ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ ಪುತ್ರ ಸಿದ್ಧಾರ್ಥ್

Published : May 22, 2023, 03:10 PM IST
ನಿಶ್ಚಿತಾರ್ಥ ಮಾಡಿಕೊಂಡ ಕಾಮಿಡಿ ಸ್ಟಾರ್ ಬ್ರಹ್ಮಾನಂದಂ ಪುತ್ರ ಸಿದ್ಧಾರ್ಥ್

ಸಾರಾಂಶ

ತೆಲುಗು ಸ್ಟಾರ್ ಬ್ರಹ್ಮಾನಂದಂ ಕಿರಿಯ ಪುತ್ರ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಜೊತೆ ಎಂಗೇಜ್ ಆದ ಸಿದ್ಧಾರ್ಥ್ ಫೋಟೋಗಳು ವೈರಲ್ ಆಗಿವೆ. 

ತೆಲುಗು ಸಿನಿಮಾರಂಗದ ಖ್ಯಾತ ನಟ ಬ್ರಹ್ಮಾನಂದಂ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಟಾಲಿವುಡ್ ಹಾಸ್ಯ ನಟ ಬ್ರಹ್ಮಾನಂದಂ ಅವರ ಕಿರಿಯ ಪುತ್ರ ಸಿದ್ಧಾರ್ಥ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಐಶ್ವರ್ಯಾ ಅವರೊಂದಿಗೆ ದಾಂಪತ್ಯಕ್ಕೆ ಕಾಲಿಡಲು ಸಜ್ಜಾಗಿರುವ ಸಿದ್ಧಾರ್ಥ್ ಇಂದು (ಮೇ 22) ಅದ್ದೂರಿಯಾಗಿ ಎಂಗೇಜ್‌ಮೆಂಟ್ ಮಾಡಿಕೊಂಡರು. ಸಿದ್ಧಾರ್ಥ್ ಮತ್ತು ಐಶ್ವರ್ಯಾ ನಿಶ್ಚಿತಾರ್ಥ ಸಮಾರಂಭಕ್ಕೆ ಸಿನಿಮಾರಂಗದ ಗಣ್ಯರು, ಆಪ್ತರು ಭಾಗಿಯಾಗಿದ್ದರು. ಸದ್ಯ ಸಿದ್ಧಾರ್ಥ್ ಮತ್ತು ಐಶ್ವರ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.  

ಅಂದಹಾಗೆ ಸಿದ್ಧಾರ್ಥ್ ಮತ್ತು ಐಶ್ವರ್ಯಾ ಅವರದ್ದು ಅರೇಂಜ್ ಮ್ಯಾರೇಜ್. ಸಿದ್ಧಾರ್ಥ್ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿದ್ದು ಎಲ್ಲೇ ಕೆಲಸ ಮಾಡುತ್ತಿದ್ದಾರೆ. ಸಿದ್ಧಾರ್ಥ್ ಭಾವಿ ಪತ್ನಿ ಐಶ್ವರ್ಯಾ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ. ಪುತ್ರನ ನಿಶ್ಚಿತಾರ್ಥ ಸಮಾರಂಭದಲ್ಲಿ ಮಿಂಚುತ್ತಿರುವ ಬ್ರಹ್ಮಾನಂದಂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ಸಿದ್ಧಾರ್ಥ್ ನಿಶ್ಚಿತಾರ್ಥ ಸಮಾರಂಭದಲ್ಲಿ ಟಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗಿದ್ದರು. ಹಾಸ್ಯ ಕಲಾವಿದ ಅಲಿ, ರಘು ಬಾಬು, ನಿರ್ಮಾಪಕ ಟಿ ಸುಬ್ಬರಾಮಿ ರೆಡ್ಡಿ ಸೇರಿದಂತೆ ಅನೇಕರು ಭಾಗಿಯಾಗಿ ನವ ಜೋಡಿಗೆ ಶುಭಹಾರೈಸಿದ್ದಾರೆ. ಸದ್ಯ ನಿಶ್ಚಿತಾರ್ಥ ಮಾಡಿಕೊಂಡಿರುವ ಸಿದ್ಧಾರ್ಥ್ ಮತ್ತು ಐಶ್ವರ್ಯಾ ಅವರ ಮದುವೆ ದಿನಾಂಕ ವೈರಲ್ ಆಗಿಲ್ಲ. ಸದ್ಯದಲ್ಲೇ ಇಬ್ಬರೂ ಹಸೆಮಣೆ ಏರಲಿದ್ದಾರೆ. 

