ಬ್ಲೌಸ್ ಹಾಕದೆ ಸೀರೆ ಧರಿಸಿದ ಆಲಿಯಾ ಭಟ್; ರಣವೀರ್‌ ಸಿಂಗ್ ಜೊತೆ ಫೇಕ್ ಫೋಟೋ ಲೀಕ್!

By Suvarna News  |  First Published Jul 3, 2023, 3:56 PM IST

ನಟಿ ಆಲಿಯಾ ಭಟ್​ ಅವರ ಬ್ಲೌಸ್​ಲೆಸ್​ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಸಕತ್​ ಟ್ರೋಲ್​ ಆಗುತ್ತಿದೆ. ಏನಿದರ ಅಸಲಿಯತ್ತು? 
 


ನಟಿ ಆಲಿಯಾ ಭಟ್​ (Alia Bhatt) ಹೆಚ್ಚಾಗಿ ಮೇಕಪ್​ ಇಲ್ಲದೆಯೇ ತಮ್ಮ ಸಹಜ ಸೌಂದರ್ಯದಿಂದ ಅಭಿಮಾನಿಗಳ ಮನ ಗೆಲ್ಲುತ್ತಲೇ ಬಂದಿದ್ದಾರೆ. ಈಚೆಗೆ ಅವರು, ಬೀಚ್​ಗೆ ತೆರಳಿ ಬೇಸಿಗೆಯನ್ನು ಆನಂದಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ನೇರಳೆ ಬಣ್ಣದ ಬಿಕಿನಿಯಲ್ಲಿ ಫೋಟೋ ಶೂಟ್​ ಮಾಡಿಸಿಕೊಂಡಿದ್ದರು. ಈ ಫೋಟೋ ನೋಡಿದ ಅಭಿಮಾನಿಗಳು  ಮೇಕಪ್ ಇಲ್ಲದೆ ಆಲಿಯಾ ಎಷ್ಟು ಚೆಂದ ಕಾಣುತ್ತಿದ್ದಾರೆ ಎಂದೆಲ್ಲಾ ಕಮೆಂಟ್ಸ್​ ಹಾಕಿದ್ದರು. ಹೀಗೆ ಆಗಾಗ್ಗೆ ನಟಿ ಮೇಕಪ್​ರಹಿತವಾಗಿಯೇ ಸುಂದರ ಕಾಣಿಸುತ್ತಾರೆ. ಒಂದು ಮಗುವಾದ ಮೇಲೂ ನಟಿಯ ಸೌಂದರ್ಯ ವೃದ್ಧಿಸುತ್ತಲೇ ಇದೆ. ಈಕೆಯ  ಫಿಟ್​ನೆಸ್​ ಮತ್ತು ನೈಸರ್ಗಿಕ ಸೌಂದರ್ಯ ಎರಡನ್ನೂ ಫ್ಯಾನ್ಸ್​ ಪ್ರಶಂಸಿಸುತ್ತಲೇ ಇರುತ್ತಾರೆ. ನಟ ರಣಬೀರ್​ ಕಪೂರ್​ ಅವರನ್ನು ಮದುವೆಯಾದ ಮೇಲೆ ಮಗಳು ರಾಹಾ ಕಪೂರ್ (Raha Kapoor)   ಜನನದ ನಂತರ, ಆಲಿಯಾ ಅನೇಕ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ ಮತ್ತು ಪ್ರತಿ ಬಾರಿಯೂ ಅವರ ನೋಟ ಮತ್ತು ಸೌಂದರ್ಯವು ಎಲ್ಲರ ಗಮನವನ್ನು ಸೆಳೆಯುತ್ತದೆ.  ಇದರಲ್ಲಿ ಅವರ ನೋ ಮೇಕಪ್ ಲುಕ್ ಜನರನ್ನು ಹೆಚ್ಚು ಆಕರ್ಷಿಸುತ್ತಿದೆ.

