ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ: ನಟಿ ನೋರಾ ಫತೇಹಿ ಕೊಟ್ಟ ಕಾರಣ ಹೀಗಿದೆ...

By Suvarna News  |  First Published Apr 13, 2024, 5:18 PM IST

ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ ಎಂದ ನಟಿ ನೋರಾ ಫತೇಹಿ ಕೊಟ್ಟ ಕಾರಣ ಏನು? 
 


ಬಾಲಿವುಡ್​ನ ಹಾಟ್​ ಬ್ಯೂಟಿ ಎಂದೇ ಫೇಮಸ್​ ಆಗಿರೋ ನಟಿ ನೋರಾ ಫತೇಹಿ. ಹಿಂದಿ, ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಹಾಟ್​ನೆಸ್​ನಿಂದಲೇ ಫೇಮಸ್​ ಆಗಿರೋ ನಟಿ ಈಕೆ. ಇಂದು ಅಂದ್ರೆ ಫೆ.6 ಈ ನಟಿಗೆ 32ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ, ನೋರಾ ಫತೇಲಿ ಕುರಿತು ಹೇಳುವುದಾದರೆ, ನೋರಾ ಫತೇಹಿ ಐಟಂ ಗರ್ಲ್​ ಎಂದೇ ಫೇಮಸ್ಸು. ಈಕೆ ನೃತ್ಯ ಮಾಡುವುದಕ್ಕೆ ನಿಂತರೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುವುದು ಇದೆ.  ಅಂದಹಾಗೆ ನಟಿ, ಯಾವುದೇ ನೃತ್ಯ ತರಬೇತಿ ಪಡೆದಿಲ್ಲ. ಸ್ವಯಂ ಅಭ್ಯಾಸದ ಮೂಲಕ ತಮ್ಮ ಅದ್ಭುತ ಡ್ಯಾನ್ಸರ್ ಆಗಿ ಬೆಳೆದಿದ್ದಾರೆ. ಇಂದು ಅವರ ನೃತ್ಯವನ್ನು ಮಾಧುರಿ ದೀಕ್ಷಿತ್ ಮತ್ತು ಮಲೈಕಾ ಅರೋರಾ ಅವರಂತಹ ನಟಿಯರೊಂದಿಗೆ ಹೋಲಿಸಲಾಗುತ್ತದೆ. ಇವರು ಸೊಂಟ ಕುಣಿಸುತ್ತಾ ಬೆಲ್ಲಿ ಡ್ಯಾನ್ಸ್​ ಮಾಡಿದರೆ ಕಣ್​ ಕಣ್​ ಬಿಟ್ಟು ನೋಡಬೇಕು ಹಾಗಿರುತ್ತದೆ!

ಇದೀಗ ನಟಿ  ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ  ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವೇಳೆ ಅವರು ಮಾತನಾಡಿರುವ ಹಲವಾರು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿ ಸ್ತ್ರೀವಾದದ ಕುರಿತು ಅವರಾಡಿರುವ ಮಾತುಗಳ ಸಕತ್​ ವೈರಲ್​ ಆಗುತ್ತಿವೆ. ಸ್ತ್ರೀವಾದದ ಮೇಲೆ ನನಗೆ ನಂಬಿಕೆ ಇಲ್ಲ ಎಂದಿರುವ ನಟಿ, ಸ್ತ್ರೀವಾದವು ಅತಿಯಾದ್ರೆ ಸಮಾಜಕ್ಕೆ ಅಪಾಯಕಾರಿ ಎಂದು ಹೇಳಿದ್ದಾರೆ. ಮಹಿಳೆಯರು ಸಂಸ್ಕಾರವಂತರಾಗಿದ್ದು, ತಾಯಂದಿರ ಪಾತ್ರವನ್ನು ವಹಿಸಿಕೊಳ್ಳಬೇಕು. ಆದರೆ ಇಂದು ಸ್ತ್ರೀವಾದವು ಹೆಚ್ಚಾಗಿದೆ. ಇದರಲ್ಲಿ ನನಗೆ ನಂಬಿಕೆ ಇಲ್ಲ. ಸಮಾಜದ ಮೇಲೆ ಸ್ತ್ರೀವಾದದ ಮೈಂಡ್ ವಾಶ್ ಜಾಸ್ತಿಯಾಗುತ್ತಿದೆ ಎಂದಿದ್ದಾರೆ.  

