ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!

Published : May 14, 2026, 04:36 PM IST
Jayalalithaa Thalapathy Vijay

ಸಾರಾಂಶ

ತಲೈವಾ ಚಿತ್ರದ ಪೋಸ್ಟರ್ಗಳಲ್ಲಿ ಹಾಗೂ ಹಾಡುಗಳಲ್ಲಿ Time to Lead ಅನ್ನೋ ಸಾಲುಗಳನ್ನು ಬಳಸಲಾಗಿತ್ತು. ಇದನ್ನೇ ನೇರವಾಗಿ ತಮಗೆ ಸವಾಲು ಎಂದು ಪರಿಗಣಿಸಿದ ಅಂದಿನ ಜಯಲಲಿತಾ ಸರ್ಕಾರ ಚಿತ್ರಕ್ಕೆ ಬಾಂಬ್ ಬೆದರಿಕೆ ಇದೆ ಅನ್ನೋ ಕಾರಣಗಳನ್ನು ನೀಡಿ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೆಯನ್ನೇ ನಿಲ್ಲಿಸಿತ್ತು.

ವಿಜಯ್​- ಜಯಲಲಿತಾ ಮಧ್ಯೆ ಇತ್ತು ದೊಡ್ಡ ವೈಶಮ್ಯ!

ತಮಿಳುನಾಡಿನಲ್ಲಿ ದಳಪತಿ ವಿಜಯ್ (Thalapathy Vijay) ಮೇನಿಯಾ ಜೋರಾಗಿದೆ. ಒಂದು ಕಾಲದಲ್ಲಿ ವಿಜಯ್​​ ಮೇಲೆ ಅಂತರ್ ಯುದ್ಧ ಮಾಡಿದ್ದ ಮಹಾನ್ ನಾಯಕಿ ಜಯಲಲಿತಾ ಕೋಟೆಯನ್ನೇ ಕೆಡವಿದ್ದಾರೆ ವಿಜಯ್. ಜಯಲಲಿತಾ ಆಡಳಿತದಲ್ಲಿ ವಿಜಯ್ ತುಂಬಾನೇ​ಸೈಲೆಂಟಾಗಿದ್ರು.. ಆತನ ಇರುವಿಕೆಯನ್ನು ಹೇಳ್ತಿದಿದ್ದು ಸಿನಿಮಾಗಳು ಮಾತ್ರವೇ.. ದಶಕದ ಕಾಲ ವಿಜಯ್​​ ಸೈಲೆಂಟಾಗಿದಿದ್ದು ಏಕೆ..? ಇದೀಗ ಆತನ ಪಕ್ಷ ಅಧಿಕಾರಕ್ಕೆ ಬರ್ತಿದ್ದಾಗೆಯೇ ಅಮ್ಮ ಕಟ್ಟಿದ್ದ ಕೋಟೆ ಉರುಳಿದ್ದು ಹೇಗೆ.. ನೋಡೋಣ ಬನ್ನಿ..

ಕೋಟಿ ಕಟ್ಟಿ ಮೆರದೋರಲ್ಲಾ ಏನಾದರು ಅಂದ್ರೆ ಅವರೆಲ್ಲಾ ಮಣ್ಣಾದರು ಅನ್ನೋ ಮಾತಿದೆ. ಈಗ ತಮಿಳುನಾಡು ರಾಜಕೀಯ ಚದುರಂಗದಾಟದಲ್ಲಿ ಇದು ಅಕ್ಷರಶಹ ನಿಜ ಆಗ್ತಿದೆ. ಯೆಸ್, ತಮಿಳುನಾಡಿನ ರಾಜಕೀಯವನ್ನು ಅಷ್ಟು ಸಲೀಸಾಗಿ ಅರ್ಥಮಾಡಿಕೊಳ್ಳೊದಕ್ಕೆ ಆಗೋದಿಲ್ಲ.. ಯಾಕಂದ್ರೆ, ಅಲ್ಲಿನ ರಾಜಕೀಯ ಸೇಡಿನಿಂದಲೇ ಶುರುವಾಗಿ ಸೇಡಿನಿಂದಲೇ ಮುಗಿಯುತ್ತದೆ. ಇದೀಗ ಅಂತಹದೊಂದು ಘಟನೆ ವಿಜಯ್​ ರಾಜಕೀಯ ಬದುಕಲ್ಲೂ ನಡೆದಿದೆ.

