ವಿಶ್ವದ ನಂಬರ್ 1 ಶಾಪಗ್ರಸ್ತ ಹಾರರ್ ಸಿನಿಮಾ; ಶೂಟಿಂಗ್‌ನಲ್ಲಿಯೇ 20 ಜನರ ಸಾವು? ಥಿಯೇಟರ್‌ನಲ್ಲಿ ರಕ್ತದ ವಾಂತಿ!

Published : Mar 22, 2025, 01:18 PM ISTUpdated : Mar 22, 2025, 02:29 PM IST
ವಿಶ್ವದ ನಂಬರ್ 1 ಶಾಪಗ್ರಸ್ತ ಹಾರರ್ ಸಿನಿಮಾ; ಶೂಟಿಂಗ್‌ನಲ್ಲಿಯೇ 20 ಜನರ ಸಾವು? ಥಿಯೇಟರ್‌ನಲ್ಲಿ ರಕ್ತದ ವಾಂತಿ!

ಸಾರಾಂಶ

 Horror film: ವಿಶ್ವದ ನಂಬರ್ 1 ಹಾರರ್ ಸಿನಿಮಾದ ಚಿತ್ರೀಕರಣ ವೇಳೆ 20 ಜನರ ಸಾವು ಸಂಭವಿಸಿದೆ ಎನ್ನಲಾಗಿದ್ದು, ಬಿಡುಗಡೆಯಾದ ಬಳಿಕ ಥಿಯೇಟರ್‌ನಲ್ಲಿ ರಕ್ತದ ವಾಂತಿ ಮಾಡಿಕೊಂಡ ಘಟನೆಗಳು ನಡೆದಿವೆ.

cursed horror film: ಇದು ವಿಶ್ವದ ನಂಬರ್ 1  ಹಾರರ್ ಸಿನಿಮಾ ಆಗಿದ್ದು, ಥಿಯೇಟರ್‌ಗೆ ಹೋಗಲು ಜನರು ಹೆದರುತ್ತಿದ್ದರು. ಆದ್ರೂ ಜನರು ಭಯದಿಂದಲೇ ಹೋಗಿ ಚಿತ್ರವನ್ನು ನೋಡಿದ ಪರಿಣಾಮ 400 ಮಿಲಿಯನ್ ಡಾಲರ್ ಸಂಪಾದನೆ ಮಾಡಿತ್ತು. ಕತ್ತಲಿನಲ್ಲಿ ಒಬ್ಬರೇ ಈ ಸಿನಿಮಾ ನೋಡಲು ಸಾಧ್ಯವಿಲ್ಲ. ಎಂಟೆದೆ ಗುಂಡಿಗೆ ಇದ್ದವರು ಮಾತ್ರ ಈ ಚಿತ್ರವನ್ನು ನೋಡಿ ಹೊರ ಬಂದಿದ್ದರು. ಕೆಲವು ವರದಿಗಳ ಪ್ರಕಾರ, ಸಿನಿಮಾ ವೀಕ್ಷಣೆ ವೇಳೆ ಕೆಲವರು ರಕ್ತದ ವಾಂತಿ ಮಾಡಿಕೊಂಡಿದ್ರೆ,  ಒಂದಿಷ್ಟು ಮಂದಿ ಅರ್ಧಕ್ಕೆ ಹೊರಗೆ ಬಂದಿದ್ದರು. ತೀವ್ರವಾದ ಭಯಾನಕತೆಯಿಂದಾಗಿ ಈ ಸಿನಿಮಾವನ್ನು ಕೆಲವು ದೇಶಗಳು ನಿಷೇಧಿಸಿದ್ದವು. ಇಷ್ಟು ಮಾತ್ರವಲ್ಲ ಇದನ್ನು ಶಾಪಗ್ರಸ್ತ ಸಿನಿಮಾ ಅಂತಾನೂ ಕರೆಯಲಾಗುತ್ತದೆ. ಚಿತ್ರೀಕರಣದ ವೇಳೆ ಯಾರಾದ್ರೂ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರು. ಮತ್ತೆ ಕೆಲವರಿಗೆ ಗಾಯಗಳಾಗುತ್ತಿದ್ದವು ಎಂದು ವರದಿಯಾಗಿದೆ. 

ನಾವು ಹೇಳುತ್ತಿರುವ The Exorcist ಸಿನಿಮಾ 1973ರಲ್ಲಿ ಬಿಡುಗಡೆಯಾಗಿತ್ತು. ಸಿನಿಮಾದ ವಿಮರ್ಶೆಯನ್ನು ನೋಡಿದ ಜನರು ಚಿತ್ರದತ್ತ ಆಕರ್ಷಿತರಾಗಿದ್ದರು. ಹೀಗಾಗಿ ಜನರು ಚಿತ್ರಮಂದಿರದತ್ತ ದಾಂಗುಡಿ ಇರಿಸಿದ್ದರು. ಜನರಿಗೆ ಭಯ ಮೂಡಿಸುತ್ತಲೇ 400 ಮಿಲಿಯನ್ ಡಾಲರ್ ಗಳಿಕೆ ಮಾಡಿತ್ತು. The Exorcist ಸಿನಿಮಾ ಎಷ್ಟು ಭಯಾನಕವಾಗಿತ್ತು ಅಂದ್ರೆ ಜನರಿಗೆ ಸುಧಾರಿಸಿಕೊಳ್ಳಲು ಎರಡ್ಮೂರು ದಿನ ಬೇಕಾಗಿತ್ತು. 

