'ಪೊಗರು' ಸಿನಿಮಾದಲ್ಲಿ ನಟಿಸಿದ್ದ ಜರ್ಮನ್ ಬಾಡಿಬಿಲ್ಡರ್ ನಿಧನ: 30ನೇ ವಯಸ್ಸಿಗೆ ಪ್ರಾಣಬಿಟ್ಟ ಜೋ ಲಿಂಡ್ನರ್

By Shruthi Krishna  |  First Published Jul 2, 2023, 11:28 AM IST

'ಪೊಗರು' ಸಿನಿಮಾದಲ್ಲಿ ನಟಿಸಿದ್ದ ಜರ್ಮನ್ ಬಾಡಿ ಬಿಲ್ಡರ್ ಜೋ ಲಿಂಡ್ನರ್ ನಿಧನಹೊಂದಿದ್ದಾರೆ. 30ನೇ ವಯಸ್ಸಿಗೆ ಪ್ರಾಣಬಿಟ್ಟ ಜೋ ಲಿಂಡ್ನರ್ ಸಾವು ಅವರ ಅಭಿಮಾನಿಗಳಿಗೆ ಶಾಕ್ ನೀಡಿದೆ. 


ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾದಲ್ಲಿ ವಿದೇಶಿ ಬಾಡಿ ಬಿಲ್ಡರ್ಸ್ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಪೊಗರು ಕ್ಲೈಮ್ಯಾಕ್ಸ್‌ನಲ್ಲಿ ಬಾಡಿ ಬಿಲ್ಡರ್ಸ್ ಅಬ್ಬರ ಜೋರಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿರುವ ಬಾಡಿ ಬಿಲ್ಡರ್ಸ್ ಪೊಗರು ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದರು. ಅಂದಹಾಗೆ ಪೊಗರು ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಜರ್ಮನಿಯ ಬಾಡಿ ಬಿಲ್ಡನ್ ಜೋ ಲಿಂಡ್ನೆರ್ ನಿಧನರಾಗಿದ್ದಾರೆ. ಕೇವಲ 30ನೇ ವಯಸ್ಸಿಗೆ ಪ್ರಾಣ ಬಿಟ್ಟಿರುವ ಜೋ ಲಿಂಡ್ನೆರ್ ಸಾವು ಅನೇಕರಿಗೆ ಶಾಕ್ ನೀಡಿದೆ. 

ಪೊಗರು ಸಿನಿಮಾದಲ್ಲಿ ಅಮೆರಿಕದ ಖ್ಯಾತ ಬಾಡಿ ಬಿಲ್ಡರ್ ಕಾಯ್ ಗ್ರೀನ್, ಅಂತರಾಷ್ಟ್ರಿಯ ಮಟ್ಟದಲ್ಲಿ ಹೆಸರು ಮಾಡಿರೋ ಜಾನ್ ಲುಕಾಸ್ ಹಾಗೂ ಜರ್ಮನಿಯ ಫಿಟ್ನೆಸ್ ಸೆನ್ಸೇಷನ್ ಹಾಗೂ ಬಾಡಿ ಬಿಲ್ಡರ್ ಜೋ ಲಿಂಡ್ನೆರ್ ಕ್ಲೈಮ್ಯಾಕ್ಸ್‌ನಲ್ಲಿ ಕಾಣಿಸಿಕೊಂಡಿದ್ದರು. ಮೂವರ ಎಂಟ್ರಿ ಸಿಕ್ಕಾಪಟ್ಟೆ ಥ್ರಿಲ್ಲಿಂಗ್ ಆಗಿತ್ತು. ಈ ಮೂವರಲ್ಲಿ ಅತ್ಯಂತ ಚಿಕ್ಕವರಾಗಿದ್ದ ಜರ್ಮನಿಯ ಬಿಲ್ಡರ್ ಜೋ ಲಿಂಡ್ನೆರ್ ಹಠಾತ್ ನಿಧನ ಹೊಂದಿರುವುದು ಅಘಾತ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ಜೋ ಲಿಂಡ್ನೆರ್ ರಕ್ತನಾಳ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ.  

Tap to resize

Latest Videos

undefined

ಜರ್ಮನಿ ಮೂಲಕ ಬಾಡಿಬಿಲ್ಡರ್ ಜೋ ಲಿಂಡ್ನೆರ್ ಅನೇಕ ವರ್ಷಗಳಿಂದ ಥೈಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದರು. ಅಲ್ಲಿಂದನೆ ಸಾಕಷ್ಟು ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದರು. ಫಾಲೋವರ್ಸ್ಗಳಿಗೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಬಾಡಿ ಬಿಲ್ಡಿಂಗ್ ಜೊತೆ ಫ್ಯಾಷನ್ ಐಕಾನ್ ಕೂಡ ಆಗಿದ್ದರು. ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಯಾವಾಗಲೂ ಸ್ನೀಕರ್‌ ಅನ್ನು ಧರಿಸಲು ಇಷ್ಟ ಪಡುತ್ತಿದ್ದರು. ತಲೆ ಕೂದಲಿಗೆ ಕಲರಿಂಗ್ ಮಾಡಿಕೊಂಡಿರುತ್ತಿದ್ದರು. ಇವರ ಸ್ಟೈಲ್‌ ಕೂಡ ಫ್ಯಾನ್ಸ್ ಇಷ್ಟ ಪಡುತ್ತಿದ್ದರು ಮತ್ತು ಅನುಸರಿಸುತ್ತಿದ್ದರು. 

