1800 ಕೋಟಿ ಆಸ್ತಿಯುಳ್ಳ ನಟನ ಮಕ್ಕಳಾದ್ರೂ ಆಟೋದಲ್ಲಿ ಓಡಾಡ್ತಾರೆ; ಇಬ್ಬರ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ

Published : Feb 19, 2025, 01:39 PM ISTUpdated : Feb 20, 2025, 10:37 AM IST
1800 ಕೋಟಿ ಆಸ್ತಿಯುಳ್ಳ ನಟನ ಮಕ್ಕಳಾದ್ರೂ ಆಟೋದಲ್ಲಿ ಓಡಾಡ್ತಾರೆ; ಇಬ್ಬರ ಸಿಂಪ್ಲಿಸಿಟಿಗೆ ಫ್ಯಾನ್ಸ್ ಫಿದಾ

ಸಾರಾಂಶ

Star Hero Kids: ಬಾಲಿವುಡ್ ನಟನ ಮಕ್ಕಳು ಸಾಮಾನ್ಯರಂತೆ ಆಟೋದಲ್ಲಿ ಸುತ್ತಾಡುತ್ತಾರೆ. ಐಷಾರಾಮಿ ಜೀವನಕ್ಕೆ ಈ ನಟನ ಮಕ್ಕಳು ಒತ್ತು ನೀಡುವುದಿಲ್ಲ. ನಟನ ಪುತ್ರಿ ನಗರದಲ್ಲಿ ಸಾಮಾನ್ಯ ಹುಡುಗಿಯಂತೆ ಸುತ್ತಾಡುತ್ತಾರೆ.

ಮುಂಬೈ: ಸ್ಟಾರ್ ಕಲಾವಿದರ ಮಕ್ಕಳು ತುಂಬಾನೇ ಐಷಾರಾಮಿಯಾಗಿ ಜೀವನ ನಡೆಸುತ್ತಾರೆ. ಪ್ರವಾಸ, ಗೆಳಯರೊಂದಿಗೆ ಮೋಜು ಮಸ್ತಿ, ಬ್ರ್ಯಾಂಡೆಡ್ ಬಟ್ಟೆ, ತಿರುಗಾಡಲು ಐಷಾರಾಮಿ ಕಾರ್ ಸೇರಿದಂತೆ ವಿಲಾಸಿಮಯವಾಗಿ ಜೀವನ ನಡೆಸುತ್ತಾರೆ. ಇನ್ನು ಕೆಲ ಸ್ಟಾರ್ ಕಲಾವಿದರು ಮಕ್ಕಳನ್ನು ಓದಲು ವಿದೇಶಕ್ಕೆ ಕಳುಹಿಸುತ್ತಾರೆ. ನೆಲದ ಕಾಲಿಟ್ಟರೆ  ಎಲ್ಲಿ ಮಕ್ಕಳು ಸವೆದು ಹೋಗ್ತಾರೆ ಎಂಬ ರೀತಿಯಲ್ಲಿ ಆರೈಕೆ ಮಾಡುತ್ತಾರೆ.  ಭಾರತದ ಈ ಸ್ಟಾರ್ ಬಳಿಯಲ್ಲಿ ಲಕ್ಷುರಿ ಮನೆ, ಆರಾಮಾದಾಯಕ ಕಾರ್‌ಗಳಿವೆ. ಆದರೆ ಈ ನಟನ ಮಗ ಮತ್ತು ಮಗಳು ಸಾಮಾನ್ಯರಂತೆ ಆಟೋದಲ್ಲಿಯೇ ಸುತ್ತಾಡುತ್ತಾರೆ. ಮಾಧ್ಯಮಗಳ ಕ್ಯಾಮೆರಾ ಕಂಡು ದೂರದಿಂದಲೇ ಮುಗುಳ್ನಗೆ ಬೀರಿ ಆಟೋ ಹತ್ತಿ ಹೋಗುತ್ತಾರೆ. ನಟನ ಮಕ್ಕಳಿಬ್ಬರ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ.

