ಕನ್ನಡ ಹೆಸರಾಂತ ಪೋಷಕ ನಟಿ ಪವಿತ್ರಾ ಲೋಕೇಶ್ ಹಾಗೂ ತೆಲುಗಿನ ಪ್ರಖ್ಯಾತ ಪೋಷಕ ನಟ ನರೇಶ್ ಬಾಬು ವಿವಾಹವಾಗಿದ್ದಾರೆ ಎನ್ನುವ ಸುದ್ದಿ ಸಾಕಷ್ಟು ವೈರಲ್ ಆಗಿದೆ. ಇದು ನರೇಶ್ ಬಾಬು 4ನೇ ಮದುವೆ ಎನ್ನುವುದು ಅಚ್ಚರಿಯ ವಿಚಾರ. ಈ ನಡುವೆ ನರೇಶ್ ಬಾಬು ಮೂರನೇ ಪತ್ನಿ ರೇಖಾ ರಘುಪತಿ ಈ ವಿಚಾರವಾಗಿ ಮಾತನಾಡಿದ್ದು, ಪವಿತ್ರಾ ಲೋಕೇಶ್ ಹೀಗೆ ಮಾಡ್ತಾರೆ ಅಂತಾ ಗೊತ್ತಿರ್ಲಿಲ್ಲ ಎಂದಿದ್ದಾರೆ.
ಬೆಂಗಳೂರು (ಜೂನ್ 28): ಕನ್ನಡದ ಖ್ಯಾತ ನಟಿ, ಹಿರಿಯ ನಟ ದಿ.ಮೈಸೂರು ಲೋಕೇಶ್ ಅವರ ಪುತ್ರಿ ಪವಿತ್ರಾ ಲೋಕೇಶ್ (Pavitra Lokesh) ಹಾಗೂ ತೆಲುಗಿನ ಸ್ಟಾರ್ ವಿಕೆ ನರೇಶ್ ಬಾಬು (VK Naresh Babu) ಅವರನ್ನು ವಿವಾಹವಾಗಿದ್ದಾರೆ (marriage) ಎನ್ನುವ ಸುದ್ದಿ ಈಗಾಗಲೇ ಸಾಕಷ್ಟು ವೈರಲ್ ಆಗಿದೆ. ನರೇಶ್ ಬಾಬು ಅವರಿಗೆ ಇದು ನಾಲ್ಕನೇ ಮದುವೆಸ. ಆದರೆ, ಮದುವೆಯಾಗಿರುವ ಬಗ್ಗೆ ಎರಡೂ ಕುಟುಂಬದವರೂ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡಿದ್ದಾರೆ.
ಈ ನಡುವೆ ನರೇಶ್ ಜೊತೆ ಪವಿತ್ರಾ ಲೋಕೇಶ್ ಮದುವೆಯ ಬಗ್ಗೆ ಅವರ ಮೂರನೇ ಪತ್ನಿಯಾದ ಕರ್ನಾಟಕ ಮೂಲದ ರಮ್ಯಾ ರಘುಪತಿ (Ramya raghupathi) ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ತಮ್ಮ ಅಳಲು ತೋಡಿಕೊಂಡಿದ್ದಾರೆ. "ನರೇಶ್ ಪವಿತ್ರಾ ಲೋಕೇಶ್ ಮದುವೆ ಆಗಿರೋ ವಿಚಾರ ನನಗೆ ಗೊತ್ತಿಲ್ಲ. ಎಲ್ಲಾ ಕಡೆ ಅವರಿಬ್ಬರ ಮದುವೆ ಬಗ್ಗೆ ಸುದ್ದಿ ಹರಿದಾಡ್ತಿದೆ. ನಮ್ಮ ಅತ್ತೆ ವಿಜಯ್ ನಿರ್ಮಲ ಹೋದ ಮೇಲೆ ಇಂತಹ ಸಮಸ್ಯೆ ಬಂದಿದೆ. ಇಬ್ಬರು ಮದುವೆ ಆಗಿದ್ದಾರೆ ಅಂತ ನನಗೆ ನಿಜವಾಗಲೂ ಗೊತ್ತಿಲ್ಲ' ಎಂದು ಹೇಳಿದ್ದಾರೆ.
