Kangana Ranaut: ಡ್ರಗ್ಸ್ ತಗೊಂಡ್ರಾ ಕಂಗನಾ ? ಡೋಸ್ ಜಾಸ್ತಿ ಆಯ್ತು ಎಂದ ಸಚಿವ

Suvarna News   | Asianet News
Published : Nov 12, 2021, 07:04 PM ISTUpdated : Nov 12, 2021, 07:07 PM IST
Kangana Ranaut: ಡ್ರಗ್ಸ್ ತಗೊಂಡ್ರಾ ಕಂಗನಾ ? ಡೋಸ್ ಜಾಸ್ತಿ ಆಯ್ತು ಎಂದ ಸಚಿವ

ಸಾರಾಂಶ

'Freedom in 2014': ಡೋಸ್ ತಗೊಂಡಿದ್ದು ಜಾಸ್ತಿ ಆಯ್ತು ಎಂದ ಸಚಿವ ಡ್ರಗ್ಸ್ ತಗೊಂಡ್ರಾ ಕಂಗನಾ ? ನಟಿ ಕೊಟ್ಟ ಹೇಳಿಕೆ ವೈರಲ್

2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂಬ ಕಂಗನಾ ರಣಾವತ್(Kangana Ranaut) ಹೇಳಿಕೆಯನ್ನು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಖಂಡಿಸಿದ್ದಾರೆ. ಬಾಲಿವುಡ್(Bollywood) ನಟಿ ಮಲಾನಾ ಕ್ರೀಮ್ ಅನ್ನು ಹೆಚ್ಚು ಸೇವಿಸುತ್ತಿರುವಂತೆ ತೋರುತ್ತಿದೆ ಎಂದು ಸಚಿವ ಟೀಕಿಸಿದ್ದಾರೆ. 2014 ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿತು ಎಂದು ನಟಿ ಕಂಗನಾ ರಣಾವತ್ ಹೇಳಿಕೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ. ಅವರು ಸ್ವಾತಂತ್ರ್ಯ ಹೋರಾಟಗಾರರನ್ನು ಅವಮಾನಿಸಿದ್ದಾರೆ. ಕೇಂದ್ರವು ಕಂಗನಾ ಅವರಿಂದ ಪದ್ಮಶ್ರೀ(Padma Shri) ಹಿಂಪಡೆಯಬೇಕು ಮತ್ತು ಅವರನ್ನು ಬಂಧಿಸಬೇಕು ಎಂದು ಸಚಿವರು ಹೇಳಿದ್ದಾರೆ.

ಭಾರತದ ಸ್ವಾತಂತ್ರ್ಯ ಚಳವಳಿಯ ಬಗ್ಗೆ ಮಾತನಾಡಿ, ಕಂಗನಾ ಇತ್ತೀಚೆಗೆ 2014 ರಲ್ಲಿ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ಸಿಕ್ಕಿತು ಎಂದು ಹೇಳಿದ್ದಾರೆ. ಸ್ಪಷ್ಟವಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದನ್ನು ಉಲ್ಲೇಖಿಸಿ ಹೀಗೆ ಹೇಳಿದ್ದಾರೆ. ವೀರ್ ಸಾವರ್ಕರ್ ಕುರಿತ ಪ್ರಶ್ನೆಗೆ ಉತ್ತರಿಸಿದ ಕಂಗನಾ, ಕಾಂಗ್ರೆಸ್ ಬ್ರಿಟಿಷರ ವಿಸ್ತರಣೆಯಾಗಿದೆ. ದೇಶಕ್ಕೆ 1947 ರಲ್ಲಿ ಭಿಕ್ಷೆ ಸಿಕ್ಕಿತು. 2014 ರಲ್ಲಿ ನಿಜವಾದ ಸ್ವಾತಂತ್ರ್ಯ ಬಂದಿತು ಎಂದು ಹೇಳಿದ್ದಾರೆ.

