ್ತೋ ಸೇನ್ ಅವರ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ (Box Office) ಅದ್ಭುತ ಪ್ರದರ್ಶನ ನೀಡುತ್ತಿದೆ ಮತ್ತು ಈಗ ವಿಶ್ವಾದ್ಯಂತ 300 ಕೋಟಿ ಕ್ಲಬ್‌ಗೆ ಪ್ರವೇಶಿಸಲು ಸಿದ್ಧವಾಗಿದೆ. ಈ ನಡುವೆ ಸುದೀಪ್ತೋ ಸೇನ್ ಬಗ್ಗೆ ಒಂದು ಸುದ್ದಿ ಬಂದಿದೆ. ನಿರ್ದೇಶಕರು ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸುದೀಪ್ತೋ ಚಿತ್ರದ ಪ್ರಚಾರದಲ್ಲಿ ನಿರಂತರವಾಗಿ ನಿರತರಾಗಿದ್ದಾರೆ ಮತ್ತು ನಿರಂತರ ಬೆದರಿಕೆಗಳಿಂದ ಒತ್ತಡದಲ್ಲಿದ್ದಾರೆ. ಇದರಿಂದ ಏಕಾಏಕಿ ಅವರ ಆರೋಗ್ಯ ಹದಗೆಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇತ್ತೀಚೆಗಷ್ಟೇ, ಸುದೀಪ್ತೋ ಸೇನ್​ ಮತ್ತು ನಾಯಕಿ ಅದಾ ಶರ್ಮಾ   ತೆರಳುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು.

ತೆಲಂಗಾಣದ ಕರೀಂನಗರಕ್ಕೆ ತೆರಳುತ್ತಿದ್ದ ವೇಳೆ ಈ ಘಟನೆ ಸಂಭವಿಸಿತ್ತು. ನಿರ್ದೇಶಕ ಹಾಗೂ ನಾಯಕಿಗೆ ಸಣ್ಣಪುಟ್ಟ ಗಾಯವಾಗಿದ್ದು  ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಸುದೀಪ್ತೋ ಸೇನ್ ಮತ್ತು ಅದಾ ಹಾಗೂ ಇಡೀ ಸಿನಿಮಾತಂಡ ಕರೀಂನಗರಕ್ಕೆ ಯುವಜನ ಕೂಟವೊಂದರಲ್ಲಿ ಭಾಗಿಯಾಗಿ ತಮ್ಮ ವಿವಾದಾತ್ಮಕ ಚಿತ್ರ ದಿ ಕೇರಳ ಸ್ಟೋರಿ ಕುರಿತು ಮಾತನಾಡಲು ತೆರಳುತ್ತಿದ್ದ ವೇಳೆ ಘಟನೆ ನಡೆದಿತ್ತು. ಇದೀಗ ಮತ್ತೊಂದು ಘಟನೆ ನಡೆದಿದೆ.

ಮಾಧ್ಯಮ ವರದಿಗಳ ಪ್ರಕಾರ, ಅತಿಯಾದ ಒತ್ತಡದಿಂದಾಗಿ ಸುದೀಪ್ತೋ ಸೇನ್ ಅವರ ಆರೋಗ್ಯ ಹದಗೆಟ್ಟ ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ, ಅಲ್ಲಿ ವೈದ್ಯರು ನಿರಂತರವಾಗಿ ಅವರ ಆರೈಕೆಯಲ್ಲಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ನಿರ್ದೇಶಕ ಹಾಗೂ ತಾರಾ ಬಳಗಕ್ಕೆ ಜೀವ ಬೆದರಿಕೆ ಬಂದಿತ್ತು. ಇದಾದ ನಂತರ ಅದಾ ಶರ್ಮಾ ಅವರಿಗೆ ಅಪಘಾತವಾಗಿತ್ತು. ಇದೀಗ  ಸುದೀಪ್ತೋ ಆಸ್ಪತ್ರೆಗೆ ದಾಖಲಾದ ಸುದ್ದಿ ಬಂದಿದೆ.

ದಿ ಕೇರಳ ಸ್ಟೋರಿ ಬಳಿಕ ಭುಗಿಲೆದ್ದ 'ಫರ್ಹಾನಾ' ವಿವಾದ: ನಟಿಗೆ ಜೀವ ಬೆದರಿಕೆ

‘ದಿ ಕೇರಳ ಸ್ಟೋರಿ’ (The Kerala Story) ಚಿತ್ರದ ನಿರಂತರ ಪ್ರಚಾರ ಹಾಗೂ ತಮಗೆ ಬರುತ್ತಿದ್ದ ಬೆದರಿಕೆಗಳಿಂದ ಸುದೀಪ್ತೋ ನಿರಂತರ ಒತ್ತಡಕ್ಕೆ ಒಳಗಾಗಿದ್ದರು. ಚಿತ್ರದ ಪ್ರಚಾರದ ವೇಳೆ ಅವರು ದಣಿದ ಅನುಭವವನ್ನು ಅನುಭವಿಸಿದರು, ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಿರಂತರ ಪ್ರತಿಭಟನೆಗಳ ನಂತರವೂ ಸುದೀಪ್ತೋ ಸೇನ್ ಅವರ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಅದ್ಭುತವಾಗಿ ಪ್ರದರ್ಶನ ನೀಡುತ್ತಿದೆ ಮತ್ತು ಚಿತ್ರದಲ್ಲಿನ ಅವರ ಅಭಿನಯಕ್ಕಾಗಿ ತಾರಾಬಳಗವನ್ನು ಸಹ ಪ್ರಶಂಸಿಸಲಾಗುತ್ತಿದೆ. ತಮ್ಮ ಚಿತ್ರದ ಅಭಿನಯದ ಬಗ್ಗೆ ಸುದೀಪ್ತೋ ತುಂಬಾ ಖುಷಿಯಾಗಿದ್ದಾರೆ.
 
