ಟ್ರೋಲಿಗರ ಫೇವರೆಟ್ ರಾಕೇಶ್ ಮಾಸ್ಟರ್ ಇನ್ನಿಲ್ಲ

By Vaishnavi ChandrashekarFirst Published Jun 20, 2023, 10:02 AM IST
Highlights

ಅಂಗಾಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ ಖ್ಯಾತ ತೆಲುಗು ಕೊರಿಯೋಗ್ರಾಫರ್ ರಾಕೇಶ್ ಮಾಸ್ಟರ್. 

ತೆಲುಗು ಚಿತ್ರರಂಗದ ಟಾಪ್ ಕೊರಿಯೋಗ್ರಾಫರ್ ಎಸ್‌ ರಾಮಾ ರಾವ್ ಅಂಗಾಗ ವೈಫಲ್ಯದಿಂದ ಅಗಲಿದ್ದಾರೆ. ರಾಮಾ ರಾವ್‌ ಹೆಸರಿಗಿಂತ ಹೆಚ್ಚಾಗಿ ರಾಕೇಶ್ ಮಾಸ್ಟರ್ ಎಂದೇ ಜನಪ್ರಿಯತೆ ಪಡೆದೆದಿದ್ದಾರೆ. 18 ಜೂನ್ 2023 ಭಾನುವಾರ ಗಾಂದಿ ಆಸ್ಪತ್ರೆಯಲ್ಲಿ ರಾಕೇಶ್ ಚಿಕಿತ್ಸೆ ಪಡೆಯುತ್ತಿದ್ದರು. 

53 ವರ್ಷದ ರಾಕೇಶ್ 20 ದಿನಗಳ ಕಾಲ ವಿಶಾಪಟ್ಟಣ್ಣಂ ಸಿನಿಮಾ ಚಿತ್ರೀಕರಣ ಮುಗಿಸಿಕೊಂಡು ಹೈದರಾಬಾದ್‌ಗೆ ಬಂದಿದ್ದಾರೆ. ತೀರಾ ವಾಂತಿ ಮಾಡಿಕೊಳ್ಳುತ್ತಿದ್ದರು ಎನ್ನುವ ಕಾರಣಕ್ಕೆ ಮನೆ ಹತ್ತಿರವಿದ್ದ ಖಾಸಗಿ ಆಸ್ಪತ್ರೆಯಲ್ಲಿ ಶನಿವಾರ ದಾಖಲಿಸಿದ್ದಾರೆ. ದೇಹ ಡೀ-ಹೈಡರೆಟ್‌ ಆಗಿ ಸನ್ ಸ್ಟ್ರೋಕ್ ಆಗಿದೆ  ಅಲ್ಲದೆ ದಿನ ರಾತ್ರಿ ಮೊಸರನ್ನ ತಿಂದು ಮಲಗುತ್ತಿದ್ದರು ಎಂದು ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಇದು. ಚಿಕಿತ್ಸೆ ಪಡೆದು ಮನೆ ಬಂದ ರಾಕೇಶ್ ಭಾನುವಾರ ತಲೆ ತಿರುಗಿ ಬಿದ್ದಿದ್ದಾರೆ ಆಗ ಮತ್ತೊಮ್ಮೆ ಗಾಂಧಿ ಆಸ್ಪತ್ರೆಗೆ ಸೇರಿಸಿದ್ದಾರೆ. ಲೋ ಬಿಪಿ ಆಗಿತ್ತು. 

Latest Videos

ದೀಪಿಕಾರಿಂದ ಶ್ರದ್ಧಾವರೆಗೆ: ಸುಶಾಂತ್ ಸಿಂಗ್​ ಸಾವಿನ ಸ್ಕ್ಯಾನರ್ ಅಡಿ ಸಿಲುಕಿದ ಬಾಲಿವುಡ್​ ಸ್ಟಾರ್ಸ್​!

