ಧನುಷ್​, ವಿಜಯ್​ ಸೇತುಪತಿ, ಅಮಲಾ ಸೇರಿದಂತೆ 14 ತಾರೆಯರಿಗೆ ನಿರ್ಮಾಪಕರ ಸಂಘದಿಂದ ಬಿಗ್​ ಶಾಕ್​!

By Suvarna NewsFirst Published Jul 2, 2023, 12:36 PM IST
Highlights

ನಿರ್ಮಾಪಕರಿಂದ ಮುಂಗಡ ಸಂಭಾವನೆ ಪಡೆದು ಕಾಲ್​ಶೀಟ್​  ನೀಡದ 14 ನಟ-ನಟಿಯರಿಗೆ ನಿರ್ಮಾಪಕರ ಸಂಘ ಶಾಕ್​ ನೀಡಿದೆ. ಏನಿದು ಘಟನೆ? 
 

ನಿರ್ಮಾಪಕರಿಂದ ಮುಂಗಡ ಸಂಭಾವನೆ ಪಡೆದು ಕಾಲ್​ಶೀಟ್​  ನೀಡದ 14 ನಟ-ನಟಿಯರಿಗೆ ನಿರ್ಮಾಪಕರ ಸಂಘ (TFPC) ಶಾಕ್​ ನೀಡಿದೆ. ಕಾಲಿವುಡ್​ನ ಸೂಪರ್​ಸ್ಟಾರ್​ಗಳು ಎಂದೇ ಖ್ಯಾತನಾಮರಾಗಿರುವ 14 ತಾರೆಯರಿಗೆ ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯಿಂದ  ಶಾಕಿಂಗ್​ ನ್ಯೂಸ್​ (Shocking news) ಸಿಕ್ಕಿದೆ. ಹೌದು. ಜೂನ್ 18 ರಂದು ತಮಿಳು ಚಲನಚಿತ್ರ ನಿರ್ಮಾಪಕರ ಮಂಡಳಿಯ ಸಾಮಾನ್ಯ ಸಮಿತಿ ಸಭೆ ನಡೆಸಿದೆ.  ಈ ಸಭೆಯಲ್ಲಿ ಕಾಲಿವುಡ್​ ಚಿತ್ರರಂಗಕ್ಕೆ ಸಂಬಂಧಿಸಿದಂತೆ ವಿವಿಧ ವಿಷಯಗಳಲ್ಲಿ ಕ್ರಮ ಕೈಗೊಳ್ಳಲು ಸಮಿತಿ ಸದಸ್ಯರಿಂದ ಅನುಮೋದನೆ ಪಡೆಯಲಾಯಿತು. ಬಳಿಕ  ನಿರ್ಮಾಪಕರಿಂದ ಮುಂಗಡ ಸಂಭಾವನೆ ಪಡೆದು ಕಾಲ್​ಶೀಟ್​  ನೀಡದ ನಟರ ಪಟ್ಟಿಯನ್ನು ರೆಡಿ ಮಾಡಲಾಗಿದೆ.  ಈ ಪಟ್ಟಿಯಲ್ಲಿ ತಮಿಳು ಚಿತ್ರರಂಗದ ಪ್ರಮುಖ ನಟರಾದ  ಸಿಂಬು, ವಿಶಾಲ್, ಎಸ್.ಜೆ.ಸೂರ್ಯ, ಯೋಗಿ ಬಾಬು, ಅಥರ್ವ, ವಿಜಯ್​ ಸೇತುಪತಿ, ಧನುಷ್ ಹಾಗೂ ನಟಿಯರಾದ ಅಮಲಾ ಪೌಲ್ ಮತ್ತು ಲಕ್ಷ್ಮಿ ರೈ ಹೆಸರು ಕೇಳಿಬಂದಿದೆ. ಈ 14 ಕಲಾವಿದರ ವಿರುದ್ಧ ಕಾಲಿವುಡ್​ ನಿರ್ಮಾಪಕರ ಸಂಘ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ವರದಿಯಾಗಿದೆ.

