ಪ್ರಿಯಾಮಣಿಗೆ ಹತ್ತಿರವಾದ ನಟ ಶರದ್‌ಗೆ ಜೀವ ಬೆದರಿಕೆ!

Published : Jul 03, 2021, 01:49 PM ISTUpdated : Jul 03, 2021, 02:07 PM IST
ಪ್ರಿಯಾಮಣಿಗೆ ಹತ್ತಿರವಾದ ನಟ ಶರದ್‌ಗೆ ಜೀವ ಬೆದರಿಕೆ!

ಸಾರಾಂಶ

ಪ್ರಿಯಾಮಣಿ ಜೀವನದಲ್ಲಿ ನುಸುಳಿದ್ದಕ್ಕೆ ಬಾಲಿವುಡ್ ನಟನಿಗೆ ಜೀವ ಬೆದರಿಕೆ ಶರದ್ ಕೆಲ್ಕರ್‌ಗೆ ಹೆಚ್ಚುತ್ತಿದೆ ಬೆದರಿಕೆ ಕರೆ

ಪ್ರಿಯಾಮಣಿ ದಾಂಪತ್ಯ ಮಧ್ಯೆ ನುಸುಳಿದ ಬಾಲಿವುಡ್ ನಟ ಶರದ್ ಕೆಲ್ಕರ್‌ಗೆ ಈಗ ಜೀವ ಬೆದರಿಕೆ ಕರೆಗಳು ಬರುತ್ತಿವೆ. ಪ್ರತಿದಿನ ಈ ಬಾಲಿವುಡ್‌ ನಟನಿಗೆ ಮೆಸೇಜ್, ಕರೆಗಳ ಮೂಲಕ ಬೆದರಿಕೆ ಬರುತ್ತಿದೆ. ಅಭಿಮಾನಿಗಳಿಂದ ತನಗೆ ಬೆದರಿಕೆ ಸಂದೇಶಗಳು ಬಂದಿವೆ ಎಂದು ಫ್ಯಾಮಿಲಿ ಮ್ಯಾನ್ 2 ನಟ ಶರದ್ ಕೆಲ್ಕರ್ ಬಹಿರಂಗಪಡಿಸಿದ್ದಾರೆ. ಅಷ್ಟಕ್ಕೂ ಆಗಿದ್ದೇನು ಅಂತೀರಾ ?

ಫ್ಯಾಮಿಲಿ ಮ್ಯಾನ್ 2 ಸದ್ಯದ ವೆಬ್ ಸಿರೀಸ್ ಪ್ರಿಯರ ಹಾಟ್‌ ಫೇವರೇಟ್. ಸುಚಿ(ಪ್ರಿಯಾಮಣಿ ಮತ್ತು) ಶ್ರೀಕಾಂತ್ ತಿವಾರಿ(ಮನೋಜ್ ಬಾಜಪೇಯಿ) ಫ್ಯಾಮಿಲಿ ಎಲ್ಲರಿಗೂ ಇಷ್ಟವಾಗುತ್ತದೆ. ತನ್ನ ಸಹೋದ್ಯೋಗಿ ಸುಚಿ (ಪ್ರಿಯಮಣಿ ನಿರ್ವಹಿಸಿದ) ಬಗ್ಗೆ ಆಸಕ್ತಿ ತೋರುವ ಅರವಿಂದ್(ಶರದ್ ಕೆಲ್ಕರ್) ಪಾತ್ರವನ್ನು ನಟ ಈಗ ಜನ ವಿರೋಧಿಸುತ್ತಿದ್ದಾರೆ.

15 ವರ್ಷದ ವೈವಾಹಿಕ ಜೀವನದ ನಂತರ ಬೇರಾಗುತ್ತಿದ್ದಾರೆ ಅಮೀರ್-ಕಿರಣ್

ಲೋನಾವ್ಲಾದಲ್ಲಿ ಅರವಿಂದ್ ಅವರೊಂದಿಗೆ ಶ್ರೀಕಾಂತ್‌ಗೆ ಸುಚಿ ಮೋಸ ಮಾಡಿದ್ದಾರೆ ಎಂದು ಶೋದಲ್ಲಿ ಕಂಡುಬಂದಿದೆ. ಲೋನಾವ್ಲಾದಲ್ಲಿ ಏನಾಯಿತು ಎಂಬುದು ಅಭಿಮಾನಿಗಳ ಪ್ರಶ್ನೆ. ಆದರೆ, ಮನೋಜ್ ಬಾಜಪೇಯಿ, ಪ್ರಿಯಮಣಿ ಮತ್ತು ಶರದ್ ಕೆಲ್ಕರ್ ಈ ರಹಸ್ಯ ಕಾಪಾಡಿಕೊಂಡಿದ್ದಾರೆ. ಅವರ ಪಾತ್ರ ಅರವಿಂದ್ ಅವರು ಶ್ರೀಕಾಂತ್ ಮತ್ತು ಸುಚಿಯಿಂದ ದೂರವಿರಲು ಕೇಳಿಕೊಂಡಿದ್ದಾರೆ.

ದಪ್ಪಗಿದ್ದೀನಿ, ಕಪ್ಪಗಿದ್ದೀನಿ, ಏನಿವಾಗ; ಬಾಡಿ ಶೇಮಿಂಗ್ ವಿರುದ್ಧ ದನಿ ಎತ್ತಿದ ಪ್ರಿಯಾಮಣಿ!

ಪ್ರಿಯಾಮಣಿಯೂ ಪತಿಗಿಂತ ಸಹುದ್ಯೋಗಿ ಜೊತೆ ಆಪ್ತವಾಗಿ ಇರುವಂತಹ ದೃಶ್ಯವಿದ್ದು, ಅಭಿಮಾನಿಗಳು ಅವರನ್ನೂ ದ್ವೇಷಿಸಿ ಮೆಮ್ಸ್ ಶೇರ್ ಮಾಡುತ್ತಿದ್ದಾರೆ. ಸುಚಿ ಮತ್ತು ಅರವಿಂದ್ ಒಳಗೊಂಡ ಲೋನಾವ್ಲಾ ರಹಸ್ಯದ ಕುರಿತಾದ ಸಸ್ಪೆನ್ಸ್ ಅನ್ನು ಫ್ಯಾಮಿಲಿ ಮ್ಯಾನ್ ಸೀಸನ್ 2 ಅನಾವರಣಗೊಳಿಸುತ್ತದೆ ಎಂದು ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಎರಡನೇ ಸೀಸನ್‌ನಲ್ಲಿಯೂ ಯಾವುದೇ ಸತ್ಯ ಹೊರಗೆ ಬರಲಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ವಿಕ್ಕಿ ಕೌಶಲ್ ಒಮ್ಮೆ ಪೊಲೀಸರ ಅತಿಥಿಯಾಗಿ ಜೈಲು ಸೇರಿದ್ದರು; ಈಗ ಸೀಕ್ರೆಟ್ ಬಿಚ್ಚಿಟ್ಟ ಅನುರಾಗ್ ಕಶ್ಯಪ್!
3ನೇ ಪತ್ನಿಯಾಗುವ ಆಫರ್, ತಿಂಗಳಿಗೆ 11 ಲಕ್ಷ ರೂ ಸೇರಿ ಐಷಾರಾಮಿ ಜೀವನ ತಿರಸ್ಕರಿಸಿದ ನಟಿ