 ಸದ್ಯ ನಟಿ ಆಲಿಯಾ ಭಟ್​, ಹಾಲಿವುಡ್​ನಲ್ಲಿ ಬಿಜಿಯಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಮತ್ತು ದೀಪಿಕಾ ಪಡುಕೋಣೆ ನಂತರ, ಆಲಿಯಾ ಭಟ್ (Alia Bhatt) ಇತ್ತೀಚಿನ ದಿನಗಳಲ್ಲಿ ಹಾಲಿವುಡ್‌ನಲ್ಲಿ ಅಲೆಗಳನ್ನು ಎಬ್ಬಿಸಿದ ಮೂರನೇ ಭಾರತೀಯ ನಟಿ ಎನಿಸಿಕೊಂಡಿದ್ದಾರೆ. ಬ್ರಿಟಿಷ್ ಚಲನಚಿತ್ರ ನಿರ್ಮಾಪಕ ಟಾಮ್ ಹಾರ್ಪರ್ ನಿರ್ದೇಶನದ ಹಾಲಿವುಡ್ ಸ್ಪೈ ಆಕ್ಷನ್ ಥ್ರಿಲ್ಲರ್ ಚಲನಚಿತ್ರ 'ಹಾರ್ಟ್ ಆಫ್ ಸ್ಟೋನ್' ನಲ್ಲಿ 'ವಂಡರ್ ವುಮನ್' ಸ್ಟಾರ್ ಗಾಲ್ ಗಡೋಟ್ ಅವರೊಂದಿಗೆ ನಟಿಸಲಿದ್ದಾರೆ. ಇದು ಆಲಿಯಾ ಅವರ ಹಾಲಿವುಡ್ ಚೊಚ್ಚಲ ಚಿತ್ರವಾಗಿದೆ.  ಹಾರ್ಟ್ ಆಫ್ ಸ್ಟೋನ್ ಟ್ರೇಲರ್ (Heart of Stone Trailer) ನೆಟ್‌ಫ್ಲಿಕ್ಸ್‌ನ ಯೂಟ್ಯೂಬ್‌ನಲ್ಲಿ ಬಿಡುಗಡೆಯಾಗಿದ್ದು, ಇದರಲ್ಲಿ ಕಪೂರ್ ಕುಟುಂಬದ ಸೊಸೆ ಆಲಿಯಾ ಮೇಲೆ ಅಭಿಮಾನಿಗಳ ಕಣ್ಣು ನೆಟ್ಟಿದೆ. ಇತ್ತೀಚಿಗೆ ಇದರ ಟ್ರೇಲರ್​ ಬಿಡುಗಡೆಯಾಗಿತ್ತು. ಈ ಟ್ರೇಲರ್ (Trailer) ನೋಡಿದರೆ ಆಲಿಯಾ ಅವರದ್ದು ನೆಗೆಟಿವ್ ಪಾತ್ರ (Negaitve Role) ಎನ್ನುವುದು ತಿಳಿದುಬರುತ್ತದೆ.  ವಾಸ್ತವವಾಗಿ, ಸಾವೊ ಪಾಲೊದಲ್ಲಿ ನಡೆದ ನೆಟ್‌ಫ್ಲಿಕ್ಸ್ ಟುಡಮ್ 2023 ಈವೆಂಟ್‌ನಲ್ಲಿ ಬಹು ನಿರೀಕ್ಷಿತ ಚಲನಚಿತ್ರ ಹಾರ್ಟ್ ಆಫ್ ಸ್ಟೋನ್‌ನ ಟ್ರೇಲರ್ ಅನ್ನು ಬಿಡುಗಡೆ ಮಾಡಲಾಗಿದೆ. ಅದೇ ಸಮಯದಲ್ಲಿ, ಈ ಟ್ರೇಲರ್ ಅನ್ನು ನೋಡಿದ ನಂತರ, ಅಭಿಮಾನಿಗಳು ಅವರು ನೆಗೆಟಿವ್ ಪಾತ್ರದಲ್ಲಿದ್ದಾರೆ ಎಂದು ಮಾತನಾಡುತ್ತಿದ್ದಾರೆ.