ನನ್ನ ಮೇಲೆ ನರೇಶ್ ದೊಡ್ಡ ಆರೋಪ ಮಾಡಿದ್ದರು. 500 ಕೋಟಿ ತಗೋಂಡು ಓಡಿ ಹೋಗಿದ್ದೇನೆ ಅಂತ ಹೋದ ಬಂದಲ್ಲೆಲ್ಲಾ ಪ್ರಚಾರ ಮಾಡಿದ್ದರು. ನಾನು ನರೇಶ್‌ಗೆ ವಿಚ್ಛೇದನ ನೀಡಿಲ್ಲ. ನೀಡೋದು ಇಲ್ಲ. ಇದಕ್ಕೂ ಮುನ್ನ ನನಗೆ ಡಿವೋರ್ಸ್ ಕೊಡು ಅಂತ ಟಾರ್ಚರ್ ಕೊಡೋಕೆ ಅವರು ಶುರು ಮಾಡಿದ್ದರು. ನಾನು ವಿಚ್ಛೇದನ ಕೊಡೋದಿಲ್ಲ ಎಂದು ಹೇಳಿದ್ದೆ. ಅವರು ಹಲವು ಆಮಿಷಗಳನ್ನು ಒಡ್ಡಿದ್ದರು. ಆದ್ರೆ ನನಗೆ ಅವರಿಂದ 9 ವರ್ಷದ ಮಗನಿದ್ದಾನೆ. ಹೀಗಾಗಿ ಡಿವೋರ್ಸ್ ಕೊಡೋಕೆ ಹೋಗಿಲ್ಲ. ನನ್ನ ಮೇಲೆ ಎಲ್ಲಾ ಆರೋಪ ಮಾಡಿದ್ದರು. ನಿಜ ಏನು ಅಂತ ತಿಳಿಯದೆ ನನ್ನ ಮೇಲೆ ತೆಲುಗು ಮಾಧ್ಯಮಗಳು ಗೂಬೆ ಕೂರಿಸಿದ್ದರು. ಆಗಲೂ ನಾನು ಸುಮ್ಮನಾದೆ. ನರೇಶ್ ವಿರುದ್ಧ ಮಾತಾಡಿದ್ರೆ ನಮ್ಮ ಮನೆ ಮರ್ಯಾದೆ ಹೋಗುತ್ತೆ ಅಂತ ಸುಮ್ಮನಾದೆ. ಈ ಜೂನ್ ನಲ್ಲಿ ನನಗೆ ಡೈವೋರ್ಸ್ ನೋಟೀಸ್ ಕಳುಹಿಸಿದ್ದರು. ಅದನ್ನ ನೋಡಿ ನನಗೆ ಶಾಕ್ ಆಯ್ತು ಎಂದು ಹೇಳಿದ್ದಾರೆ.
ಅವರಿಗೆ ನಾನು ಡೈವೋರ್ಸ್ ಕೊಡೋದಿಲ್ಲ. ನನ್ನ ಮಗನನ್ನು ಅವರ ಸುಪರ್ದಿಗೆ ಒಪ್ಪಿಸೋದಿಲ್ಲ. ನಾನು ನರೇಶ್ ಒಂದೇ ಮನೆಯಲ್ಲಿದ್ದೇವೆ. ಬಂದು ಹೋಗುತ್ತಿರುತ್ತಾರೆ. ಪಕ್ಕದಲ್ಲೇ ಫಾರ್ಮ್ ಹೌಸ್ ಇದೆ ಅಲ್ಲೆ ಇರುತ್ತಾರೆ. ಆದರೆ, ನನ್ನೊಂದಿಗೆ ಅವರು ಮಾತನಾಡುವುದಿಲ್ಲ. ಪವಿತ್ರ ಲೋಕೇಶ್ ನರೇಶ್ ಮದುವೆ ವಿಚಾರ ಸುದ್ದಿ ಬಂದು ಒಂದು ವಾರ ಅಷ್ಟೆ ಆಗಿದೆ. ನಾನು ಇದ್ದಾಗಲೇ ಮತ್ತೆ ಮದುವೆ ಆಗಿದ್ದಾರೆ ಅಂದ್ರೆ ಅದು ಕಾನೂನು ಬಾಹೀರ. ನಾನು ಅದರ ವಿರುದ್ಧ ಖಂಡಿತಾ ಹೋರಾಡುತ್ತೇನೆ ಎಂದು ರಮ್ಯಾ ಹೇಳಿದ್ದಾರೆ.
