ಸಿಕಂದರ್ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಲಿಪ್ ಸಿಂಕ್ ಒಂದಿಷ್ಟು ಸರಿಯಾಗಿಲ್ಲ, ಇನ್ನು ಸ್ಕ್ರೀನ್ ಮೇಲೆ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಜೋಡಿ ತಂದೆ ಮಗಳಂತಿದೆ ಎಂದು ರೆಡ್ಡಿಟ್ ಬಕೆದಾರರು ಕಮೆಂಟ್ ಮಾಡಿದ್ದಾರೆ. ವಿಡಿಯೋ ಹಂಚಿಕೊಂಡಿರುವ ನೆಟ್ಟಿಗರು ಅಸಮಾಧಾನ ಹೊರಹಾಕಿದ್ದಾರೆ.
ಮುಂಬೈ(ಮಾ.25) ಬಾಲಿವುಡ್ ಬಹುರನೀಕ್ಷಿತ ಸಿನಿಮಾ ಸಿಕಂದರ್ ಬಿಡುಗಡೆಗೆ ಸಜ್ಜಾಗಿದೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಅಬಿನಯದ ಸಿಕಂದರ್ ಸಿನಿಮಾ ಬಾರಿ ನಿರೀಕ್ಷೆ ಹುಟ್ಟು ಹಾಕಿದೆ. ಒಂದೆಡೆ ಬಾಲಿವುಡ್ ಸಿನಿಮಾ ಸೂಪರ್ ಹಿಟ್ ಸಿನಿಮಾ ನೀಡುತ್ತಿದೆ, ಮತ್ತೊಂದೆಡೆ ರಶ್ಮಿಕಾ ಮಂದಣ್ಣ ಸಿನಿಮಾಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಇದರ ನಡುವೆ ಸಿಕಂದರ್ ಸಿನಿಮಾ ನಿರೀಕ್ಷೆ ಹೆಚ್ಟಿಸಿದೆ. ಆದರೆ ಸಿಕಂದರ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಕೆಮೆಸ್ಟ್ರಿ ಕುರಿತು ಸಾಕಷ್ಟು ಪ್ರಶ್ನೆಗಳು ಏಳುತ್ತಿದೆ. ಪ್ರಮುಖವಾಗಿ ವಯಸ್ಸಿನ ಅಂತರ ಟೀಕೆಗೂ ಕಾರಣವಾಗಿದೆ. ಇದೀಗ ರೆಡ್ಡಿಟ್ ಬಳಕೆದಾರರು, ಸಲ್ಮಾನ್ ಹಾಗೂ ರಶ್ಮಿಕಾ ಮಂದಣ್ಣ ಕೆಮೆಸ್ಟ್ರಿ ಸ್ಕ್ರೀನ್ ಮೇಲೆ ತಂದೆ ಮಂಗಳಂತಿದೆ ಎಂದು ಟೀಕಿಸಿದ್ದಾರೆ.
ಇತ್ತೀಚೆಗೆ ಸಿಕಂದರ್ ಸಿನಿಮಾದ ಹೊಸ ಟ್ರೇಲರ್ ಬಿಡುಗಡೆಯಾಗಿದೆ. ಅದ್ದೂರಿ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ದಿಗ್ಗಜರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ಟ್ರೇಲರ್ ವಿಡಿಯೋವನ್ನು ನೋಡಿದ ಹಲವು ಅಭಿಮಾನಿಗಳು ನಾಯಕ ಹಾಗೂ ನಾಯಕಿ ಕೆಮೆಸ್ಟ್ರಿ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಸಲ್ಮಾನ್ ಖಾನ್ ಹಾಗೂ ರಶ್ಮಿಕಾ ಮಂದಣ್ಣ ಸ್ಕ್ರೀನ್ ಮೇಲೆ ಬಂದಾಗ ತಂದೆ ಮಗಳನ್ನು ನೋಡಿದಂತಿದೆ. ಇವರಿಬ್ಬರ ಕೆಮೆಸ್ಟ್ರಿ ನಾಯಕ ನಾಯಕಿ ರೀತಿ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.
