ಬಾಲಿವುಡ್ ಪ್ರತಿಯೊಬ್ಬ ತಾರೆಗೂ ಒಂದೊಂದು ರೇಟ್ ಇದೆ, ಅವ್ರು ರೇಷನ್ ಕಾರ್ಡ್ ಇದ್ದಂಗೆ ಎಂದ ಜಾಹ್ನವಿ ಕಪೂರ್ ಪಾಪರಾಜಿಗಳ ಕುರಿತು ಹೇಳಿದ್ದೇನು?
ಸಾಮಾನ್ಯವಾಗಿ ಇನ್ಸ್ಟಾಗ್ರಾಮ್ ಸೇರಿದಂತೆ ಹಲವಾರು ಸೋಷಿಯಲ್ ಮೀಡಿಯಾಗಳಲ್ಲಿ ನಟ-ನಟಿಯರು ಹೋಗುತ್ತಿದ್ದಂತೆಯೇ ಅವರ ಹಿಂದೆ ಮುಂದೆ ಪಾಪರಾಜಿಗಳು ಸುಳಿಯುವುದು ಮಾಮೂಲು. ಮನೆಯಿಂದ ಹೊರಕ್ಕೆ ಬರುವುದು, ಒಳಕ್ಕೆ ಹೋಗುವುದು, ಇಲ್ಲವೇ ಹೆಚ್ಚಾಗಿ ವಿಮಾನ ನಿಲ್ದಾಣಗಳಲ್ಲಿ ಕಾಣಿಸಿಕೊಳ್ಳುವುದು, ನಿಲ್ದಾಣದಿಂದ ಹೊರಕ್ಕೆ ಬರುವುದು... ಇವೆಲ್ಲವೂ ವಿಡಿಯೋಗಳಲ್ಲಿ ದಾಖಲಾಗುತ್ತವೆ. ಇಂಥ ವಿಡಿಯೋ ನೋಡಿದಾಗ ಹಲವರಿಗೆ ನಿಜಕ್ಕೂ ಅಚ್ಚರಿಯಾಗುವುದು ಉಂಟು. ಇವರಿಗೆ ಇಂತಿಷ್ಟೇ ಸಮಯದಲ್ಲಿ ನಟ-ನಟಿಯರು ಹೊರಕ್ಕೆ ಬರುತ್ತಾರೆ, ಒಳಕ್ಕೆ ಹೋಗುತ್ತಾರೆ ಎಂದು ಹೇಗೆ ತಿಳಿಯುತ್ತದೆ ಎಂದೆಲ್ಲಾ ಅನ್ನಿಸುವುದು ಉಂಟು. ಇದರ ರಸಹ್ಯವನ್ನು ಬಿಚ್ಚಿಟ್ಟಿದ್ದಾರೆ ನಟಿ ಜಾಹ್ನವಿ ಕಪೂರ್.
‘ಮಿಸ್ಟರ್ ಆಂಡ್ ಮಿಸಸ್ ಮಹಿ’ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ಜಾಹ್ನವಿ ಅವರು, ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪಾಪರಾಜಿಗಳ ನಿಜ ಮುಖ ಬಯಲು ಮಾಡಿದ್ದಾರೆ. ಬಾಲಿವುಡ್ ತಾರೆಯರು ಕ್ಲಿಕ್ ಆಗಲು ಪಾಪರಾಜಿಗಳಿಗೆ ಹಣ ನೀಡಲಾಗುತ್ತದೆ. ಇದೊಂದು ಟ್ರೆಂಡ್ ಆಗಿ ಬೆಳೆದುಕೊಂಡಿದೆ ಎಂದು ಜಾಹ್ನವಿ ಹೇಳಿದ್ದಾರೆ. ಬಾಲಿವುಡ್ನ ಪ್ರತಿಯೊಬ್ಬ ಸೆಲೆಬ್ರಿಟಿಗೂ ಒಂದೊಂದು ರೇಟ್ ಇದೆ. ಸ್ಟಾರ್ ತಾರೆಯರಾಗಿದ್ದರೆ ಅವರ ಚಿತ್ರಗಳು ದೊಡ್ಡ ಬೆಲೆಗೆ ಮಾರಾಟವಾಗುತ್ತವೆ. ಆದ್ದರಿಂದ ರೇಟ್ ಹೆಚ್ಚಾದಷ್ಟೂ ಪಾಪರಾಜಿಗಳು ಅವರನ್ನು ಹುಡುಕಿ ಬರುತ್ತಾರೆ. ಸ್ಟಾರ್ ನಟರಾಗದಿದ್ದರೆ, ನಟ-ನಟಿಯರೇ ಪಾಪರಾಜಿಗಳನ್ನು ಕರೆಸಿಕೊಳ್ಳಬೇಕಾಗುತ್ತದೆ. ಇದು ಬಹು ಹಿಂದಿನಿಂದಲೂ ನಡೆದು ಬಂದಿದೆ ಎಂದಿದ್ದಾರೆ. ಒಟ್ಟಿನಲ್ಲಿ ಪಾಪರಾಜಿಗಳಿಗೆ ಬಾಲಿವುಡ್ ತಾರೆಯರು ರೇಷನ್ ಕಾರ್ಡ್ ಇದ್ದಂಗೆ ಅಂದಿದ್ದಾರೆ.
ವೋಟಿಂಗ್ ದಿನವೂ ಚಿತ್ರದ ಪ್ರಮೋಷನ್: ಜಾಹ್ನವಿ ಡ್ರೆಸ್ನಲ್ಲೇ ಸಿನಿಮಾ ಹಾಡು!
