
ಹಿಂದಿ ಕಿರುತೆರೆ ಲೋಕದ (Hindi Small Screen World) ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 15ರಲ್ಲಿ (Bigg boss 15 Hindi) ನಿರೀಕ್ಷೆಗೂ ಮೀರಿದ ಫಾರ್ವರ್ಡ್‌ನೆಸ್ (Forwardness) ತೋರಿಸುತ್ತಿದೆ. ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ (Salman Khan) ನಿರೂಪಣೆಯಲ್ಲಿ ನಡೆಯುತ್ತಿರುವ ಈ ರಿಯಾಲಿಟಿ ಶೋ (Reality Show) ಬಗ್ಗೆ ವೀಕ್ಷಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಹೀಗಾಗಿ ವೀಕೆಂಡ್ (Weekend) ಕಾರ್ಯಕ್ರಮದಲ್ಲಿ ಸಲ್ಮಾನ್ ಓಪನ್ ರೊಮ್ಯಾನ್ಸ್ (Romance) ಮಾಡುತ್ತಿದ್ದವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇತ್ತೀಚಿಗೆ ಆರಂಭವಾದ ಬಿಗ್ ಬಾಸ್ ಸೀಸನ್ 15 ಕೇವಲ ಒಂದು ವಾರ ಪ್ರಸಾರ ಮುಗಿಸಿದೆ ಅಷ್ಟೆ. ಆಗಲೇ ರೊಮ್ಯಾನ್ಸ್ (Romance) ಮಿತಿ ಮೀರುತ್ತಿದೆ. ಐಶಾನ್ ಸೆಹಗಲ್ (Ieshaan Sehgaal)ಮತ್ತು ಮೀಶಾ ಅಯ್ಯರ್ (Miesha Iyer) ರಾಷ್ಟ್ರೀಯ ವಾಹಿನಿಯಲ್ಲಿ ಕ್ಯಾಮೆರಾ ಹಾಗೂ ಕುಟುಂಬಸ್ಥರ ಬಗ್ಗೆ ಚಿಂತಿಸದೇ ಲಿಪ್‌ಲಾಕ್ (LipLock) ಮಾಡಿದ್ದಕ್ಕೆ ಸಲ್ಮಾನ್ ಗರಂ ಆಗಿದ್ದಾರೆ. 'ನೀವು ಏನ್ ಮಾಡುತ್ತಿದ್ದೀರಿ? ಟಿವಿಯಲ್ಲಿ ಇದೆಲ್ಲಾ ಹೇಗೆ ಕಾಣಿಸುತ್ತಿರುತ್ತದೆ ಎಂಬ ಕಲ್ಪನೆ ನಿಮಗಿದ್ಯಾ? ತೆರೆ ಮೇಲೆ ಒಳ್ಳೆಯ ರೀತಿಯಲ್ಲಿ ಕಾಣಿಸುತ್ತಿಲ್ಲ. ನೀವು ಈಗ ಮಾಡುತ್ತಿರುವ ಕೆಲಸಕ್ಕೆ ನೀವೇ ಜವಾಬ್ದಾರರು. ಭವಿಷ್ಯದಲ್ಲಿ ನೀವಿಬ್ಬರೂ ಒಟ್ಟಾಗಿಲ್ಲ ಅಂದ್ರೆ, ಇಂದಿನ ನಿಮ್ಮ ನಡವಳಿಕೆ ಹೇಗೆ ಕಾಣಿಸಬಹುದು ಎಂಬ ಕಲ್ಪನೆ ಇದ್ಯಾ? ಎಲ್ಲ ದೃಷ್ಟಿಕೋನದಿಂದಲೂ ನೀವು ಯೋಚನೆ ಮಾಡಿ,' ಎಂದು ಗಟ್ಟಿ ಧ್ವನಿಯಲ್ಲಿ ಜನರ ಮಾತುಗಳನ್ನು ಒಳ್ಳೇಯ ರೀತಿಯಲ್ಲಿಯೇ ಸ್ಪರ್ಧಿಗಳಿಗೆ ಮುಟ್ಟಿಸಿದ್ದಾರೆ ನಿರೂಪಕ ಸಲ್ಮಾನ್ ಖಾನ್.
ಅಲ್ಲದೇ ಮೀಶಾ ಸ್ಮೋಕಿಂಗ್ ರೂಮ್ (Smoking Room) ಬಿಟ್ಟು ಮನೆಯ ಬೇರೆ ಎಲ್ಲಾ ಸ್ಥಳಗಳಲ್ಲೂ ಸಿಗರೇಟ್ ಸೇದುತ್ತಿರುವುದಕ್ಕೆ ಇನ್ನಿತರೆ ಸ್ಪರ್ಧಿಗಳು ಬೇಸರ ವ್ಯಕ್ತ ಪಡಿಸಿದ್ದಾರೆ. 'ಧೂಮಪಾನ ಮಾಡೋದು ಬಿಡೋದು ನಿಮಗೆ ಬಿಟ್ಟಿದ್ದು. ಆದರೆ ಎಲ್ಲಿ ಮಾಡಬೇಕು ಎಂಬುದಕ್ಕೆ ಒಂದು ನೀತಿ ಇರುತ್ತದೆ,' ಎಂದು ಸಲ್ಲು ಎಚ್ಚರಿಕೆ ನೀಡಿದ್ದಾರೆ. ರಿಯಾಲಿಟ ಶೋ (Reality Show) ಆರಂಭವಾಗಿ ಎರಡೇ ದಿನಕ್ಕೆ ಇಬ್ಬರ ನಡುವೆ ಪ್ರೀತಿ ಹುಟ್ಟಿದೆ ಅಂದ್ರೆ ಇದು ಫೇಕ್ ಲವ್ ಎಂದು ಅನೇಕ ಸೆಲೆಬ್ರಿಟಿಗಳು ಕೂಡ ಅಭಿಪ್ರಾಯ ವ್ಯಕ್ತ ಪಡಿಸುತ್ತಿದ್ದಾರೆ.
ಆರಂಭದಲ್ಲಿ ಐಶಾನ್ ಮತ್ತ ಮೀಶಾ ಸ್ನೇಹಿತರಾಗಿದ್ದರು, ಮೂರನೇ ದಿನ ಐಶಾನ್ ಅವರು ಮೀಶಾಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಅಂದಿನಿಂದ ಇಬ್ಬರೂ ಒಟ್ಟಿಗೆ ಸಮಯ ಕಳೆಯುತ್ತಿದ್ದಾರೆ. ಈ ಜೋಡಿಯ ನಡುವಳಿಕೆ ನೋಡಿ ಮನೆಯಲ್ಲಿರುವ ಸದಸ್ಯರೇ ಆಡಿಕೊಳ್ಳುತ್ತಿದ್ದಾರೆ. ಶೋ ಗೆಲ್ಲುವುದಕ್ಕೆ ಇಬ್ಬರೂ ಪ್ರೀತಿ-ಪ್ರೇಮ-ರೊಮ್ಯಾನ್ಸ್ ಮಾರ್ಗ ಹಿಡಿದುಕೊಂಡಿದ್ದಾರೆ ಎಂದು ಕೊಂಕು ಮಾತುಗಳನ್ನು ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.