ಕೆಲವು ವರದಿಗಳ ಪ್ರಕಾರ, The Exorcist ಸಿನಿಮಾ ವೀಕ್ಷಣೆ ವೇಳೆ ವೀಕ್ಷಕರು ಅನಾರೋಗ್ಯಕ್ಕೆ ಒಳಗಾಗಿದ್ದರು. ಕೆಲವರು ಚಿತ್ರಮಂದಿರದಲ್ಲಿ ಪ್ರಜ್ಞೆ ಕಳೆದುಕೊಂಡಿದ್ರೆ, ಒಂದಿಷ್ಟು ಮಂದಿ ರಕ್ತದ ವಾಂತಿಯನ್ನು ಮಾಡಿಕೊಂಡಿದ್ರಂತೆ. ಇನ್ನು ಯುಕೆಯ ಕೆಲ ವರದಿಗಳು, The Exorcist ಸಿನಿಮಾ ವೀಕ್ಷಿಸಿದ ಕೆಲವರು ಹೃದಯಾಘಾತದಿಂದ  ಮೃತರಾಗಿದ್ದಾರೆ ಎಂದು ಹೇಳಲಾಗುತ್ತದೆ.  ಇದೇ ಕಾರಣಕ್ಕೆ ಈ ಹಾರರ್ ಚಿತ್ರವನ್ನು ಹಲವು ದೇಶಗಳಲ್ಲಿ ನಿಷೇಧಿಸಬೇಕಾಯಿತು.

ಇದನ್ನೂ ಓದಿ: Mystery Thriller OTT: ಕೊನೆ 10 ನಿಮಿಷದ ಕ್ಲೈಮ್ಯಾಕ್ಸ್‌ಗಾಗಿಯೇ ಮಲಯಾಳಂನ ಈ ಸಿನಿಮಾ ನೋಡಬೇಕು

ಶಾಪಗ್ರಸ್ತ ಸಿನಿಮಾ!
ಇಷ್ಟು ಮಾತ್ರವಲ್ಲ ಈ ಚಿತ್ರ ಶಾಪಗ್ರಸ್ತವಾಗಿದೆ ಎಂದು ಹೇಳಲಾಗುತ್ತದೆ. ಏಕೆಂದರೆ ಪ್ರೇಕ್ಷಕರು ಮಾತ್ರ ಅಲ್ಲ, ಚಿತ್ರೀಕರಣ ವೇಳೆಯೂ ಹಲವರು ಅನೇಕ ಅಪಾಯಗಳನ್ನು ಎದುರಿಸಿದ್ದಾರಂತೆ. The Exorcist ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 20 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಈ ಸಾವುಗಳ ಬಗ್ಗೆ ಯಾರೂ ಸಹ ಮಾತನಾಡಲು ಮುಂದಾಗಿಲ್ಲ ಎಂದು  ವರದಿಗಳು ಹೇಳುತ್ತವೆ. ಪ್ರತಿದಿನ ಶೂಟಿಂಗ್ ಸಮಯದಲ್ಲಿ ಯಾರೋ ಒಬ್ಬರು ಗಾಯಗೊಳ್ಳುತ್ತಿದ್ದರು. ಚಿತ್ರ ಬಿಡುಗಡೆಯಾದ ನಂತರ ನಟರಾದ ಜ್ಯಾಕ್ ಮೆಕ್‌ಗೋವನ್ ಮತ್ತು ವಾಸಿಲಿಕಿ ಮಾಲಿಯಾರೋಸ್ ವಾಸ್ತವವಾಗಿ ನಿಧನರಾದರು. ಸಿನಿಮಾದಲ್ಲಿ ಇವರು ನಿರ್ವಹಿಸಿದ ಪಾತ್ರಗಳು ಸಾಯುತ್ತವೆ.  ಇದರ ಹಿಂದಿನ ನಿಜವಾದ ಸತ್ಯವೇನು ಎಂಬ ನಿಗೂಢತೆಯನ್ನು ಇಂದಿಗೂ ಬಹಿರಂಗಪಡಿಸಲು ಸಾಧ್ಯವಾಗಿಲ್ಲ. 

ಇದನ್ನೂ ಓದಿ: 50 ವರ್ಷಗಳಲ್ಲಿಯೇ ಇದುವರೆಗೂ ಯಾರು ಮಾಡದ ಹಾರರ್ ಸಿನಿಮಾ; ಹಲವು ದೇಶಗಳಲ್ಲಿ ಬ್ಯಾನ್ ಆದ ಚಿತ್ರ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?