ಮಹಿಳೆಯರು ಯಾವುದೋ ಗ್ರಹದ ಜೀವಿಗಳು ಎಂದುಕೊಂಡಿದ್ದೆ; ವಿಜಯ್ ದೇವರಕೊಂಡ ಶಾಕಿಂಗ್ ಹೇಳಿಕೆ!

By Shriram Bhat  |  First Published Apr 29, 2024, 11:39 AM IST

ವಿಜಯ್ ದೇವರಕೊಂಡ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಗಾಗುವದರೊಳಗೆ ಉದಯಿಸಿದ ನಟರಲ್ಲ. ಅವರ ಈ ಯಶಸ್ಸಿನ ಹಿಂದೆ ಬಹಳಷ್ಟು ಪರಿಶ್ರಮವಿದೆ. ಅವಮಾನ, ಟೀಕೆಗಳನ್ನು ಸಹಿಸಿಕೊಂಡು ಈ ಮಟ್ಟಕ್ಕೆ ಇಂದು ಬೆಳೆದು ನಿಂತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ..


ತೆಲಗು ಸ್ಟಾರ್ ನಟ ವಿಜಯ್ ದೇವರಕೊಂಡ (Vijay Deverakonda) ಸಂದರ್ಶನವೊಂದರಲ್ಲಿ ತಮ್ಮ ಎರಡು ಸೀಕ್ರೆಟ್‌ಗಳನ್ನು ರಿವೀಲ್ ಮಾಡಿದ್ದಾರೆ. ಸೀಕ್ರೆಟ್ ಅಂದ್ರೆ ಎರಡು ಸತ್ಯಗಳು. ಸಂದರ್ಶಕರು ಕೇಳಿದ 'ನಿಮ್ಮ ಜೀವನದ ಎರಡು ಸತ್ಯಗಳನ್ನು ಹೇಳಿ' ಎಂಬ ಪ್ರಶ್ನೆಗೆ ನಟ ವಿಜಯ್ ದೇವರಕೊಂಡ ಉತ್ತರಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ವಿಜಯ್ ದೇವರಕೊಂಡ 'ಸತ್ಯ ಒಂದನೆಯದು- ನನಗೆ 18 ವರ್ಷ ಆಗುವವರೆಗೆ ಹೆಂಗಸರು ಎಂದರೆ ಅತೀವ ಭಯ ಇತ್ತು. ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿರಲಿಲ್ಲ. ಹೆಂಗಸರ ಜತೆ ಮಾತನಾಡುತ್ತಿರಲಿಲ್ಲ. ಸ್ತ್ರೀಯರು ಎಂದರೆ ಅವರು ಬೇರೆ ಯಾವುದೇ ಗ್ರಹದ ಜೀವಿಗಳು ಎಂಬಂತೆ ನೋಡುತ್ತಿದ್ದೆ' ಎಂದಿದ್ದಾರೆ. 

ಇನ್ನು ಎರಡನೆಯ ಸತ್ಯ ಸಂಗತಿ ಏನೆಂದರೆ 'ನನಗೆ ನನ್ನ ಬಗೆಗಿನ ಎರಡನೇ ಸತ್ಯ ಸಂಗತಿ ನಿಜವಾಗಿಯೂ ಗೊತ್ತಿಲ್ಲ. ನಾನು ಎಷ್ಟೇ ಯೋಚಿಸಿದರೂ ಅದರ ಬಗ್ಗೆ ಹೇಳುವಷ್ಟು ಕ್ಲಾರಿಟಿ ನನಗೆ ಸಿಗುತ್ತಿಲ್ಲ. ಬಹುಶಃ ಇನ್ನು ಆರು ತಿಂಗಳು ಕಳೆಯುವದರೊಳಗೆ ನಾನು ಚೆನ್ನಾಗಿ ವರ್ಕೌಟ್ ಮಾಡಬೇಕು, ನನ್ನ ದೇಹವನ್ನು ಇದಕ್ಕಿಂತ ಹೆಚ್ಚು ಫೀಟ್‌ ಅಂಡ್ ಫೈನ್ ಆಗಿ ಇಟ್ಟುಕೊಳ್ಳಬೇಕು ಎಂದು ಯೋಚಿಸಿದ್ದೇನೆ. ಇದನ್ನು ನೀವು ಪ್ಲಾನ್ ಎನ್ನಬಹುದು. ಆದರೆ ಇದನ್ನು ಸತ್ಯ ಅಂತ ಕೂಡ ಹೇಳಬಹುದು' ಎಂದಿದ್ದಾರೆ ನಟ ವಿಜಯ್ ದೇವರಕೊಂಡ.