Kangana Ranaut: ಬೇಗ ಮದ್ವೆಯಾಗ್ಬೇಕು, ಮ್ಯಾರೇಜ್ ಪ್ಲಾನ್ಸ್ ಹೇಳಿದ ಕ್ವೀನ್

ಈ ಕಾಮೆಂಟ್ ರಾಜಕಾರಣಿಗಳು, ಬಾಲಿವುಡ್ ಸೆಲೆಬ್ರಿಟಿಗಳು ಕಂಗನಾ ವಿರುದ್ಧ ವಾಗ್ದಾಳಿ ನಡೆಸುವುದರೊಂದಿಗೆ ದೊಡ್ಡ ವಿವಾದವನ್ನು ಹುಟ್ಟುಹಾಕಿದೆ. ನಟಿ ಕಂಗನಾ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಕಂಗನಾ ಅವರ ಕಾಮೆಂಟ್ ಸುದ್ದಿಯಾಗಿದೆ. ಕಂಗನಾರ ಪದ್ಮಶ್ರೀ ಪ್ರಶಸ್ತಿ ವಾಪಸ್ ತೆಗೆದುಕೊಳ್ಳುವಂತೆ ಕಾಂಗ್ರೆಸ್ ಒತ್ತಾಯಿಸಿದರೆ, ಬಿಜೆಪಿ ಸಂಸದ ವರುಣ್ ಗಾಂಧಿ ಇದು ಹುಚ್ಚುತನವೋ ಅಥವಾ ದೇಶದ್ರೋಹವೋ ಎಂದು ಕಿಡಿಕಾರಿದ್ದಾರೆ. ದೆಹಲಿ ಬಿಜೆಪಿ ವಕ್ತಾರ ಪ್ರವೀಣ್ ಶಂಕರ್ ಕಪೂರ್ ಅವರು ಸ್ವಾತಂತ್ರ್ಯ ಹೋರಾಟಗಾರನ ಮಗನಾಗಿರುವುದರಿಂದ ಕಂಗನಾ ಅವರ ಹೇಳಿಕೆಯು ವಾಕ್ ಸ್ವಾತಂತ್ರ್ಯದ ಅತ್ಯಂತ ದೊಡ್ಡ ದುರುಪಯೋಗವಾಗಿದೆ ಎಂದು ಹೇಳಿದ್ದಾರೆ.

ಬಾಲಿವುಡ್ ನಟನ ವಿರುದ್ಧ ದೇಶದ್ರೋಹದ ಹೇಳಿಕೆಗಾಗಿ ಪ್ರಕರಣ ದಾಖಲಿಸುವಂತೆ ಕೋರಿ ಆಮ್ ಆದ್ಮಿ ಪಕ್ಷವು ಮುಂಬೈ ಪೊಲೀಸರಿಗೆ ಈಗಾಗಲೇ ದೂರು ಸಲ್ಲಿಸಿದೆ.

ಈ ನಡುವೆ ನಟಿ ತಮ್ಮ ವಿವಾಹದ ಪ್ಲಾನ್ ಬಗ್ಗೆಯೂ ಮಾತನಾಡಿದ್ದಾರೆ. ಈಗ ಆ ವಿಚಾರವೂ ವೈರಲ್ ಆಗಿದೆ. ತಾನು ಮದುವೆಯಾಗಿ ಮುಂದಿನ ಐದು ವರ್ಷಗಳಲ್ಲಿ ಮಕ್ಕಳನ್ನು ಹೊಂದಲು ಬಯಸುತ್ತೇನೆ ಎಂದು ನಟಿ ಕಂಗನಾ ರಣಾವತ್ ಬುಧವಾರ ಹೇಳಿದ್ದಾರೆ. ಹೊಸ ಸಂದರ್ಶನದಲ್ಲಿ, ಅವರು ವೈಯಕ್ತಿಕವಾಗಿ ಸಂತೋಷದ ಸ್ಥಳದಲ್ಲಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಶೀಘ್ರದಲ್ಲೇ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಾನು ಖಂಡಿತವಾಗಿಯೂ ಮದುವೆಯಾಗಲು ಮತ್ತು ಮಕ್ಕಳನ್ನು ಹೊಂದಲು ಬಯಸುತ್ತೇನೆ. ನಾನು ಐದು ವರ್ಷಗಳ ಒಳಗೆ ತಾಯಿಯಾಗಿ ಮತ್ತು ಹೆಂಡತಿಯಾಗಿ ಮತ್ತು ಸಹಜವಾಗಿ ನವ ಭಾರತದ ದೃಷ್ಟಿಯಲ್ಲಿ ಸಕ್ರಿಯವಾಗಿ ಭಾಗವಹಿಸುವ ವ್ಯಕ್ತಿಯಾಗಿ ನನ್ನನ್ನು ನಾನು ಕಾಣುತ್ತೇನೆ ಎಂದು ಅವರು ಹೇಳಿದ್ದಾರೆ.

ಸಂಗಾತಿಯ ಬಗ್ಗೆ ಕೇಳಿದಾಗ ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ ಎಂದಿದ್ದಾರೆ. ನಟಿ ಪ್ರೀತಿಯಲ್ಲಿ ಸಂತೋಷದ ಸ್ಥಳದಲ್ಲಿ ಇರುವುದಾಗಿ ಹೇಳಿದ್ದಾರೆ. ನಿಮಗೆ ಶೀಘ್ರದಲ್ಲೇ ತಿಳಿಯುತ್ತದೆ ಎಂದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?