ತಮಿಳುನಾಡು ತಲೈವಿ ಕೋಟೆಗೆ ದಳಪತಿ ಮುತ್ತಿಗೆ; ಅಮ್ಮನ ದೊಡ್ಡ ಸಾಮ್ರಾಜ್ಯಕ್ಕೆ ಬೆಂಕಿ ಹಚ್ಚಿದ ವಿಜಯ್!

ಹೌದು, ದಳಪತಿ ವಿಜಯ್​ ತಮಿಳುನಾಡು ರಾಜಕೀಯದಲ್ಲಿ ಈಗಷ್ಟೆ ಜನ್ಮ ತಾಳಿದ್ದಾರೆ. ಆದ್ರೆ ವಿಜಯ್ ಉದಯದಿಂದ ತಮಿಳರ ಅಮ್ಮ ಜಯಲಲಿತಾ ಕಣ್ಣಿಟ್ಟು ಕಾಪಾಡಿದ್ದ ದೊಡ್ಡ ಸಾಮ್ರಾಜ್ಯ ಪತನದ ಅಂಚಿಕೆ ಬಂದಿದೆ. ಯಾಕಂದ್ರೆ ವಿಜಯ್ ರ ಟಿವಿಕೆ ಪಕ್ಷ ಬೆಂಬಲಸಿ ಜಯಲಲಿಯಾರ ಎಐಎಡಿಎಕೆ ಪಕ್ಷದ ಬರೋಬ್ಬರಿ 30 ಜನ ಶಾಸಕರು ವಿಜಯ್​ ಜೊತೆ ಕೈ ಜೋಡಿಸಿದ್ದಾರೆ.

30 ಜನರಿಂದ ಬಗೆ ಹರೀತು ದಶಕದ ಹಿಂದಿನ ಸೇಡು..!

ಯೆಸ್, ನಟ ದಳಪತಿ ವಿಜಯ್ ಹಾಗು ನಟಿ ರಾಜಕಾರಣಿ ಜಯಲಲಿತಾ ಮಧ್ಯೆ ದಶಕಗಳ ಹಿಂದಿನ ಸೇಡೊಂದಿತ್ತು. ಆದ್ರೆ ಇದು ಸೈದ್ಧಾಂತಿಕ ವೈಷಮ್ಯ ಅಲ್ಲ. ಅದೊಂತರಾ ಪರ್ಸನಲ್​ಜಿದ್ದು. ಈ ಫೈಟ್​​ ಶುರುವಾಗಿದ್ದು ಜಯಲಲಿತಾ ಹಾಗೂ ವಿಜಯ್ ಮಧ್ಯೆ. ಆದ್ರೆ, ಈ ವಾರ್​ಸೈಲೆಂಟಾಗಿಯೇ ಇತ್ತು.. ಹಾಗೂ ದಶಕಗಳ ಕಾಲ ಮುಂದ್ವರೆದಿತ್ತು. ಈಗ ಎಐಎಡಿಎಂಕೆ ಪಕ್ಷದ 30 ಜನ ಶಾಸಕರು ವಿಜಯ್ ರ ಟಿವಿಕೆ ಪಕ್ಷದ ಜೊತೆ ನಿಂತು ಜಯಲಲಿತಾ ಕೋಟೆಯನ್ನ ಕೆಡವಿದ್ದಾರೆ.

ನಟಿ, ರಾಜಕಾರಣಿ ಜಯಲಲಿತಾ-ವಿಜಯ್​ ಮಧ್ಯೆ ಇದ್ದ ದ್ವೇಷ ಏನು..?

ನಟ ವಿಜಯ್ ಹಾಗೂ ಜಯಲಲಿತಾ ಅವರ ನೇತೃತ್ವದ AIADMK ಸರ್ಕಾರದ ನಡುವಿನ ಸಂಘರ್ಷ ತಮಿಳುನಾಡು ರಾಜಕೀಯ ಹಾಗೂ ಸಿನಿಮಾ ಲೋಕದವ್ರಿಗೆ ಗೊತ್ತಿರುವ ವಿಷ್ಯವೇ.. ಈ ಇಬ್ಬರ ನಡ್ವೆ ಫೈಟ್​​ ಶುರುವಾಗಿದ್ದಕ್ಕೆ ಕಾರಣ ಆ ಒಂದು ಸಿನಿಮಾದ ಟೈಟಲ್​ಹಾಗೂ ಹಾಡು.. ಅದೊಂದು ಕಾರಣಕ್ಕೆ ವಿಜಯ್​​ ದಶಕದ ಹಿಂದೆ ಸಾಕಷ್ಟು ಅವಮಾನ ಹಾಗೂ ಅಡೆತಡೆಗಳನ್ನು ಅನುಭವಿಸಿದ್ದಾರೆ..