ರಶ್ಮಿಕಾ ಮಂದಣ್ಣ ಪತಿಯಿಂದ ಅನುಮತಿ ಸಿಗುತ್ತಲ್ವಾ? ವಯಸ್ಸಿನ ಅಂತರಕ್ಕೆ ಸಲ್ಮಾನ್ ಖಾನ್ ಉತ್ತರ
ಟ್ರೇಲರ್ ವಿಡಿಯೋ ಹಂಚಿಕೊಂಡು ಕಮೆಂಟ್ ಮಾಡುತ್ತಿದ್ದಾರೆ. ಇವರ ಕೆಮೆಸ್ಟ್ರಿ ಶೂನ್ಯ. ಇದು ಚಿತ್ರದ ನಾಯಕಿ ನಾಯಕಿ ರೀತಿ ಕಾಣುತ್ತಿಲ್ಲ. ತಂದೆ ಮಗಳು ರೋಮ್ಯಾಂಟಿಕ್ ಸೀನ್ ನೋಡಲು ಅಸಾಧ್ಯ ಎಂದಿದ್ದಾರೆ. ಇತ್ತ ರಶ್ಮಿಕಾ ಮಂದಣ್ಣ ಲಿಪ್ ಸಿಂಕ್ ಕೂಡ ಸರಿಯಾಗಿಲ್ಲ. ರಶ್ಮಿಕಾ ನಟಿಸುತ್ತಿದ್ದಾರಾ? ಇಲ್ಲಾ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದ್ದಾರೆ.
I’d appreciate it if we could avoid the Ghazini vibes 😭. They’re a bit too intense for me to handle!
byu/RADHE69SPECTER inBollyBlindsNGossip
ಒಂದಷ್ಟು ಮಂದಿ ಈ ಸಿನಿಮಾ ರಶ್ಮಿಕಾ ಒಪ್ಪಿಕೊಳ್ಳಬಾರದಿತ್ತು. ಈ ಸಿನಿಮಾ ಮೂಲಕ ರಶ್ಮಿಕಾ ಮಂದಣ್ಣ ಬಾಕ್ಸ್ ಆಫೀಸ್ ದಾಖಲೆ ಅಂತ್ಯಗೊಳ್ಳಲಿದೆ. ಕಾರಣ ಈ ಸಿನಿಮಾದಲ್ಲಿ ಕತೆ ಆಪ್ತವಾದಂತಿಲ್ಲ, ಸ್ಟಂಟ್ ಸೀನ್‌ಗಳು ಸುಮ್ಮನೆ ಮಾಡಿದಂತಿದೆ. ಯಾವುದರಲ್ಲೂ ಸ್ಪಷ್ಟತೆ ಕಾಣುತ್ತಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.
ಸಿಕಂದರ್ ಸಿನಿಮಾ ಮಾರ್ಚ್ 30 ರಂದು ಬಿಡುಗಡೆಯಾಗುತ್ತಿದೆ. ಈ ಸಿನಿಮಾ ಇದೀಗ ಯಾವ ರೀತಿ ಪ್ರತಿಕ್ರಿಯೆ ಪಡೆಯಲಿದೆ ಅನ್ನೋ ಕುತೂಹಲ ಹೆಚ್ಚಾಗಿದೆ. ಕಾರಣ ಸಿನಿಮಾ ಟ್ರೇಲರ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಶ್ಮಿಕಾ ಮಂದಣ್ಣ ಅಭಿನಯಿಸಿದ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗಿವೆ. ರಣಬೀರ್ ಕಪೂರ್ ಜೊತೆ ನಟಿಸಿದ ಆ್ಯನಿಮಲ್ ಸಿನಿಮಾ ಸೊರಗಿದ್ದ ಬಾಲಿವುಡ್ ಸಿನಿಮಾಗೆ ಚೈತನ್ಯ ನೀಡಿತ್ತು. ಇನ್ನು ಪುಷ್ಪಾ2 ಚಿತ್ರ ಹೊಸ ದಾಖಲೆ ನಿರ್ಮಾಣ ಮಾಡಿತ್ತು. ಇತ್ತೀಚೆಗೆ ಬಿಡುಗಡೆಯಾದ ಛಾವಾ ಸಿನಿಮಾ ಮತ್ತೆ ಬಾಲಿವುಡ್ ಮೇಲೆ ನಿರೀಕ್ಷೆಗಳು ಹೆಚ್ಚಾಗುವಂತೆ ಮಾಡಿತ್ತು. ಇದೀಗ ರಶ್ಮಿಕಾ ಅಭಿನಯದ ಸಿಕಂದರ್ ಸಿನಿಮಾ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಬಾಂಗ್ಲಾದೇಶದಿಂದ ಕಾಪಿ ಮಾಡುವಷ್ಟು ಬಡವಾಯ್ತಾ ಬಾಲಿವುಡ್? ಸಿಕಂದರ್ ಹಾಡಿಗೆ ಭಾರಿ ಟೀಕೆ