'ಕಿರಿಕ್ ಪಾರ್ಟಿ', 'ಕರ್ನಾಟಕ ಕ್ರಷ್' ನೆನಪಿಸಿಕೊಳ್ಳುತ್ತಲೇ ಸಿನಿ ಜರ್ನಿಯ ಕುರಿತು ರಶ್ಮಿಕಾ ಹೇಳಿದ್ದೇನು?

By Suvarna News  |  First Published Mar 13, 2024, 4:26 PM IST

ನಟಿ ರಶ್ಮಿಕಾ ಮಂದಣ್ಣ ತಮ್ಮ ಏಳು ವರ್ಷಗಳ ಸಿನಿ ಪಯಣದ ಕುರಿತು ಸುದೀರ್ಘವಾಗಿ ಮಾತನಾಡಿದ್ದು ಇದರಲ್ಲಿ ಕಿರಿಕ್ ಪಾರ್ಟಿ ಮತ್ತು 'ಕರ್ನಾಟಕ ಕ್ರಷ್' ನೆನಪಿಸಿಕೊಂಡಿದ್ದಾರೆ. 
 


ನ್ಯಾಷನಲ್​ ಕ್ರಷ್​ ಜೊತೆ ಕಿರಿಕ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ರಶ್ಮಿಕಾ ಮಂದಣ್ಣ, ಅನಿಮಲ್​ನಲ್ಲಿ ಹಸಿಬಿಸಿ ದೃಶ್ಯದಲ್ಲಿ ಕಾಣಿಸಿಕೊಂಡ ಬಳಿಕ ಸಕತ್​ ಫೇಮಸ್​ ಆಗಿದ್ದಾರೆ. ಇವರಿಗೆ ಬಾಲಿವುಡ್​ನಲ್ಲಿಯೂ ಸಕತ್​ ಬೇಡಿಕೆ ಬರುತ್ತಿದೆ. ಹಣ, ಹೆಸರು ಜೊತೆಗೆ ರಶ್ಮಿಕಾ ವಿವಾದಗಳಲ್ಲೂ ಸಿಲುಕಿದ್ದಾರೆ. ಕನ್ನಡವನ್ನು ಮರೆತಿದ್ದಾರೆ, ತಾವು ಹತ್ತಿ ಬಂದ ಏಣಿಯನ್ನೇ ಒದ್ದಿದ್ದಾರೆ ಎಂಬ ಆರೋಪ ರಶ್ಮಿಕಾ ಮೇಲಿದೆ. ಇದೇನೇ ಆದ್ರೂ, ಮೊದಲ ಸಿನಿಮಾಗೂ ಈಗಿನ ಚಿತ್ರಕ್ಕೂ ರಶ್ಮಿಕಾ ಸ್ಟೇಟಸ್‌ ಬಹಳ ಬದಲಾಗಿದೆ. 'ಕಿರಿಕ್‌ ಪಾರ್ಟಿ'ಯ ಸಾನ್ವಿ ಪಾತ್ರದಿಂದ 'ಮಿಷನ್‌ ಮಜ್ನು' ಚಿತ್ರದ ನಸ್ರೀನ್‌ವರೆಗೂ ರಶ್ಮಿಕಾ, ವಿಭಿನ್ನ ಪಾತ್ರಗಳು ಹಾಗೂ ಅನೇಕ ಸ್ಟಾರ್‌ ನಟರ ಜೊತೆ ನಟಿಸಿ ಹೆಸರು ಮಾಡಿದ್ದಾರೆ. ರಶ್ಮಿಕಾ ಚಿತ್ರರಂಗದಲ್ಲಿ 8 ವರ್ಷಗಳನ್ನು ಪೂರೈಸಿದ್ದಾರೆ. ಅಂದಹಾಗೆ, ರಶ್ಮಿಕಾ ಮಂದಣ್ಣ 'ಕಿರಿಕ್‌ ಪಾರ್ಟಿ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಬಂದರು. ಈ ಸಿನಿಮಾ 30 ಡಿಸೆಂಬರ್‌ 2016ರಲ್ಲಿ ತೆರೆ ಕಂಡಿತ್ತು. 4 ಕೋಟಿ ಬಜೆಟ್‌ನಲ್ಲಿ ತಯಾರಾದ ಸಿನಿಮಾ 50 ಕೋಟಿ ರೂಪಾಯಿ ಲಾಭ ಮಾಡಿತ್ತು. ರಕ್ಷಿತ್‌ ಶೆಟ್ಟಿ , ರಶ್ಮಿಕಾ ಮಂದಣ್ಣ, ಸಂಯುಕ್ತ ಹೆಗ್ಡೆ, ಅಚ್ಯುತ್‌ ಕುಮಾರ್‌, ಚಂದನ್‌ ಆಚಾರ್‌, ಪ್ರಮೋದ್‌ ಶೆಟ್ಟಿ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದರು.