ಚೆನ್ನೈನ ನೆಹರೂ ಸ್ಟೇಡಿಯಂನಲ್ಲಿ 2013ಕ್ಕೆ ಭಾರತೀಯ ಚಿತ್ರರಂಗ 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಅದ್ದೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅವತ್ತು ತಮಿಳುನಾಡಿನ ಸಿಎಂ ಆಗಿದ್ದವರು ಜಯಲಲಿತಾ. ರಾಜಕೀಯ ವಿಷಯಕ್ಕೆ ಬಂದರೆ ತಮ್ಮ ವೈರಿಗಳನ್ನು ಅವಮಾನಿಸುವುದರಲ್ಲಿ ಹಾಗೂ ರಾಜಕೀಯವಾಗಿ ಮುಗಿಸುವುದರಲ್ಲಿ ಜಯಲಲಿತಾ ಎತ್ತಿದ ಕೈ ಅನ್ನೋದು ಇಡೀ ತಮಿಳು ಜಗತ್ತಿಗೆ ಗೊತ್ತು. ವಿಜಯ್ ವಿಷಯದಲ್ಲೂ ಅವತ್ತು ಅದೇ ಆಗಿತ್ತು..

ತಲೈವಾ ಸಿನಿಮಾ ಹಾಡಿನ ಸಾಲು.. ಕೆರಳಿದ್ದ ಪುರುಚ್ಚಿ ತಲೈವಿ..!

ಆಗಷ್ಟೇ ದಳಪತಿ ವಿಜಯ್ ನಟನೆಯ ತಲೈವಾ ಸಿನಿಮಾ ರಿಲೀಸ್ ಆಗಿತ್ತು. ಇಡೀ ಚಿತ್ರ ವಿಜಯ್ ರಾಜಕೀಯ ಪ್ರವೇಶಿಸುವ ಮಹತ್ವಾಕಾಂಕ್ಷೆಯನ್ನು ಸ್ಪಷ್ಟವಾಗಿ ತೋರಿಸಿತ್ತು. ಈ ಸಿನಿಮಾದಲ್ಲಿ ಹಾಡಿನಲ್ಲಿ ಮುಂದೊಂದು ದಿನ ನಾನೇ ಸಿಎಂ ಅನ್ನೋ ಸಾಲುಗಳಿದ್ವು.. ಇದಿಷ್ಟು ಸಾಕಿತ್ತು ಜಯಲಲಿತಾ ವಿಜಯ್ ಮೇಲೆ ಧ್ವೇಷ ಕಾರೋಕೆ ಕಾರಣ. ಆಗ ಚಿತ್ರರಂಗದ ಶತಮಾನೋತ್ಸವ ಸಮಾರಂಭದಲ್ಲಿ ವಿಜಯ್ ರನ್ನು ಅವಮಾನಿಸಿಯೇ ಬಿಟ್ಟಿದ್ರು ಪುರುಚ್ಚಿ ತಲೈವಿ...

ಬಿಗ್​ ಸ್ಟಾರ್​ ವಿಜಯ್​​ಗೆ ಜಯಲಲಿತಾರಿಂದ ಆಗಿತ್ತು ಅವಮಾನ..!

ಅವತ್ತಿಗೆ ಬಿಗ್​​ ಸ್ಟಾರ್​​ ಆಗಿದ್ದ ವಿಜಯ್, ಸಾಕಷ್ಟು ಹಿಟ್​​ ಸಿನಿಮಾಗಳನ್ನು ಕೊಟ್ಟಿದ್ರು.. ತಮಿಳುನಾಡಿನಲ್ಲಿ ಮಾಸ್​​ ಹೀರೋ ಆಗಿ ಬೆಳೆದಿದ್ರು. ವಿಜಯ್​ಬರ್ತಾರೆ ಅಂತ ಸಾವಿರಾರು ಅಭಿಮಾನಿಗಳು ತಾ ಮುಂದು ನಾ ಮುಂದು ಅಂತ ಮುಗಿಬಿಳ್ತಿದ್ರು. ಹೀಗಿರುವಾಗ ಕಾರ್ಯಕ್ರಮದಲ್ಲಿ ವಿಜಯ್ ಗೆ ಹಿಂದಿನ ಸೀಟ್ ನಿಗದಿಪಡಿಸಲಾಗಿತ್ತು.

ತಲೈವಾ ಸಿನಿಮಾ ರಿಲೀಸ್​ಗೂ ತೊಂದರೆ ಕೊಟ್ಟಿದ್ದ ಅಮ್ಮನ ಸರ್ಕಾರ..!

