ಮಲಯಾಳಂ ಇಂಡಸ್ಟ್ರಿ ಬಗ್ಗೆ ಅಸೂಯೆಯಿದೆ ಎಂದ ರಾಜಮೌಳಿ: ಅವರು ಕೊಟ್ಟ ಕಾರಣ ಹೀಗಿದೆ..

By Suvarna NewsFirst Published Mar 13, 2024, 6:24 PM IST
Highlights

ಮಲಯಾಳಂ ಚಿತ್ರೋದ್ಯಮದ ಬಗ್ಗೆ ಅಸೂಯೆಯಿದೆ ಎಂದಿದ್ದಾರೆ ತೆಲಗು ಸ್ಟಾರ್​ ನಿರ್ದೇಶಕ ಎಸ್​.ಎಸ್​​. ರಾಜಮೌಳಿ. ಅಷ್ಟಕ್ಕೂ ಅವರು ಹೀಗೆ ಹೇಳಿದ್ದೇಕೆ?
 

ಮಲಯಾಳಂ ಚಲನಚಿತ್ರೋದ್ಯಮದ ಬಗ್ಗೆ ನನಗೆ ತುಂಬಾ ಅಸೂಯೆಯಿದೆ. ಇದನ್ನು ನಾನು ನೋವಿನಿಂದಲೂ ಒಪ್ಪಿಕೊಳ್ಳುತ್ತೇನೆ ಎನ್ನುತ್ತಲೇ, ತೆಲಗು ಚಿತ್ರರಂಗಕ್ಕಿಂತ ಮಲಯಾಳಂ ಯಾಕೆ ಬೆಸ್ಟ್​ ಎನ್ನುವುದನ್ನು ಹೇಳಿದ್ದಾರೆ ಸ್ಟಾರ್​ ನಿರ್ದೇಶಕ​ ಎಸ್‌.ಎಸ್ ರಾಜಮೌಳಿ. ಮಲಯಾಳಂ ಚಲನಚಿತ್ರೋದ್ಯಮವು ಎಲ್ಲರಿಗಿಂತಲೂ  ಉತ್ತಮ ನಟರನ್ನು ಉತ್ಪಾದಿಸುತ್ತದೆ. ಇದನ್ನು ನಾನು ಅಸೂಯೆ ಮತ್ತು ನೋವಿನಿಂದ ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ ಅವರು. ಮಲಯಾಳಂ ಬ್ಲಾಕ್‌ಬಸ್ಟರ್ ಪ್ರೇಮಲು ತೆಲುಗಿಗೆ ಡಬ್ ಆಗಿದ್ದು, ಗಾಮಿ ಮತ್ತು ಭೀಮಾ ಜೊತೆಗೆ ಮಾರ್ಚ್ 8 ರಂದು ಬಿಡುಗಡೆಯಾಗಿದೆ.  ಎಸ್‌.ಎಸ್ ರಾಜಮೌಳಿ, ಅವರ ಮಗ ಎಸ್‌ಎಸ್ ಕಾರ್ತಿಕೇಯ ಅವರು ಡಬ್ಬಿಂಗ್ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ.  ಹೈದರಾಬಾದ್‌ನಲ್ಲಿ ಚಿತ್ರದ ಯಶಸ್ಸನ್ನು ಆಚರಿಸಲು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ  ಮಲಯಾಳಂ ಚಲನಚಿತ್ರೋದ್ಯಮವನ್ನು ಶ್ಲಾಘಿಸಿದ್ದಾರೆ ರಾಜಮೌಳಿ.
 
‘ಲವ್​ಸ್ಟೋರಿ ಸಿನಿಮಾಗಳು ನನಗೆ ಇಷ್ಟವಾಗುವುದಿಲ್ಲ. ಆದರೆ, ಕಾರ್ತಿಕೇಯ ಈ ಚಿತ್ರವನ್ನು ಡಬ್ ಮಾಡುತ್ತೇನೆ ಎಂದ. ನಾನು ಓಕೆ ಎಂದೆ. ಥಿಯೇಟರ್​ಗೆ ಹೋಗಿ ನೋಡಿ ನನಗೆ ಸಿನಿಮಾ ಇಷ್ಟ ಆಯಿತು. ಮಲಯಾಳಂ ಸಿನಿಮಾ ನಿರ್ದೇಶಕರು ಪ್ರತಿ ಪಾತ್ರದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅಲ್ಲಿ ಒಳ್ಳೆಯ ಕಲಾವಿದರು ಸಿದ್ಧವಾಗುತ್ತಿದ್ದಾರೆ’ ಎಂದು ಮೆಚ್ಚುಗೆ ಸೂಚಿಸಿದ್ದಾರೆ ರಾಜಮೌಳಿ. ಮಲಯಾಳಂ ಚಿತ್ರರಂಗದಲ್ಲಿ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾಗಳು ಹೆಚ್ಚಿವೆ. ಇಲ್ಲಿ ಆ್ಯಕ್ಷನ್​ ಚಿತ್ರಗಳು ಕಡಿಮೆ. ಇದೇ ಕಾರಣಕ್ಕೆ,  ಅಲ್ಲಿಯ ಕಲಾವಿದರು ಕೂಡ ಸಿಂಪಲ್ ಆಗಿ ಎಲ್ಲರ ಗಮನ ಸೆಳೆಯುತ್ತಾರೆ ಎನ್ನುವುದು ರಾಜಮೌಳಿ ಅವರ ಅಭಿಮಯ. ಅಷ್ಟಕ್ಕೂ ಮಲಯಾಳಂ ಚಿತ್ರಗಳಲ್ಲಿ ಹಳ್ಳಿಗಳಲ್ಲಿ ನಡೆಯುವ ಕಥೆಗಳಿಗೆ ಆದ್ಯತೆ ನೀಡಲಾಗುತ್ತದೆ. ಆದರೆ ಅಲ್ಲಿ ಯಾವುದೇ ಆಡಂಬರ ಇರುವುದಿಲ್ಲ. ಇದ್ದ ವಿಷಯವನ್ನು ನೇರವಾಗಿ ವೀಕ್ಷಕರ ಮುಂದೆ  ತರಲಾಗುತ್ತದೆ. ಆದ್ದರಿಂದ ಇದು ತಮ್ಮ ಮೆಚ್ಚುಗೆಗೆ ಪಾತ್ರವಾಗಿವೆ ಎಂದಿದ್ದಾರೆ ರಾಜಮೌಳಿ. 

