Allu Arha: ನೋಬೆಲ್‌ ಬುಕ್ ಆಫ್‌ ರೆಕಾರ್ಡ್‌ ಸೇರಿದ ಅಲ್ಲು ಅರ್ಜುನ್ ಪುತ್ರಿ!

By Suvarna News  |  First Published Nov 23, 2021, 5:47 PM IST

ಮಗಳ ಸಾಧನೆ ಬಗ್ಗೆ ಹೆಮ್ಮೆ ಪಡುತ್ತಿರುವ ಅಲ್ಲು ಅರ್ಜುನ್. ಸಿನಿಮಾ ಕ್ಷೇತ್ರದಲ್ಲೂ ಸೈ, ಓದಿನಲ್ಲೂ ಸೈ ಈ ಪುಟ್ಟ ಅರ್ಹಾ....


ತೆಲುಗು ಚಿತ್ರರಂಗದ (Tollywood) ಸ್ಟೈಲಿಷ್ ಸ್ಟಾರ್ ಕಮ್ ದುಬಾರಿ ಸ್ಟಾರ್ ಅಲ್ಲು ಅರ್ಜುನ್ (Allu Arjun) ಇಡೀ ಕುಟುಂಬದ ಬಗ್ಗೆ ಭಾರತೀಯ ಚಿತ್ರರಂಗದಲ್ಲಿ ಒಳ್ಳೆಯ ಹೆಸರಿದೆ. ತಾವು ಹೆಸರು ಮಾಡುವುದರ ಜೊತೆಗೆ ಹೊಸ ಕಲಾವಿದರನ್ನು, ಹೊಸ ತಂಡವನ್ನು ಪ್ರೋತ್ಸಾಹಿಸುತ್ತಾರೆ. ಅರ್ಜುನ್ ಮಾತ್ರವಲ್ಲದೇ ಪತ್ನಿ ಸ್ನೇಹಾ (Sneha Arjun) ಕೂಡ ನಟ, ನಟಿಯರು, ತಂತ್ರಜ್ಞರ ಜೊತೆ ಸಂಪರ್ಕ ಹೊಂದಿದ್ದಾರೆ. ಇತ್ತೀಚಿಗೆ ಸ್ನೇಹಾ ಮಾಡಿಸಿದ ಫೋಟೋ ಶೂಟ್‌ (Photoshoot) ನೋಡಿ 'ಚಿತ್ರರಂಗಕ್ಕೆ ಯಂಗ್ (Young mummy) ಮಮ್ಮಿ ಆಗಿ ಎಂಟ್ರಿ ಕೊಟ್ಟರೂ ಆಶ್ಚರ್ಯವಿಲ್ಲ,' ಎಂದಿದ್ದರು ನೆಟ್ಟಿಗರು. 

ಇದೀಗ ಅರ್ಜುನ್ ಮತ್ತು ಸ್ನೇಹಾ ಅವರ ಮುದ್ದಾದ ಮಗಳು ಅಲ್ಲು ಅರ್ಹಾ (Allu Arha) ಹೊಸ ಸಾಧನೆ ಮಾಡಿದ್ದಾಳೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಪೋಷಕರಿಬ್ಬರೂ ವಿಡಿಯೋ ಹಂಚಿಕೊಳ್ಳುವ ಮೂಲಕ ಹೆಮ್ಮೆಯಿಂದ ಮಗಳ ಸಾಧನೆಯನ್ನು ಹೇಳಿಕೊಂಡು ಮೆರೆದಿದ್ದಾರೆ. ಹೌದು! ಕೆಲವು ದಿನಗಳ ಹಿಂದೆ ಅರ್ಹಾ 5ನೇ ವರ್ಷದ ಹುಟ್ಟುಹಬ್ಬವನ್ನು (Birthday) ಆಚರಿಸಿಕೊಂಡಿದ್ದಾಳೆ. ಬರ್ತಡೇ ಸರಳವಾಗಿದ್ದರೂ, ಆಕೆಯ ಬಗ್ಗೆ ಅಭಿಮಾನಿಗಳಿಗೆ ಬಿಗ್ ಬಿಗ್ಗೆಸ್ಟ್ ನ್ಯೂಸ್ ಕೊಟ್ಟಿದ್ದಾರೆ. ಅದುವೇ ಆಕೆ ಯಂಗೆಸ್ಟ್‌ ಚೆಸ್ ಟ್ರೈನರ್ (Youngest Chess Trainer) ಎಂದು, ವರ್ಲ್ಡ್ ಬುಕ್ ಆಫ್ ರೆಕಾರ್ಡ್‌ನಲ್ಲಿ ಹೆಸರು ಸೇರಿದೆ. 