ತಲೈವಾ ಚಿತ್ರದ ಪೋಸ್ಟರ್ಗಳಲ್ಲಿ ಹಾಗೂ ಹಾಡುಗಳಲ್ಲಿ Time to Lead ಅನ್ನೋ ಸಾಲುಗಳನ್ನು ಬಳಸಲಾಗಿತ್ತು. ಇದನ್ನೇ ನೇರವಾಗಿ ತಮಗೆ ಸವಾಲು ಎಂದು ಪರಿಗಣಿಸಿದ ಅಂದಿನ ಜಯಲಲಿತಾ ಸರ್ಕಾರ ಚಿತ್ರಕ್ಕೆ ಬಾಂಬ್ ಬೆದರಿಕೆ ಇದೆ ಅನ್ನೋ ಕಾರಣಗಳನ್ನು ನೀಡಿ ತಮಿಳುನಾಡಿನಲ್ಲಿ ಸಿನಿಮಾ ಬಿಡುಗಡೆಗೆಯನ್ನೇ ನಿಲ್ಲಿಸಿತ್ತು. ಯಾಕಂದ್ರೆ ತಲೈವಾ ಸಿನಿಮಾದ ಸಾಲುಗಳು ವಿಜಯ್ ರಾಜಕೀಯ ಪ್ರವೇಶದ ಮುನ್ಸೂಚನೆ ಅಂತಾನೇ ಭಾವಿಸಲಾಗಿತ್ತು.

ವಿಜಯ್​ ಬೇಟಿಗೆ ಅವಕಾಶ ಕೊಟ್ಟಿರಲಿಲ್ಲ ಜಯಲಲಿತಾ..!

ತಲೈವಾ ಸಿನಿಮಾ ಬಿಡುಗಡೆಗೆ ತೊಂದರೆ ಆದಾಗ ದಳಪತಿ ವಿಜಯ್ ಅಂದಿನ ಮುಂಖ್ಯಮಂತ್ರಿ ಜಯಲಲಿತಾರನ್ನ ಬೇಟಿ ಮಾಡೋದಕ್ಕೆ ಭಾರಿ ಪ್ರಯತ್ನ ಪಟ್ಟಿದ್ರು. ಆದ್ರೆ ಅವತ್ತು ಜಯಲಲಿತಾ ಅದಕ್ಕೆ ಅವಕಾಶವನ್ನೇ ಕೊಟ್ಟಿರಲಿಲ್ಲ. ಕೊನೆಗೆ ವಿಜಯ್ ವಿಡಿಯೋ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕಾಯಿತು. ಕೊನೆಗೆ ತಲೈವಾ ಸಿನಿಮಾ ಬೇರೆ ಎಲ್ಲಾ ರಾಜ್ಯಗಳಲ್ಲೂ ರಿಲೀಸ್ ಆದ ಮೇಲೆ ತಮಿಳುನಾಡಿನಲ್ಲಿ ಬಿಡುಗಡೆಗೆ ಅವಕಾಶ ಸಿಕ್ತು. ಭಟ್ ಈಗ ವಿಜಯ್​ ಆಟ ಶುರುವಾಗಿದೆ. ಅಮ್ಮ ಕಟ್ಟಿ ಬಿಟ್ಟು ಹೋದ ದೊಡ್ಡ ಪಕ್ಷ AIADMK ಇಂದು ವಿಜಯ್ ಗೆ ಬೆಂಬಲವಾಗಿ ನಿಂತಿದೆ. ಅಮ್ಮನ ಕೋಟೆ ಇನ್ನು ಎದ್ದು ನಿಲ್ಲದಷ್ಟು ಬಿದ್ದು ಮಣ್ಣಾಗಿದೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಚೆನ್ನೈ ಬಿಟ್ಟು ಮುಂಬೈನಲ್ಲಿ ಮನೆ ಮಾಡಿರುವ 'ಕರುಪ್ಪು' ನಟ ಸೂರ್ಯ ಒಟ್ಟೂ ಆಸ್ತಿ ಎಷ್ಟು ಗೊತ್ತಾ?
ತಿರುಚ್ಚಿ ಪೂರ್ವದಿಂದ ಸ್ಪರ್ಧೆ? ರಾಜಕೀಯ ಎಂಟ್ರಿ ಬಗ್ಗೆ ತ್ರಿಷಾ ಕೊಟ್ಟಿದ್ರು ಸ್ಪಷ್ಟನೆ!