ಬಾಲಿವುಡ್ ನಟ ವರುಣ್ ಧವನ್ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಈ ಅವಘಡದಲ್ಲಿ ವರುಣ್ ಧವನ್ ಗಾಯಗೊಂಡಿದ್ದಾರೆ. ಇದರಿಂದ ಶೂಟಿಂಗ್ ಅರ್ಧಕ್ಕೆ ನಿಲ್ಲಿಸಿಲಾಗಿದೆ.
ಮುಂಬೈ(ಮಾ.26) ಬಾಲಿವುಡ್ ನಟ ವರುಣ್ ಧವನ್ ಸತತ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ. ಬಾರ್ಡರ್ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ವರುಣ್ ಧವನ್ ಬ್ಯೂಸಿಯಾಗಿದ್ದಾರೆ. ಕಳೆದ ತಿಂಗಳು ಶೂಟಿಂಗ್ ವೇಳೆ ಗಾಯಗೊಂಡು ಚೇತರಿಸಿಕೊಂಡಿದ್ದ ವರುಣ್ ಧವನ್ ಇದೀಗ ಎರಡನೇ ಬಾರಿಗೆ ಗಾಯಗೊಂಡಿದ್ದಾರೆ. ಶೂಟಿಂಗ್ ವೇಳೆ ಅವಘಡ ಸಂಭವಿಸಿದೆ. ಇದರಿಂದ ವರುಣ್ ಧವನ್ ಕೈಬೆರಳಿಗೆ ಗಾಯವಾಗಿದೆ. ಇತ್ತ ವರುಣ್ ಧವನ್ ಶೂಟಿಂಗ್ ಭಾಗವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ.
ವರುಣ್ ಧವನ್ ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಬೆಕೆಟ್ ತುಂಬಾ ಐಸ್ ಇಟ್ಟು ಅದರಲ್ಲಿ ಕೈ ಇಟ್ಟಿರುವ ಫೋಟೋವನ್ನು ವರುಣ್ ಧವನ್ ಹಂಚಿಕೊಂಡಿದ್ದಾರೆ. ವರುಣ್ ಧವನ್ ಕೈಬೆರಳಿನಲ್ಲಿ ಊತವಾಗಿದೆ. ತೀವ್ರ ನೋವಿನಿಂದ ಬಳಲುತ್ತಿರುವ ವರುಣ್ ಧವನ್, ಈ ನೋವು ಶಮನಗೊಳ್ಳಲು ಇನ್ನು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದ್ದಾರೆ.
9 ಸ್ಟಾರ್‌ಗಳಿದ್ರೂ ಸಿನಿಮಾ ಸೋಲನ್ನು ತಡೆಯಲಾಗಲಿಲ್ಲ; 150 ಕೋಟಿ ಬಜೆಟ್ ಚಿತ್ರದ ಬೊಕ್ಕಸಕ್ಕೆ ಸೇರಿದ್ದೆಷ್ಟು?
ಕಳೆದ ತಿಂಗಳು ವರುಣ್ ಧವನ್ ಬಾರ್ಡರ್ 2 ಚಿತ್ರದ ಶೂಟಿಂಗ್ ವೇಳೆ ಕೈಗೆ ಗಾಯ ಮಾಡಿಕೊಂಡಿದ್ದರು. ಇದು ಗಂಭೀರ ಗಾಯವಾಗಿತ್ತು. ಸರಿಸುಮಾರು ಒಂದು ತಿಂಗಳು ವರುಣ್ ಧವನ್ ವಿಶ್ರಾಂತಿ ಪಡೆದಿದ್ದರು. ಈ ಗಾಯದಿಂದ ಚೇತರಿಸಿಕೊಂಡ ವರುಣ್ ಧವನ್ ಇದೀಗ ಮತ್ತೆ ಎರಡನೇ ಬಾರಿಗೆ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಬಾರ್ಡರ್ 2 ಚಿತ್ರದ ಶೂಟಿಂಗ್ ವೇಳೆ ಆದ ಗಾಯದ ಬಳಿಕ ಇತ್ತೀಚೆಗೆ ವರುಣ್ ಧವನ್ ರಿಷಿಕೇಶದಲ್ಲಿ ರ್ಯಾಫ್ಟಿಂಗ್ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದರು. ಪೂಜಾ ಹೆಗ್ಡೆ ನಾಯಕಿಯಾಗಿರುವ ಈ ಹೇ ಜವಾನಿ ತೋ ಇಷ್ಕ್ ಹೋನಾ ಹೇ ಚಿತ್ರದಲ್ಲಿ ತೊಡಗಿಸಿಕೊಂಡಿದ್ದರು.