'ಮುತ್ತಿನ ಸೆಲ್ಫಿ' ನೋಡಿ ಆನಂದ್​ನಿಂದ ಬ್ಲ್ಯಾಕ್​ಮೇಲ್​! ಭೂಮಿಕಾ ಮಲಗಿದಾಗ ಕಳ್ಳನಂತೆ ಬಂದ ಗೌತಮ್​...

ಇದೇ ವೇಳೆ, ಶೀಘ್ರದಲ್ಲಿ ರಾಜಮೌಳಿ ಅವರು,  ಪ್ರಿನ್ಸ್ ಮಹೇಶ್ ಬಾಬು (Mahesh Babu) ಜೊತೆ  ಹೊಸ ಹಿಸ್ಟರಿ ಕ್ರಿಯೇಟ್ ಮಾಡಲು ಹೊರಟಿದ್ದಾರೆ ಎನ್ನುವ ಸುದ್ದಿ ಇದೆ. ರಾಜಮೌಳಿ ಈ ಬಾರಿ ಪ್ಯಾನ್ ಇಂಡಿಯಾ ಸಿನಿಮಾ ಬದಲು  ಗ್ಲೋಬಲ್ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಸುದ್ದಿಯೂ ಇದೆ. ಬರೀ ಭಾರತೀಯ ಭಾಷೆಗಳಲ್ಲಿ ಮಾತ್ರ ಅಲ್ಲ. ಇಂಗ್ಲಿಷ್ ಹಾಗೂ ಇತರ ದೇಶದ ಭಾಷೆಗೂ ಡಬ್ ಆಗಲಿದೆ. ಅಲ್ಲಿಗೆ ಜಕ್ಕಣ್ಣನ ಸವಾರಿ ಸಪ್ತಸಾಗರ ದಾಟಿ ಹೊಸ ಹಬ್ಬ ಮಾಡಲಿದೆ ಎಂದೇ ಬಣ್ಣಿಸಲಾಗುತ್ತಿದೆ. ಈ ಚಿತ್ರದ ಬಗ್ಗೆ ಹೆಚ್ಚು ಡಿಟೇಲ್ಸ್​ ಹೊರ ಬರದಿದ್ದರೂ ಈ ಚಿತ್ರದ ಶೂಟಿಂಗ್​ ಬಹುತೇಕ ಕಾಡಿನಲ್ಲಿ ನಡೆಯಲಿದೆ.  8 ಗೆಟಪ್‌ನಲ್ಲಿ ಮಹೇಶ್ ಬಾಬು ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಪಾತ್ರ ಹೀಗೆ ಬರಬೇಕು ಅದಕ್ಕೆ ಏನೆಲ್ಲಾ ಮಾಡಬೇಕೋ ಅದರ ತಯಾರಿಯಲ್ಲಿದ್ದಾರೆ. ಅದು ಎಲ್ಲೆಲ್ಲಿ ಎನ್ನುವುದು ನಿಗೂಢ. ಹೀಗಾಗಿ ಮಹೇಶ್ ಬಾಬು ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.  

  ವಿಜಯೇಂದ್ರ ಪ್ರಸಾದ್ ಕತೆ ಬರೆದಿದ್ದಾರೆ. ಅದಕ್ಕೆ ಏನೇನು ಮಸಾಲೆ ಬೇಕು ರಾಜಮೌಳಿ ತುಂಬಿದ್ದಾರೆ. ಭರ್ತಿ ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಇಷ್ಟು ಕೋಟಿ ಖರ್ಚು ಮಾಡುತ್ತಿರುವುದು ಇದೇ ಮೊದಲು. ಗ್ಲೋಬಲ್ ಸಿನಿಮಾ ಎನ್ನುವ ಹೆಗ್ಗಳಿಕೆ ಕೂಡ ಇದೆ. ಇದರಲ್ಲಿ ಹೀರೋ ಬಿಟ್ಟರೆ ಇನ್ಯಾರ ಹೆಸರೂ ಗೊತ್ತಾಗಿಲ್ಲ. ಅದಕ್ಕೂ ಅಂತಿಮ ತೆರೆ ಬೀಳುವ ದಿನ ದೂರ ಇಲ್ಲ. ಇದರ ನಡುವೆಯೇ ರಾಜಮೌಳಿ ಅವರು ಮಲಯಾಳಂ ಚಿತ್ರೋದ್ಯಮವನ್ನು ಹೊಗಳಿದ್ದಾರೆ. 
'ಕಿರಿಕ್ ಪಾರ್ಟಿ', 'ಕರ್ನಾಟಕ ಕ್ರಷ್' ನೆನಪಿಸಿಕೊಳ್ಳುತ್ತಲೇ ಸಿನಿ ಜರ್ನಿಯ ಕುರಿತು ರಶ್ಮಿಕಾ ಹೇಳಿದ್ದೇನು?

click me!