Tap to resize

Latest Videos

ರಜನಿಕಾಂತ್ ಸೇಡು ತೀರಿಸಿಕೊಂಡಿದ್ದು ಕೂಡ ಸಖತ್ ಸ್ಟೈಲಿಶ್ ಆಗಿಯೇ ಅಂದ್ರೆ ನಂಬ್ಲೇಬೇಕು!

ನಟ ವಿಜಯ್ ದೇವರಕೊಂಡ ಇದ್ದಕ್ಕಿದ್ದಂತೆ ರಾತ್ರಿ ಕಳೆದು ಬೆಳಗಾಗುವದರೊಳಗೆ ಉದಯಿಸಿದ ನಟರಲ್ಲ. ಅವರ ಈ ಯಶಸ್ಸಿನ ಹಿಂದೆ ಬಹಳಷ್ಟು ಪರಿಶ್ರಮವಿದೆ. ಅವಮಾನ, ಟೀಕೆಗಳನ್ನು ಸಹಿಸಿಕೊಂಡು ಈ ಮಟ್ಟಕ್ಕೆ ಇಂದು ಬೆಳೆದು ನಿಂತಿದ್ದಾರೆ. 'ಅರ್ಜುನ್ ರೆಡ್ಡಿ' ಸಿನಿಮಾ ಮೂಲಕ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿದ ನಟ ವಿಜಯ್ ದೇವರಕೊಂಡ ಅವರಿಗೆ, ಬಳಿಕ ರಶ್ಮಿಕಾ ಜತೆ ನಟಿಸಿದ 'ಗೀತಗೋವಿಂದಂ' ಸಿನಿಮಾ ಬಹಳಷ್ಟು ಖ್ಯಾತಿ ಹಾಗೂ ಸ್ಟಾರ್‌ ಪಟ್ಟ ತಂದುಕೊಟ್ಟಿದೆ. ಇಂದು ಸಾಕಷ್ಟು ಸಿನಿಮಾಗಳ ಆಫರ್ ಪಡೆಯುವ ಮೂಲಕ ನಟ ವಿಜಯ್ ದೇವರಕೊಂಡ ತೆಲುಗು ಸಿನಿರಂಗದ ಸ್ಟಾರ್ ನಟ ಎನಿಸಿಕೊಂಡಿದ್ದಾರೆ. 

ಡಾ. ರಾಜ್‌ಕುಮಾರ್ ಮಗಳು ಪೂರ್ಣಿಮಾ ಅನುಕರಿಸಿ 'ಬಜಾರಿ' ಪಾತ್ರ ಮಾಡಿದ್ರು ಮಂಜುಳಾ!

ಅಂದಹಾಗೆ, ನಟ ವಿಜಯ್ ದೇವರಕೊಂಡ ಹಾಗು ಮೃಣಾಲ್ ಠಾಗೂರ್ ಅಭಿನಯದ 'ದಿ ಫ್ಯಾಮಿಲಿ ಸ್ಟಾರ್' ಸಿನಿಮಾ ಅಂದುಕೊಂಡಷ್ಟು ಹಿಟ್ ಆಗಲಿಲ್ಲ. ಈ ಸಿನಿಮಾವನ್ನು ನೋಡಿದವರು ಮೆಚ್ಚಿಕೊಂಡರೂ ನೋಡದವರೇ ಹೆಚ್ಚು. ಆದ್ದರಿಂದ ಸದ್ಯ ವಿಜಯ್ ದೇವರಕೊಂಡ ಅವರಿಗೆ ಒಂದು ಸಿನಿಮಾ ಸೂಪರ್ ಹಿಟ್ ಆಗಬೇಕಿದೆ, ಆ ಮೂಲಕ ಒಂದು ಭಾರೀ ಸಕ್ಸಸ್ ಸಿಗಬೇಕಿದೆ. ಇಲ್ಲವೆಂದರೆ, ವೃತ್ತಿಜೀವನದ ಗ್ರಾಫ್ ಕೆಳಗಿಳಿದು ಅವರು ಪಾತಾಳವೋ, ಪ್ರಪಾತವೋ ತಲುಪುವುದು ಗ್ಯಾರಂಟಿ ಎನ್ನಬಹುದು. ಆದರೆ, ರಶ್ಮಿಕಾ ಸದ್ಯ ಬಹುಬೇಡಿಕೆ ನಟಿಯಾಗಿಯೇ ಇದ್ದಾರೆ.

ವಿನೋದ್ ರಾಜ್ ಪತ್ನಿ ಅನುಗೆ ಚೆನ್ನೈನಲ್ಲಿದೆ ಭಾರೀ ಗಿಫ್ಟ್; ಲೀಲಾವತಿ ಮಗ ಕೊಟ್ಟಿದ್ದೇನು ನೋಡ್ರಿ! 

click me!