ತೀವ್ರ ಎದೆನೋವಿನಿಂದ ತೆಲುಗಿನ ಖ್ಯಾತ ನಟ ಆಸ್ಪತ್ರೆಗೆ ದಾಖಲು; ಸೋಷಿಯಲ್ ಮೀಡಿಯಾದಲ್ಲಿ ಹೇಳಿದ್ದೇನು?

By Shriram Bhat  |  First Published Apr 13, 2024, 5:58 PM IST

ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜನಪ್ರಿಯ ನಟ ಸಯಾಜಿ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಟ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಏಪ್ರಿಲ್ 11 ರಂದು ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಗೆ..


ಹೆಚ್ಚಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ನಟ ಸಯಾಜಿ ಶಿಂಧೆ (Sayaji Shinde) ಅವರಿಗೆ ಅನಾರೋಗ್ಯ ಕಾಡಿದ್ದು, ಅವರು ತೀವ್ರ ಎದೆನೋವಿನಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ನಟ ಸಯಾಜಿ ಅವರಿಗೆ ಕಳೆದ ಕೆಲವು ದಿನಗಳಿಂದ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ, ಅವರು ಏಪ್ರಿಲ್ 11 ರಂದು ಸತಾರಾದಲ್ಲಿರುವ ಪ್ರತಿಭಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರನ್ನು ಪರೀಕ್ಷಿಸಿದ ವೈದ್ಯರು ಹೇಳೀರುವ ಪ್ರಕಾರ ಅವರ ಹೃದಯದ ರಕ್ತನಾಳದಲ್ಲಿ ಬ್ಲಾಕೇಜ್ ಆಗಿದ್ದು, ಆ ಕಾರಣಕ್ಕೆ ಅವರಿಗೆ ತೀವ್ರತರದ ಎದೆನೋವು ಕಾಣಿಸಿಕೊಂಡಿದೆ. 

ನಟ ಸಯಾಜಿ ಶಿಂಧೆ ಅವರನ್ನು ಪ್ರತಿಭಾ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಿಕೊಂಡಿರುವ ವೈದ್ಯರು ಅವರಿಗೆ ಹೃದಯಕ್ಕೆ ಸಂಬಂಧಿಸಿದ ಹಲವು ಪರೀಕ್ಷೆಗಳನ್ನು ಮಾಡಲಾಗಿದೆ. ಆ ಮೂಲಕ ಅವರ ಹೃದಯದ ರಕ್ತನಾಳಗಳಲ್ಲಿ ಬ್ಲಾಕೇಜ್ ಕಂಡುಬಂದಿದ್ದು, ಅದಕ್ಕೆ ತಕ್ಷಣವೇ ಆ್ಯಂಜಿಯೋಪ್ಲಾಸ್ಟಿ ( Angioplasty)ಮಾಡಲಾಗಿದೆ. ಈಗ ಅವರ ಆರೋಗ್ಯ ಸ್ಥಿರವಾಗಿದ್ದು, ಅವರನ್ನು ಇನ್ನೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದು ವೈದ್ಯರು ಮಾಹಿತಿ ನೀಡಿದ್ದಾರೆ ಎಂದು ತಿಳಿದುಬಂದಿದೆ. 

Tap to resize

Latest Videos

ವಿಷ್ಣುವರ್ಧನ್ ಅವರನ್ನೇ 'ನಾಗರಹಾವು'ಗೆ ಪುಟ್ಟಣ್ಣ ಕಣಗಾಲ್ ಆಯ್ಕೆ ಮಾಡಿದ್ದೇಕೆ? ಭಾರೀ ಗುಟ್ಟು ರಟ್ಟಾಯ್ತು!

ತಮ್ಮ ಅನಾರೋಗ್ಯದ ಬಗ್ಗೆ ಎಕ್ಸ್‌ನಲ್ಲಿ (Twitter) ನಟ ಸಯಾಜಿ ಶಿಂಧೆ ಮಾಹಿತಿ ಹಂಚಿಕೊಂಡಿದ್ದು 'ಹಾಯ್, ನಾನು ಚೆನ್ನಾಗಿದ್ದೇನೆ. ನನ್ನನ್ನು ಪ್ರೀತಿಸುವ ಎಲ್ಲ ಅಭಿಮಾನಿಗಳಿಗೆ, ನನ್ನೊಂದಿಗಿರುವ ಹಿತೈಷಿಗಳಿಗೆ ನಾನು ಈ ಮೂಲಕ ಹೇಳುವುದೇನೆಂದರೆ, ನೀವು ಆತಂಕ ಪಡುವ ಅಗತ್ಯವಿಲ್ಲ, ಈಗ ನಾನು ಚೆನ್ನಾಗಿದ್ದೇನೆ, ಧನ್ಯವಾದಗಳು'. ಎಂದು ಬರೆದುಕೊಂಡಿದ್ದಾರೆ. ಅದಕ್ಕೆ ಅವರ ಅಭಿಮಾನಿಗಳಲ್ಲಿ ಒಬ್ಬರು 'ನಿಮ್ಮ ಆರೋಗ್ಯವನ್ನು ನೋಡಿಕೊಳ್ಳಿ' ಎಂದು ಕಮೆಂಟ್‌ ಮಾಡಿದ್ದಾರೆ. ಮತ್ತೊಬ್ಬರು 'ಶೀಘ್ರವಾಗಿ ಚೇತರಿಕೆ ಕಾಣಿರಿ ಎಂದು ನಾನು ದೇವರಲ್ಲಿ ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ. 

ಸಾಧು ಕೋಕಿಲ ಪ್ರಶ್ನೆಗೆ ನಗುತ್ತ 'ಮೌನವೇನೇ ಧ್ಯಾನವೇ ಪ್ರೇಮಾ' ಎಂದಿದ್ದೇಕೆ ರಿಯಲ್ ಸ್ಟಾರ್ ಉಪೇಂದ್ರ?

ಅಂದಹಾಗೆ, ನಟ ಸಯಾಜಿ ಶಿಂಧೆ ಅವರು ತೆಲುಗಿನಲ್ಲಿ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಗುಜರಾತಿ, ಭೋಜಪುರಿ ಹೀಗೆ ಹಲವು ಭಾಷೆಗಳ ಚಿತ್ರಗಳಲ್ಲಿ ನಟ ಸಯಾಜಿ ಶಿಂಧೆ ನಟಿಸಿದ್ದಾರೆ. ಅವರಿಗೆ 65 ವಯಸ್ಸಾಗಿದ್ದು, ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದಾರೆ.

ಬ್ಯಾಡ್ ಕಾಮೆಂಟ್ಸ್‌ ಬಗ್ಗೆ ಪ್ರಿಯಾಂಕಾ ಚೋಪ್ರಾ ಖಡಕ್ ಮಾತು ಕೇಳಿ ಸೋಷಿಯಲ್ ಮೀಡಿಯಾ ಬೆಪ್ ತಕ್ಕಡಿ!

click me!