ಕಷ್ಟ ಕಾಲದಲ್ಲಿ ಸಹಾಯ ಮಾಡಿದ ಆರ್‌ಆರ್‌ಆರ್ ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸಿದ ಜ್ಯೂನಿಯರ್ ಎನ್‌ಟಿಆರ್. ವಿಶ್ವಾಸ ತುಂಬಿದ ಸ್ಟಾರ ನಟನಿಂದ ಕೃತಜ್ಞತೆಯ ಮಾತುಗಳು.
ಟಾಲಿವುಡ್ (Tollywood) ಸ್ಟಾರ್ ನಟ ಜ್ಯೂನಿಯರ್ ಎನ್‌ಟಿಆರ್ (Junior NTR) ಚಿಕ್ಕ ವಯಸ್ಸಿನಲ್ಲಿಯೇ ಯಶಸ್ಸು ಕಂಡವರು. ಪೀಕ್‌ನಲ್ಲಿದ್ದ ನಟ ಇದ್ದಕ್ಕಿದ್ದಂತೆ ಫ್ಲಾಪ್ ನಟ (Flop actor) ಎಂದು ಆಡಿಕೊಳ್ಳುವ ಜನರ ನಡುವೆ ನಾನೇನು ಎಂದು ಸಾಬೀತು ಮಾಡುವೆ ಎನ್ನವ ಚಲದಲ್ಲಿದ್ದಾಗಲೇ, ಅವರ ಕೈ ಹಿಡಿದದ್ದು ನಿರ್ದೇಶಕ ಎಸ್‌ಎಸ್ ರಾಜಮೌಳಿ (SS Rajamouli). ತಾರಖ್‌ನಿಂದ ಜ್ಯೂನಿಯರ್ ಎನ್‌ಟಿಆರ್ ಎಂಬ ಹೆಸರು ಉಳಿಸಿಕೊಳ್ಳಲು ಆಗದಿದ್ದಾಗ ಡಿಪ್ರೆಶನ್‌ಗೆ (Depression) ಒಳಗಾಗಿದ್ದರಂತೆ.
ಜನವರಿ 7ರಂದು ಆರ್‌ಆರ್‌ಆರ್ (RRR) ಸಿನಿಮಾ ಬಿಡುಗಡೆ ಆಗುತ್ತಿದೆ. ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನಲ್ಲಿ ರಿಲೀಸ್ ಆಗುತ್ತಿದ್ದು, ತಂಡ ಪ್ರಚಾರದಲ್ಲಿ (RRR Promotions) ಸಖತ್ ಬ್ಯುಸಿಯಾಗಿದೆ. ಈ ವೇಳೆ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ಜ್ಯೂನಿಯರ್ ತಾನು ಡಿಪ್ರೆಶನ್‌ಗೆ ಒಳಗಾಗಿದ್ದೆ, ಎಂಬ ಸತ್ಯವನ್ನು ರಿವೀಲ್ ಮಾಡಿದ್ದಾರೆ.
Jr NTR Emotional: ಅಪ್ಪುಗೆ ಕೊನೆಯ ಬಾರಿ 'ಗೆಳೆಯ' ಹಾಡು ಹಾಡಿದ ಜ್ಯೂನಿಯರ್!ಚಿಕ್ಕ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟ ಜ್ಯೂನಿಯರ್ ವೃತ್ತಿ ಜೀವನದಲ್ಲಿ ಯಾವುದೇ ಮಾರ್ಗದರ್ಶನ ಇಲ್ಲದ ಕಾರಣ ಹೇಗೆ aimless ಆಗಿದ್ದೆ ಎಂಬದನ್ನು ಹೇಳಿಕೊಂಡಿದ್ದಾರೆ. ಆರ್‌ಜೆ ಸಿದ್ಧಾರ್ಥ್ (RJ Siddharth) ಜೊತೆ ಮಾತನಾಡುವ 16ನೇ ವಯಸ್ಸಿಗೆ ಸ್ಟಾರ್ ಆಗಿ 'inexperienced Chhota Bachcha' ಆಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಸ್ಟುಡೆಂಟ್ ನಂ. 1ನಲ್ಲಿ (Student No.1) ಅದ್ಭುತವಾಗಿ ನಟಿಸಿದ ಜ್ಯೂನಿಯರ್‌ಗೆ ಹಿಟ್ ನಟ ಎಂಬ ಪಟ್ಟ ಕೊಟ್ಟರು. ಆದರೆ 18 ವಯಸ್ಸಿನವರೆಗೂ ಯಾವ ಆಫರ್ ಕೂಡ ಬರಲಿಲ್ಲ. 'ಆ ವಯಸ್ಸಿಗೆ ಹೇಗೆ ಇವೆಲ್ಲವೂ ಮ್ಯಾನೇಜ್ ಮಾಡಿದ್ದು?' ಎಂದು ಆರ್‌ಜೆ ಕೇಳಿದ್ದಾಗ, 'ಖಂಡಿತ ಮ್ಯಾನೇಜ್ ಮಾಡಲು ಆಗಲಿಲ್ಲ. ವೃತ್ತಿ ಜೀವನದಲ್ಲಿ ದೊಡ್ಡ ಫಾಲ್ (Steep fall) ಕಂಡೆ,' ಎಂದಿದ್ದಾರೆ ತಾರಖ್ (Tharak) ನಟ.
