ಪ್ರಕಾಶ್ ರಾಜ್ ಪರ ನಿಂತ ಶ್ರೀನಿಜಾಗೆ ಚಪ್ಪಲಿಯಲ್ಲಿ ಹೊಡೆತೇನೆ ಎಂದ ಮೋಹನ್ ಬಾಬು ಬೆಂಬಲಿಗರು

By Suvarna NewsFirst Published Oct 19, 2021, 5:14 PM IST
Highlights

ಮಾ ಪ್ರಮಾಣ ವಚನ ಸ್ವೀಕರಿಸುವ ಸಮಯಲ್ಲಿ ಕಾರ್ಯಕ್ರಮಕ್ಕೆ ನುಗ್ಗಿ ನಟಿ ಶ್ರೀನಿಜ ಮೋಹನ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 

ಇದೇನಪ್ಪಾ ಚಿತ್ರರಂಗದ ಎಲೆಕ್ಷನ್‌ಗೆ ರಾಜ್ಯ ವಿಧಾನಸಭೆ ಚುನಾವಣೆ ರೇಂಜ್‌ಗೆ ಕವರೇಜ್‌ ಸಿಕ್ಕಿದೆ ಎಂದು ಮಾತನಾಡಿಕೊಳ್ಳುತ್ತಿರುವುದು ಒಬ್ಬರಾ, ಇಬ್ಬರಾ?  ಕೆಲವು ದಿನಗಳ ಹಿಂದೆ ಮೂವಿ ಆರ್ಟಿಸ್ಟ್‌ ಅಸೋಸಿಯೇಷನ್‌ ಅಧ್ಯಕ್ಷರಾಗಿ ಮಂಚು ವಿಷ್ಣು ಪ್ರಮಾಣ ವಚನ ಸ್ವೀಕರಿಸಿದ್ದರು. ಪ್ರಮಾಣ ವಚನ ಕಾರ್ಯಕ್ರಮಕ್ಕೆ ರಾಜಕೀಯ ಗಣ್ಯರು, ಚಿತ್ರರಂಗ ಹಿರಿಯರನ್ನು ಕರೆಯಲಾಗಿತ್ತು. ಮೆಗಾ ಸ್ಟಾರ್ ಚಿರಂಜೀವಿ (Mega Star Chiranjeevi) ಕುಟುಂಬದಿಂದ ಯಾರೂ ಬಂದಿಲ್ಲ, ಅದು ಇದು ಅಂತ ಗಾಸಿಪ್‌ಗಳು (Gossips) ಕೇಳಿ ಬಂದ ಕಾರಣ ಜನರು ಈ ಒಂದು ಘಟನೆ ಬಗ್ಗೆ ಗಮನನೇ ನೀಡಿಲ್ಲ ನೋಡಿ.....

'ಮಾ' ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದ ಮಂಚು; ಮೆಗಾ ಸ್ಟಾರ್ ಕುಟುಂಬ ಬಂದಿಲ್ಲ

ಹೌದು! ಮಂಚು ವಿಷ್ಣು (Manchu Vishnu) ಪ್ರಮಾಚ ವಚನ (Oathing Ceremony) ಪಡೆದ ನಂತರ ಮೋಹನ್ ಬಾಬು (Mohan Babu) ಮಾ ಸಂಸ್ಥೆ ಮತ್ತು ಮಂಚು, ತಮ್ಮ ಜಯದ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ನಟಿ ಶ್ರೀನಿಜ (Srinija) ನುಗ್ಗಿ ಅವಾಚ್ಯ ಶಬ್ಧಗಳನ್ನು  ಬಳಸಿ ಮೋಹನ್ ಬಾಬುಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.  'ಏಯ್ ಮೋಹನ್ ಬಾಬು, ಬಾರೋ ಕೆಳಗೆ, ಕಾಳಿಯಂತೆ ಬಂದಿದ್ದೀನಿ. ನಿನಗೆ ನಾನು ಚಾಲೆಂಜ್ (Chellange) ಮಾಡ್ತೀನಿ. ನನ್ನನ್ನು ಎದುರಿಸು. ಮಹಿಳೆಯರೆಂದರೆ (Women) ನಿನಗೆ ಗೌರವ ಇಲ್ವಾ? ಪ್ರಶ್ನೆ ಮಾಡಿದವರನ್ನು ಕೆಟ್ಟ ಭಾಷೆಯಲ್ಲಿ ಬಯ್ಯತ್ತೀಯಾ, ಹೊಡೆಯಲು ಬರುತ್ತೀಯಾ. ನಿನ್ನ ವಿಷಯ ನನಗೆ ಗೊತ್ತಿಲ್ಲ ಅಂದುಕೊಳ್ಳಬೇಡ. ನಿಮ್ಮ ಆಟಗಳು ನನ್ನ ಬಳಿ ನಡೆಯುವುದಿಲ್ಲ. ಪವನ್ ಕಲ್ಯಾಣ್‌ರನ್ನು (Pawan Kalyan) ರಾಜಕೀಯವಾಗಿ ಎದುರಿಸಲು ಆಗದೇ ಮಾ ಮೂಲಕ ರಾಜಕೀಯ ಮಾಡುತ್ತೀದ್ದೀರಾ?' ಎಂದು ಕೂಗಾಡಿದ್ದಾರೆ. 