ಇದೀಗ ತಮ್ಮ ಸಿನಿ ಪಯಣದ ಕುರಿತು, ವಿಶೇಷ ಸಂದರ್ಶನವೊಂದನ್ನು ನೀಡಿದ್ದಾರೆ. ಅದರಲ್ಲಿ ಅವರು, ತಮ್ಮ  ಪ್ರಯಾಣದ ಕುರಿತು ವಿವರಿಸಿದ್ದಾರೆ.  ನಟಿಯಾಗಿ ತಮ್ಮನ್ನು  ರೂಪಿಸಿದ ಅವಕಾಶಗಳು ಮತ್ತು ಅನುಭವಗಳಿಗೆ  ಅಪಾರವಾಗಿ ಕೃತಜ್ಞಳಾಗಿದ್ದೇನೆ ಎನ್ನುವ ಮೂಲಕ ಹಲವಾರು ಅನುಭವಳ ಸಾರವನ್ನು ತೆರೆದಿಟ್ಟಿದ್ದಾರೆ. ಈ ಸಂದರ್ಶನದಲ್ಲಿ ಕನ್ನಡದ ಕಿರಿಕ್​ ಪಾರ್ಟಿಯನ್ನೂ ನೆನಪಿಸಿಕೊಂಡಿರುವ ನಟಿ ರಶ್ಮಿಕಾ, ಕಿರಿಕ್ ಪಾರ್ಟಿಯಿಂದ ಪುಷ್ಪಾವರೆಗೆ, ಪ್ರತಿಯೊಂದು ಚಿತ್ರವೂ ನನ್ನ ವೃತ್ತಿಜೀವನದಲ್ಲಿ ಕಲಿಕೆಯ ರೇಖೆ ಮತ್ತು ಒಂದು ಹೆಜ್ಜೆಯಾಗಿದೆ ಎಂದು ಹೇಳಿದ್ದಾರೆ.  ಆದರೆ ಹಿಂದೊಮ್ಮೆ ತಮ್ಮ ಸಿನಿ ಪಯಣದ ಕುರಿತು ಹೇಳುವ ಸಮಯದಲ್ಲಿ ಕಿರಿಕ್​ ಪಾರ್ಟಿಯನ್ನು ನೆನಪಿಸಿಕೊಳ್ಳದೇ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಆದರೆ ಇದೀಗ ಈ ಸಿನಿಮಾವನ್ನೂ ನೆನಪಿಸಿಕೊಂಡಿದ್ದಾರೆ.

Tap to resize

Latest Videos

ಮತ್ತೊಮ್ಮೆ ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ವಿರೋಧಿಸೋ ಬದ್ಲು ನೆಟ್ಟಿಗರು ಹೀಗೆಲ್ಲಾ ಹೇಳೋದಾ?

ದಾರಿಯುದ್ದಕ್ಕೂ, ಅನುಮಾನಗಳು ಹರಿದಾಡಿದಾಗ ಮತ್ತು ಉದ್ಯಮದಲ್ಲಿ ಯಶಸ್ವಿಯಾಗುವ ನನ್ನ ಸಾಮರ್ಥ್ಯವನ್ನು ಜನರು ಪ್ರಶ್ನಿಸಿದ ಕ್ಷಣಗಳೂ ಸಾಕಷ್ಟಿವೆ.  ಆದಾಗ್ಯೂ, ನಾನು ಯಾವಾಗಲೂ ನನ್ನ ಸಾಮರ್ಥ್ಯಗಳನ್ನು ನಂಬಿದ್ದೇನೆ ಮತ್ತು ನನ್ನ ಗುರಿಗಳ ಮೇಲೆ ಕೇಂದ್ರೀಕರಿಸಿದ್ದೇನೆ. ನಾನು ಯಶಸ್ವಿಯಾಗಲು ನನ್ನ ನಿರ್ಣಯವನ್ನು ಉತ್ತೇಜಿಸಲು ಯಾವುದೇ ನಕಾರಾತ್ಮಕತೆಯನ್ನು ಹಿಮ್ಮೆಟ್ಟಿಸಲು ರೆಡಿಯಾಗಿದ್ದೇನೆ ಎಂದಿದ್ದಾರೆ ನಟಿ. ಇವೆಲ್ಲವುಗಳಿಂದಲೇ  ನಾನು ಸವಾಲುಗಳನ್ನು ಜಯಿಸಲು ಮತ್ತು ಉದ್ಯಮದಲ್ಲಿ ನನಗಾಗಿ ಜಾಗವನ್ನು ರೂಪಿಸಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ. ತಮಗೆ ಸಿಕ್ಕಿರುವ ನ್ಯಾಷನಲ್​ ಕ್ರಷ್​ ಬಿರುದನ್ನು ನೆನಪಿಸಿಕೊಂಡ ನಟಿ ಇದರಿಂದ ನಾನು ಕೃತಾರ್ಥಳಾಗಿದ್ದೇನೆ ಎಂದರು. 