ಬಾಲಿವುಡ್‌ ನಟ ಆಮೀರ್ ಖಾನ್ ಅಂದ್ರೆ ಮಿಸ್ಟರ್ ಪರ್ಫೆಕ್ಟ್ ಎಂಬ ಮಾತಿದೆ. ಸಿನಿಮಾಗಳನ್ನು ಅತ್ಯಂತ ಜಾಣತನದಿಂದ ಆಯ್ಕೆ ಮಾಡಿಕೊಳ್ಳುವ ಆಮೀರ್ ಖಾನ್ ಪ್ರತಿಯೊಂದು ವಿಷಯದಲ್ಲಿಯೂ ಪರ್ಫೆಕ್ಟ್ ಎಂಬ ಮಾತು ಸಿನಿಮಾ ಅಂಗಳದಲ್ಲಿದೆ.  ಸದ್ಯ ಒಂಟಿಯಾಗಿರೋ ಆಮೀರ್ ಖಾನ್ ಎರಡು ಮದುವೆಯಾಗಿದ್ದಾರೆ. ಮೊದಲ ಪತ್ನಿ ರೀನಾ ದತ್ತಾ ಅವರಿಗೆ ಇರಾ ಮತ್ತು ಜುನೈದ್ ಎಂಬ ಇಬ್ಬರು ಮಕ್ಕಳಿದ್ದಾರೆ. ಎರಡನೇ ಪತ್ನಿ ಕಿರಣ್‌  ರಾವ್ ಅವರಿಗೆ ಅಜಾದ್ ಹೆಸರಿನ ಮಗನಿದ್ದಾನೆ. ಡಿವೋರ್ಸ್ ಪಡೆದುಕೊಂಡಿದ್ದರೂ ಆಮೀರ್ ಖಾನ್ ಮೂವರು ಮಕ್ಕಳೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ. ಮಾಜಿ ಪತ್ನಿ ಕಿರಣ್ ರಾವ್ ಜೊತೆಯಲ್ಲಿ ಸಿನಿಮಾ ಕೆಲಸಗಳನ್ನು ಸಹ ಆಮೀರ್ ಖಾನ್ ಮಾಡುತ್ತಾರೆ. ಲಾಪತಾ ಲೇಡಿಸ್ ಸಿನಿಮಾದಲ್ಲಿ ಕಿರಣ್ ರಾವ್ ಜೊತೆಯೊಂದಿಗೆ ಆಮೀರ್ ಖಾನ್ ಕೆಲಸ ಮಾಡಿದ್ದರು. ಸಿನಿಮಾ ಪ್ರಮೋಷನ್ ವೇಳೆ ಕಿರಣ್ ರಾವ್ ಜೊತೆಯಲ್ಲಿ ಆಮೀರ್ ಖಾನ್ ಕಾಣಿಸಿಕೊಂಡಿದ್ದರು. 

ಇನ್ನು ರೀನಾ ದತ್ತಾ ಜೊತೆಯಲ್ಲಿ ಉತ್ತಮ ಒಡನಾಟವನ್ನು ಅಮೀರ್ ಖಾನ್ ಹೊಂದಿದ್ದಾರೆ. ರೀನಾ-ಆಮೀರ್ ಖಾನ್ ಮಕ್ಕಳಾದ ಇರಾ ಮತ್ತು ಜುನೈದ್ ಸಾಮಾನ್ಯ ರೀತಿಯಲ್ಲಿಯೇ ಜೀವನ ನಡೆಸುತ್ತಾರೆ. ಮನೆಯಿಂದ ಹೊರಗೆ ಬರುತ್ತಲೇ ಆಟೋ ಹಿಡಿದು ತೆರಳುತ್ತಾರೆ.  ಈಗಾಗಲೇ ಜುನೈದ್ ಖಾನ್ ನಟನಾಗಿಯೂ ಕಾಣಿಸಿಕೊಂಡಿದ್ದಾರೆ. ಜುನೈದ್ ಖಾನ್ ನಟನೆಯ 'ಮಹಾರಾಜ್' ಸಿನಿಮಾ ವಿಮರ್ಶಕರು ಮತ್ತು ವೀಕ್ಷಕರಿಂದಲೂ ವ್ಯಾಪಕ ಮೆಚ್ಚುಗೆ ಪಡೆದುಕೊಂಡಿತ್ತು. ಸೂಪರ್ ಹಿಟ್ ಸಿನಿಮಾ ನೀಡಿದರೂ ಜುನೈದ್ ಖಾನ್ ಇಂದಿಗೂ ಆಟೋದಲ್ಲಿ ಸುತ್ತಾಡುತ್ತಾರೆ.