ಆಸ್ಪತ್ರೆ ಅಧೀಕ್ಷಕ ಎಂ.ರಾಜಾ ರಾವ್ ಹೇಳಿರುವ ಪ್ರಕಾರ ಪಾರ್ಶ್ವವಾಯುದಿಂದ ಅಗಲಿರಬಹುದು ಅದೆ  ಸಾವಿಗೆ ಮುಖ್ಯ ಕಾರಣ ಎಂದು ಕರೆಯಲಾಗುವುದಿಲ್ಲ ಎಂದಿದ್ದಾರೆ. 'ರಾಕೇಶ್ ಅವರು ಅವರು ದೀರ್ಘಕಾಲದ ಮಧ್ಯಪಾನ ಸೇವಿಸುತ್ತಿದ್ದರು ಮತ್ತು ಅವರ ಮಧುಮೇಹ ನಿಯಂತ್ರಣದಲ್ಲಿಲ್ಲ. ಸ್ಥಿತಿ ಗಂಭೀರವಾಗಿ ಆಸ್ಪತ್ರೆ ಸೇರಿದ ಸಮಯದಲ್ಲಿ ರಾಕೇಶ್ ಬಿಪಿ 60/40 ಆಗಿತ್ತು ನಿಮಿಷದಿಂದ ನಿಮಿಷಕ್ಕೆ ಕಡಿಮೆ ಆಗಿತ್ತು. ಹಲವು ಗಂಟೆಗಳ ಕಾಲ ವೆಂಟಿಲೇಟರ್‌ ಕೂಡ ಹಾಕಲಾಗಿತ್ತು. ಉಸಿರು ಇಡಿಯಲಾಗದೆ ಸಂಜೆ 5 ಗಂಟೆಗೆ ಅಗಲಿದರು' ಎಂದು ರಾಜಾ ರಾವ್ ತಿಳಿಸಿದ್ದಾರೆ. 

ಸುಮಾರು 1500ಕ್ಕೂ ಹೆಚ್ಚು ಸಿನಿಮಾಗಳಿಗೆ ಡ್ಯಾನ್ಸ್‌ ಕೊರಿಯೋಗ್ರಾಫಿ ಮಾಡಿರುವ ರಾಕೇಶ್  ಯುಟ್ಯೂಬ್ ಚಾನೆಲ್ ಹೊಂದಿದ್ದರು. ಮೂಲತಃ ತಿರುಪತಿಯವರಾಗಿದ್ದು ಮಾಸ್ಟರ್ ಆಗುವ ಮುನ್ನ ಮುಕ್ಕು ರಾಜು ಜೊತೆ ಕೆಲಸ ಮಾಡುತ್ತಿದ್ದರು. ತೆಲುಗು ಸ್ಟಾರ್ ನಟನರಾದ ವೆಂಕಟೇಶ್, ನಾಗಾರ್ಜುನ, ಮಹೇಶ್ ಬಾಬು, ರಾಮ್ ಚರಣ್ ಸೇರಿದಂತೆ ಅನೇಕರಿಗೆ ಕೊರಿಯೋಗ್ರಾಫ್ ಮಾಡಿದ್ದಾರೆ. 

ಖ್ಯಾತ ವಿಲನ್ ಕಝಾನ್​ ಖಾನ್​ ಹೃದಯಾಘಾತದಿಂದ ನಿಧನ

ಕೆಲವೊಂದು TDP ಗ್ರೂಪ್‌ಗಳು ರಾಕೇಶ್‌ ಸಾವಿಗೆ ಆಂಧ್ರ ಪ್ರದೇಶ್ ಸರ್ಕಾರ ಕಾರಣ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ. ಆಂಧ್ರದಲ್ಲಿ ಸಿಗುವ ಚೀಪ್ ಮಧ್ಯಪಾನಗಳನ್ನು ಸೇವಿಸಿದಕ್ಕೆ ಅಂಗಾಗ ವೈಫಲ್ಯವಾಗಿ ಅನಾರೋಗ್ಯವಾಗಿರುವುದು ಎನ್ನಲಾಗಿದೆ.  ಅಲ್ಲದೆ ಸರ್ಕಾರ ಸಂತಾಪ ಸೂಚಿಸಿಲ್ಲ ಅಂದ್ರೆ ತಮ್ಮ ತಪ್ಪು ಅರಿವಾಗಿ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ರಾಕೇಶ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ತಮ್ಮನ್ನು ತಾವೇ ಟ್ರೋಲ್ ಮಾಡಿಕೊಳ್ಳುತ್ತಿದ್ದರು ಹಾಗೂ ಸರ್ಕಾರದ ಕೆಲವೊಂದು ಕೆಲಸಗಳ ಬಗ್ಗೆ ಕಾಮೆಂಟ್ ಮಾಡುತ್ತಿದ್ದರು ಇದೆಲ್ಲಾ ಟಾರ್ಗೆಟ್ ಮಾಡಲಾಗಿದೆ ಎನ್ನುವ ಮಾತುಗಳಿದೆ. 

ಏನೇ ವಿಡಿಯೋ ಟ್ರೋಲ್ ಆದರೂ ಅದಕ್ಕೆ ರಾಕೇಶ್ ಮುಖ ಬಳಸಿ ಮೀಮ್ಸ್ ಮಾಡುತ್ತಿದ್ದರು. ಹೀಗಾಗಿ ಮೀಮ್ಸ್‌ಗಳ ರಾಜಾ ರಾಕೇಶ್‌ ಮಾಸ್ಟರ್ ಎನ್ನುವ ಹೆಸರು ಕೂಡ ಇತ್ತು. 

click me!