ವಿಜಯ್-ಉದಯನಿಧಿ ಸ್ಟಾಲಿನ್ ಫ್ರೆಂಡ್​ಶಿಪ್ ಕಹಾನಿ; ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿದ್ದು ಹೇಗೆ?

Published : May 14, 2026, 06:02 PM ISTUpdated : May 14, 2026, 06:04 PM IST
Thalapathy Vijay Udayanidhi Stalin

ಸಾರಾಂಶ

ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಜಯ್ ಓದಿದ್ದರು. ಅದೇ ಕಾಲೇಜಿನಲ್ಲಿ ಉದಯನಿಧಿ ಸ್ಟಾಲಿನ್ ಕೂಡ ವಿದ್ಯಾಭ್ಯಾಸ ಮಾಡಿದ್ರು. ಅಷ್ಟೆ ಅಲ್ಲ 18 ವರ್ಷಗಳ ಹಿಂದೆ ರೆಡ್ ಜೈಂಟ್ಸ್ ಪ್ರೊಡಕ್ಷನ್ಸ್ ಅಡಿಯಲ್ಲಿ ಮೊದಲ ಸಿನಿಮಾ ಕುರುವಿ. ಈ ಚಿತ್ರದಲ್ಲಿ ಹೀರೋ ದಳಪತಿ ವಿಜಯ್, ನಾಯಕಿ ತ್ರಿಷಾ..

ವಿಜಯ್​-ಉದಯನಿಧಿ ಮಧ್ಯೆ ವೈ ಮನಸ್ಸು ಮೂಡಿದ್ದು ಏಕೆ?

ಓದಿದ್ದು ಒಂದೇ ಶಾಲೆ.. ಓದುವಾಗ್ಲೆ ಇಬ್ಬರು ಆತ್ಮೀಯ ಸ್ನೇಹಿತರು. ಆದ್ರೆ ರಾಜಕೀಯಕ್ಕೆ ಬಂದ್ಮೇಲೆ ಇಬ್ಬರು ಬದ್ಧ ವೈರಿಗಳಾದ್ರೆ ಹೇಗಿರುತ್ತೆ. ಅದೊಂದ್​ ರೀತಿ ಸ್ನೇಹಿತರ ಸವಾಲ್​ ತರ ಕಾಣುತ್ತೆ ಅಲ್ವಾ.? ಈಗ ದ್ರಾವಿಡರ ನಾಡಿನ ರಾಜಕಾರಣಲ್ಲಿ ಅದೇ ಆಗಿದೆ. ಚಿಕ್ಕವರಾಗಿದ್ದಾಗ ಆಟ ಪಾಠದಲ್ಲಿ ಜೊತೆಗಿದ್ದ ಸ್ನೇಹಿತರು ಈಗ ಬದ್ಧ ವೈರಿಗಳಾಗಿ ಎದುರಾಗಿದ್ದಾರೆ. ಅವರೇ ದಳಪತಿ ವಿಜಯ್ ಹಾಗು ಉದಯನಿಧಿ ಸ್ಟಾಲಿನ್. ಈ ಸ್ನೇಹಿತರ ಸವಾಲಿನ ಕಥೆಯನ್ನ ನೋಡೋಣ ಬನ್ನಿ...

ದಳಪತಿ ವಿಜಯ್ ಒಂದೇ ಏಟಿಗೆ ತಮಿಳುನಾಡು ದೈತ್ಯ ಪಕ್ಷಗಳಿಗೆಲ್ಲಾ ಮಣ್ಣು ಮುಕ್ಕಿಸಿದ್ದಾರೆ. ಡಿಎಂಕೆ, ಎಐಡಿಎಂಯಂತಹ ಘಟಾನುಘಟಿಗಳೇ ವಿಜಯ್ ಎದುರು ಪತರಗುಟ್ಟಿದ್ದಾರೆ. ತಮಿಳುನಾಡಿನಲ್ಲಿ ಇನ್ನೇನಿದ್ರು ದಳಪತಿ ದರ್ಬಾರ್​ ಒಂದೇ ನಡೆಯೋದು.

