ಹೆಣ್ಣು ಮಗುವಿಗೆ ತಂದೆಯಾದ RRR ರಾಮ್ ಚರಣ್; ಮೆಗಾ ಫ್ಯಾಮಿಲಿಯಲ್ಲಿ ಫುಲ್ ಸಂಭ್ರಮ!

Published : Jun 20, 2023, 08:41 AM ISTUpdated : Jun 21, 2023, 03:45 PM IST
ಹೆಣ್ಣು ಮಗುವಿಗೆ ತಂದೆಯಾದ RRR ರಾಮ್ ಚರಣ್; ಮೆಗಾ ಫ್ಯಾಮಿಲಿಯಲ್ಲಿ ಫುಲ್ ಸಂಭ್ರಮ!

ಸಾರಾಂಶ

ಮಹಾಲಕ್ಷ್ಮಿಯನ್ನು ಬರ ಮಾಡಿಕೊಂಡ ಮೆಗಾ ಸ್ಟಾರ್ ಚಿರಂಜೀವಿ ಫ್ಯಾಮಿಲಿ. ಮಗಳಿಗೆ ಏನೆಂದು ಹೆಸರಿಡಬಹುದು?  

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಪುತ್ರ ರಾಮ್ ಚರಣ್ ಹಾಗೂ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಮಹಾಲಕ್ಷ್ಮಿ ಆಗಮನದ ಬಗ್ಗೆ ಅಪೋಲೋ ಆಸ್ಪತ್ರೆ ಲೆಟರ್‌ಹೆಡ್ ಮೂಲಕ ವಿಚಾರ ತಿಳಿಸಿದ್ದಾರೆ. ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿರುವ ಆಸ್ಪತ್ರೆಯಲ್ಲಿ ಜೆನಿಸಿರುವ ಪುಟ್ಟ ಲಕ್ಷ್ಮಿಗೆ ಏನೆಂದು ಹೆಸರಿಡಬೇಕು ಎಂದು ಅಭಿಮಾನಿಗಳು ಈಗಾಗಲೆ ಲೆಕ್ಕಚಾರ ಹಾಕುತ್ತಿದ್ದಾರೆ. 

'ಮಿಸೆಸ್‌ ಉಪಾಸನಾ ಕಮಿನೇನಿ ಕೊನಿಡೆಲಾ ಹಾಗೂ ಮಿಸ್ಟರ್ ರಾಮ್ ಚರಣ್ ಕೊನಿಡೆಲಾ ಹೈದರಾಬಾದ್‌ನ ಜುಬ್ಲಿ ಹಿಲ್ಸ್‌ನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ 20 ಜ್ಯೂನ್ 2023ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ' ಎಂದು ಅಪೋಲೋ ಆಸ್ಪತ್ರೆ ಮೆಡಿಕಲ್ ಬುಲೆಟಿನ್‌ ಮೂಲಕ ಅನೌನ್ಸ್ ಮಾಡಿದ್ದಾರೆ. 

ರಾಮ್ ಚರಣ್ ದಂಪತಿಗೆ ವಿಶೇಷ ತೊಟ್ಟಿಲು ಗಿಫ್ಟ್: ಸಂತಸ ಹಂಚಿಕೊಂಡ ಉಪಾಸನಾ

ಕೆಳವು ದಿನಗಳ ಹಿಂದೆ ಉಪಾಸನಾ ಮತ್ತು ರಾಮ್ ಚರಣ್ 11ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಕಳೆದ ವರ್ಷ ಅವರ ಮದುವೆಯ  ವಾರ್ಷಿಕೋತ್ಸವದ ನಂತರ, ದಂಪತಿ ಕುಟುಂಬವನ್ನು ಪ್ರಾರಂಭಿಸುವ ಬಯಕೆ ಘೋಷಿಸಿದರು. ಅದರೆ  ಡಿಸೆಂಬರ್ 12, 2022 ರಂದು, ದಂಪತಿ  ಪೋಷಕರಾಗಲಿರುವ ವಿಷಯವನ್ನು  ಘೋಷಿಸಿದರು. ತಾಯಂದಿರ ದಿನವಾರ ಮೇ 14ರಂದು ಉಪಾಸನಾ ಸಾಮಾಜಿಕ ಜಾಲತಾಣದಲ್ಲಿ ಬೇಬಿ ಬಂಪ್​ ಷೋ ಕೂಡ ಮಾಡಿದ್ದರು.