ಖ್ಯಾತ ನಟ ಧನುಷ್​ ಅವರು ಚಿತ್ರವೊಂದನ್ನು ಅರ್ಧಕ್ಕೆ  ನಿಲ್ಲಿಸಿ ಅದರಿಂದ ಹೊರ ನಡೆದಿರುವ ಕುರಿತು ಶ್ರೀ ತೇನಾಂಡಾಲ್ ಸ್ಟುಡಿಯೋಸ್ ಮುಖ್ಯಸ್ಥ ಮುರಳಿ ರಾಮಸಾಮಿ ಅವರು ಆರೋಪಿಸಿದ ಬಳಿಕ ಇಂಥದ್ದೊಂದು ಚರ್ಚೆ ಮುನ್ನೆಲಗೆ ಬಂದಿದೆ.   ಭಾರತೀಯ ಸಿನಿ ರಂಗದಲ್ಲಿ ತಮಿಳು ಚಿತ್ರರಂಗಕ್ಕೆ (Collywood) ವಿಶ್ವದಾದ್ಯಂತ ಮಾರುಕಟ್ಟೆ ಇದೆ. ಬಹುಕೋಟಿ ವ್ಯವಹಾರ ನಡೆಸುವ ಕಾಲಿವುಡ್ ಸಿನಿಮಾಗಳಲ್ಲಿ ನಟಿಸುವ ನಟ-ನಟಿಯರು ಕೂಡ ವಿಶ್ವಾದ್ಯಂತ ಫೇಮಸ್ ಆಗಿದ್ದಾರೆ. ಇಂದು ಸಿನಿಮಾಗಳಿಗೆ ಯಾವುದೇ ಗಡಿಗಳು ಇಲ್ಲ. ಎಲ್ಲ ಸಿನಿರಂಗ ಮಾರುಕಟ್ಟೆ ವಿಸ್ತರಣೆಯಾಗಿದೆ. ಇದನ್ನೇ ಮುಂದುಮಾಡಿಕೊಂಡು ಕೆಲವು ನಟ-ನಟಿಯರು ತೊಂದರೆ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ.

Latest Videos

ದೇವಸ್ಥಾನಗಳಿಗೆ ಸಾರಾ ಅಲಿ ಭೇಟಿ: ನೀವು ಮುಸ್ಲಿಂ ಧರ್ಮಕ್ಕೆ ಕಳಂಕ ಅಂದೋರಿಗೆ ನಟಿ ಉತ್ತರ

ಮುರಳಿ ರಾಮಸಾಮಿ ಅವರು ಇದರ ಬಗೆಗಿನ ಚರ್ಚೆಯನ್ನು ಮುನ್ನೆಲೆಗೆ ತಂದ ಬೆನ್ನಲ್ಲೇ ಇದೇ ರೀತಿ ವಿವಿಧ ಸಮಸ್ಯೆಗಳನ್ನು ತಂದೊಡ್ಡಿದ್ದ 14 ನಟ-ನಟಿಯರ ವಿರುದ್ಧ ಇದೇ ರೀತಿಯ ಆರೋಪಗಳನ್ನು ದಾಖಲಿಸಲಾಗಿದೆ. ನಟಿಯರಾದ ಅಮಲಾ ಪೌಲ್ (Amala Paul) ಮತ್ತು ಲಕ್ಷ್ಮಿ ರೈ ಅವರು ಶೂಟಿಂಗ್ ಸಮಯದಲ್ಲಿ ತಮ್ಮ ರಕ್ಷಣೆಗಾಗಿ ಹತ್ತು ಮಂದಿ ಬಾಡಿ ಗಾರ್ಡ್‌ಗಳನ್ನು ನೇಮಿಸಿಕೊಂಡು ನಿರ್ಮಾಪಕರಿಂದ ದುಬಾರಿ ಸಂಬಳ ಕೇಳಿರುವ ಆರೋಪವಿದೆ.  ತಾರೆಯರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಿದ್ದು, ಅದು ಏನು ಎಂಬ ವಿವರ ಮುಂದಿನ ವಾರ ಅಧಿಕೃತವಾಗಿ ಹೊರಬೀಳಲಿದೆ ಎನ್ನಲಾಗುತ್ತಿದೆ. ತಮಿಳು ಮಾತ್ರವಲ್ಲದೆ, ಬೇರೆ ಭಾಷೆಯ ಸಿನಿಮಾಗಳಲ್ಲೂ ನಟ-ನಟಿಯರು ನಟಿಸುವುದರಿಂದ ಸಹಜವಾಗಿ ಸಂಬಳ, ಕಾಲ್​ಶೀಟ್​ ಸೇರಿದಂತೆ ಕೆಲವೊಂದಿಷ್ಟು ಸಮಸ್ಯೆಗಳು ಕಲಾವಿದರು ಮತ್ತು ನಿರ್ಮಾಪಕರ ನಡುವೆ ಎದುರಾಗುತ್ತಲೇ ಇದ್ದು, ಸದ್ಯ ಕಾಲಿವುಡ್​​ ಒಂದು ಹೆಜ್ಜೆ ಮಹತ್ವದ ನಿರ್ಧಾರ ಪ್ರಗಡಿಸಿದೆ.
  