ಇದನ್ನೂ ಓದಿ: 4 ಕೋಟಿ ಸಿನಿಮಾ ಗಳಿಸಿದ್ದು 524 ಕೋಟಿ; ಇಂದಿಗೂ ಲವರ್ಸ್ ನೋಡಲು ಇಷ್ಟಪಡೋ 1995ರ ರೊಮ್ಯಾಂಟಿಕ್ ಮೂವಿ 

ಮಗಳು ಇರಾ ಖಾನ್ ಸಹ ಮುಂಬೈನ ರಸ್ತೆಗಳಲ್ಲಿ ಸಾಮಾನ್ಯ ಹುಡುಗಿಯಂತೆ ಸುತ್ತಾಡುತ್ತಿರುತ್ತಾರೆ.  ತಾನೋರ್ವ ಸ್ಟಾರ್ ಕುಟುಂಬದ ಕುಡಿ ಅಂತ ಎಲ್ಲಿಯೂ ತೋರಿಸಿಕೊಳ್ಳಲ್ಲ. ಪಾಪಾರಾಜಿಗಳ ಕ್ಯಾಮೆರಾದಲ್ಲಿ ಇರಾ ಖಾನ್ ಸರಳತೆ ಸೆರೆಯಾಗಿರುತ್ತದೆ. ಇರಾ ಖಾನ್ ಮದುವೆಯಲ್ಲಿ ಆಡಂಬರವೂ ಸಹ ಇರಲಿಲ್ಲ. ಬಾಲಿವುಡ್‌ನಲ್ಲಿ ಮದುವೆ ಅಂದ್ರೆ ಅಲ್ಲಿ ಮನೀಶ್ ಮಲ್ಹೋತ್ರಾ ಡಿಸೈನ್ಸ್ ಬಟ್ಟೆ ಬರುತ್ತದೆ. ಆದ್ರೆ ಇರಾ ಖಾನ್ ಮದುವೆಯಲ್ಲಿ ಇದ್ಯಾವೂದು ಇರಲಿಲ್ಲ. ಇರಾ ಖಾನ್ ಗಂಡ ಸ್ಪೋರ್ಟ್ಸ್ ವಿಯರ್ ನಲ್ಲಿ ಬಂದು ಮದುವೆಯಾಗಿದ್ದರು. 

59 ವರ್ಷದ ಆಮೀರ್ ಖಾನ್ ಒಟ್ಟು ಆಸ್ತಿ 770 ಮಿಲಿಯನ್ ಡಾಲರ್ (1862 ಕೋಟಿ ರೂ.) ಎಂದು ಹೇಳಲಾಗುತ್ತದೆ. ಇಷ್ಟು ಆಸ್ತಿಯನ್ನು ಹೊಂದಿದ್ರೂ ಆಮೀರ್ ಖಾನ್ ಮಕ್ಕಳು ಮನೆಯಿಂದ ಎಲ್ಲೇ ತೆರಳಬೇಕಾದ್ರೂ ಆಟೋ ಬಳಕೆ ಮಾಡೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ. ಆಮೀರ್ ಖಾನ್ ತಮ್ಮ ನಟನೆಗೆ ಹಲವು ಫಿಲಂಫೇರ್, ನಾಲ್ಕು ನ್ಯಾಷನಲ್ ಅವಾರ್ಡ್ ಪಡೆದುಕೊಂಡಿದ್ದಾರೆ. ಭಾರತ  ಸರ್ಕಾರ 2003ರಲ್ಲಿ ಪದ್ಮಶ್ರೀ ಮತ್ತು 2010ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ.

ಇದನ್ನೂ ಓದಿ:ಕನ್ನಡದ 10 ಮೋಸ್ಟ್ ಸಸ್ಪೆನ್ಸ್ ಆಂಡ್ ಥ್ರಿಲ್ಲರ್ ಸಿನಿಮಾಗಳು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?