ಸಾಮಾನ್ಯವಾಗಿ ಮಗುವನ್ನು ಮಲಗಿಸುವುದಕ್ಕೆ ತಾಯಿ ಲಾಲಿ ಹಾಡುತ್ತಾರೆ ಇಲ್ಲ ಅಂದೆ ಅಜ್ಜ ಅಜ್ಜಿ ಕಥೆ ಹೇಳುತ್ತಾರೆ ಆದರೆ ರಾಮ್ ಚರಣ್ ಪತ್ನಿ ತುಂಬಾನೇ ಡಿಫರೆಂಟ್.  ಕಾಲ ಭೈರವ ಎಂಬುವವರು ರಾಮ್ ಮತ್ತು ಉಪಾಸನಾ ಮಗಳು ನೆಮ್ಮದಿಯಾಗಿ ಮಲಗಬೇಕು ಎಂದು ಮ್ಯೂಸಿಕಲ್ ಟ್ಯೂನ್ ಕ್ರಿಯೇಟ್ ಮಾಡಿದ್ದಾರೆ. ಈ ಮ್ಯೂಸಿಕಲ್ ಟ್ಯೂನ್ ಕೇಳಿದರೆ ಮಕ್ಕಳ ದಿನವಿಡೀ ಖುಷಿಯಾಗಿರುತ್ತಾರೆಂತೆ. ನನ್ನ ಮಗು ಮಾತ್ರವಲ್ಲ ನೂರಾರು ಮಕ್ಕಳಿಗೆ ಸಹಾಯ ಆಗ ಬೇಕು ಎಂದು ರಾಮ್ ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. 

Mothers day spl: ಅಮ್ಮಂದಿರ ದಿನಕ್ಕೆ ರಾಮ್ ಚರಣ್ ಪತ್ನಿ ಉಪಾಸನಾ ಬೇಬಿ ಬಂಪ್ ಷೋ!

ರಾಮ್ ಮತ್ತು ಉಪಾಸನಾ ಯಾಕೆ ಇಷ್ಟು ಲೇಟಾಗಿ ಮಗು ಮಾಡಿಕೊಂಡಿದ್ದಾರೆ ಎಂದು ಅನೇಕ ಬಾರಿ ಪ್ರಶ್ನೆ ಮಾಡಲಾಗಿತ್ತು.  'ನಾನು ತುಂಬಾ ಉತ್ಸುಕಳಾಗಿದ್ದೇನೆ. ತುಂಬಾ ಹೆಮ್ಮೆಪಡುತ್ತೇನೆ.  ಸಮಾಜ ಬಯಸಿದಾಗ ಅಲ್ಲ ನಾವು ಬಯಸಿದಾಗ ಮಗು ಪಡೆಯುತ್ತಿದ್ದೇವೆ. ಮದುವೆಯಾಗಿ ಹತ್ತು ವರ್ಷಗಳ ನಂತರ ಈಗ ಮಗುವನ್ನು ಪಡೆಯುತ್ತಿದ್ದೇವೆ. ಇದು ಉತ್ತಮ ಸಮಯವಾಗಿದೆ ಎಂದು ನಾನು ಭಾವಿಸುತ್ತೇನೆ. ಯಾಕೆಂದರೆ ನಾನು ಅಭಿವೃದ್ದಿ ಹೊಂದಿದ್ದೇವೆ, ಇಬ್ಬರೂ ಆರ್ಥಿಕವಾಗಿ ಸದೃಢರಾಗಿದ್ದೇವೆ. ಮಕ್ಕಳನ್ನೂ (Children) ನಾವೆ ನೋಡಿಕೊಳ್ಳಬಹುದು. ಇದು ನಮ್ಮ ಪರಸ್ಪರ ನಿರ್ಧಾರವಾಗಿತ್ತು. ನಾವು ದಂಪತಿ ಸಮಾಜ ಅಥವಾ ಕುಟುಂಬದಿಂದ ಅಥವಾ ಹೊರಗಿನಿಂದ ಯಾವುದೇ ಒತ್ತಡ ಬರಲು ಬಿಡಲಿಲ್ಲ. ಇದು ನಮ್ಮ ನಮ್ಮ ಸಂಬಂಧದ ಬಗ್ಗೆ ಮತ್ತು ನಾವು ಹೇಗೆ ಮಗುವನ್ನು ಬೆಳೆಸಲಿದ್ದೇವೆ ಎನ್ನುವ ಬಗ್ಗೆ ಸಾಕಷ್ಟು ಹೇಳುತ್ತೆ'  ಎಂದು ಹೇಳಿದ್ದರು. 