ತಮಿಳುನಾಡು ವಿಧಾನ ಸಭೆಯಲ್ಲಿ ಸ್ನೇಹಿತರ ಸವಾಲ್

ರಾಜಕೀಯ ಅಂದ ಮೇಲೆ ಸ್ನೇಹಿತರು ಶತ್ರುಗಳಾಗ್ತಾರೆ. ಬದ್ಧ ಶತ್ರುಗಳು ಸ್ನೇಹಿತರೂ ಆಗುತ್ತಾರೆ. ವಿಜಯ್​ ಮುಖ್ಯಮಂತ್ರಿ ಆಗಿದ್ದೇ ತಡ. ಈಗ ದ್ರಾವಿಡರ ನಾಡಿನಾಧ್ಯಂತ ದಳಪತಿ ಸ್ನೇಹ ಮತ್ತು ವೈರತ್ವದ ಕತೆಯೊಂದು ದೊಡ್ಡ ಚರ್ಚೆ ಹುಟ್ಟುಹಾಕಿದೆ. ತಮಿಳುನಾಡು ವಿಧಾನಸಭೆಯಲ್ಲಿ ಸ್ನೇಹಿತರ ಸವಾಲ್​ ಶುರುವಾಗಿದೆ. ಆ ಗೆಳೆಯರೇ ದಳಪತಿ ವಿಜಯ್ ಹಾಗು ಉದಯನಿಧಿ ಸ್ಟಾಲಿನ್..

ಕರುಣಾನಿಧಿ ಮೊಮ್ಮಗ, MK ಸ್ಟಾಲಿನ್ ಮಗ ಉದಯನಿಧಿ ಸ್ಟಾಲಿನ್ ಹಿಂದಿನ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ಆಗಿದ್ದವರು. ಈಗ ವಿಜಯ್ ಎದುರು ವಿರೋಧ ಪಕ್ಷದ ಸ್ಥಾನದಲ್ಲಿ ಕೂತಿದ್ದಾರೆ. ವಿಜಯ್ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆಗುತ್ತಾರೆ ಎಂದು ಕನಸು ಮನಸ್ಸಿನಲ್ಲಿ ಕೂಡ ಎಣಿಸಿರದ ಉದಯನಿಧಿ ಸ್ಟಾಲಿನ್ ಈಗ ವಿಜಯ್​ರ ಎದುರು ವಿರೋಧ ಪಕ್ಷದಲ್ಲಿ ಕೂತಿದ್ದಾರೆ. ಆದ್ರೆ ಇವರಿಬ್ಬರು ಬಾಲ್ಯದಲ್ಲೇ ಸ್ನೇಹಿತರು ಅಂದ್ರೆ ನೀವು ನಂಬುತ್ತೀರಾ..? ಅದು ನಿಜ..

ಒಂದೇ ಕಾಲೇಜಿನ ಹಳೇ ಸ್ನೇಹಿತರು ವಿಜಯ್-ಉದಯನಿಧಿ

ಹೌದು, ವಿಧಾನಸಬೆಯಲ್ಲಿ ವಿರೊಧಿಗಳಾಗಿರೋ ವಿಜಯ್ ಹಾಗು ಉದಯನಿಧಿ ಸ್ಟಾಲಿನ್ ಒಂದೇ ಕಾಲೇಜಿನಲ್ಲಿ ಓದಿದ್ದ ಹಳೇ ಸ್ನೇಹಿತರು. ಆದ್ರೆ ಓದುವಾಗ ಉದಯನಿಧಿಗಿಂತ 51 ವರ್ಷದ ವಿಜಯ್ ಸೀನಿಯರ್ ಆಗಿದ್ರು. ವಿಜಯ್​​ಗಿಂತ ಮೂರು ವರ್ಷ ಕಿರಿಯರಾಗಿರೋ ಉಯದನಿಧಿ ಸ್ಟಾಲಿನ್ ರಾಜಕೀಯದಲ್ಲಿ ಸೀನಿಯರ್​ ಆಗಿದ್ದಾರೆ. ಈ ಬಗ್ಗೆ ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿರೋ ಉದಯನಿಧಿ, ಇವತ್ತು ಮುಖ್ಯಮಂತ್ರಿ ಆಗಿರುವವರು ಹಾಗೂ ವಿರೋಧ ಪಕ್ಷದಲ್ಲಿ ಕೂತಿರುವ ನಾನು ಒಂದೇ ಕಾಲೇಜಿನ ಹಳೆಯ ವಿದ್ಯಾರ್ಥಿಗಳು" ಆದರೆ ಸರ್ಕಾರ ನಡೆಸುವುದರಲ್ಲಿ ಡಿಎಂಕೆ ಸೀನಿಯರ್ ಬ್ಯಾಚ್ ಎನ್ನುವುದು ನಿಮಗೆಲ್ಲಾ ಗೊತ್ತಿದೆ.. 1965ರಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದಿತ್ತು. ಹಾಗಾಗಿ ನಾವೇ ಸೀನಿಯರ್ಸ್.. ಆ ಲೆಕ್ಕದಲ್ಲಿ ನಮ್ಮ ಜ್ಞಾನ ಹಾಗೂ ಅನುಭವ ಹಂಚಿಕೊಳ್ಳಲು ಸಿದ್ಧರಿದ್ದೇವೆ. ಅದನ್ನು ಸ್ವೀಕರಿಸಲು ನೀವು ಸಿದ್ಧವಾಗಿರಿ ಎಂದಿದ್ದಾರೆ.

