ನೆಗೆಟಿವಿಟಿ ಇರೋದೇ ಗೊತ್ತಾಗಲ್ಲ; ನಾನು ಅದನ್ನು ತೆಗೆದುಕೊಳ್ಳುವುದಿಲ್ಲ; ಹೀಗಂದ್ರಾ ಅಲ್ಲು ಅರ್ಜುನ್?

By Shriram BhatFirst Published Apr 13, 2024, 6:47 PM IST
Highlights

ನಟ ಅಲ್ಲು ಅರ್ಜುನ್ ಅವರು ಪುಷ್ಪಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ತೆಲುಗು ಸ್ಟಾರ್ ಅಲ್ಲು ಅರ್ಜುನ್ ಹಾಗು ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ದಾಖಲಿಸಿದೆ. 

ಪುಷ್ಪಾ ಖ್ಯಾತಿಯ ನಟ ಅಲ್ಲು ಅರ್ಜುನ್ (Allu Arjun) ಅವರಿಗೆ ಭಾರೀ ಪ್ರಶ್ನೆಯೊಂದು ಎದುರಾಗಿದೆ. ಸಂದರ್ಶಕರು 'ನೀವು ಎಲ್ಲಾ ಸಮಯದಲ್ಲಿಯೂ ಮುಗುಳ್ನಗುತ್ತಲೇ ಇರುತ್ತೀರಿ ಹೇಗೆ?' ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ನಟ ಅಲ್ಲು ಅರ್ಜುನ್ ಅವರು ನಗುತ್ತಲೇ ಉತ್ತರಿಸಿದ್ದಾರೆ. 'ನಂಗೆ ನೆಗೆಟಿವಿಟಿ ಅಂದ್ರೇನು ಅಂತ್ಲೇ ಗೊತ್ತಿಲ್ಲ. ಅದನ್ನು ಗುರುತಿಸಿ ಒಳಗೆ ತೆಗೆದುಕೊಳ್ಳುವ ಕೆಲಸವನ್ನು ನಾನು ಮಾಡುವುದೇ ಇಲ್ಲ. ನನ್ನ ಪ್ರಕಾರ, ನೆಗೆಟಿವಿಟಿ (Negativity) ಅನ್ನೋದನ್ನು ನೀವು ತೆಗೆದುಕೊಂಡರಷ್ಟೇ ಅದರ ಅನುಭವ ಆಗೋದು ಹಾಗೂ ನೀವು ಅದರಿಂದ ಸಫರ್ ಆಗೋದು. 

ನಾನು ನೆಗೆಟಿವಿಟಿಯನ್ನು ತೆಗೆದುಕೊಳ್ಳುವುದೇ ಇಲ್ಲ, ಹೀಗಾಗಿ ನನಗೆ ಅದನ್ನು ಮ್ಯಾನೇಜ್ ಮಾಡುವ ಅಗತ್ಯವೇ ಬರುವುದಿಲ್ಲ. ನಾನು ನನಗೆ ಬೇಕಾಗಿದ್ದನ್ನು ಮಾತ್ರ ತೆಗೆದುಕೊಳ್ಳುತ್ತೇನೆ. ಹೀಗಾಗಿ ನನಗೆ ಬೇಡದಿರುವುದನ್ನು ತೆಗೆದುಕೊಂಡು ಅದನ್ನು ಎಲ್ಲಿಡಬೇಕು, ಯಾವಾಗ ಹೊರಗೆ ಹಾಕಬೇಕು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸುವುದೇ ಇಲ್ಲ' ಎಂದಿದ್ದಾರೆ ನಟ ಅಲ್ಲು ಅರ್ಜುನ್. ನಟ ಅಲ್ಲು ಅರ್ಜುನ್ ವೇದಿಕೆಗಳಲ್ಲಿ, ಇಂಟರ್‌ವ್ಯೂಗಳಲ್ಲಿ ಯಾವತ್ತೂ ಮುಖವನ್ನು ಗಂಟುಹಾಕಿಕೊಂಡು ಕುಳಿತುಕೊಳ್ಳುವುದಿಲ್ಲ. ಜನರೊಟ್ಟಿಗೆ ಇರುವಾಗ ಕೂಡ ಅಷ್ಟೇ, ಅವರು ಎಲ್ಲರೊಂದಿಗೆ ಬೆರೆಯುತ್ತ ಮುಖದಲ್ಲು ಮುಗುಳ್ನಗು ಹೊರಸೂಸುತ್ತ ಇರುತ್ತಾರೆ. 