ಮದುವೆಯಾದ ಪ್ರಾರಂಭದಲ್ಲೇ ರಾಮ್ ಚರಣ್ ಮತ್ತು ಉಪಾಸನಾ ದಂಪತಿ  Egg Freeze ಮಾಡಿದ್ದರು.  2012ರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಆಗಲೇ ಇಬ್ಬರೂ ಎಗ್ ಫ್ರೀಜ್ ಮಾಡಲು ನಿರ್ಧರಿಸಿದ್ದರು ಎನ್ನುವ ವಿಚಾರ ಬಹಿರಂಗವಾಗಿದೆ. 'ನಾನು ಮತ್ತು ರಾಮ್ ಇಬ್ಬರೂ ಮದುವೆಯಾದ ಪ್ರಾರಂಭದಲ್ಲೇ ಎಗ್ ಫ್ರೀಜ್ ಮಾಡಿ ಇಡಲು ನಿರ್ಧರಿಸಿದೆವು. ಅನೇಕ ಕಾರಣಕ್ಕೆ ಈ ನಿರ್ಧಾರ ತೆಗೆದುಕೊಂಡೆವು. ಆಗ ಸಮಯದಲ್ಲಿ ನಮ್ಮ ವೃತ್ತಿಜೀವನದ ಮೇಲೆ ಕೇಂದ್ರೀಕರಿಸಬೇಕಾಗಿತ್ತು. ಆರ್ಥಿಕ ಮಟ್ಟ ಮತ್ತಷ್ಟು ಸುಧಾರಿಸಲಿ ಎಂದು ನಿರ್ಧರಿಸಿದೆವು. ನಮ್ಮ ಆದಾಯ ಮಗುವನ್ನು ನೋಡಿಕೊಳ್ಳಲು, ಜೀವನಶೈಲಿ ಈಗ ತುಂಬಾ ಶಕ್ತರಾಗಿದ್ದೇವೆ' ಎಂದು ಹೇಳಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಶ್ಮಿಕಾ- ಸ್ಮೃತಿ ಇಬ್ಬರ ಎಂಗೇಜ್​ಮೆಂಟೂ ಮುರಿದುಬಿತ್ತು: ಮಂದಣ್ಣ- ಮಂಧಾನ ಹೆಸರಲ್ಲಿ ಏನಿದೆ ಗ್ರಹಚಾರ?
ಕೊನೆಗೂ ಅದಿತಿ ರಾವ್ ಹೈದರಿ ಗುಟ್ಟು ರಟ್ಟಾಯ್ತು.. ಎಷ್ಟು ದಿನ ಅಂತ ಮುಚ್ಚಿಡೋಕಾಗುತ್ತೆ ಹೇಳಿ..!?