  ಉದ್ಯಮದಾದ್ಯಂತ ಕೆಲಸ ಮಾಡಿದ ನಾನು ನ್ಯಾಷನಲ್​ ಕ್ರಷ್​  ಪದವನ್ನು ತುಂಬಾ ಪ್ರೀತಿಸುತ್ತೇನೆ. ಮೊದಲಿಗೆ ಕರ್ನಾಟಕದ ಕ್ರಷ್​ ಎನ್ನುವ ಜೊತೆ ಇದು ಶುರುವಾಗಿ ಇದೀಗ ನ್ಯಾಷನಲ್​ ಕ್ರಷ್​ ಆಗಿರುವುದು ನನಗೆ ಖುಷಿ ಕೊಡುತ್ತಿದೆ. 'ಪ್ಯಾನ್-ಇಂಡಿಯನ್ ಸ್ಟಾರ್' ಎಂಬ ಪದವು ಕೇವಲ ಪ್ರಾದೇಶಿಕ ಮನ್ನಣೆಗಿಂತ ಹೆಚ್ಚಿನದನ್ನು ಪ್ರತಿನಿಧಿಸುತ್ತದೆ. ಇದು ಗಡಿಗಳನ್ನು ಮೀರುವ ಮತ್ತು ರಾಷ್ಟ್ರವ್ಯಾಪಿ ಪ್ರೇಕ್ಷಕರೊಂದಿಗೆ ಪ್ರತಿಧ್ವನಿಸುವ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ ಎಂದಿದ್ದಾರೆ.  ಸಿನಿಮಾ ಮಾಧ್ಯಮದ ಮೂಲಕ ವೈವಿಧ್ಯಮಯ ಸಂಸ್ಕೃತಿಗಳು, ಭಾಷೆಗಳು ಮತ್ತು ಜನರೊಂದಿಗೆ ಸಂಪರ್ಕ ಸಾಧಿಸುವ ಅವಕಾಶವು ನನಗೆ ಸಿಗುತ್ತಿದೆ. ಇದಾಗಲೇ ಉದ್ಯಮದಲ್ಲಿ ಎಂಟನೆಯ ವರ್ಷಕ್ಕೆ ಕಾಲಿಟ್ಟಿದ್ದೇನೆ.  ದಕ್ಷಿಣ ಭಾರತ ಮತ್ತು ಬಾಲಿವುಡ್ ಎರಡರಲ್ಲೂ ದೇಶದ ಕೆಲವು ಅತ್ಯುತ್ತಮ ನಟರ ಜೊತೆಗೆ ವೈವಿಧ್ಯಮಯ ಯೋಜನೆಗಳಲ್ಲಿ ಕೆಲಸ ಮಾಡುವ ಅವಕಾಶ ನನಗೆ ಸಿಕ್ಕಿರುವುದು ನನ್ನ ಪುಣ್ಯ ಎಂದು ರಶ್ಮಿಕಾ ಹೇಳಿದ್ದಾರೆ.
 
ನಾನು ಪ್ರತಿ ದಿನ ನಮ್ರತೆಯ ಜೊತೆ ಹೊಸತನ್ನು ಕಲಿಯಲು ಆಸಕ್ತಿ ಹೊಂದಿದ್ದೇನೆ.  ನಾನು ಸಹನೆ ಮತ್ತು ತಳಹದಿಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಂಡಿದ್ದೇನೆ. ನನ್ನ ಬೇರುಗಳು ಮತ್ತು ಪ್ರೀತಿಪಾತ್ರರ ಜೊತೆಗಿನ ಸಂಪರ್ಕವು ನನ್ನನ್ನು ಖ್ಯಾತಿಯ ಉತ್ತುಂಗಕ್ಕೆ ಏರಿಸಿದೆ ಎಂದಿದ್ದಾರೆ ನಟಿ.  ಸಾರ್ವಜನಿಕ ವ್ಯಕ್ತಿಯಾಗಿರುವುದು ಎಂದರೆ ಕೆಲವು ಸವಾಲುಗಳು ಇದ್ದೇ ಇರುತ್ತವೆ.  ಸಾಮಾಜಿಕ ಮಾಧ್ಯಮ ಆ್ಯಕ್ಟೀವ್​ ಆಗಿರುವ ಈ ಕಾಲದಲ್ಲಿ ಟೀಕೆ-ಟಿಪ್ಪಣೆಗಳೂ ಬರುವುದು ಸಹಜ. ಎಲ್ಲವನ್ನೂ ಸಮಚಿತ್ತದಿಂದಲೇ ಸರಿದೂಗಿಸಿಕೊಂಡು ಹೋಗುತ್ತಿದ್ದೇನೆ ಎಂದಿದ್ದಾರೆ.   

ಮತ್ತೊಮ್ಮೆ ರಶ್ಮಿಕಾ ಡೀಪ್​ಫೇಕ್​ ವಿಡಿಯೋ: ವಿರೋಧಿಸೋ ಬದ್ಲು ನೆಟ್ಟಿಗರು ಸೋ ಹಾಟ್​ ಹೇಳೋದಾ?

click me!