Sai Pallavi' Sister: ಅಕ್ಕನಿಗೇ ಕಾಂಪಿಟೀಟರ್‌ ಆಗ್ತಾಳಾ ತಂಗಿ ಪೂಜಾ ಕಣ್ಣನ್!

Suvarna News   | Asianet News
Published : Nov 23, 2021, 04:10 PM IST
Sai Pallavi' Sister: ಅಕ್ಕನಿಗೇ ಕಾಂಪಿಟೀಟರ್‌ ಆಗ್ತಾಳಾ ತಂಗಿ ಪೂಜಾ ಕಣ್ಣನ್!

ಸಾರಾಂಶ

ಪಿಂಪಲ್ ಬ್ಯೂಟಿ ಸಾಯಿ ಪಲ್ಲವಿಗೆ ಒಳಗೊಳಗೇ ಕೊಂಚ ನಡುಕ ಶುರುವಾದಂಗಿದೆ. ಕಾರಣ ತಂಗಿಯ ಎಂಟ್ರಿ. ಡಿಟ್ಟೋ ಸಾಯಿ ಪಲ್ಲವಿ ಜೆರಾಕ್ಸ್ ಕಾಪಿಯಂತಿರೋ ಪೂಜಾ ಕಣ್ಣನ್ ರೌಡಿ ಬೇಬಿ ಕಾಂಪಿಟೀಟರ್ ಆಗ್ತಾಳ?    

ಬಹು ಭಾಷೆಗಳಲ್ಲಿ ನಟಿಸಿರುವ ಚುರುಕು ಹುಡುಗಿ ಸಾಯಿ ಪಲ್ಲವಿ. (Sai Pallavi) ಒಂದು ಕಡೆ ಟ್ಯಾಲೆಂಟ್, ಇನ್ನೊಂದು ಕಡೆ ಡ್ಯಾನ್ಸ್,(Dance) ಮತ್ತೊಂದು ಕಡೆ ಸಹಜ ಸೌಂದರ್ಯ ಇವೆಲ್ಲದರ ಒಟ್ಟು ಮೊತ್ತದಂತಿರುವ ಈ ಜಾಣ ಹುಡುಗಿ ಪಲ್ಲವಿ. ಈ ಕಾರಣಕ್ಕೋ ಏನೋ ಸಾಯಿ ಪಲ್ಲವಿ ನಟಿಸಿರುವ ಹಲವು ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿವೆ. ಸಿನಿಮಾದಲ್ಲಿ ಸಾಯಿ ಪಲ್ಲವಿ ಇದ್ದಾರೆ ಅನ್ನೋ ಕಾರಣಕ್ಕೆ ಬಂದು ಸಿನಿಮಾ ನೋಡೋ ಪಡ್ಡೆಗಳಿಗೇನೂ ಕಡಿಮೆ ಇಲ್ಲ. ಟಾಲಿವುಡ್, ಕಾಲಿವುಡ್, ಮಾಲಿವುಡ್‌ನ ಸ್ಟಾರ್‌ಗಳ ಜೊತೆಗೆ ಡ್ಯುಯೆಟ್ ಹಾಡಿರೋ ಸಾಯಿ ಪಲ್ಲವಿಯ ಲವ್ ಸ್ಟೋರಿ (Love story) ಇತ್ತೀಚೆಗೆ ಭಾರೀ ಹೆಸರು ಮಾಡಿರೋ ಸಿನಿಮಾ. ಇದೀಗ ಸಾಯಿ ಪಲ್ಲವಿಯ ಜೆರಾಕ್ಸ್ ಕಾಪಿಯಂತಿರುವ ಹುಡುಗಿ ದಕ್ಷಿಣ ಭಾರತೀಯ ಚಿತ್ರರಂಗ ಪ್ರವೇಶಿಸಿದ್ದಾಳೆ. ಆಕೆ ಮತ್ಯಾರೂ ಅಲ್ಲ, ನಮ್ಮ ಪಲ್ಲವಿಯ ಖಾಸಾ ತಂಗಿ ಪೂಜಾ ಕಣ್ಣನ್ (Puja Kannan). ಈ ಇಬ್ಬರೂ ಚೆಲುವೆಯರನ್ನು ಅಕ್ಕಪಕ್ಕ ನಿಲ್ಲಿಸಿದ್ರೆ ಅವಳಿ ಜವಳಿ ಅಂದಕೊಳ್ಬೇಕು, ಆ ಲೆವೆಲ್ ಗೆ ಸಾಮ್ಯತೆ ಇದೆ.

