ತೆಲುಗು ಗಾಯಕಿ ತಂದೆ ಎಕೆ ರಾವ್ ಸಾವಿನ ಸುದ್ದಿಗೆ ಮತ್ತೊಂದು ನಂಟು ತಗಲು ಹಾಕಿಕೊಂಡಿದೆ. ಸಾಲ ಕೊಡಿಸಲು ಹೋಗಿ ತಮ್ಮ ಜೀವನವನ್ನೇ ಕಳೆದುಕೊಂಡ್ರಾ ರಾವ್?
ಖ್ಯಾತ ತೆಲುಗು (Tollywood) ಗಾಯಕಿ ಹರಿಣಿ ರಾವ್ (Harini Rao) ಅವರು ಕೆಲವು ದಿನಗಳ ಹಿಂದೆ ತಮ್ಮ ತಂದೆ ನಾಪತ್ತೆಯಾಗಿದ್ದಾರೆ (Missing Case) ಎಂದು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಎರಡು ಮೂರು ದಿನಗಳಲ್ಲಿ ಅಂದರೆ ನವೆಂಬರ್ 22ರಂದು ಯಲಹಂಕ- ರಾಜಾನಕುಂಟೆ (Yelahanka-Rajankunte) ರೈಲ್ವೆ ಹಳಿ ಮಧ್ಯೆ ಶವವಾಗಿ ಪತ್ತೆಯಾಗಿದ್ದರು. ಅವರು ಪತ್ತೆಯಾದ ಸ್ಥಿತಿ ನೋಡಿದರೆ ಇದು ಆತ್ಮಹತ್ಯೆ ಅಲ್ಲ, ಕೊಲೆ ಎಂದು ಕುಟುಂಬಸ್ಥರು ಮತ್ತೆ ದೂರು ದಾಖಲಿಸಿದ್ದರು.
ರಾವ್ ಅವರ ದೇಹ ಪತ್ತೆಯಾದಾಗ ಕೈ ಮತ್ತು ಕುತ್ತಿಗೆಯನ್ನು ಚಾಕುವಿನಿಂದ ಚುಚ್ಚಿದ್ದರು. ಅಲ್ಲದೇ ಪ್ರಕರಣಕ್ಕೆ ಮತ್ತೊಂದು ಸಾಕ್ಷಿ ಪತ್ತೆಯಾಗಿದೆ. ಎಕೆ ರಾವ್ ಸಾವಿನ ವಿಚಾರವಾಗಿ ತನಿಖೆ ಆರಂಭಿಸಿದ ಪೊಲೀಸರಿಗೆ ಮತ್ತೊಂದು ಸ್ಫೋಟಕ ಮಾಹಿತಿ ತಿಳಿದು ಬಂದಿದೆ. ರಾವ್ ನಗರದ ಖ್ಯಾತ ರಿಯಲ್ ಎಸ್ಟೇಟ್ (Real-Estate) ಉದ್ಯಮಿ ಮತ್ತು ಖಾಸಗಿ ಕಂಪನಿ ಮಾಲೀಕನಿಗೆ ಲೋನ್ (Loan) ಕೊಡಿಸಲು ಮುಂದಾಗಿದ್ದರು ಎನ್ನಲಾಗಿದೆ.
