ತಿರುಪತಿಗೆ ಮುಡಿಕೊಟ್ಟ ನಟ ಧನುಷ್ ಮತ್ತು ಮಕ್ಕಳು: ಹೊಸ ಲುಕ್ ವೈರಲ್

Published : Jul 03, 2023, 03:57 PM IST
ತಿರುಪತಿಗೆ ಮುಡಿಕೊಟ್ಟ ನಟ ಧನುಷ್ ಮತ್ತು ಮಕ್ಕಳು: ಹೊಸ ಲುಕ್ ವೈರಲ್

ಸಾರಾಂಶ

ಕಾಲಿವುಡ್ ಸ್ಟಾರ್ ನಟ ಧನುಷ್ ಮತ್ತು ಮಕ್ಕಳಾದ ಯಾತ್ರ ಮತ್ತು ಲಿಂಗ ತಿರುಪತಿಗೆ ಮುಡಿಕೊಟ್ಟಿದ್ದಾರೆ. ಧನುಷ್ ಹೊಸ ಲುಕ್ ವೈರಲ್ ಆಗಿದೆ. 

ಕಾಲಿವುಡ್ ಸ್ಟಾರ್ ನಟ ಧನುಷ್ ಹೊಸ ಲುಕ್ ವೈರಲ್ ಆಗಿದೆ. ಉದ್ದ ಕೂದಲು ಮತ್ತು ದಾಡಿ ಬಿಟ್ಟುಕೊಂಡಿದ್ದ ಧನುಷ್ ಇದೀಗ ಹೊಲ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧನುಷ್ ನೋಡಿ ಫ್ಯಾನ್ಸ್ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಹೌದು ಧನುಷ್ ತಿರುಪತಿ ದೇವಸ್ಥಾನಕ್ಕೆ ಮುಡಿಕೊಟ್ಟಿದ್ದಾರೆ. ಸಂಪೂರ್ಣವಾಗಿ ತಲೆ ಕೂದಲು ಬೋಳಿಸಿಕೊಂಡಿರುವ ಧನುಷ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅಂದಹಾಗೆ ಧನುಷ್ ಕುಟುಂಬದ ಸಮೇತ ತಿರುಪತಿಗೆ ಭೇಟಿ ನೀಡಿದ್ದರು. ಇಬ್ಬರು ಮಕ್ಕಳಾದ ಯಾತ್ರ ಮತ್ತು ಲಿಂಗ ಕೂಡ ತಿಮ್ಮಪ್ಪನಿಗೆ ಮುಡಿ ಕೊಟ್ಟಿದ್ದಾರೆ. 

ಅಂದಹಾಗೆ ಧನುಷ್ ಈ ಲುಕ್ ಮುಂದಿನ ಸಿನಿಮಾಗಾಗಿನಾ ಅಥವಾ ದೇವರಿಗೆ ಹರಕೆ ತೀರಿಸಿದ್ದ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಉದ್ದ ಕೂದಲು ಮತ್ತು ದಾಡಿ ಬಿಟ್ಟುಕೊಂಡು ಓಡಾಡುತ್ತಿದ್ದ ಧನುಷ್ ನೋಡಿ ಮುಂದಿನ ಸಿನಿಮಾದ ಲುಕ್ ಎಂದು ಹೇಳಲಾಗಿತ್ತು. ಆದರೀಗ ದೇವರಿಗೆ ಮುಡಿಕೊಟ್ಟಿದ್ದು ನೋಡಿ ಧನುಷ್ ಕೂದಲು ಬಿಟ್ಟಿದ್ದು ಹರಕೆ ತೀರಿಸಲು ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.  

ಧನುಷ್ ಮಕ್ಕಳಾದ ಯಾತ್ರಾ, ಲಿಂಗ ಮತ್ತ ಪೋಷಕರಾದ ಕಸ್ತೂರಿ ರಾಜ ಮತ್ತು ವಿಜಯಲಕ್ಷ್ಮಿ ಕೂಡ ಧನುಷ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದರು. ಇಂದು (ಜುಲೈ 3) ಬೆಳಗ್ಗೆಯೇ ಧನುಷ್ ಕುಟುಂಬದ ಜೊತೆ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವಸ್ಥಾನದಿಂದ ಹೊರಬರುವಾಗ ಸಂಪೂರ್ಣ ಬದಲಾದ ಧನುಷ್ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ತಲೆ ಕೂದಲು ಮತ್ತು ದಾಡಿಯನ್ನು ತೆಗೆಸಿದ್ದಾರೆ. ಮೀಸೆಯನ್ನು ಉದ್ದವಾಗಿ ಹಾಗೆ ಉಳಿಸಿಕೊಂಡಿದ್ದಾರೆ. ಧನುಷ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.   

ಧನುಷ್​, ವಿಜಯ್​ ಸೇತುಪತಿ, ಅಮಲಾ ಸೇರಿದಂತೆ 14 ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್​ ಶಾಕ್​!

ಧನುಷ್ ಕಳೆದ ಹಲವು ತಿಂಗಳುಗಳಿಂದ ಕ್ಯಾಪ್ಟನ್ ಮಿಲ್ಲರ್ ಚಿತ್ರದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.  ಅಂದಹಾಗೆ ಕ್ಯಾಪ್ಟನ್ ಮಿಲ್ಲರ್ ಚಿತ್ರದಲ್ಲಿ ಧನುಷ್ ಉದ್ದ ಕೂದಲು ಮತ್ತು ದಾಡಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕೂದಲು ತೆಗೆಸಿರುವುದನ್ನು ನೋಡಿ ಅಭಿಮಾನಿಗಳು ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿದಿದೆಯೇ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಬಾಬಾ ರಾಮ್‌ದೇವ್‌ ಆಗಿಬಿಟ್ರಲ್ಲಾ ಧನುಷ್​! ಏನಪ್ಪಾ ವಿಷ್ಯ ಅಂತಿದ್ದಾರೆ ಫ್ಯಾನ್ಸ್​

ಇತ್ತೀಚೆಗಷ್ಟೆ ಕ್ಯಾಪ್ಟನ್ ಮಿಲ್ಲರ್ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಧನುಷ್ ಲುಕ್ ಸಿಕ್ಕಾಪಟ್ಟೆ ವೈರಲ್ ಆಗಿದೆ. ಕ್ಯಾಪ್ಟನ್ ಮಿಲ್ಲರ್ 1930 ರ ಕಾಲದ ಕಥೆಯಾಗಿದೆ. ಈ ಸಿನಿಮಾದಲ್ಲಿ ಕನ್ನಡದ ಸ್ಟಾರ್ ಶಿವರಾಜ್ ಕುಮಾರ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಿವಣ್ಣ ಅವರನ್ನು ತಮಿಳು ಸಿನಿಮಾದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.  

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚಿರಂಜೀವಿ ನಂತರ ಜೂ.ಎನ್‌ಟಿಆರ್ ಟಾರ್ಗೆಟ್? ಸಂಚಲನ ಮೂಡಿಸಿದ ನಿರ್ಧಾರ, ಇನ್ಮುಂದೆ ಹೀಗೆ ಮಾಡಿದ್ರೆ ಕಷ್ಟ!
ರಾಜ್ ಜೊತೆ ರೊಮ್ಯಾಂಟಿಕ್ ಹನಿಮೂನ್ ಟ್ರಿಪ್ ಪ್ಲಾನ್ ಮಾಡಿದ ಸಮಂತಾ.. ಎಲ್ಲಿಗೆ ಹೋಗ್ತಿದ್ದಾರೆ?