ಅಂದಹಾಗೆ ಸಾಯಿಪಲ್ಲವಿ ತಂಗಿ ಪೂಜಾ ಕಣ್ಣನ್ ಎಂಟ್ರಿ ಕೊಡುತ್ತಿರುವ ತೆಲುಗು ಚಿತ್ರ 'ಚಿತ್ತಿರ ಚೆವ್ವಾನಂ'. ಈಗ ‘ಚಿತ್ತಿರ ಚೆವ್ವಾನಂ’ ಸಿನಿಮಾದ ಫಸ್ಟ್​ ಲುಕ್ ಮೋಷನ್​ ಪೋಸ್ಟರ್​​ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಖ್ಯಾತ ನಟ-ನಿರ್ದೇಶಕ ಸಮುದ್ರಖಣಿ ಅವರು ಪೂಜಾ ಕಣ್ಣನ್​ ಜೊತೆ ತೆರೆ ಹಂಚಿಕೊಂಡಿದ್ದಾರೆ. ತಂದೆ-ಮಗಳ ಪಾತ್ರದಲ್ಲಿ ಅವರಿಬ್ಬರು ಅಭಿನಯಿಸಿದ್ದಾರೆ. ಸಾಹಸ ನಿರ್ದೇಶಕ ಸ್ಟಂಟ್​ ಸಿಲ್ವಾ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಸಾಯಿ ಪಲ್ಲವಿ ಸಹೋದರಿಯ ಈ ಸಿನಿಮಾಗೆ ಎಲ್ಲ ಭಾಷೆಯ ಸ್ಟಾರ್​ ಕಲಾವಿದರಿಂದ ಬೆಂಬಲ ಸಿಗುತ್ತಿದೆ. ಮಾಲಿವುಡ್​ ಸ್ಟಾರ್​ ನಟ ಮೋಹನ್​ಲಾಲ್ ಮತ್ತು ಕಾಲಿವುಡ್​ ನಟ ಧನುಷ್​​​​ ಅವರು ಈ ಚಿತ್ರದ ಮೋಷನ್​ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ.

Priyanka Chopra; ಆನಿವರ್ಸರಿಗೂ ಮುನ್ನ ಗಂಡನ ಹೆಸರು ಕೈ ಬಿಟ್ಟ ಪ್ರಿಯಾಂಕಾ.. ದಾಂಪತ್ಯಕ್ಕೆ ಕೊನೆ ಅಂಕ?

ಸ್ಯಾಮ್​ ಸಿ.ಎಸ್​. ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ನೇರವಾಗಿ ಓಟಿಟಿ ಪ್ಲಾಟ್​ಫಾರ್ಮ್​ ಮೂಲಕ ಬಿಡುಗಡೆ ಆಗಲಿದೆ. ಡಿ.3ರಿಂದ ಜೀ5 ಆ್ಯಪ್​ನಲ್ಲಿ ‘ಚಿತ್ತಿರ ಚೆವ್ವಾನಂ’ ಚಿತ್ರ ವೀಕ್ಷಣಗೆ ಲಭ್ಯವಾಗಲಿದೆ. ನಟಿ ಅನುಪಮಾ ಪರಮೇಶ್ವರನ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಪೂಜಾ ಕಣ್ಣನ್​ಗೆ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ನಟಿ ಸಾಯಿ ಪಲ್ಲವಿ ಅವರು ಚಿತ್ರರಂಗದಲ್ಲಿ ಮಾಡಿರುವ ಸಾಧನೆ ದೊಡ್ಡದು. ಈಗಾಗಲೇ ಅವರು ಬಹುಭಾಷಾ ಕಲಾವಿದೆಯಾಗಿ ಮಿಂಚಿದ್ದಾರೆ. ಟಾಲಿವುಡ್​, ಕಾಲಿವುಡ್​, ಮಲಯಾಳಂ ಸಿನಿಮಾಗಳಲ್ಲಿ ಸ್ಟಾರ್​ ನಟರಿಗೆ ಅವರು ಜೋಡಿಯಾಗಿ ನಟಿಸಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರು ಸಖತ್​ ಕಾಳಜಿ ವಹಿಸುತ್ತಾರೆ. ಅತಿಯಾದ ಗ್ಲಾಮರ್​ ಎಂದರೆ ಅವರಿಗೆ ಅಲರ್ಜಿ. ನಟನೆಯ ಮೂಲಕವೇ ಅವರು ಜನರ ಮನ ಗೆದ್ದಿದ್ದಾರೆ. ವಿಶೇಷ ಏನೆಂದರೆ ಅವರ ಸಹೋದರಿ ಪೂಜಾ ಕಣ್ಣನ್​ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿರುವುದು. ಅಕ್ಕ ಸಾಯಿ ಪಲ್ಲವಿ ರೀತಿಯೇ ಪೂಜಾ ಕೂಡ ಮಿಂಚುತ್ತಾರಾ ಎಂಬ ಕೌತುಕ ಎಲ್ಲರಲ್ಲೂ ಮನೆ ಮಾಡಿದೆ. ಹಾಗೇ ಪೂಜಾ ಕಣ್ಣನ್‌, ಸಾಯಿ ಪಲ್ಲವಿಗೆ ಪ್ರತಿಸ್ಪರ್ಧಿ ಆಗುತ್ತಾರಾ ಅನ್ನುವ ಕುತೂಹಲ ಕೂಡ.

Freida Pinto: Slumdog Millionaire ನಟಿಗೆ ಗಂಡು ಮಗು

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಜ್ ನಿಧಿಮೋರುಗಾಗಿ ಧರ್ಮ ಬದಲಾಯಿದ್ರಾ ಸಮಂತಾ? ಮದುವೆಯ ರಹಸ್ಯ ರಿವೀಲ್!
ಧುರಂಧಾರ್ ಚಿತ್ರೀಕರಣ ಪಾಕಿಸ್ತಾನದಲ್ಲಿ ಆಗಿತ್ತಾ? ಸಿನಿಮಾದಲ್ಲಿನ ದೃಶ್ಯಗಳ ರಹಸ್ಯ ಬಯಲು ಮಾಡಿದ ನಟ!