Telugu actor Vijay Devarakonda ice bath photo went viral in social media. His fans became ancious on it. ನಟ ವಿಜಯ್ ದೇವರಕೊಂಡ ಐಸ್ ಬಾತ್ ಫೋಟೋ ನೋಡಿ ಆತಂಕಗೊಂಡಿರುವ ಫ್ಯಾನ್ಸ್ , ಹಲವು ಪ್ರಶ್ನೆಗಳ ಸರಮಾಲೆಯನ್ನೇ ಮುಂದಿಟ್ಟಿದ್ದಾರೆ.
ನಟ ವಿಜಯ್ ದೇವರಕೊಂಡ (Vijay Deavarakonda) ಟಾಲಿವುಡ್ ಮೋಸ್ಟ್ ವಾಂಟೆಡ್ ಸ್ಟಾರ್. ವಿಜಯ್ ಏನೇ ಮಾಡಿದರೂ ಸುದ್ದಿಯಾಗುವುದು ಪಕ್ಕಾ. ಇದೀಗ ನಟ ವಿಜಯ್ ದೇವರಕೊಂಡ 'ಐಸ್ ಬಾತ್' ಮಾಡಿರುವುದು ಹಲವರ ಕ್ಯೂರಿಯಾಟಿಸಿಗೆ ಕಾರಣವಾಗಿದೆ. ಐಸ್ ಬಾತ್ ಯಾರೂ ಸುಮ್ಮನೇ ಮಾಡುವುದಿಲ್ಲ. ಹಾಗಿದ್ದರೆ ವಿಜಯ್ ದೇವರಕೊಂಡಗೆ ಆಗಿದ್ದು ಏನು? ಯಾಕೆ ಅವರು ಇದ್ದಕ್ಕಿದ್ದಂತೆ ಐಸ್ ಬಾತ್ ಮಾಡಿದ್ದು? ಈ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವುದರ ಮರ್ಮವೇನು?
ಹೌದು, ವಿಜಯ್ ದೇವರಕೊಂಡ ಅಭಿಮಾನಿಗಳು ನಟನ ಐಸ್ ಬಾತ್ ಫೋಟೋ ಬಗ್ಗೆ ತಲೆ ಕೆಡಿಸಿಕೊಂಡೊದ್ದು ಸರಿಯಾಗಿಯೇ ಇದೆ. ಏಕೆಂದರೆ, ನಟಿ ಸಮಂತಾ (Samantha Ruth Prabhu) ಮೆಯೋಸಿಟಿಸ್ ಖಾಯಿಲೆಯಿಂದ ಬಳುತ್ತಿದ್ದಾರೆ; ಹೀಗಾಗಿ ಐಸ್ ಬಾತ್ ಮಾಡುತ್ತಿದ್ದಾರೆ. ಅದು ಅವರ ಟ್ರೀಟ್ಮೆಂಟ್ ಭಾಗವಾಗಿದೆ. ಆದರೆ, ವಿಜಯ್ ದೇವರಕೊಂಡ ಅನಾರೋಗ್ಯಕ್ಕೆ ಒಳಗಾದ ಸುದ್ದಿಯೇ ಇಲ್ಲ. ಹೀಗಿರುವಾಗ ಆರೋಗ್ಯವಾಗಿರುವ ನಟ ವಿಜಯ್ ಹೀಗೆ ಐಸ್ ಬಾತ್ ಮಾಡುವುದು ಗೊತ್ತಾದಾಗ ಅವರ ಫ್ಯಾನ್ಸ್‌ಗೆ ಗಾಬರಿ ಆಗುವುದು ಸಹಜವೇ!
ಬಿಗ್ ಬಾಸ್ ಕನ್ನಡ ಶೋಗೆ ದಿನಗಣನೆ; ಸ್ಪರ್ಧಿಗಳ ಪಟ್ಟಿ ಅಂತಿಮವಾಯ್ತಾ?
ಆದರೆ, "ವಿಜಯ್ ತಾವು ಐಸ್ ಬಾತ್ ಮಾಡುತ್ತಿರುವ ಫೋಟೋವನ್ನು ತಾವೇ ಸ್ವತಃ ಶೇರ್ ಮಾಡಿದ್ದಾರೆ ಎಂದರೆ, ಅವರು ಆರೋಗ್ಯವಾಗಿಯೇ ಇದ್ದಾರೆ. ಇಲ್ಲದಿದ್ದರೆ ಅದೊಂದು ಗಾಸಿಪ್ ಆಗಿರುತ್ತಿತ್ತು. ಅಧಿಕೃತವಾಗಿ ಫೋಟೋ ಶೇರ್ ಆಗಿದೆ ಅಂದಮೇಲೆ ವಿಜಯ್ ದೇವರಕೊಂಡ ಆರೋಗ್ಯ ಕೂಡ ಸಹಜವಾಗಿದೆ ಎಂಬುದು ಸಹ ಅಧಿಕೃತ ಎಂದುಕೊಳ್ಳಬಹುದು. ಫೋಟೋ ವೈರಲ್ ಆಗಿದ್ದು ಬಿಟ್ಟರೆ ನಟ ಆರೋಗ್ಯವಾಗಿದ್ದಾರೆ" ಎನ್ನುತ್ತಿದ್ದಾರೆ ಹಲವರು.
ಗಣಪತಿ ವಿಸರ್ಜನೆ: ರಣಬೀರ್, ನೀತಾ ಜೊತೆ ಆಲಿಯಾ ಏಕಿಲ್ಲ? ಸಂಬಂಧ ಹದಗೆಟ್ಟಿದ್ದು ಹೌದಾ?
ಒಟ್ಟಿನಲ್ಲಿ, ಒಂದು ಫೋಟೋ ಶೇರ್ ಮಾಡಿ ವಿಜಯ್ ಹಲವರ ಮನಸ್ಸನ್ನು ಗೊಂದಲದ ಗೂಡನ್ನಾಗಿ ಮಾಡಿದ್ದಾರೆ ಎನ್ನಬಹುದು. ಸೋಷಿಯಲ್ ಮೀಡಿಯಾ ತುಂಬೆಲ್ಲ ವಿಜಯ್ ಆರೋಗ್ಯದ ಊಹಾಪೋಹಗಳೇ ಹರಿದಾಡುತ್ತಿದ್ದು, ನಟ ಅಟ್ಲೀಸ್ಟ್ ಒಂದು ಕ್ಲಾರಿಫಿಕೇಶನ್ ಕೊಟ್ಟರೆ ಒಳ್ಳೆಯದೇನೋ ಎಂಬಷ್ಟು ಚಿಂತೆ ಹಲವರಲ್ಲಿದೆ. ಈಗ, ವಿಜಯ್ ದೇವರಕೊಂಡ ತಮ್ಮ ಅಭಿಮಾನಿಗಳ ಸಂಶಯ ನಿವಾರಣೆಗೆ ಅದೇನು ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.