ಜೋ ನಿಧನದ ಸುದ್ದಿಯನ್ನು ಗರ್ಲ್‌ಫ್ರೆಂಡ್ ನಿಚಾ ಅಧಿಕೃತಗೊಳಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ ಆತ್ಮಕ್ಕೆ ಶಾಂತಿ ಕೋರಿದ್ದಾರೆ. 'ಈ ಜಗತ್ತಿನ ಅತ್ಯಂತ ಅದ್ಭುತ ಮತ್ತು ಅಸಮಾನ್ಯ ವ್ಯಕ್ತಿ' ಎಂದು ಬರೆದುಕೊಂಡಿದ್ದಾರೆ. ಕುತ್ತಿಗೆ ನೋವಾಗುತ್ತೆ ಎಂದು ಹೇಳಿದ್ದರು ಎಂದು ಗರ್ಲ್‌ಫ್ರೆಂಡ್ ಬಹಿರಂಗ ಪಡಿಸಿದ್ದಾರೆ. 

ಭೀಕರ ರಸ್ತೆ ಅಪಘಾತ: 'ದಿಲ್ ಸೆ ಬುರಾ ಲಗ್ತಾ ಹೇ' ಮೀಮ್ ಖ್ಯಾತಿಯ ಯೂಟ್ಯೂಬರ್ ದೇವರಾಜ್ ನಿಧನ

ತನ್ನ ಬಾಯ್‌ಪ್ರೆಂಡ್ ಜೋ ನಿಧನದ ಬಗ್ಗೆ ನಿಚಾ ಸಾಮಾಜಿಕ ಜಾಲತಾಣದಲ್ಲಿ, 'ರಕ್ತನಾಳ ಸಮಸ್ಯೆಯಿಂದ ನಿಧನಹೊಂದಿದರು. ನಾನು ಅವರ ಜೊತೆ ರೂಮಿನಲ್ಲೇ ಇದ್ದೆ. ಅವನು ನನಗಾಗಿ ಮಾಡಿದ್ದ ನೆಕ್ಲೆಸ್ ಅನ್ನು ನನ್ನ ಕುತ್ತಿಗೆಗೆ ಹಾಕಿದರು. ನಾವು ಮುದ್ದಾಡಿದೆವು. ಸಾಯುವುದಕ್ಕಿಂತ ಮೂರು ದಿನಗಳ ಮುಂಚೆ ತನ್ನ ಕುತ್ತಿಗೆ ನೋವಾಗುತ್ತಿದೆ ಎಂದು ಹೇಳಿದ್ದನು. ನಾವು ನಿಜಕ್ಕೂ ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಿಲ್ಲ. ಸಮಯ ಮೀರುವವರೆಗೂ ಅರ್ಥವಾಗಿಲ್ಲ' ಎಂದು ಹೇಳಿದ್ದಾರೆ.

 
 
 
 
 
 
 
 
 
 
 
 
 
 
 

A post shared by NICHA (@immapeaches)

ಸುಶಾಂತ್ ಸಾವಿನ ನಂತರದ ಟ್ರೋಲರ್‌ಗಳ ಮೇಲೆ ಕಿಡಿ ಕಾರಿದ ರಿಯಾ ಚಕ್ರವರ್ತಿ!

ಸಾಮಾಜಿಕ ಮಾಧ್ಯಮಗಳಲ್ಲಿ ಜೋಗೆ ಸಂತಾಪ ಸೂಚಿಸಿ ಪೋಸ್ಟ್ ಶೇರ್ ಮಾಡುತ್ತಿದ್ದಾರೆ. ಅವರ ಫಾಲೋವರ್ಸ್‌ಗೆ ಜೋ ನಿಧನ ಶಾಕ್ ನೀಡಿದೆ. ನಿಮ್ಮಿಂದ ಸ್ಫೂರ್ತಿ ಪಡೆದಿದ್ದೇವೆ ಎಂದು ಅನೇಕರು ಕಾಮೆಂಟ್ ಮಾಡಿದ್ದಾರೆ. ಜೋ ಬ್ರೈನ್ ಅನ್ಯೂರಿಸಂನಿಂದ ಬಳಲುತ್ತಿದ್ದರು, ಅವರ ಸಾವಿಗೆ ಬ್ರೈನ್ ಅನ್ಯೂರಿಸಂ ಕಾರಣ ಎನ್ನಲಾಗಿದೆ. ಆದರೆ ಈ ಬಗ್ಗೆ ಎಲ್ಲಿಯೂ ಬಹಿರಂಗ ಪಡಿಸಿಲ್ಲ. 

click me!