ತೀವ್ರ ಎದೆನೋವಿನಿಂದ ತೆಲುಗಿನ ಖ್ಯಾತ ನಟ ಆಸ್ಪತ್ರೆಗೆ ದಾಖಲು; ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೇನು?

ಅಂದಹಾಗೆ, ನಟ ಅಲ್ಲು ಅರ್ಜುನ್ ಅವರು ಪುಷ್ಪಾ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ತೆಲುಗು ಸ್ಟಾರ್ ಅಲ್ಲು ಅರ್ಜುನ್ ಹಾಗು ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ದಾಖಲಿಸಿದೆ.  ಈ ಮೂಲಕ ನಟ ಅಲ್ಲು ಅರ್ಜುನ್‌ ಅವರು ತೆಲುಗು ಗಡಿಯನ್ನು ದಾಟಿ, ನಾರ್ತ್-ಸೌತ್ ಭೇದವಿಲ್ಲದೇ ಇಡೀ ಇಂಡಿಯಾ ಲೆವಲ್‌ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಅದೇ ಜೋಡಿ, ಅಂದರೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ 'ಪುಷ್ಪಾ 2' ಶೂಟಿಂಗ್ ಹಂತದಲ್ಲಿದೆ. 

ವಿಷ್ಣುವರ್ಧನ್ ಅವರನ್ನೇ 'ನಾಗರಹಾವು'ಗೆ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ್ದೇಕೆ? ಭಾರೀ ಗುಟ್ಟು ರಟ್ಟಾಯ್ತು!

ಒಟ್ಟಿನಲ್ಲಿ, ನಟ ಅಲ್ಲು ಅರ್ಜುವ್ ಅವರು ಯಾವತ್ತೂ ಮುಖ ಸಿಂಡರಿಸಿಕೊಂಡು ಇರುವುದಿಲ್ಲ, ಎಲ್ಲಾ ಸಮಯಗಳಲ್ಲಿ ಮುಖದಲ್ಲಿ ಮುಗುಳ್ನಗು ಪ್ರದರ್ಶಿಸುತ್ತಲೇ ಇರುತ್ತಾರೆ ಎಂಬುದನ್ನು ಬಹಳಷ್ಟು ಜನರು ಗುರುತಿಸಿದ್ದಾರೆ. ಅದನ್ನೇ ಸಂದರ್ಶಕರು ಸಹ ಗುರುತಿಸಿ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ನಟ ಅಲ್ಲು ಅರ್ಜುನ್ ಕೊಟ್ಟ ಉತ್ತರ ನಿಜವಾಗಿಯೂ ಸೂಪರ್ ಎನ್ನುವಂತಿದೆ. ಆ ಉತ್ತರದಲ್ಲಿ ಅವರೆಷ್ಟು ಬ್ರಿಲಿಯಂಟ್ ಹಾಗೂ ರಿಯಾಲಿಟಿಗೆ ಹತ್ತಿರದಲ್ಲಿ ಯೋಚನೆ ಮಾಡಿದ್ದಾರೆ ಎಂಬದನ್ನು ಗಮನಿಸಬಹುದು. 

ಸಾಧು ಕೋಕಿಲ ಪ್ರಶ್ನೆಗೆ ನಗುತ್ತ 'ಮೌನವೇನೇ ಧ್ಯಾನವೇ ಪ್ರೇಮಾ' ಎಂದಿದ್ದೇಕೆ ರಿಯಲ್ ಸ್ಟಾರ್ ಉಪೇಂದ್ರ?

click me!