Tap to resize

Latest Videos

ಅಷ್ಟಕ್ಕೂ ಆಲಿಯಾ-ರಣವೀರ್ ಒರಿಜಿನಲ್ ಪೋಟೋಸ್ ಹೇಗಿದೆ, ಇಲ್ ನೋಡಿ

ಆಲಿಯಾ ಭಟ್ ಇದೀಗ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಪತಿ ರಣವೀರ್ ಕಪೂರ್ ಜೊತೆ ತೆಗೆಸಿಕೊಂಡಿರೋ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗುತ್ತಿದೆ. ದರಲ್ಲಿ ನಟಿ ಆಲಿಯಾ ತಿಳಿ ಹಸಿರು ಸೀರೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಆ ಚಿತ್ರದಲ್ಲಿ ಅವರು ಬೌಸ್​ ಧರಿಸಿಲ್ಲ. ಒಳ ಉಡುಪು ಕೂಡ ಇಲ್ಲ. ಆಕೆಯನ್ನು ರಣವೀರ್ ಬಳಸಿ ಹಿಡಿದುಕೊಂಡಿದ್ದಾರೆ. ಈ ಚಿತ್ರದಲ್ಲಿ ಆಕೆಯ ಸ್ತನಗಳು ಕಾಣಿಸುತ್ತಿದ್ದು, ಹಲವಾರು ಮಂದಿ ಆಲಿಯಾ ಅವರನ್ನು ಟ್ರೋಲ್​ ಮಾಡುತ್ತಿದ್ದಾರೆ. ಇಷ್ಟೊಂದು ಸಕ್ಸಸ್​ ಕಾಣುತ್ತಿರುವಾಗ ಇಂಥ ಅಶ್ಲೀಲ ಎನಿಸುವ ಫೋಟೋಶೂಟ್​ (Photoshoot) ಮಾಡಿಸಿಕೊಂಡಿರುವುದು ಏಕೆ? ಅದರಲ್ಲಿ ಪರ ಪತಿಯೊಂಡನೆ ಇದು ಬೇಕಿತ್ತಾ ಎಂದಿದ್ದರೆ, ಇನ್ನು ಕೆಲವರು ಹಾಟ್​, ಸೂಪರ್​ ಎಂದೆಲ್ಲಾ ಕಮೆಂಟ್​ ಮಾಡಿದ್ದಾರೆ. 

ಆದರೆ ಅಸಲಿಗೆ ಈ ರೀತಿ ಅಶ್ಲೀಲ ಎನಿಸುವ ಬಟ್ಟೆಯನ್ನು ಆಲಿಯಾ ಹಾಕಿಕೊಂಡಿಲ್ಲ. ಇದು ಎಡಿಟೆಡ್​ ಮಾಡಿರುವ ಫೋಟೋ. ಬಿಳಿ-ಕೇಸರಿ ಬಣ್ಣದ ಸ್ಲೀವ್​ಲೆಸ್​ ಬ್ಲೌಸ್​ (sleevless) ಧರಿಸಿರುವ ಆಲಿಯಾ ಈ ಫೋಟೋಶೂಟ್​ ಮಾಡಿಸಿಕೊಂಡಿದ್ದಾರೆ. ಆದರೆ ಬ್ಲೌಸ್​ ಧರಿಸಿರುವ ಭಾಗವನ್ನು ಎಡಿಟ್​ ಮಾಡಲಾಗಿದ್ದು, ಎದೆ ಭಾಗವನ್ನು ಪ್ರದರ್ಶಿಸಲಾಗಿದೆ. ಆದರೆ ಇದರ ಬಗ್ಗೆ ಅರಿವಿಲ್ಲದವರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 

ಹಲ ವರ್ಷಗಳ ನಂತ್ರ ಖುದ್ದು ಮೇಕಪ್ ಮಾಡ್ಕೊಂಡ ಆಲಿಯಾ: ಹೊಟೇಲ್‌ನ ಕ್ರೀಂ ಚೆನ್ನಾಗಿಲ್ಲವೆಂದ ನಟಿ!

click me!