ಮೇ 5 ರಂದು ಬಿಡುಗಡೆಯಾದ 'ದಿ ಕೇರಳ ಸ್ಟೋರಿ'ಯಲ್ಲಿ ಅದಾ ಶರ್ಮಾ ಪ್ರಮುಖ ಪಾತ್ರದಲ್ಲಿದ್ದಾರೆ. ಇದಲ್ಲದೆ, ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿದ್ದಾರೆ. 'ದಿ ಕೇರಳ ಸ್ಟೋರಿ' (The Kerala Story) ತನ್ನ ಟೀಸರ್ ಬಿಡುಗಡೆಯಾದಾಗಿನಿಂದಲೂ ಸುದ್ದಿ ಮಾಡುತ್ತಿದೆ. ಈ ಚಿತ್ರದ ಕಥೆಯು ಕೇರಳದ ಯುವತಿಯರು ಅದರಲ್ಲಿಯೂ ಅಲ್ಲಿನ ಕ್ರೈಸ್ತ ಸಮುದಾಯಕ್ಕೆ ಸೇರಿದವರನ್ನು ಹೇಗೆಲ್ಲಾ  ಇಸ್ಲಾಂಗೆ ಪರಿವರ್ತಿಸಲಾಗುತ್ತಿದೆ ಮತ್ತು ಐಸಿಸ್‌ಗೆ ಸೇರ್ಪಡೆಗೊಳಿಸಲಾಗುತ್ತಿದೆ  ಎಂಬ ಸತ್ಯ ಘಟನೆಯನ್ನು ಆಧರಿಸಿದೆ. ಹೆಣ್ಣುಮಕ್ಕಳನ್ನು ಹೆರುವ ಯಂತ್ರಗಳನ್ನಾಗಿ ಮಾಡಿ, ಹುಟ್ಟುವ ಮಗುವನ್ನು ಅವರಿಂದ ಬೇರ್ಪಡಿಸಲಾಗುತ್ತದೆ, ನಂತರ ಮಕ್ಕಳನ್ನು ಕರೆದುಕೊಂಡು ಹೋಗಿ ಆತ್ಮಹತ್ಯಾ ಬಾಂಬರ್​ಗಳನ್ನಾಗಿ (Suicide Bomber) ತಯಾರು ಮಾಡುವ ಭಯಾನಕ ಸತ್ಯ ಚಿತ್ರಣವನ್ನು ಈ ಚಿತ್ರದಲ್ಲಿ ಬಿಚ್ಚಿಡಲಾಗಿದೆ.

The Kerala Story: ಮತಾಂತರದ ರೋಲ್​ ಒಪ್ಪಿದ್ದೇಕೆ ಎಂಬ ಗುಟ್ಟು ಬಿಚ್ಚಿಟ್ಟ 'ಆಸಿಫಾ'

ಇಂದಿನ ಹೆಣ್ಣುಮಕ್ಕಳಿಗೆ ಕಣ್ಣು ತೆರೆಸುವ ಈ ಚಿತ್ರಕ್ಕೆ ಕೆಲವು ರಾಜ್ಯ ಸರ್ಕಾರಗಳು ಇದಕ್ಕೆ ನಿಷೇಧ ಹೇರಿದೆ. ಮಧ್ಯಪ್ರದೇಶ, ಉತ್ತರ ಪ್ರದೇಶ ಸರ್ಕಾರಗಳು ಈ ಚಿತ್ರದ ಮೇಲೆ ಇದಾಗಲೇ ವಿನಾಯಿತಿ ಘೋಷಿಸಿವೆ. ಇದು ಸತ್ಯ ಘಟನೆಯನ್ನೇ ಆಧರಿಸಿದ್ದರೂ ಕಾಂಗ್ರೆಸ್​ ಪಕ್ಷ ಸೇರಿದಂತೆ ಕೆಲವು ರಾಜಕೀಯ ಪಕ್ಷಗಳು ಈ ಚಿತ್ರವನ್ನು ವಿರೋಧಿಸಿವೆ.  ‘ದಿ ಕೇರಳ ಸ್ಟೋರಿ’ಯಲ್ಲಿ ಸತ್ಯಾಂಶಗಳನ್ನು ಸರಿಯಾಗಿ ತೋರಿಸಿಲ್ಲ ಎನ್ನುತ್ತಾರೆ ಮಮತಾ ಬ್ಯಾನರ್ಜಿ. ಕೇರಳದ ಮಾನಹಾನಿ ಮಾಡುವುದು ಈ ಚಿತ್ರದ ಉದ್ದೇಶ ಎನ್ನುವುದು ಅವರ ಅಭಿಮತ.  ‘ಶಾಂತಿ ಕಾಪಾಡುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ದ್ವೇಷ ಮತ್ತು ಹಿಂಸೆ ಹರಡುವುದನ್ನು ತಪ್ಪಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎನ್ನುವುದು ಇವರ ಮಾತು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ
ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!