undefined
ಹೌದು! ಡ್ಯಾನಿಯರ್ ಆರ್ಮ್‌ಸ್ಟ್ರಾಂಗ್ ಎಂಬುವವರಿಂದ ರಾವ್ ಅವರು ಇಬ್ಬರಿಗೆ ಸುಮಾರು 390 ಕೋಟಿ ರೂ. ಲೋನ್ ಕೊಡಿಸಲು ಮುಂದಾಗಿದ್ದರಂತೆ. ಅದರಲ್ಲಿ ಗಿರೀಶ್ ಅವರಿಗೆ 150 ಕೋಟಿ ಹಾಗೂ ಪಣಿತರನ್ ಅವರಿಗೆ 240 ಕೋಟಿ. ಆದರೆ ಲೋನ್ ನೀಡುವ ಮೊದಲು ಡ್ಯಾನಿಯರ್ ಆರ್ಮ್ ಸ್ಟ್ರಾಂಗ್ ನವರು 5 ಕೋಟಿ 80 ಲಕ್ಷ ರೂಪಾಯಿಯನ್ನು ಮುಂಗಡ ಬಡ್ಡಿ ಹಣ ಪಡೆದುಕೊಂಡಿದ್ದಾರೆ. ಮುಂಗಡ ಬಡ್ಡಿ ಕೈ ಸೇರುತ್ತಿದ್ದಂತೆ, ಫೋನ್ ಆಫ್ (Phone Switched off) ಮಾಡಿ ನಾಪತ್ತೆಯಾಗಿದ್ದಾರೆ, ಸಂಪರ್ಕಿಸಲು ಎಷ್ಟೇ ಪ್ರಯತ್ನ ಪಟ್ಟರೂ ಸಿಗಲಿಲ್ಲ. ಹೀಗಾಗಿ ಹಣ ಕಳೆದುಕೊಂಡ ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಅವರು ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಡ್ಯಾನಿಯರ್ ಆರ್ಮ್ ಸ್ಟ್ರಾಂಗ್, ವಿವೇಕಾನಂದ, ರಾಘವ ಮತ್ತು ರಾವ್ ವಿರುದ್ಧ ವಂಚನೆ ಕೇಸ್ ದಾಖಲಿಸಿದ್ದರು.
Bengaluru Crime News : ಹಿನ್ನೆಲೆ ಗಾಯಕಿ ತಂದೆ ಅನುಮಾನಾಸ್ಪದವಾಗಿ ಸಾವುಪೊಲೀಸರು ಕರೆದಂತೆ ಎಕೆ ರಾವ್ ಅವರು ವಿಚಾರಣೆಯಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ವಿಚಾರಣೆ ನಡೆದ ಮರು ದಿನವೇ ರಾವ್ ಅವರು ಯಲಹಂಕ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಘಟನೆ ದೊಡ್ಡ ತಿರುವು ಪಡೆದುಕೊಳ್ಳುತ್ತಿದ್ದಂತೆ ಯಲಹಂಕ ಮತ್ತು ಸುದ್ದಿ ಗುಂಟೆಪಾಳ್ಯ ಪೊಲೀಸರ ತನಿಖೆ ಇನ್ನಷ್ಟು ಟೈಟ್ ಆಗಿ ನಡೆಸುತ್ತಿದ್ದಾರೆ.
ಯಲಹಂಕ ರೈಲ್ವೆ ಬಳಿ ಎಕೆ ರಾವ್ ಅವರ ಆಧಾರ್ ಕಾರ್ಡ್, ದೂರು ನೀಡಲು ಸಿದ್ಧಪಡಿಸಿರುವ ಪತ್ರ ಹಾಗೂ ಕೆಲವು ಡಾಕ್ಯುಮೆಂಟ್‌ಗಳು ಪತ್ತೆಯಾಗಿವೆ. ನನ್ನ ತಂದೆ ಕೊಲೆಯಾಗಿದ್ದಾರೆ ಅವರು ಆತ್ಮಹತ್ಯೆ ಮಾಡಿಕೊಳ್ಳುವವರಲ್ಲ, ಎಂದು ಪುತ್ರಿ ಹರಿಣಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ವಿಚಿತ್ರ ಏನೆಂದರೆ ಮೃತದೇಹದ ಬಳಿಯೇ ಚಾಕು ಪತ್ತೆಯಾಗಿದ್ದು ಪ್ರಾಥಮಿಕ ತನಿಖೆ ವೇಳೆ ವೈದ್ಯರು ಇದು ಆತ್ಮಹತ್ಯೆ (Suicide) ಎಂದು ಹೇಳಿದ್ದಾರೆ. ತನಿಖೆ ಮುಂದುವರೆಯುತ್ತಿದ್ದು ಇನ್ನು ಹೆಚ್ಚಿನ ಮಾಹಿತಿ ಸಿಗಬೇಕಿದೆ.