 ಆರೋಪಪಟ್ಟಿಯಲ್ಲಿ ಹೆಸರು ಇರುವ ಈ ಕಲಾವಿದರಿಗೆ ಇದಾಗಲೇ ನೋಟಿಸ್​ ಜಾರಿಗೊಳಿಸಲಾಗಿದ್ದು,   ವಾರದೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ. ಇದಲ್ಲದೇ ನಟ-ನಟಿಯರು ನೇಮಿಸುವ ಸಹಾಯಕರು ಹಾಗೂ ಬೌನ್ಸರ್​ಗಳಿಗೆ ನಿರ್ಮಾಪಕರು ಇನ್ನು ಮುಂದೆ ಸಂಭಾವನೆ ನೀಡುವುದಿಲ್ಲ ಎಂದು ನಿರ್ಧರಿಸಲಾಗಿದೆ ಎಂದು ವರದಿಯಾಗಿದೆ. ನಟ-ನಟಿಯರು ತಮ್ಮ ಸಹಾಯಕರಿಗೆ ತಾವೇ ಸಂಬಳ ನೀಡಬೇಕು ಎಂಬ ನಿರ್ಣಯವನ್ನು ನಿರ್ಮಾಪಕ ಸಂಘ ಅಂಗೀಕರಿಸಿದೆ. ಜೊತೆಗೆ, ಕಲಾವಿದರು ನೇಮಿಸಿಕೊಳ್ಳುವ ಮೇಕಪ್ ಮ್ಯಾನ್​ಗಳು  ಸಂಘದ ಸದಸ್ಯರಾಗಿದ್ದರೆ ಮಾತ್ರ ಅವರಿಗೆ ಹಣ ಪಾವತಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ವರದಿಗಳ ಪ್ರಕಾರ, ಮೊದಲು ಶೇ. 10 ರಷ್ಟು ಹಣವನ್ನು ಮುಂಗಡವಾಗಿ, 60ರಷ್ಟು ಸಂಬಳವನ್ನು ಡಬ್ಬಿಂಗ್ ವೇಳೆ ಮತ್ತು ಉಳಿದ ಶೇ. 30 ರಷ್ಟು ಹಣವನ್ನು ಸಿನಿಮಾ ಬಿಡುಗಡೆ ವೇಳೆ ನೀಡಲು ಸಂಘ ತೀರ್ಮಾನಿಸಿದೆ ಎನ್ನಲಾಗಿದೆ.

72 HOOREN: ಮುಂಬೈ ಸ್ಯೂಸೈಡ್​ ಬಾಂಬರ್ಸ್​ಗೆ ಸಿಕ್ಕರಾ ಆ 72 ಕನ್ಯೆಯರು?

click me!