Tap to resize

Latest Videos

ಬಾಲಿವುಡ್​ ಸ್ಟಾರ್​ ನಟರ ಇನ್ನೊಂದು ಮುಖ ಅನಾವರಣಗೊಳಿಸಿದ ನಟಿ ವಿದ್ಯಾ ಬಾಲನ್​

ಮಹಿಳೆಯೊಬ್ಬರು ತಾಯಿ, ಹೆಂಡತಿ ಮತ್ತು ಪೋಷಕ ಜವಾಬ್ದಾರಿ ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಒಬ್ಬ ಪುರುಷ ಮಾಡುವ ಎಲ್ಲಾ ಕೆಲಸ ಮಹಿಳೆಯರಿಂದಲೂ ಸಾಧ್ಯ, ಎಲ್ಲದ್ದಕ್ಕೂ ಆಕೆ ಸಿದ್ಧರಾಗಿರಬೇಕು. ನಾವು ಇದನ್ನು ಹಳೆಯ-ಶಾಲೆ, ಸಾಂಪ್ರದಾಯಿಕ ಚಿಂತನೆಯ ವಿಧಾನ ಎಂದು ಕರೆಯುತ್ತೇವೆ. ನಾನು ಅದನ್ನು ಸಾಮಾನ್ಯ ಚಿಂತನೆಯ ಮಾರ್ಗ ಎಂದು ಕರೆಯುತ್ತೇನೆ. ಮಹಿಳೆ ಸ್ವಾಭಾವಿಕವಾಗಿ ಸಂಪೂರ್ಣವಾಗಿ ಸ್ವತಂತ್ರಳು. ಆಕೆಗೆ ಹುಟ್ಟುತ್ತಲೇ ಅಮೋಘ ಶಕ್ತಿ ಇರುತ್ತದೆ. ಆದ್ದರಿಂದ ಮಹಿಳೆ  ಕೆಲಸಕ್ಕೆ ಹೋಗಬೇಕು ಮತ್ತು ತಮ್ಮದೇ ಆದ ಜೀವನವನ್ನು ಹೊಂದಿರಬೇಕು ಮತ್ತು ಸ್ವತಂತ್ರವಾಗಿರಬೇಕು ಎಂದು ನಟಿ ಹೇಳಿದ್ದಾರೆ. 

 ನಾನು ಮಹಿಳೆಯರ ಹಕ್ಕುಗಳಿಗಾಗಿ ಸಹ ಪ್ರತಿಪಾದಿಸುತ್ತೇನೆ. ಹುಡುಗಿಯರು ಶಾಲೆಗೆ ಹೋಗಬೇಕು ಎಂದಿದ್ದಾರೆ ನಟಿ.  ಭಾವನಾತ್ಮಕ ವಿಷಯಗಳಲ್ಲಿ ಮಹಿಳೆ ಪುರುಷರು ಸಮಾನರು. ಆದರೆ ಸಾಮಾಜಿಕ ವಿಷಯಗಳಲ್ಲಿ ಮಹಿಳೆ ಸಮಾನರಲ್ಲ. ಸ್ತ್ರೀವಾದವು ಅಂತರ್ಗತವಾಗಿ, ತಳಮಟ್ಟದಲ್ಲಿ ಉತ್ತಮವಾಗಿದೆ. ಮಹಿಳೆಯರು  ಸಮಾಜದಲ್ಲಿ ರಕ್ಷಣಾತ್ಮಕ ಪಾತ್ರವನ್ನು ತೆಗೆದುಕೊಳ್ಳಲು ಸಿದ್ಧರಾಗಿರಬೇಕು. ಹೆಚ್ಚಿನ ಪುರುಷರು ಇದನ್ನೆಲ್ಲಾ ಇನ್ನು ಮುಂದೆ ಮಾಡಲು ಬಯಸುವುದಿಲ್ಲ. ಬಹಳಷ್ಟು ಪುರುಷರು ಈಗ ಸ್ತ್ರೀವಾದದ ಯುಗದಿಂದ ಬ್ರೈನ್‌ವಾಶ್‌ಗೆ ಒಳಗಾಗಿದ್ದಾರೆ ಎಂದು ನೋರಾ ಹೇಳಿದ್ದಾರೆ.   

ನಾಲ್ಕು ವರ್ಷ ಹಿಂದೆ ನಡೆದ ಕೊಲೆ! ನ್ಯಾಯ ಕೋರಿ ಬಾಲಿವುಡ್​ ನಟಿ ಆಯೇಷಾ ಜುಲ್ಕಾ ಕೋರ್ಟ್​ಗೆ
 

click me!