'ಅದೆಷ್ಟೋ ಸಿನಿಮಾಗಳನ್ನು ಒಪ್ಪಿಕೊಂಡೆ. ಆದರೆ ಮಾಡಿದ ಯಾವ ಸಿನಿಮಾನೂ ಕ್ಲಿಕ್ ಆಗಲಿಲ್ಲ. ಎಲ್ಲಾ ರೀತಿ ಸೋಲು ಕಂಡೆ. ಸಿನಿಮಾ ಕಥೆಗಳು ಸೂಪರ್ ಆಗಿತ್ತು. ಆದರೆ ನಾನು ನಟನಾಗಿ ಅದಕ್ಕೆ ಸೂಟ್ ಆಗುತ್ತಿರಲಿಲ್ಲ. ಎಲ್ಲಿ ಏನು ಸಮಸ್ಯೆ ಆಗುತ್ತಿದೆ ಎಂದು ತಿಳಿದುಕೊಳ್ಳುವುದು ಕಷ್ಟ ಆಯ್ತು. ಇದು ನನ್ನ 20 ಆಜು ಬಾಜು ವಯಸ್ಸಿನವರೆಗೂ ಹೀಗೆ ಇತ್ತು. ರಾಜಮೌಳಿ ಅವರು ನನಗೆ ಸ್ನೇಹಿತರಾಗಿ (Friendship) ಸಿಕ್ಕಿದರು, ಅವರೇ ನನಗೆ ಎಲ್ಲವನ್ನೂ introspect ಮಾಡಲು ಸಹಾಯ ಮಾಡಿದ್ದರು,' ಎಂದು ಜ್ಯೂನಿಯರ್ ಹೇಳಿದ್ದಾರೆ.
ರಾಜಮೌಳಿ ಆರ್‌ಆರ್‌ಆರ್ ಸಿನಿಮಾಗೆ ಜ್ಯೂನಿಯರ್‌ನ ಆಯ್ಕೆ ಮಾಡಿಕೊಂಡ ನಂತರ ಅವರ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡಲು ಶುರುವಾಗಿತ್ತು. ಈ ಸಿನಿಮಾದಿಂದ ಜ್ಯೂನಿಯರ್‌ಗೆ ಈಗೀಗ ಮತ್ತಷ್ಟು ಆಫರ್‌ಗಳು ಹರಿದು ಬರುತ್ತಿವೆಯಂತೆ.
RRR Komaram Bheemudo Song: ಜ್ಯೂ. NTR ಹೊಸ ಹಾಡು ರಿಲೀಸ್!ಸುಮಾರು 30 ಸಿನಿಮಾಗಳಲ್ಲಿ ನಟಿಸಿರುವ ಜ್ಯೂನಿಯರ್ ಪ್ರಸಿದ್ಧ ನಂದಿ ಪ್ರಶಸ್ತಿಯನ್ನು (Nandi Award) ಎರಡು ಬಾರಿ ಗಿಟ್ಟಿಸಿಕೊಂಡಿದ್ದಾರೆ. 2018ರಲ್ಲಿ ಫೋರ್ಬ್ಸ್ ಅತಿ ಸಿರಿವಂತ ನಟನ (Fobes richest actor India) ಪಟ್ಟಿಯಲ್ಲಿ 28ನೇ ಸ್ಥಾನ ಪಡೆದುಕೊಂಡಿದ್ದರು. 280 ಕೋಟಿ ವಾರ್ಷಿಕ ಆದಾಯ (Annual income) ಇದ್ದರೂ ತಾರಖ್ ಸಿನಿಮಾಗಳಲ್ಲಿ ಕ್ಲಿಕ್ ಆಗದಿದ್ದಾಗ ಬೇಸರ ಮಾಡಿಕೊಂಡಿದ್ದರಂತೆ, ಡಿಪ್ರೆಶನ್‌ಗೆ ಒಳಗಾಗಿದ್ದಂತೆ. ಈಗ RRR ತಮ್ಮ ಸ್ಟಾರ್ ಗಿರಿ ಬದಲಾಯಿಸಿ ಅದನ್ನು ಹೆಮ್ಮೆಯಿಂದ ಹೇಳಿಕೊಳ್ಳುವೆ. ಸಂಪೂರ್ಣ ಕ್ರೆಡಿಟ್‌ನ ಸ್ನೇಹಿತ ರಾಜಮೌಳಿಗೆ ನೀಡುವೆ ಎಂದಿದ್ದಾರೆ.
ಆರ್‌ಆರ್‌ಆರ್ ಸಿನಿಮಾದಲ್ಲಿ ನಟ ರಾಮ್ ಚರಣ್ ಮತ್ತು ಬಾಲಿವುಡ್ ನಟಿ ಆಲಿಯಾ ಭಟ್ ನಟಿಸಿದ್ದಾರೆ. ಚಿತ್ರಕ್ಕೆ ಕನ್ನಡದ ಡಬ್ಬಿಂಗ್‌ನ ಜ್ಯೂನಿಯರ್ ಮಾಡಿದ್ದಾರಂತೆ. ಕನ್ನಡದವೇ ಆದ ತಾಯಿ ಸಹಾಯ ಪಡೆದುಕೊಂಡು ಕನ್ನಡ ಡಬ್ಬಿಂಗ್ ಮಾಡಿದೆ. ಆದರೆ ನನಗೆ ಮೊದಲಿನಿಂದಲೂ ಕನ್ನಡ ಇಷ್ಟ. ಅದಕ್ಕೆ ಸುಲಭವಾಯಿತು, ಎಂದು ಬೆಂಗಳೂರಿಗೆ RRR ಪ್ರಮೋಷನ್‌ಗೆ ಬಂದಾಗ ಜೂ.ಎನ್‌ಟಿಆರ ಹೇಳಿಕೊಂಡಿದ್ದರು.