ದಕ್ಷಿಣದ ಫೇಮಸ್‌ ಕಾಮಿಡಿಯನ್‌ ಬ್ರಹ್ಮಾನಂದಂ ಆಸ್ತಿ ವಿವರ ಕೇಳಿದರೆ ಶಾಕ್‌ ಆಗುತ್ತೀರಾ?

ಬ್ರಹ್ಮಾನಂದಂ ಆವರಿಗೆ ಇಬ್ಬರು ಗಂಡು ಮಕ್ಕಳು. ಮೊದಲ ಮಗ ರಾಜ ಗೌತಮ್ ಎರಡನೇ ಪುತ್ರ ಸಿದ್ಧಾರ್ಥ್. ರಾಜಾ ಗೌತಮ್ ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. ಸಿದ್ಧಾರ್ಥ್ ಇನ್ನೂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿಲ್ಲ. ಬಣ್ಣದ ಲೋಕಕ್ಕೆ ಮರಳುವ ಸಾಧ್ಯತೆಯೂ ಕಡಿಮೆ ಇದೆ.

 

ರಾಮನೆದೆಯಲ್ಲಿ ತಲೆಇಟ್ಟ ಹನುಮ..! ಇದು ನಟ ಬ್ರಹ್ಮಾನಂದಂ ಕೈಯಲ್ಲಿ ಮೂಡಿದ ಚಿತ್ರ

67 ವರ್ಷದ ನಟ ಬ್ರಹ್ಮಾನಂದಂ ಇಂದಿಗೂ ಟಾಲಿವುಡ್‌ನ ಬಹುಬೇಡಿಕೆಯ ಹಾಸ್ಯ ನಟ. 1976ರಿಂದ ಸಿನಿಮಾರಂಗದಲ್ಲಿ ಸಕ್ರೀಯರಾಗಿರುವ ಬ್ರಹ್ಮಾನಂದಂ ಅನೇಕ ಸಿನಿಮಾಗಳಲ್ಲಿ ಮಿಂಚಿದ್ದಾರೆ. ಸಿನಿಮಾರಂಗಕ್ಕೆ ಸಲ್ಲಿಸಿದ ಸೇವೆಗೆ ಭಾರತದ ಅತ್ಯುನ್ನತ ಪ್ರಶಸ್ತಿಗಳಲ್ಲಿ ಒಂದಾಗಿರುವ ಪದ್ಮ ಶ್ರೀ ನೀಡಿ ಗೌರವಿಸಲಾಗಿದೆ.  ಬ್ರಹ್ಮಾನಂದಂ ಕೊನೆಯದಾಗಿ ರಂಗಮಾರ್ತಾಂಡ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಬ್ರಹ್ಮಾನಂದಂ ತೆಲುಗು ಮಾತ್ರವಲ್ಲದೇ ಕನ್ನಡ, ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಪವನ್ ಕಲ್ಯಾಣ್ ಮುಂದಿನ ಚಿತ್ರಕ್ಕೆ ಹೊಸ ಟ್ವಿಸ್ಟ್: ನಿರ್ದೇಶಕ ಯಾರು? ಅಭಿಮಾನಿಗಳಲ್ಲಿ ಕುತೂಹಲ
Vijay Trisha Wedding: ತ್ರಿಷಾ-ದಳಪತಿ ವಿಜಯ್‌ಗೆ ಮದುವೆ? ತ್ರಿಷಾ ಅಮ್ಮ ಕೊಟ್ಟ ಸಿಗ್ನಲ್‌ನಿಂದ ಹೊಸ ಚರ್ಚೆ!