ಗುಂಟೂರು ಖಾರಂ ಸಿನಿಮಾಗೆ ಟಫ್ ಫೈಟ್ ಕೊಟ್ಟ ಹುಮಾನ್. ನಾಲ್ಕು ದಿನಗಳ ಕಲೆಕ್ಷನ್ ಕೇಳಿದರೆ ಶಾಕ್ ಆಗೋದು ಗ್ಯಾರಂಟಿ...
ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿರುವ ಹುಮಾನ್ ಸಿನಿಮಾ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡುತ್ತಿದೆ. ತೇಜ ಸಜ್ಜಾ, ವಿಜಯ್ ರೈ, ವರಲಕ್ಷ್ಮಿ ಶರತ್‌ಕುಮಾರ್ ಮತ್ತು ಅಮೃತಾ ಅಯ್ಯಂಗಾರ್ ಪಾತ್ರಗಳ ವೀಕ್ಷಕರ ಗಮನ ಸೆಳೆದಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ರಿಲೀಸ್ ಆದ ಹನುಮಾನ್ ಸೂಪರ್ ಸ್ಟಾರ್ ಚಿತ್ರಕ್ಕೆ ಟಫ್ ಫೈಟ್ ಕೊಡುತ್ತಿದೆ. ಜನವರಿ 12ರಂದು ರಿಲೀಸ್ ಆದ ಈ ಚಿತ್ರ 11ರಂದು ಪ್ರೀಮಿಯರ್ ಶೋ ಮಾಡಿತ್ತು. ಪ್ರೀಮಿಯರ್ ಶೋನಲ್ಲಿ ಸೆಲೆಬ್ರಿಟಿಗಳ ಮೆಚ್ಚುಗೆ ಪಡೆದು ನಿರೀಕ್ಷೆ ಹೆಚ್ಚಿತ್ತು.
ಮಹೇಶ್ ಬಾಬು ಗುಂಟೂರು ಖಾರಂ, ಧನುಷ್ ಕ್ಯಾಪ್ಟನ್ ಮಿಲ್ಲರ್ ಹಾಗೂ ವಿಜಯ್ ಸೇತುಪತಿ ಮತ್ತು ಕತ್ರಿನಾ ಕೈಫ್ ನಟನೆಯ ಮೇರಿ ಕ್ರಿಸ್ಮಸ್ ಸಿನಿಮಾಗಳನ್ನು ಹನುಮಾನ್ ಹಿಂದಿಟ್ಟಿದೆ. ಕೆಲವೊಂದು ಪೋರ್ಟಲ್ ಸುದ್ದಿ ಮಾಡಿರುವ ಪ್ರಕಾರ ಹನುಮಾನ್ ಸಿನಿಮಾ 55.15 ಕೋಟಿ ಕಲೆಕ್ಷನ್ ಮಾಡಿದೆ. ಇದರಲ್ಲಿ 4.15 ಕೋಟಿ ರೂಪಾಯಿ ಪೇಯಿಡ್ ಪ್ರೀಮಿಯರ್ ಶೋ ಕೂಡ ಲೆಕ್ಕ ಹಾಕಲಾಗಿದೆ. ಕಳೆದ ಶುಕ್ರವಾರ ಒಂದೇ ದಿನ ಭಾರತದಲ್ಲಿ 8.05 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.ಶನಿವಾರ ಹನುಮಾನ್ ಸಿನಿಮಾ 12.45 ಕೋಟಿ ಕಲೆಕ್ಷನ್ ಮಾಡಿದೆ, ಭಾನುವಾರ 16 ಕೋಟಿ ಕಲೆಕ್ಷನ್ ಮಾಡಿದೆ. ದಿನದಿಂದ ದಿನಕ್ಕೆ ಕಲೆಕ್ಷನ್ ಹೆಚ್ಚಾಗುತ್ತಿತ್ತು ಬ್ಲಾಕ್ ಬಸ್ಟರ್ ಹಿಟ್ ಲಿಸ್ಟ್ ಸೇರಲಿದೆ.
undefined
ಪರಮ ಭಕ್ತನ ಸಾತ್ ಪಡೆದ 'ಹನು-ಮಾನ್' ಸಿನಿಮಾ; ತೇಜ ಸಜ್ಜಾ ಮೀಟ್ಸ್ ಧ್ರುವ ಸರ್ಜಾ
ಪ್ರಶಾಂತ್ ವರ್ಮಾ ನಿರ್ದೇಶನದ ಹನುಮಾನ ಸಿನಿಮಾದಲ್ಲಿ ಒಬ್ಬ ಸಾಮಾನ್ಯ ಮನುಷ್ಯ ಅನಿರೀಕ್ಷಿತಾ ಸೂಪರ್ ಪವರ್ ಪಡೆದು ತನ್ನೊಳಗೆ ಹೊಸ ಶಕ್ತಿಯನ್ನು ಕಂಡುಕೊಳ್ಳುತ್ತಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ. ನನ್ನ ಸಾಮರ್ಥ್ಯಗಳನ್ನು ಬಳಸಿಕೊಂಡು ಸೂಪರ್ ವಿಲನ್ ಆಗಿ ಸಾಮಾನ್ಯ ಜೀವನವನ್ನು ಬದಲಾಯಿಸಿಕೊಳ್ಳುತ್ತಾರೆ, ಈ ಜರ್ನಿಯಲ್ಲಿ ಒಳ್ಳೆಯದು ಕೆಟ್ಟದರ ನಡುವೆ ಯುದ್ಧ ಮಾಡುತ್ತಾರೆ.
ಹನುಮಾನ್ ಚಿತ್ರದ ಪ್ರತಿ ಟಿಕೆಟ್‌ನ 5 ರೂಪಾಯಿ ರಾಮ ಮಂದಿರಕ್ಕೆ ದೇಣಿಗೆ, ನಟ ಚಿರಂಜೀವಿ ಘೋಷಣೆ!
'ಸೂಪರ್ ಹೀರೊ ಸಿನಿಮಾ ಮಾಡುಲು ತುಂಬಾ ಉತ್ಸಾಹವಿತ್ತು. ಒಬ್ಬ ಹುಡುಗ ಹನುಮಾನ್‌ನಿಂದ ಸೂಪರ್ ಪವರ್ ಪಡೆದುಕೊಂಡು ತನ್ನ ಜನರಿಗೆ ತನ್ನ ಜಾತಿಗೆ ಜಗಳ ಮಾಡುತ್ತಾನೆ. ಈ ಚಿತ್ರ ಮಕ್ಕಳಿಗೆ ಬೇಗ ಹತ್ತಿರವಾಗುತ್ತದೆ ಏಕೆಂದರೆ ಅಷ್ಟು ಕಾಮಿಡಿ ತುಂಬಿರುತ್ತದೆ. ಅಷ್ಟೇ ಅಲ್ಲದೆ ಈ ಚಿತ್ರದಲ್ಲಿ ನಮ್ಮ ಪುರಾತನ ಕಥೆಯನ್ನು ಹೇಳಲಾಗಿದೆ. ಭಾರತದ ಇತಿಹಾಸವನ್ನು ಈ ಚಿತ್ರದ ಜೊತೆ ಮಿಶ್ರಾಣ ಮಾಡಲಾಗಿದೆ' ಎಂದು ತೇಜ ಸಜ್ಜಾ ಹೇಳಿದ್ದಾರೆ.