ವಿಜಯ್-ತ್ರಿಷಾ ಸಿನಿಮಾ ನಿರ್ಮಾಣ ಮಾಡಿದ್ದ ಉದಯನಿಧಿ ಸ್ಟಾಲಿನ್..!

ಚೆನ್ನೈನ ಲೊಯೋಲಾ ಕಾಲೇಜಿನಲ್ಲಿ ವಿಜಯ್ ಓದಿದ್ದರು. ಅದೇ ಕಾಲೇಜಿನಲ್ಲಿ ಉದಯನಿಧಿ ಸ್ಟಾಲಿನ್ ಕೂಡ ವಿದ್ಯಾಭ್ಯಾಸ ಮಾಡಿದ್ರು. ಅಷ್ಟೆ ಅಲ್ಲ 18 ವರ್ಷಗಳ ಹಿಂದೆ ರೆಡ್ ಜೈಂಟ್ಸ್ ಪ್ರೊಡಕ್ಷನ್ಸ್ ಎಂಬ ಸಿನಿಮಾ ನಿರ್ಮಾಣ ಸಂಸ್ಥೆಯನ್ನು ಉದಯನಿಧಿ ಸ್ಟಾಲಿನ್ ಹುಟ್ಟುಹಾಕಿದ್ರು. ಆ ಸಂಸ್ಥೆಯ ಮೊದಲ ಸಿನಿಮಾ ಕುರುವಿ. ಈ ಚಿತ್ರದಲ್ಲಿ ಹೀರೋ ದಳಪತಿ ವಿಜಯ್ ನಾಯಕಿ ತ್ರಿಷಾ..

ಕುರುವಿ ಸಿನಿಮಾ ಬಳಿಕ ವಿಜಯ್​-ಉದಯನಿಧಿ ಮಧ್ಯೆ ವೈಮನಸ್ಸು..!

ವಿಜಯ್-ತ್ರಿಷಾ ನಟನೆಯ ಕರುವಿ ಸಿನಿಮಾ ದೊಡ್ಡ ಹಿಟ್ ಏನು ಆಗ್ಲಿಲ್ಲ. ಆದ್ರೆ ಈ ಕಾಂಬಿನೇಷನ್ ಗಟ್ಟಿಯಾಗೋಕೆ ಒಂದು ಮೆಟ್ಟಿಲಾಗಿದಂತು ಸುಳ್ಳಲ್ಲ. ಈ ಸಿನಿಮಾ ಟೈಮ್​​​ನಲ್ಲಿ ವಿಜಯ್ ಹಾಗು ಉದಯನಿಧಿ ಸ್ಟಾಲಿನ್ ಒಳ್ಳೆಯ ಸ್ನೇಹಿತರಾಗಿದ್ರು. ಆದ್ರೆ ನಮ್ಮಿಬ್ಬರ ಮಧ್ಯೆ ಯಾರೋ ತಂದಿಟ್ರು ಅಂತ ಹಿಂದೊಮ್ಮೆ ಉದಯನಿಧಿ ಹೇಳಿದ್ರು. ಹೀಗಾಗಿ ಹಿಂದೊಮ್ಮೆ ಆಪ್ತ ಸ್ನೇಹಿತಯರಾಗಿದ್ದವರು ಈಗ ರಾಜಕೀಯ ಎದುರಾಳಿಗಳಾಗಿದ್ದು, ವಿಜಯ್ ಹಾಗು ಉದಯನಿಧಿ ಸ್ಟಾಲಿನ್ ಪೈಪೋಟಿ ಹೇಗಿರಲಿದೆ ಅನ್ನೋ ಕುತೂಹಲ ಇದೆ.

ಹೆಚ್ಚಿನ ಮಾಹಿತಿಗೆ ಸಿನಿಮಾ ಹಂಗಾಮ ವಿಡಿಯೋ ನೋಡಿ..

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!
ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಮಾಡಿರುವ 'ಕರುಪ್ಪು' ನಟ ಸೂರ್ಯ ಒಟ್ಟೂ ಆಸ್ತಿ ಎಷ್ಟು ಗೊತ್ತಾ?