ಮೂಲಗಳ ಪ್ರಕಾರ ವರುಣ್ ಧವನ್ ಕೈಬೆರಳಿನ ಗಾಯ ಶಮನಗೊಳ್ಳಲು ಕನಿಷ್ಠ 8 ದಿನಗಳ ವಿಶ್ರಾಂತಿಗೆ ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಇನ್ನು ಒಂದು ವಾರ ವರುಣ್ ಧವನ್ ಶೂಟಿಂಗ್‌ನಿಂದ ದೂರ ಉಳಿಯಬೇಕಾಗಿದೆ.
ವರುಣ್ ಧವನ್ ಹಲವು ಸಿನಿಮಾಗಳಲ್ಲಿ ಬ್ಯೂಸಿಯಾಗಿದ್ದಾರೆ. ಬಾರ್ಡರ್ 2 ಚಿತ್ರದ ಶೂಟಿಂಗ್ ಅಂತಿಮ ಹಂತದಲ್ಲಿದೆ. ಇದು ಬಹುನಿರೀಕ್ಷಿತ ಚಿತ್ರವಾಗಿದೆ. ಇನ್ನು ಪೂಜಾ ಹೆಗ್ಡೆ ಜೊತೆ ಹೇ ಜವಾನಿ ತೋ ಇಷ್ಕ್ ಹೋನಾ ಹೇ ಚಿತ್ರದ ಶೂಟಿಂಗ್‌ನಲ್ಲೂ ತೊಡಗಿಸಿಕೊಂಡಿದ್ದಾರೆ. ಇದರ ಜೊತೆಗೆ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ ಅನ್ನೋ ಚಿತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಾಹ್ನವಿ ಕಪೂರ್, ರೋಹಿತ್ ಸರಫ್, ಸನ್ಯಾ ಮಲ್ಹೋತ್ರ ಸೇರಿದಂತೆ ಹಲವರು ಕಾಣಿಸಿಕೊಂಡಿದ್ದಾರೆ.
ವರುಣ್ ಧವನ್ ಇತ್ತೀಚೆಗೆ ಬಿಡುಗಡೆಯಾದ ಬೇಬೇ ಜಾನ್ ಚಿತ್ರಕ್ಕೆ ನಿರೀಕ್ಷಿತ ಸ್ಪಂದನೆ ಸಿಗಲಿಲ್ಲ. ಹೀಗಾಗಿ ಇದು ಫ್ಲಾಪ್ ಸಿನಿಮಾ ಪಟ್ಟಿಗೆ ಸೇರಿಕೊಂಡಿದೆ. ಈ ಚಿತ್ರದ ಮೂಲಕ ದಕ್ಷಿಣ ಭಾರತದ ನಟಿ ಕೀರ್ತಿ ಸುರೇಶ್ ಬಾಲಿವುಡ್‌ಗೆ ಎಂಟ್ರಿಕೊಟ್ಟಿದ್ದರು. ಆದರೆ ಈ ಸಿನಿಮಾ ಸಂಪೂರ್ಣ ಫ್ಲಾಪ್ ಆಗಿದೆ. ಇದೀಗ ಒಂದಷ್ಟು ಚಿತ್ರಗಳ ಮೂಲಕ ವರುಣ್ ಧವನ್ ಮತ್ತೆ ಅಭಿಮಾನಿಗಳ ರಂಜಿಸಲು ಸಜ್ಜಾಗಿದ್ದಾರೆ.
ವರುಣ್ ಧವನ್-ಆಲಿಯಾ ಭಟ್ ಸಿನಿಮಾ ಸಮಾಚಾರ ಇದು.. ಬಜೆಟ್‌ನ 9 ಪಟ್ಟು ಗಳಿಕೆ!