ಕರ್ನಾಟಕದಲ್ಲಿ ಆರ್‌ಆರ್‌ಆರ್ ಸಿನಿಮಾದ ವಿತರಣೆ ಹಕ್ಕನ್ನು ಕೆವಿಎನ್ ಪ್ರೊಡಕ್ಚನ್ ಸಂಸ್ಥೆ ಪಡೆದುಕೊಂಡಿದೆ.
ರಾಜಮೌಳಿ ನಿರ್ದೇಶಿಸಿ, ರಾಮ್‌ಚರಣ್ ತೇಜ ಹಾಗೂ ಜ್ಯೂಎನ್‌ಟಿಆರ್ ಅಭಿನಯದ ‘ಆರ್‌ಆರ್‌ಆರ್’ ಚಿತ್ರದ ಕರ್ನಾಟಕದ ವಿತರಣೆ ಹಕ್ಕನ್ನು ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಪಡೆದುಕೊಂಡಿದೆ. ಡಿವಿವಿ ದಾನಯ್ಯ ಈ ಚಿತ್ರವನ್ನು 450 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಜನವರಿ 7ರಂದು ಈ ಸಿನಿಮಾ ತೆರೆಗೆ ಬರುತ್ತಿದೆ.
‘ಆರ್‌ಆರ್‌ಆರ್ ಚಿತ್ರದ ನಿರ್ಮಾಪಕರು ನಮ್ಮ ಕೆವಿಎನ್ ಪ್ರೊಡಕ್ಷನ್ ಜತೆ ಸೇರಿ ರಾಜ್ಯದಲ್ಲಿ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಐದು ಭಾಷೆಗಳ ಪೈಕಿ ರಾಜ್ಯದಲ್ಲಿ ಯಾವುದೇ ಭಾಷೆ ಬಿಡುಗಡೆ ಆದರೂ ಅದು ನಮ್ಮ ಪ್ರೊಡಕ್ಷನ್‌ನಲ್ಲಿ ವಿತರಣೆ ಆಗಲಿದೆ’ ಎಂದು ಸಂಸ್ಥೆಯ ಮುಖ್ಯಸ್ಥ ನಿರ್ಮಾಪಕ ಸುಪ್ರೀತ್ ಹೇಳುತ್ತಾರೆ.
ಈ ಚಿತ್ರದಲ್ಲಿ ರಾಮ್ ಚರಣ್ (Ram Charan) ಮತ್ತು ಜ್ಯೂ.ಎನ್‌ಟಿಆರ್ (NTR) ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಅಲಿಯಾ ಭಟ್ (Alia Bhatt) ಸಹ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಇದೀಗ ಚಿತ್ರತಂಡ ಚಿತ್ರದ ಹೊಸ ಲಿರಿಕಲ್ ಸಾಂಗ್ (Lyrical Song) ಬಿಡುಗಡೆ ಮಾಡಿದೆ.ಚಿತ್ರದ 'ನಾಟು ನಾಟು' (Naatu Naatu) ಹಾಡನ್ನು 5 ಭಾಷೆಗಳಲ್ಲಿ ರಿಲೀಸ್ ಮಾಡಿದೆ. ಕನ್ನಡ ವರ್ಷನ್‌ನಲ್ಲಿ 'ಹಳ್ಳಿ ನಾಟು' (Halli Naatu) ಹಾಡು ಕೂಡ ಯೂಟ್ಯೂಬ್‌ನಲ್ಲಿ (YouTube) ಸಖತ್ ಸೌಂಡು ಮಾಡುತ್ತಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀವ್ಸ್ ಪಡೆದುಕೊಂಡಿದೆ. ಈ ಹಾಡಿಗೆ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್ ಜಬರ್ದಸ್ತ್ ಸ್ಟೆಪ್ಸ್ ಹಾಕಿದ್ದಾರೆ. ಅಜಾದ್ ವರದರಾಜ್ (Azad Varadaraj) ಕನ್ನಡ ವರ್ಷನ್‌ಗೆ ಸಾಹಿತ್ಯ ರಚಿಸಿದ್ದು, ರಾಹುಲ್ ಸಿಪ್ಲಿಗುಂಜ್ ಹಾಗೂ ಕಾಲ ಭೈರವ ದನಿಯಲ್ಲಿ ಹಾಡು ಮೂಡಿಬಂದಿದೆ. ಖ್ಯಾತ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ (M.M. Keeravaani) ಅವರು ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ.