ಏನೋ ಸಮಸ್ಯೆ ಇದೆ: ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರು ಸೆಲೆಬ್ರಿಟಿಗಳು. ಸಮಸ್ಯೆ ಇದೆ ಅದು ಹೊರಗೆ ಬರ್ತಾ ಇದೆ ಅನ್ನೋದು ಗೊತ್ತಾಗ್ತಿದೆ. ಸುಚೇಂದ್ರ ಪ್ರಸಾದ್ (Suchendra Prasad) ಅವರಂಥ ವ್ಯಕ್ತಿಯನ್ನ ಬಿಟ್ಟು ಪವಿತ್ರಾ ಲೋಕೇಶ್ ನರೇಶ್ ಜೊತೆ ಬರ್ತಾರೆ ಅಂದ್ರೆ ಏನು ಅಂತ ಗೊತ್ತಾಗುತ್ತಿಲ್ಲ. ನರೇಶ್ ಒಮ್ಮೆ ಪವಿತ್ರಾ ಲೋಕೇಶ್ ಅವರನ್ನು ನಮ್ಮ ಮನೆಗೆ ಕರೆದುಕೊಂಡು ಬಂದಿದ್ದರು. ಆಗ ಅವರು ಬಂದಾಗ ಪ್ರೀತಿಯಿಂದ ಊಟ ಹಾಕಿ ಕಳುಹಿಸಿದೆ. ಮನೆಯಲ್ಲಿ ಕಾಯಿಸಿರೋ ತುಪ್ಪ ಹಾಗೂ ಮೊಸರು ಬಡಸಿ ಊಟ ಹಾಕಿದ್ದೇನೆ. ನಮ್ಮ ಕನ್ನಡದವರು ಅಂತ ಪ್ರೀತಿಯಿಂದ ನೋಡಿಕೊಂಡಿದ್ದೇನೆ. ಆದರ, ಈಗ ಅವರು ಈ ರೀತಿ ಮಾಡಿದ್ದಾರೆ ಅಂದರೆ, ಏನು ಹೇಳೋದು ಅಂತ ಗೊತ್ತಾಗುತ್ತಿಲ್ಲ ಎಂದಿದ್ದಾರೆ.
ನನ್ನ ಹಕ್ಕು ಬಿಟ್ಟುಕೊಡೋ ಮಾತೇ ಇಲ್ಲ: ಇದು ವಾರ್ನಿಂಗ್ ಅಂತ ಅಂದುಕೊಳ್ಳಿ. ನಾನು ನನ್ನ ಹಕ್ಕನ್ನು ಬಿಟ್ಟುಕೊಡೋದಿಲ್ಲ. ನಾನು ಇದರ ವಿರುದ್ಧ ನ್ಯಾಯಕ್ಕಾಗಿ ಹೋರಾಡುತ್ತೇನೆ. ನನ್ನ ಹಕ್ಕನ್ನ ನಾನು ಪಡೆದುಕೊಳ್ಳುತ್ತೇನೆ. ಹಾಗೇನಾದರೂ ನರೇಶ್ ಜೊತೆ ಪವಿತ್ರ ಲೋಕೇಶ್ ಸಂಬಂಧ ಇದ್ರೆ ನಾನು ಕಾನೂನು ಹೋರಾಟ ಮಾಡೇ ತೀರುತ್ತೇನೆ ಎಂದು ಹೇಳಿದ್ದಾರೆ.