ತಕ್ಷಣವೇ ಪೊಲೀಸರು ಶ್ರೀನಿಜರನ್ನು ಹೊರಗಡೆ ಕರೆದುಕೊಂಡು ಬಂದಿದ್ದಾರೆ. ಅಲ್ಲಿದ್ದ ಮಾಧ್ಯಮಗಳ  (Media)ಜೊತೆ ಶ್ರೀನಿಜ ಮಾತನಾಡಿದ್ದಾರೆ.  'ಸಾಲ ತೀರಿಸಿಕೊಳ್ಳಲು ಸಿಎಂ ಜಗನ್ ಮೋಹನ್‌ರೆಡ್ಡಿ (Jagan Mohan Reddy) ಬಳಿ ಹೋಗಿ ಆತನ ಕಾಲು ಹಿಡಿದು, ಪವನ್ ಕಲ್ಯಾಣ್‌ಗೆ ಮಾ ಸಂಘದಲ್ಲಿ ಹಿನ್ನಡೆ ಅನುಭವಿಸುವಂತೆ ಮಾಡುತ್ತೇನೆ ಎಂದು ಹೇಳಿ ಕೋಟ್ಯಂತರ ರೂಪಾಯಿ ಹಣ ತೆಗೆದುಕೊಂಡು ಬಂದಿದ್ದಾನೆ, ಆ ಮೋಹನ್ ಬಾಬು. ಅವನು ಮತ್ತು ಅವನ ಕುಟುಂಬದವರು ಈ ಕೊಡಲೇ ಮಾ ಸಂಘ ಬಿಟ್ಟು ಹೊರಡಬೇಕು,' ಎಂದಿದ್ದಾರೆ. 

ನಟ ಮೋಹನ್ ಬಾಬುಗೆ ಆಗಂತುಕರಿಂದ ಕೊಲೆ ಬೆದರಿಕೆ; ಆತಂಕದಲ್ಲಿ ಕುಟುಂಬ!

ಮೋಹನ್ ಬಾಬು ಕಡೆಯವರು ಶ್ರೀನಿಜ ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಲು ಬಂದಾಗ 'ನಿನಗೆ ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದಿದ್ದಾರೆ. ಈ ಸಾಲುಗಳು ಮಾಧ್ಯಮಗಳ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಆಗ ಶ್ರೀನಿಜ ಅವರು ನಿನಗೆ ಮೊದಲು ಚಪ್ಪಲಿಯಲ್ಲಿ ಹೊಡೆಯುತ್ತೇನೆ ಎಂದು ಮತ್ತೆ ಜಗಳ ಆರಂಭಿಸಿದ್ದಾರೆ. 

ಈ ಹಿಂದೆ ಕೂಡ ಮೋಹನ್ ಬಾಬು ಮಾ ಅಧ್ಯಕ್ಷರಾಗಿದ್ದಾಗ ಕಲಾವಿದರ ಪರ ನಿಲ್ಲಲಿಲ್ಲ, ಎಂಬ ಆರೋಪವಿದೆ. ಈಗ ಮಂಚು ವಿಷ್ಣು ಕೂಡ ಯಾರ ಪರವೂ ನಿಲ್ಲುವುದಿಲ್ಲ. ಬದಲಿಗೆ ಅವರ ಕುಟುಂಬವನ್ನು ಬೆಳೆಯಿಸಿಕೊಳ್ಳುತ್ತಾರೆ, ಹಣ ಮಾಡುತ್ತಾರೆ. ಪ್ರಕಾಶ್ ರಾಜ್ (Prakash Raj) ಒಳ್ಳೆಯ ವ್ಯಕ್ತಿ. ಅವರ ಸಾಲ, ಮನೆ ವಿಷಯ, ಹೆಂಡತಿ - ಮಕ್ಕಳ ವಿಷಯವನ್ನು ಚುನಾವಣೆ ಪ್ರಚಾರದ ವೇಳೆ ಎಳೆದು ತಂದು, ಅವರನ್ನು ಅವಮಾನ ಮಾಡಿದ್ದಾರೆ. ಅದನ್ನು ಮಾ ಮಾಜಿ ಅಧ್ಯಕ್ಷ ಬಹಳ ಕೆಟ್ಟ ಪದಗಳನ್ನು ಬಳಸಿ ಗೇಲಿ ಮಾಡಿದ್ದಾರೆ. ನಿನಗೆ ಮಹಿಳೆಯರೆಂದರೆ ಗೌರವ ಇಲ್ವಾ? ಮಹಿಳೆಯರ ಎದುರು ಇಟ್ಟುಕೊಳ್ಳಬೇಡ ಬೇಗ ಮುಳುಗಿಸಿ ಬಿಡುತ್ತೇವೆ,' ಎಂದು ಶ್ರೀನಿಜ ಎಚ್ಚರಿಕೆ ನೋಡಿದ್ದಾರೆ.

click me!