ಡಿವಿವಿ ಎಂಟರ್‌ಟೈನ್ಮೆಂಟ್ (DVV Entertainment) ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ವಿ.ವಿಜಯೇಂದ್ರ ಪ್ರಸಾದ್ ಕಥೆ, ಮತ್ತು ಶ್ರೀಕರ್ ಪ್ರಸಾದ್ ಸಂಕಲನವಿದೆ. ಕನ್ನಡ, ತೆಲುಗು, ಮಲಯಾಳಂ ಮತ್ತು ತಮಿಳು ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿರುವ 'ಆರ್‌ಆರ್‌ಆರ್' ಚಿತ್ರವು ಇಂಗ್ಲಿಷ್, ಪೋರ್ಚುಗೀಸ್, ಕೊರಿಯನ್, ಟರ್ಕಿಷ್, ಸ್ಪ್ಯಾನಿಶ್ ಭಾಷೆಗಳಿಗೆ ಡಬ್ ಆಗಲಿದೆ. ಬಿಗ್ ಬಜೆಟ್‌ನಲ್ಲಿ ತಯಾರಾದ ಈ ಚಿತ್ರಕ್ಕೆ ಎಂ.ಎಂ.ಕೀರವಾಣಿ ಸಂಗೀತ ಸಂಯೋಜಿಸಿದ್ದಾರೆ. ಜನವರಿ 7, 2022ರಂದು ವಿಶ್ವದಾದ್ಯಂತ 'ಆರ್‌ಆರ್‌ಆರ್' ಬಿಡುಗಡೆಯಾಗಲಿದೆ.
RRR ಚಿತ್ರದ ಬಿಡುಗಡೆ ದಿನಾಂಕ ಅನೌನ್ಸ್ ಮಾಡಿದ ನಿರ್ದೇಶಕ ರಾಜ್‌ಮೌಳಿ!ಇನ್ನು ಸ್ನೇಹಿತರ ದಿನಾಚರಣೆ ಪ್ರಯುಕ್ತ 'ಆರ್‌ಆರ್‌ಆರ್' ಚಿತ್ರತಂಡ ಸ್ಪೆಷಲ್ ಹಾಡೊಂದನ್ನು ಸ್ನೇಹಿತರಿಗೆಂದೇ ಬಿಡುಗಡೆ ಮಾಡಿತ್ತು. ಕನ್ನಡ, ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಯಲ್ಲಿ 'ದೋಸ್ತಿ' ಹಾಡು (Dosti Song) ಬಿಡುಗಡೆ ಮಾಡಲಾಗಿತ್ತು. ಕೀರವಾಣಿ ಸಂಗೀತ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಹಾಡಿನಲ್ಲಿ ಜೂನಿಯರ್ ಎನ್‌ಟಿಆರ್ ಮತ್ತು ರಾಮ್‌ಚರಣ್ ಕಾಣಿಸಿಕೊಂಡಿದ್ದರು. ತೆಲಗು ಹಾಡನ್ನು ಹೇಮಚಂದ್ರ, ತಮಿಳು ಹಾಡನ್ನು ಅನಿರುದ್ಧ ರವಿಚಂದ್ರನ್, ಮಲಯಾಳಂ ಹಾಡನ್ನು ವಿಜಯ್ ಯೇಸುದಾಸ್, ಹಿಂದಿ ಹಾಡನ್ನು ಅಮಿತ್ ತ್ರಿವೇದಿ ಹಾಡಿದ್ದರು. ಆದರೆ ಕನ್ನಡ ಹಾಡನ್ನು ಕೇರಳದ ಗಾಯಕ ಯಾಜೀನ್ ನಿಜರ್ ಹಾಡಿದ್ದರು.
'ಆರ್‌ಆರ್‌ಆರ್' ಚಿತ್ರದ ಆಡಿಯೋ ಹಕ್ಕುಗಳನ್ನು ಲಹರಿ ಆಡಿಯೋ ಸಂಸ್ಥೆ (Lahari Music) ತನ್ನದಾಗಿಸಿಕೊಂಡಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಆಡಿಯೋ ಹಕ್ಕುಗಳೂ ಸಹ ಲಹರಿ ಪಾಲಾಗಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಪದುಕೊಂಡಿರುವುದು ಖುಷಿ ಇದೆ. ಒಂದು ದೊಡ್ಡ ಚಿತ್ರದ ಭಾಗವಾಗುತ್ತಿದ್ದೇವೆಂಬ ಹೆಮ್ಮೆ ಕೂಡ ಇದೆ ಎಂದು ಲಹರಿ ವೇಲು (Lahari Velu) ಹೇಳಿದ್ದರು. ಅಲ್ಲದೇ ಈ ಚಿತ್ರದ ಡಿಜಿಟಲ್ ಮತ್ತು ಸೆಟಲೈಟ್ ಹಕ್ಕು ಜೀ ತಂಡ (Zee Team) 300 ಕೋಟಿ ರೂ. ಗೆ ಪಡೆದುಕೊಂಡಿದೆ.