ಅಷ್ಟಕ್ಕೂ ತಮ್ಮದೇ ಉದಾಹರಣೆ ಕೊಟ್ಟಿರುವ ನಟಿ, ಈಗ ನೋಡಿ. ನನ್ನ ಮಿಸ್ಟರ್ ಆಂಡ್ ಮಿಸಸ್ ಮಹಿ ಸಿನಿಮಾದ ಪ್ರಚಾರ ನಡೆಯುತ್ತಿದೆ. ಆದ್ದರಿಂದ ಇದರ ಪ್ರಮೋಷನ್ಗಾಗಿ ಹಲವು ರೀತಿಯಲ್ಲಿ ಔಟ್ಫಿಟ್ ಹಾಕಿಕೊಂಡಿದ್ದೆ. ಇಂಥ ಸಂದರ್ಭಗಳಲ್ಲಿ ಚಿತ್ರದ ಪ್ರಮೋಷನ್ಗಾಗಿ ನನ್ನ ಚಿತ್ರವನ್ನು ಕ್ಲಿಕ್ ಮಾಡಲು ಪಾಪರಾಜಿಗಳನ್ನು ನಾವು ಇದ್ದಲ್ಲಿಯೇ ಕರೆಸಲಾಗುತ್ತದೆ. ಆದರೆ ಸಿನಿಮಾದ ಪ್ರಚಾರ ಇಲ್ಲದ ವೇಳೆ ಹಾಗಾಗುವುದಿಲ್ಲ. ಸ್ಟಾರ್ ನಟ-ನಟಿಯಾಗಿದ್ದರೆ ನಾವು ಹೋದಲ್ಲಿ, ಬಂದಲ್ಲಿ ನಮ್ಮನ್ನು ಹಿಂಬಾಲಿಸಿಕೊಂಡು ಬರುತ್ತಾರೆ. ಕಾರನ್ನು ಹಿಂಬಾಲಿಸಿ ಓಡಿ ಬರುತ್ತಾರೆ. ಹಾಗೆಂದು ಸುಮ್ಮನೇ ಅವರು ಈ ರೀತಿ ಕಷ್ಟಪಡುವುದಿಲ್ಲ. ನಮ್ಮ ಫೋಟೋ ತೆಗೆದು ಪ್ರತಿ ಚಿತ್ರಕ್ಕೆ ಇಷ್ಟೆಂದು ಅವರು ಹಣ ಪಡೆಯುತ್ತಾರೆ ಎಂದಿದ್ದಾರೆ.
ಈ ಹಿಂದೆ ಪ್ರಿಯಾಮಣಿ ಕೂಡ ಈ ಬಗ್ಗೆ ಹೇಳಿದ್ದರು. ಪಾಪರಾಜಿ ಏಜೆನ್ಸಿಗಳಿವೆ ಮತ್ತು ಎಷ್ಟು ಛಾಯಾಗ್ರಾಹಕರು ವಿಮಾನ ನಿಲ್ದಾಣ ಅಥವಾ ಜಿಮ್‌ಗೆ ಅಥವಾ ಎಲ್ಲಿ ಬೇಕಾದರೂ ಬರುತ್ತಾರೆ. ಜಿಮ್, ರೆಸ್ಟಾರೆಂಟ್ ಅಥವಾ ಇನ್ನಾವುದೇ ಸ್ಥಳದಲ್ಲಿ ಇದನ್ನು 'ಸ್ಪಾಟೆಡ್' ಎಂದು ಕರೆಯಲಾಗುತ್ತದೆ. ಸ್ಟಾರ್‌ಗಳು ಪಾಪರಾಜಿಗಳಿಗೆ ಇಂತಿಷ್ಟು ಹಣ ಎಂದು ನೀಡುತ್ತಾರೆ. ಇದೆ ಕಾರಣಕ್ಕೆ ಅವರು ಎಲ್ಲಿಗೆ ಹೋದರೂ ಕ್ಯಾಮೆರಾ ಫೋಕಸ್ ಆಗಿರುತ್ತದೆ ಎಂದಿದ್ದರು. ನೋಡುಗರಿಗೆ ಮಾತ್ರ ಇದು ಎಲ್ಲವೂ ಸಡನ್ ಎಂದು ಕಾಣಿಸುತ್ತದೆ. ಪಾಪರಾಜಿಗಳಿಗೆ ನಟ-ನಟಿಯರ ವಿಷ್ಯ ತಿಳಿಯುವುದು ಹೇಗೆ ಅನ್ನಿಸುತ್ತದೆ. ಆದರೆ ತಾವು ಸುದ್ದಿಯಲ್ಲಿ ಇರಲು ನಟರು ಏನು ಮಾಡುತ್ತಾರೆ ಎನ್ನುವ ರಹಸ್ಯವನ್ನು ಪ್ರಿಯಾಮಣಿ ಬಿಚ್ಚಿಟ್ಟಿದ್ದರು. ಪಾಪರಾಜಿಗಳ ಏಜೆನ್ಸಿಗಳು ಅವಶ್ಯಕತೆಯ ಆಧಾರದ ಮೇಲೆ ವಿಧಿಸುವ ಬೆಲೆಗಳ ಪಟ್ಟಿಯನ್ನು ನೋಡಿ ನನಗೆ ಆಶ್ಚರ್ಯವಾಯಿತು ಎಂದಿದ್ದರು.
ಸೋನು ಗೌಡ ಮಾತು ಕೇಳಿಯಾದ್ರೂ ವಾಪಸ್ ಆಗ್ತಾರಾ ಪೆನ್ಡ್ರೈವ್ ಸಂಸದ? ವೈರಲ್ ಆಗ್ತಿದೆ ನಟಿಯ ವಿಡಿಯೋ...