Latest Videos

undefined

ವಿಡಿಯೋದಲ್ಲಿ ಅರ್ಹಾ ಚೆಸ್ ಆಡುತ್ತಿದ್ದಾಳೆ, ಟೇಬಲ್ ಮೇಲಿರುವ ಟ್ರಿಕಿ ಚೆಸ್‌ಗಳನ್ನು ಬೇಗ ಸಾಲ್ವ್ (Solve) ಮಾಡುತ್ತಾಳೆ ಹಾಗೂ ನೀಡಿರುವ ಸಮಯದಲ್ಲಿ ಮುಗಿಸಿರುವುದಕ್ಕೆ ಆಕೆಗೆ ನೊಬೆಲ್ ವರ್ಲ್ಡ್‌ ರೆಕಾರ್ಡ್‌ (Nobal World record) ನೀಡಿ ಗೌರವಿಸಲಾಗಿದೆ. ತಾತ ಅಲ್ಲು ಗೋವಿಂದ್ (Allu Govind), ತಾಯಿ ಸ್ನೇಹಾ, ಅಣ್ಣ ಔರವ್ ಜೊತೆ ನಿಂತು ಫೋಟೋಗೆ ಪೋಸ್ ನೀಡಿದ್ದಾರೆ. 'ಚೆಸ್ ಸುಲಭದ ಗೇಮ್ ಅಲ್ಲ. ತುಂಬಾ ತಾಳ್ಮೆ (Patience) ಮತ್ತು ಯೋಚನೆ ಮಾಡುವ ತಲೆ ಬೇಕಿದೆ. ಅದು ಇಷ್ಟು ಚಿಕ್ಕ ವಯಸ್ಸಿಗೆ ಇರುವುದು ಗ್ರೇಟ್,' ಎಂದು ನೆಟ್ಟಿಗರು ಕಾಮೆಂಟ್ (Comment) ಮಾಡಿದ್ದಾರೆ. 

ಮಗಳ ಹುಟ್ಟು ಹಬ್ಬಕ್ಕೆ ಅಲ್ಲು ಅರ್ಜುನ್‌ ಕೊಟ್ಟ ವಿಶೇಷ ಉಡುಗೊರೆ ಇದು!

ಅರ್ಹಾ ಬಗ್ಗೆ ಆಗಾಗ ಅರ್ಜುನ್ ಮತ್ತು ಸ್ನೇಹಾ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಏಕೆಂದರೆ ಆಕೆಗೆ ಇರುವ ಫ್ಯಾನ್ ಬೇಸ್. ಸಮಂತಾ ಪ್ರಭು ನಟನೆಯ ಶಾಕುಂತಲಂ (Shakuntala) ಸಿನಿಮಾದಲ್ಲಿ ಅರ್ಹಾ ನಟಿಸುತ್ತಿದ್ದಾಳೆ. ಮೊದಲ ದಿನ ಚಿತ್ರೀಕರಣಕ್ಕೆ ಸ್ಪೆಷಲ್ ಆಗಿ ವೆಲ್ಕಂ ಮಾಡಲಾಗಿತ್ತು. ಅಲ್ಲದೆ ತಂದೆಯ  5 ಕೋಟಿ ಬೆಲೆಯ ಕ್ಯಾರವಾನ್‌ನಲ್ಲಿ (India's Expensive Caravan) ಶೂಟಿಂಗ್‌ಗೆ ಸೆಟ್‌ಗೆ ಬಂದಿಳಿದಿದ್ದಳು ಈ ಪುಟ್ಟ ಕಲಾವಿದೆ. ಪರ್ಸನಲ್ ಮೇಕಪ್ ಮ್ಯಾನ್, ಹೇರ್‌ಸ್ಟೈಲರ್ (Hairstylist) ಸೇರಿದಂತೆ ಎಲ್ಲರೂ ಈಕೆಗಿದ್ದಾರೆ.

5 ಕೋಟಿ ಮೌಲ್ಯದ ಕ್ಯಾರಾವ್ಯಾನ್‌ನಲ್ಲಿ ಶೂಟಿಂಗ್ ಸೆಟ್‌ಗೆ ಬಂದ ಅಲ್ಲು ಪುತ್ರಿ ಅರ್ಹಾ!

ಸಮಂತಾ (Samantha Prabhu) ಶಕುಂತಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪುತ್ರ ಭರತನ (Bharatha) ಪಾತ್ರದಲ್ಲಿ ಅರ್ಹಾ ಬಣ್ಣ ಹಚ್ಚಿದ್ದಾಳೆ. ಈಗಾಗಲೇ ಸಣ್ಣ ಪುಟ್ಟ ವಿಡಿಯೋ ತುಣುಕುಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಚಿತ್ರದ ನಿರ್ದೇಶಕ ಗುಣಶೇಖರ್ ಅವರಿಗೆ ಇಡೀ ಅಲ್ಲು ಕುಟುಂಬ ಧನ್ಯವಾದಗಳನ್ನು ತಿಳಿಸಿದೆ.

 

click me!