ಈಗಾಗಲೇ ಮೂರು ಮದುವೆಯಾಗಿರುವ ನಟನೊಂದಿಗೆ ಪವಿತ್ರಾ ಲೋಕೇಶ್ ಮ್ಯಾರೇಜ್?
ಯಾರು ಈ ರಮ್ಯಾ ರಘುಪತಿ?: ನರೇಶ್ ತೆಲುಗು ನಟ ಹಾಗೂ ತೆಲುಗು ಸ್ಟಾರ್ ನಟ ಕೃಷ್ಣ, ನಟಿ, ನಿರ್ದೇಶಕಿ ನಟಿ ವಿಜಯ ನಿರ್ಮಲ (Vijaya Nirmala) ಅವರ ಪುತ್ರ. ತೆಲುಗು ಸ್ಟಾರ್ ನಟ ಕೃಷ್ಣ(Krishna) ಅವರ 2ನೇ ಪತ್ನಿ ವಿಜಯ ನಿರ್ಮಲ. ಟಾಲಿವುಡ್ ನಟ ಮಹೇಶ್ ಬಾಬು ತಂದೆ ಕೃಷ್ಣ. ಹೀಗಾಗಿ ಮಹೇಶ್ ಬಾಬು (Mahesh Babu) ಹಾಗೂ ನರೇಶ್ ಮಲತಂದೆಯ ಮಕ್ಕಳು. ಇಬ್ಬರಿಗೂ ಅಣ್ಣ ತಮ್ಮಂದಿರ ಸಂಬಂಧ. ನರೇಶ್ ಗೆ ಮೂರನೇ ಹೆಂಡತಿ ಈ ರಮ್ಯಾ ರಘುಪತಿ. ರಮ್ಯಾ ರಘುಪತಿ ಕರ್ನಾಟಕ ಮೂಲದವರು.
3ನೇ ಮದುವೆ ವದಂತಿ; ಇಲ್ಲಿವೆ ಪವಿತ್ರಾ ಲೋಕೇಶ್ ಸುಂದರ ಫೋಟೋಗಳು
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಮೋತಿ ಮಹಲ್ ನ ಮಾಲೀಕ ನೀಲಕಂಠಪುರಂ ರಘುಪತಿ ಅವರ ಮಗಳು ರಮ್ಯಾ ರಘುಪತಿ. ದಕ್ಷಿಣ ಭಾರತ ಚಿತ್ರರಂಗದ ಪಾಲಿಗೆ ಮೋತಿ ಮಹಲ್ ಹೋಟೆಲ್ ತುಂಬಾ ಫೇಮಸ್ ಆಗಿತ್ತು. ಆ ಹೊಟೇಲ್ ನಲ್ಲಿ ತೆಲುಗು ಸ್ಟಾರ್ ನಟನರು ಬಂದು ಉಳಿಯುತ್ತಿದ್ದರು. ರಮ್ಯಾ ರಘುಪತಿ ಅವರ ಚಿಕ್ಕಪ್ಪ ರಘುವೀರ್ ರೆಡ್ಡಿ ಅವರು ಆಂಧ್ರ ಪ್ರದೇಶದ ಪ್ರಭಾವಿ ರಾಜಕಾರಣಿ. ಸಚಿವರಾಗಿ ಆಂಧ್ರ ಪ್ರದೇಶದ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಕೆಜಿಎಫ್ ಸಿನಿಮಾ ನಿರ್ದೇಶಕ ಪ್ರಶಾಂತ್ ನೀಲ್ ಕೂಡ ರಮ್ಯಾ ರಘುಪತಿಗೆ ಸೋದರ ಸಂಬಂಧ. ರಮ್ಯಾ ರಘುಪತಿಯವರನ್ನು ನರೇಶ್ ಪ್ರೀತಿಸಿ ಮದುವೆಯಾಗಿದದ್ದರು.